• Home
  • »
  • News
  • »
  • state
  • »
  • Rahul Gandhi: ರಾಹುಲ್​ ಗಾಂಧಿಗೆ ಕಂಟಕವಾಯ್ತು KGF 2 ಸಾಂಗ್; ರಾಗಾ ವಿರುದ್ಧ ಬಿತ್ತು ಫೋರ್ಜರಿ ಕೇಸ್!

Rahul Gandhi: ರಾಹುಲ್​ ಗಾಂಧಿಗೆ ಕಂಟಕವಾಯ್ತು KGF 2 ಸಾಂಗ್; ರಾಗಾ ವಿರುದ್ಧ ಬಿತ್ತು ಫೋರ್ಜರಿ ಕೇಸ್!

ಯಶ್​, ರಾಹುಲ್​ ಗಾಂಧಿ

ಯಶ್​, ರಾಹುಲ್​ ಗಾಂಧಿ

ಭಾರತ ಜೋಡೊ ಯಾತ್ರೆಯಲ್ಲಿ ಕೆಜಿಎಫ್ 2 ಹಿಂದಿ ಚಿತ್ರಗೀತೆ ಸುಲ್ತಾನ್ ಹಾಡನ್ನು ಬಳಸಿಕೊಳ್ಳಲು ಎಮ್​​. ಆರ್​. ಟಿ ಮ್ಯೂಸಿಕ್ ನಿಂದ ಹಕ್ಕುಸ್ವಾಮ್ಯ ಪಡೆಯದೆ ಬಳಸಿದ್ದಾರೆ ಎಂದು ರಾಹುಲ್​ ಗಾಂಧಿ ವಿರುದ್ಧ ದೂರು ದಾಖಲಾಗಿದೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.4): ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ (Rahul Gandhi) ನಡೆಸುತ್ತಿರುವ ಜೋಡೋ ಯಾತ್ರೆಯಲ್ಲಿ ಕೆಜಿಎಫ್​ 2 (KGF 2) ಚಿತ್ರದ ಸಾಂಗ್​  ದುರ್ಬಳಕೆ ಮಾಡಿರೋ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಫೋರ್ಜರಿ ಕೇಸ್ ದಾಖಲಾಗಿದೆ. ಜೈರಾಮ್ ರಮೇಶ್, ಸುಪ್ರಿಯಾ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಭಾರತ ಜೋಡೋ ಯಾತ್ರೆ (Bharat Jodo Yatra) ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿರುವ ರಾಹುಲ್​ಗೆ ಇದೀಗ ಸಂಕಷ್ಟ ಶುರುವಾಗಿದೆ. 


ರಾಹುಲ್​ ಗಾಂಧಿ ವಿರುದ್ಧ ಕೇಸ್​ ದಾಖಲು


ಭಾರತ ಜೋಡೊ ಯಾತ್ರೆಯಲ್ಲಿ ಕೆಜಿಎಫ್ 2 ಹಿಂದಿ ಚಿತ್ರಗೀತೆ ಸುಲ್ತಾನ್ ಹಾಡನ್ನು ಬಳಸಿಕೊಳ್ಳಲು ಎಮ್​​. ಆರ್​. ಟಿ ಮ್ಯೂಸಿಕ್ ನಿಂದ ಹಕ್ಕುಸ್ವಾಮ್ಯ ಪಡೆಯದೆ ಬಳಸಿದ್ದಾರೆ ಎಂದು ರಾಹುಲ್​ ಗಾಂಧಿ ವಿರುದ್ಧ ದೂರು ದಾಖಲಾಗಿದೆ.


ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೇಸ್​


ಹೀಗಾಗಿ ಕಾಪಿರೈಟ್ ಉಲ್ಲಂಘಿಸಿದ ಆರೋಪದಡಿ ಫೋರ್ಜರಿ, ಹಾಡು ದುರ್ಬಳಕೆ, ಐಟಿ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ. ಎಮ್​​. ಆರ್​. ಟಿ ಮ್ಯೂಸಿಕ್ ಕೆಜಿಎಫ್ 2 ಹಿಂದಿ ಚಿತ್ರಗೀತೆಗಳ ಹಕ್ಕುಸ್ವಾಮ್ಯ ಹೊಂದಿದೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Will ramya get back to politics career tweet creating buzz mrq


ಕಾನೂನು ಕ್ರಮಕ್ಕೆ ,ಮುಂದಾದ ಎಮ್.ಆರ್.ಟಿ ಸಂಸ್ಥೆ
ದೇಶಾದ್ಯಂತ ಆರಂಭವಾಗಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಮತ್ತು ಆಯಾ ರಾಜ್ಯಗಳ ಮುಖಂಡರು ಭಾಗಿಯಾಗಿದ್ದು, ಹಿಂದಿಯಲ್ಲಿ ತಯಾರಾದ ವಿಡಿಯೋಗಳಿಗೆ ಕೆಜಿಎಫ್ ಮ್ಯೂಸಿಕ್ ಅಳವಡಿಸಲಾಗಿತ್ತು. ಆ ವಿಡಿಯೋಗಳನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಸೋಷಿಯಲ್ ಮೀಡಿಯಾ ಪೇಸ್ ಗಳಾದ ಟ್ವಿಟರ್ ಅಕೌಂಟ್, ಯೂಟ್ಯೂಬ್  ಹಾಗೂ ಯಾತ್ರೆಯಲ್ಲೂ ಬಳಸಲಾಗಿತ್ತು. ಹಾಗಾಗಿ ಸಂಸ್ಥೆಯ ಅನುಮತಿ ಪಡೆಯದೇ ಇರುವ ಕಾರಣಕ್ಕಾಗಿ ಕಾನೂನು ಕ್ರಮಕ್ಕೆ ಎಮ್.ಆರ್.ಟಿ ಸಂಸ್ಥೆ ಮುಂದಾಗಿದೆ.


ಇದನ್ನೂ ಓದಿ: Minister Sudhakar: ತುರ್ತು ಚಿಕಿತ್ಸೆಗೆ ಯಾವ ದಾಖಲೆಯೂ ಮುಖ್ಯವಲ್ಲ, ಅಮಾನವೀಯವಾಗಿ ನಡೆದುಕೊಂಡ್ರೆ ವಜಾ- ಸುಧಾಕರ್


ರಾಹುಲ್ ಗಾಂಧಿ ಜೊತೆ ನಟಿ ಪೂಜಾ ಭಟ್ ಭಾಗಿ


ನಿನ್ನೆ ಹೈದರಾಬಾದ್ ಸಿಟಿಯ ಬಾಲನಗರ ಮುಖ್ಯ ರಸ್ತೆಯ ಎಂಜಿಬಿ ಬಜಾಜ್ ಶೋರೂಮ್‌ನಿಂದ ಯಾತ್ರೆ ಪುನರಾರಂಭವಾಯಿತು. ರಾಹುಲ್ ಗಾಂಧಿ ಜೊತೆಗೆ ಇತರ ಭಾರತ್ ಯಾತ್ರಿಗಳು ಯಾತ್ರೆಯ 56 ನೇ ದಿನದಂದು ತಮ್ಮ ನಡಿಗೆಯನ್ನು ಮುಂದುವರೆಸಿದರು. ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಇಂದು ರಾಹುಲ್ ಗಾಂಧಿ ಜೊತೆ ನಟಿ ಪೂಜಾ ಭಟ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ಯಾತ್ರೆಗೆ ಮತ್ತಷ್ಟು ಕಳೆ ಬಂದಿದೆ.


ಈ ಜಿಲ್ಲೆಗಳಲ್ಲಿ ಯಾತ್ರೆ ಪೂರ್ಣ


ಕಳೆದ ವಾರ ಯಾತ್ರೆಯು ತೆಲಂಗಾಣದಲ್ಲಿ ಆರಂಭವಾಗುವ ಮೊದಲು ರಾಹುಲ್ ಗಾಂಧಿ ಅವರು ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಪಾದಯಾತ್ರೆಯನ್ನು ಅನ್ನು ಪೂರ್ಣಗೊಳಿಸಿದ್ದಾರೆ. ತೆಲಂಗಾಣ ರಾಜ್ಯ ಕಾಂಗ್ರೆಸ್ ಯಾತ್ರೆಯನ್ನು ಸಂಘಟಿಸಲು 10 ವಿಶೇಷ ಸಮಿತಿಗಳನ್ನು ರಚಿಸಿದೆ.


ಇದನ್ನೂ ಓದಿ: Rahul Gandhi: ರಾಹುಲ್​ ಗಾಂಧಿಗೆ ಕಂಟಕವಾಯ್ತು KGF 2 ಸಾಂಗ್; ರಾಗಾ ವಿರುದ್ಧ ಬಿತ್ತು ಫೋರ್ಜರಿ ಕೇಸ್!


ಯಶ್ ನಟನೆಯ ಕೆಜಿಎಫ್ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲೇ ಹೊಸ ದಾಖಲೆಯನ್ನು ಬರೆದಂತಹ ಚಿತ್ರ. ಈ ಸಿನಿಮಾದ ಹಾಡುಗಳು ಕೂಡ ಸೂಪರ್ ಹಿಟ್ ಆಗಿವೆ. ರಿಲೀಸ್ ಆದ ಎಲ್ಲಾ ಭಾಷೆಗಳಲ್ಲೂ ಚಿತ್ರ ಕೋಟಿ ಕೋಟಿ ಬಾಚಿದೆ. ಅಲ್ಲದೇ, ಈ ಸಿನಿಮಾದ ಸುಲ್ತಾನ ಹಾಡು ಕೂಡ ಅಷ್ಟೇ ಫೇಮಸ್ ಆಗಿತ್ತು. ಸಿನಿಮಾದ ಹೀರೋನನ್ನು ವೈಭವೀಕರಿಸುವ ಹಾಡು ಇದಾಗಿತ್ತು. ಇದೇ ಹಾಡನ್ನು ಕಾಂಗ್ರೆಸ್ ತನ್ನ ಯಾತ್ರೆಗೆ ಬಳಸಿಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

Published by:ಪಾವನ ಎಚ್ ಎಸ್
First published: