Bandipur: ಬಂಡೀಪುರ ಸಫಾರಿ ದರ ಹೆಚ್ಚಿಸಿದ ಅರಣ್ಯ ಇಲಾಖೆ; ಪ್ರವಾಸಿಗರಿಗೆ ಬೆಲೆ ಏರಿಕೆಯ ದಿಢೀರ್ ಶಾಕ್

ಬಂಡೀಪುರದಲ್ಲಿ ಮಾರ್ಚ್ 31 ರ ತನಕ  ಒಬ್ಬರಿಗೆ  ಪ್ರವೇಶ ಶುಲ್ಕ 250 ರೂಪಾಯಿ ಸಫಾರಿಗೆ 100 ರೂಪಾಯಿ  ಇತ್ತು.  ಆದರೆ ನಿನ್ನೆಯಿಂದ ಪ್ರವೇಶ ಶುಲ್ಕ 300 ರೂಪಾಯಿ ಹಾಗೂ ಸಫಾರಿಗೆ 300  ರೂಪಾಯಿ ದರ ನಿಗದಿಪಡಿಸಲಾಗಿದೆ. ಹಾಗಾಗಿ ಪ್ರವಾಸಿಗರು ಇನ್ನು ಮುಂದೆ 600 ರೂಪಾಯಿ ಕೊಟ್ಟು ಸಫಾರಿ ಹೋಗಬೇಕಾಗಿದೆ.

ಬಂಡೀಪುರ

ಬಂಡೀಪುರ

  • Share this:
ಚಾಮರಾಜನಗರ (ಏ.03): ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ.  ಎಲ್ಲ ವರ್ಗದ ಜನರಿಗೂ ಬೆಲೆ ಏರಿಕೆಯ ಬಿಸಿ ತಟ್ಟತೊಡಗಿದೆ. ಇದರ ನಡುವೆ  ಬಂಡೀಪುರಕ್ಕೆ ಬರುವ ಪ್ರವಾಸಿಗರಿಗೂ ಅರಣ್ಯ ಇಲಾಖೆ ದರ ಏರಿಕೆಯ ಶಾಕ್ ನೀಡಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ದರವನ್ನು ದಿಢೀರ್ ಹೆಚ್ಚಳ ಮಾಡಲಾಗಿದೆ.

ಹುಲಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲೆ ಎರಡನೇ ಸ್ಥಾನದಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡು ಪ್ರಾಣಿಗಳ ವೀಕ್ಷಣೆಗೆ  ಸಫಾರಿ ಮಾಡಲೆಂದೇ ದೇಶ-ವಿದೇಶಗಳಿಂದ ನಿತ್ಯ ನೂರಾರು ಮಂದಿ ಪ್ರವಾಸಿಗರು ಬರುತ್ತಾರೆ. ಕಳೆದ ನಾಲ್ಕು ವರ್ಷಗಳಿಂದ  ಸಫಾರಿ, ಕೊಠಡಿ ಬಾಡಿಗೆ, ಪಾರ್ಕಿಂಗ್ ಶುಲ್ಕ ಹೀಗೆ ಯಾವುದೇ ರೀತಿಯ ದರಗಳಲ್ಲೂ ಬದಲಾವಣೆ ಮಾಡಿರಲಿಲ್ಲ. ಇದೀಗ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಗಳು  ದರ ಹೆಚ್ಚಳ ಮಾಡುವ ಬಗ್ಗೆ ಕಳೆದ ಜನವರಿ 29 ರಂದು ಬರೆದಿರುವ ಪತ್ರವನ್ನು ಉಲ್ಲೇಖಿಸಿ  ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ (ವನ್ಯಜೀವಿ)  ಅವರು ಸಫಾರಿ ಮತ್ತಿತರ  ದರಗಳನ್ನು ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ  ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ.

ಯಾವುದು ಎಷ್ಟು ಹೆಚ್ಚಳ?:

ಬಂಡೀಪುರದಲ್ಲಿ ಮಾರ್ಚ್ 31 ರ ತನಕ  ಒಬ್ಬರಿಗೆ  ಪ್ರವೇಶ ಶುಲ್ಕ 250 ರೂಪಾಯಿ ಸಫಾರಿಗೆ 100 ರೂಪಾಯಿ  ಇತ್ತು.  ಆದರೆ ನಿನ್ನೆಯಿಂದ ಪ್ರವೇಶ ಶುಲ್ಕ 300 ರೂಪಾಯಿ ಹಾಗೂ ಸಫಾರಿಗೆ 300  ರೂಪಾಯಿ ದರ ನಿಗದಿಪಡಿಸಲಾಗಿದೆ. ಹಾಗಾಗಿ ಪ್ರವಾಸಿಗರು ಇನ್ನು ಮುಂದೆ 600 ರೂಪಾಯಿ ಕೊಟ್ಟು ಸಫಾರಿ ಹೋಗಬೇಕಾಗಿದೆ. ಹಾಗೆಯೇ ಮಕ್ಕಳು ವಿದ್ಯಾರ್ಥಿಗಳಿಗೆ  ಪ್ರವೇಶ ಶುಲ್ಕ ಹಾಗೂ ಸಫಾರಿ ಸೇರಿದಂತೆ 300 ರೂಪಾಯಿ, ವಿದೇಶಿ ಪ್ರವಾಸಿಗರಿಗೆ 1000  ರೂಪಾಯಿ ದರ ನಿಗದಿಪಡಿಸಲಾಗಿದೆ.

ಸಫಾರಿ ಜಪ್ಸಿ ಬಾಡಿಗೆ ಭಾರತೀಯರಿಗೆ 3500 ರೂಪಾಯಿ, ವಿದೇಶಿಯರಿಗೆ  5000  ರೂಪಾಯಿ,  9 ಸೀಟಿನ ಕ್ಯಾಂಪರ್ ಗೆ ಭಾರತೀಯರಿಗೆ 5000 ರೂಪಾಯಿ,  ವಿದೇಶಿಯರಿಗೆ 7000 ರೂಪಾಯಿ ನಿಗದಿಪಡಿಸಲಾಗಿದೆ.

Rocking Star Yash: ಹಸಿವಿಗಿಂತ ದೊಡ್ಡ ಖಾಯಿಲೆ ಇನ್ನೊಂದಿಲ್ಲ; ಚಿತ್ರರಂಗದ ಮೇಲಿನ ಹಠಾತ್ ಧೋರಣೆ ಖಂಡನೀಯ; ನಟ ಯಶ್

ಬಂಡೀಪುರ ಕ್ಯಾಂಪಸ್ ನಲ್ಲಿರುವ  ಕೊಠಡಿ ಬಾಡಿಗೆ ಒಂದು ದಿನಕ್ಕೆ 2000 ರೂಪಾಯಿ ವಿದೇಶಿಯರಿಗೆ 4000  ರೂಪಾಯಿ, ಗಜೇಂದ್ರ ವಿಐಪಿ ಕೊಠಡಿ(1) ಬಾಡಿಗೆ 3000 ರೂಪಾಯಿ  6000 ರೂಪಾಯಿ ಗೆ ಏರಿಗೆ ಮಾಡಲಾಗಿದೆ.

ಗಜೇಂದ್ರ ವಿಐಪಿ ಕೊಠಡಿ (2)ರ ಬಾಡಿಗೆಯನ್ನು  2500 ಹಾಗು ವಿದೇಶಿಯರಿಗೆ 5000 ಹಾಗು ಗಜೇಂದ್ರ ವಿಐಪಿ ಕೊಠಡಿ(3) ರ ಬಾಡಿಗೆಯನ್ನು 2000 ರೂಪಾಯಿ ವಿದೇಶಿಯರಿಗೆ  4000 ರೂಪಾಯಿ ನಿಗದಿ ಮಾಡಲಾಗಿದೆ.

10 ಬೆಡ್ ಗಳ ಡಾರ್ಮೆಟರಿ ಬಾಡಿಗೆಯನ್ನು  2500 ವಿದೇಶಿಯರಿಗೆ 5000 ರೂಪಾಯಿ, 20 ಬೆಡ್ ಗಳ ಡಾರ್ಮೆಟರಿ ಬಾಡಿಗೆಯನ್ನು  5000 ರೂಪಾಯಿ ವಿದೇಶಿಯರಿಗೆ 10000 ರೂಪಾಯಿಗೆ ಏರಿಕೆ ಮಾಡಲಾಗಿದೆ

ಇದರ ಜೊತೆಗೆ ಕ್ಯಾಮೆರಾ ಹಾಗೂ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಸಹ ಹೆಚ್ಚಳ ಮಾಡಲಾಗಿದೆ.

ಈ ಬಗ್ಗೆ  ನ್ಯೂಸ್ 18 ಗೆ ಪ್ರತಿಕ್ರಿಯಿಸಿರುವ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ, ದರ ಏರಿಕೆ ಕ್ರಮ ಸರಿಯಾದುದಲ್ಲ, ಜನಸಾಮಾನ್ಯರಿಗೆ ಕೈಗೆಟುಕದ ರೀತಿಯಲ್ಲಿ ದರ ಹೆಚ್ಚಳ ಮಾಡಲಾಗಿದೆ,  ಇಷ್ಟೊಂದು ದರ ಭರಿಸಲಾಗದೆ  ಬಡವರು, ಮಧ್ಯಮ ವರ್ಗದವರು, ಶಾಲಾ ಮಕ್ಕಳು  ಸಫಾರಿಯಿಂದ ದೂರ ಉಳಿಯುವಂತಾಗುತ್ತದೆ. ಕಾಡಿನ ಸೊಬಗನ್ನು ಸವಿಯುವುದರಿಂದ ವಂಚಿತರಾಗಬೇಕಾಗುತ್ತದೆ. ಉಳ್ಳವರಿಗೆ ಬೇಕಾದರೆ ದರ ಏರಿಕೆ ಮಾಡಲಿ, ಆದರೆ ಸ್ಥಳೀಯರಿಗೆ ಹಾಗೂ  ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಶುಲ್ಕ ಕಡಿಮೆ ಮಾಡಬೇಕು.  ಈ ಬಗ್ಗೆ ಅರಣ್ಯ ಇಲಾಖೆಗೆ ಪತ್ರ ಬರೆಯುತ್ತೇನೆ ಅಲ್ಲದೆ ವನ್ಯ ಜೀವಿ ಮಂಡಳಿ ಸಭೆಯಲ್ಲೂ ಪ್ರಸ್ತಾಪಿಸಿ ದರ ಇಳಿಕೆಗೆ ಪ್ರಯತ್ನಿಸುತ್ತೇನೆ ಎಂದರು ತಿಳಿಸಿದರು.
Published by:Latha CG
First published: