Darshan: ಮೃಗಾಲಯಗಳ ರಕ್ಷಣೆಗೆ ನಿಂತ ದರ್ಶನ್​: ಧನ್ಯವಾದ ಸಲ್ಲಿಸಿದ ಅರವಿಂದ ಲಿಂಬಾವಳಿ

ನಟ ದರ್ಶನ್ ಅವರು ಮನವಿ ಮಾಡುತ್ತಿದ್ದಂತೆಯೇ ಶನಿವಾರದಂದು ಅಂದರೆ ಜೂನ್​ 5ರಂದು ಮನವಿ ಮಾಡಿದ್ದರು. ದರ್ಶನ್​ ಅವರು ಕೊಟ್ಟ ಕರೆಯಿಂದಾಗಿ ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಹಣ ಸಂಗ್ರವಾಗಿದೆಯಂತೆ. ಅದಕ್ಕೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಧನ್ಯವಾದ ಸಲ್ಲಿಸಿದ್ದಾರೆ.

ದರ್ಶನ್ ಹಾಗೂ ಅರವಿಂದ ಲಿಂಬಾವಳಿ

ದರ್ಶನ್ ಹಾಗೂ ಅರವಿಂದ ಲಿಂಬಾವಳಿ

  • Share this:
ಕೊರೋನಾ ಸಂಕಷ್ಟದ ಸಮಯದಲ್ಲಿ ರಾಜ್ಯದಲ್ಲಿರುವ ಮೃಗಾಲಯಗಳೂ ಕಷ್ಟಕ್ಕೆ ಸಿಲುಕಿವೆ. ಮೃಗಾಲುಯದಲ್ಲಿರುವ ಪ್ರಾಣಿಗಳ ಆರೈಕೆ ಹಾಗೂ ಪೋಷಣೆಗೆ ಹಣದ ಕೊರತೆ ಎದುರಾಗಿದೆ. ಇದೇ ಕಾರಣದಿಂದಅರಣ್ಯ ಇಲಾಖೆಯ ರಾಯಭಾರಿಯಾಗಿರುವ  ಚಾಲೆಂಜಿಗ್​ ಸ್ಟಾರ್​ ದರ್ಶನ್ ಅವರು​ ಮೃಗಾಲಯಗಳ ನೆರವಿಗೆ ನಿಂತಿದ್ದಾರೆ. ಈಗಾಗಲೇ ಸಾಕಷ್ಟು ಪ್ರಾಣಿಗಳನ್ನು ದತ್ತು ಪಡೆದು ಸಾಕುತ್ತಿರುವ ದರ್ಶನ್ ಇತ್ತೀಚೆಗೆ ಒಂದು ಮನವಿ ಮಾಡಿದ್ದರು. ಮೃಗಾಕಲಯಗಳಿಂದ ಪ್ರಾಣಿಗಳನ್ನು ದತ್ತು ಸ್ವೀಕರಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು. ದರ್ಶನ್​ ಅವರ ಒಂದು ಮನವಿಗೆ ಅಭಿಮಾನಿಗಳಿಂದ ಸಖತ್​ ಪ್ರತಿಕ್ರಿಯೆ ಸಿಕ್ಕಿದೆ. ಹೌದು, ಸಾಕಷ್ಟು ಮಂದಿ ಮೃಗಾಲಯಗಳಿಗೆ ಹಣ ನೀಡುವುದರ ಜೊತೆ ಪ್ರಾಣಿಗಳನ್ನು ದತ್ತು ಪಡೆದಿದ್ದಾರಂತೆ. 

ನಟ ದರ್ಶನ್ ಅವರು ಮನವಿ ಮಾಡುತ್ತಿದ್ದಂತೆಯೇ ಶನಿವಾರದಂದು ಅಂದರೆ ಜೂನ್​ 5ರಂದು ಮನವಿ ಮಾಡಿದ್ದರು. ದರ್ಶನ್​ ಅವರು ಕೊಟ್ಟ ಕರೆಯಿಂದಾಗಿ ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಹಣ ಸಂಗ್ರವಾಗಿದೆಯಂತೆ. ಅದಕ್ಕೆ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಧನ್ಯವಾದ ಸಲ್ಲಿಸಿದ್ದಾರೆ.ಜೊತೆಗೆ ಮೃಗಾಲಯಗಳಲ್ಲಿರುವ ಪ್ರಾಣಿಗಳ ರಕ್ಷಣೆಗೆಂದು ಧನ ಸಹಾಯ ಮಾಡಲು ಮುಂದೆ ಬಂದಿರುವವರಿಗೂ ಧನ್ಯವಾದ ತಿಳಿಸಿರುವ ಅರವಿಂದ್ ಲಿಂಬಾವಳಿ ಅವರು, ಮತ್ತಷ್ಟು ಜನರಿಗೆ ಪ್ರಾಣಿಗಳನ್ನು ದತ್ತು ಪಡೆದು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ದರ್ಶನ್​ ಅವರು ಮನವಿ ಮಾಡಿದ ಒಂದು ದಿನದಲ್ಲೇ 29 ಲಕ್ಷ ಹಣ ಹರಿದು ಬಂದಿದ್ದು, ಮೂರು ದಿನಗಳಲ್ಲಿ 40 ಲಕ್ಷ ಸಂಗ್ರಹವಾಗಿದೆಯಂತೆ. ಒಟ್ಟಾರೆ ದರ್ಶನ್ ಅವರು ಮಾಡಿದ ಒಂದು ಮನವಿಯಿಂದಾಗಿ ಈಗ ಮೃಗಾಲಯಗಳು ಉಸಿರಾಡುವಂತಾಗಿದೆ.

ಇದನ್ನೂ ಓದಿ: Rashmika Mandanna- Rakshit Shetty: ಮತ್ತೊಮ್ಮೆ ರಶ್ಮಿಕಾ ಮಂದಣ್ಣ ಪರ ನಿಂತ ರಕ್ಷಿತ್​ ಶೆಟ್ಟಿ..!

ಒಂದೆಡೆ ಕೊರೋನಾ ಅವಾಂತರ ಮತ್ತೊಂದೆಡೆ ಲಾಕ್​ಡೌನ್​​ ಇದರಿಂದಾಗಿ ಜನರು ಮಾತ್ರವಲ್ಲ, ಪ್ರಾಣಿಗಳು ಕೂಡ ಸಂಕಷ್ಟವನ್ನು ಎದುರಿಸುತ್ತಿವೆ. ರಾಜ್ಯದಲ್ಲಿರುವ 9 ಮೃಗಾಲಯಗಳಿದ್ದು, ಅವುಗಳು ಕೂಡ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಇದರಿಂದ ಆಹಾರಕ್ಕೂ ಸಮಸ್ಯೆಯಾಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆ ನಟ ದರ್ಶನ್​ ನೆರವಿಗೆ ಬಂದಿದ್ದಾರೆ.

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ನನ್ನ ಸ್ನೇಹಿತರಾದ ಮಂಡ್ಯದ ಇಂಡುವಾಳು ಸಚ್ಚಿದಾನಂದ ಅವರು ಆನೆ ಅಭಿಮನ್ಯು ಹಾಗೂ ಒಂದು ಹುಲಿ ಮರಿ ದತ್ತು ಪಡೆದು ಅವರ ತಾಯಿ ತಾಯಮ್ಮ ಅವರ ಹೆಸರನ್ನು ಆ ಹುಲಿಮರಿಗೆ ಹೆಸರಿಡಲಾಯಿತು ಅವರಿಗೆ ಹೃದಯಪೂರ್ವಕ ಧನ್ಯವಾದಗಳುhttps://t.co/kE0lCrPzMI pic.twitter.com/ey8eqdqIQBದರ್ಶನ್ ವಿಡಿಯೋ ಮೂಲಕ ಅಭಿಮಾನಿ ಮತ್ತು ಆಪ್ತರ ಬಳಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಹಕರಿಸಿ ಎಂದು ಮನವಿ ಮಾಡಿದ್ದರು. ಪ್ರಾಣಿ ಸಂಗ್ರಹಾಲಯದಲ್ಲಿರುವ ಇಷ್ಟವಾದ ಪ್ರಾಣಿಗಳನ್ನು ದತ್ತು ಪಡೆಯಬಹುದೆಂದು ಹೇಳಿದ್ದರು. ದರ್ಶನ್​ ಅವರ ಮನವಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಾತ್ರವಲ್ಲದೆ ಅನೇಕರಿಗೆ ಅದು ತಲುಪಿದೆ. ಇದನ್ನು ಗಮನಿಸಿದ ಅವರ ಅಭಿಮಾನಿಗಳು ಪ್ರಾಣಿಗಳನ್ನು ದತ್ತು ಸ್ವೀಕರಿಸುತ್ತಿದ್ದಾರೆ.

ಇದನ್ನೂ ಓದಿ:Radhika Pandit: ಕಷ್ಟದಲ್ಲಿರುವವರಿಗೆ ಯಶ್ ನೆರವಾದ ಬೆನ್ನಲ್ಲೇ ರಾಧಿಕಾ ಪಂಡಿತ್​ ಕೊಟ್ರು ಭರವಸೆಯ ಮಾತು

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿರುವ ‘ದರ್ಶನ್’​ ಎಂಬ ಸಿಂಹವನ್ನು ನಿರ್ಮಾಪಕ ಶೈಲಜಾ ನಾಗ್​ ದತ್ತು ಪಡೆದುಕೊಂಡಿದ್ದಾರೆ. ಅಭಿಮಾನಿಗಳು ರಾಜ್ಯದಲ್ಲಿರುವ 8 ಮೃಗಾಲಯದಿಂದ ಪ್ರಾಣಿಗಳನ್ನು ದತ್ತು ಸ್ವೀಕರಿಸುತ್ತಿದ್ದಾರೆ.ಇನ್ನು ಡಿ ಬಾಸ್ ​ ಅವರ ಮಾತಿಗೆ ಓಗೊಟ್ಟು ಪ್ರಾಣಿಗಳನ್ನು ದತ್ತು ಸ್ವೀಕರಿಸಿದ ತಮ್ಮ ಸೆಲೆಬ್ರಿಟಿಗಳಿಗೆ ನಟ ದರ್ಶನ್​ ಅವರು ಟ್ವೀಟ್​ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.
Published by:Anitha E
First published: