Hassan: ಎರಡು ದಿನಗಳ‌ ನಿರಂತರ ಕಾರ್ಯಾಚರಣೆ ಬಳಿಕ‌ ಸೆರೆ ಸಿಕ್ಕ ಒಂಟಿ ಸಲಗ

ಈ ವೇಳೆ ಸಾಕಷ್ಟು ಜನರು ನೆರೆದಿದ್ದು ಕಾಡಾನೆಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ‌ ಹಿಡಿದರು. ಇನ್ನೂ ಆತಂಕ ಸೃಷ್ಟಿಸಿದ್ದ ಕಾಡಾನೆ ಸೆರೆ ಹಿಡಿದಿದ್ದಕ್ಕೆ ಕಾಫಿ ಬೆಳೆಗಾರರು, ಸ್ಥಳೀಯರು, ಕೂಲಿ‌ ಕಾರ್ಮಿಕರು ನಿಟ್ಟುಸಿರುಬಿಟ್ಟರು.

ಒಂಟಿ ಸಲಗ

ಒಂಟಿ ಸಲಗ

  • Share this:
ಇಬ್ಬರು ಅಮಾಯಕ ಕೂಲಿ ಕಾರ್ಮಿಕರನ್ನು ಬಲಿ ಪಡೆದಿದ್ದ ಹಾಗೂ ಮನುಷ್ಯರ ಮೇಲೆ ಅಟ್ಯಾಕ್ (Elephant Attack) ಮಾಡುತ್ತಿದ್ದ ಕಾಡಾನೆಯನ್ನು ಶನಿವಾರ ಸೆರೆ ಹಿಡಿಯಲಾಯಿತು. ಕಳೆದ‌ ಎರಡು ದಿನಗಳಿಂದ ಆಪರೇಷನ್ ಮತ್ತೂರು ಕಾರ್ಯಾಚರಣೆ (Operation Elephant) ಆರಂಭಿಸಿದ್ದರು. ಶುಕ್ರವಾರ ಇಡೀ ದಿನ ಕಾಡಾನೆ ಹಿಂದೆ ಬಿದ್ದು ಇಂಜೆಕ್ಷನ್ ಡಾಟ್ ಮಾಡಲು ವೈದ್ಯರು ಹರಸಾಹಸ ಸಾಧವಾಗಿರಲಿಲ್ಲ. ಶನಿವಾರ ಬೆಳಗ್ಗೆ ಭೀಮ, ಭೀಮ್, ಮಹೇಂದ್ರ, ಪ್ರಶಾಂತ, ಹರ್ಷ, ಅಜೇಯ ಸೇರಿ ಒಟ್ಟು ಎಂಟು ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಲಾಯಿತು‌. ಕಾಡಾನೆ ದಟ್ಟ ಅರಣ್ಯದ ಮಧ್ಯೆ ನಿಂತಿದ್ದರಿಂದ ಲೋಕೇಷನ್ ಸಿಗದೆ ಅರಣ್ಯ ಇಲಾಖೆ‌ ಸಿಬ್ಬಂದಿ ಪರದಾಡಿದರು. ನಂತರ ದ್ರೋಣ್ ಮೂಲಕ ಕಾಡಾನೆ ಇರುವ ಲೋಕೇಷನ್ ಪತ್ತೆ ಹಚ್ಚಿ ಇಂಜೆಕ್ಷನ್ ಡಾಟ್ ಮಾಡಲು ಮುಂದಾದರು.

ಇಬ್ಬರು ಅಮಾಯಕ ಕೂಲಿ ಕಾರ್ಮಿಕರನ್ನು ಬಲಿ ಪಡೆದಿದ್ದ ಹಾಗೂ ಮನುಷ್ಯರ ಮೇಲೆ ಅಟ್ಯಾಕ್ ಮಾಡುತ್ತಿದ್ದ ಕಾಡಾನೆಯನ್ನು ಶನಿವಾರ ಸೆರೆ ಹಿಡಿಯಲಾಯಿತು. ಕಳೆದ‌ ಎರಡು ದಿನಗಳಿಂದ ಆಪರೇಷನ್ ಮತ್ತೂರು ಕಾರ್ಯಾಚರಣೆ ಆರಂಭಿಸಿದ್ದರು. ಶುಕ್ರವಾರ ಇಡೀ ದಿನ ಕಾಡಾನೆ ಹಿಂದೆ ಬಿದ್ದು ಇಂಜೆಕ್ಷನ್ ಡಾಟ್ ಮಾಡಲು ವೈದ್ಯರು ಹರಸಾಹಸ ಸಾಧವಾಗಿರಲಿಲ್ಲ. ಶನಿವಾರ ಬೆಳಗ್ಗೆ ಭೀಮ, ಭೀಮ್, ಮಹೇಂದ್ರ, ಪ್ರಶಾಂತ, ಹರ್ಷ, ಅಜೇಯ ಸೇರಿ ಒಟ್ಟು ಎಂಟು ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭಿಸಲಾಯಿತು‌. ಕಾಡಾನೆ ದಟ್ಟ ಅರಣ್ಯದ ಮಧ್ಯೆ ನಿಂತಿದ್ದರಿಂದ ಲೋಕೇಷನ್ ಸಿಗದೆ ಅರಣ್ಯ ಇಲಾಖೆ‌ ಸಿಬ್ಬಂದಿ ಪರದಾಡಿದರು. ನಂತರ ದ್ರೋಣ್ ಮೂಲಕ ಕಾಡಾನೆ ಇರುವ ಲೋಕೇಷನ್ ಪತ್ತೆ ಹಚ್ಚಿ ಇಂಜೆಕ್ಷನ್ ಡಾಟ್ ಮಾಡಲು ಮುಂದಾದರು.

ಎರಡು ಬಾರಿ ಅರವಳಿಕೆ ಚುಚ್ಚುಮದ್ದು

ಮೂರ್ನಾಲ್ಕು ಭಾರಿ ಸಲಗ ತಪ್ಪಿಸಿಕೊಂಡಿತ್ತು. ನಂತರ ಬೆಂಬಳೂರು ಬಳಿ ಕಾರ್ಯಾಚರಣೆ ಬಂದಿದ್ದ ಸಾಕಾನೆಗಳಿಗೆ ಎದುರಾಗಿ, ಅಟ್ಯಾಕ್ ಮಾಡಲು ನುಗ್ಗಿತು. ಈ ವೇಳೆ ವೈದ್ಯರು ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿದರು. ಆದರೆ ಒಂಟಿಸಲಗ ದಷ್ಟಪುಷ್ಟವಾಗಿದ್ದರಿಂದ‌ ಒಂದು ಇಂಜೆಕ್ಷನ್‌ಗೆ ಕುಸಿದು ಬೀಳಲಿಲ್ಲ. ನಂತರ ಮತ್ತೊಂದು ಇಂಜೆಕ್ಷನ್ ಡಾಟ್ ಮಾಡಲಾಯಿತು. ಸ್ವಲ್ಪ ದೂರು ಸಾಗಿ ಪ್ರಜ್ಞೆ ಕಳೆದುಕೊಂಡಿತು.

ಇದನ್ನೂ ಓದಿ: Kodagu: ನಿರಂತರ ಭೂಕಂಪನದ ಜೊತೆಗೆ ಮೂರೇ ದಿನದ ಮಳೆಗೆ ಭೂಕುಸಿತ 

ಕಾಡಾನೆಗೆ ಬೆಲ್ಟ್ ಹಾಕಿ ಕ್ರೇನ್ ಮೂಲಕ ಲಾರಿಗೆ ಶಿಫ್ಟ್

ತಕ್ಷಣವೇ ಆರೈಕೆ ಮಾಡಿ, ರೇಡಿಯೋ ಕಾಲರ್ ಅಳವಡಿಸಿ, ಕಾಡಾನೆ ಕಾಲು, ಕುತ್ತಿಗಿಗೆ ಹಗ್ಗ, ಚೈನ್ ಹಾಕಲಾಯಿತು.‌ ನಂತರ ಮೇಲೆದ್ದ ಒಂಟಿ ಸಲಗ ಕಾಡಿಗೆ ನುಗ್ಗುಲು ಹರಸಾಹಸಪಟ್ಟಿತ್ತು. ಆದರೆ ಸಾಕಾನೆಗಳು ಬಲವಾಗಿ ಪ್ರತಿರೋಧ ತೋರಿದ್ದರಿಂದ ಸಾಧವಾಗಲಿಲ್ಲ. ಸುಮಾರು ಅರ್ಧ ಕಿಲೋಮೀಟರ್ ದೂರು ಕಾಡಾನೆಯನ್ನು ಸಾಕಾನೆಗಳನ್ನು ಎಳೆದು ತಂದ ರಸ್ತೆಯಲ್ಲಿ ನಿಂತವು.‌ ಕಾಡಾನೆಗೆ ಬೆಲ್ಟ್ ಹಾಕಿ ಕ್ರೇನ್ ಮೂಲಕ ಲಾರಿಗೆ ಶಿಫ್ಟ್ ಮಾಡಲಾಯಿತು.

ಈ ವೇಳೆ ಸಾಕಷ್ಟು ಜನರು ನೆರೆದಿದ್ದು ಕಾಡಾನೆಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ‌ ಹಿಡಿದರು. ಇನ್ನೂ ಆತಂಕ ಸೃಷ್ಟಿಸಿದ್ದ ಕಾಡಾನೆ ಸೆರೆ ಹಿಡಿದಿದ್ದಕ್ಕೆ ಕಾಫಿ ಬೆಳೆಗಾರರು, ಸ್ಥಳೀಯರು, ಕೂಲಿ‌ ಕಾರ್ಮಿಕರು ನಿಟ್ಟುಸಿರುಬಿಟ್ಟರು. ಸಕಲೇಶಪುರ-ಆಲೂರು-ಬೇಲೂರು ಭಾಗದಲ್ಲಿ ಗಜಪಡೆ ಗಲಾಟೆ ಹೆಚ್ಚಿದ್ದರಿಂದ ಎರಡು ಕಾಡಾನೆಗಳನ್ನು ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಹಾಗೂ ಎರಡು ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲು ಸರ್ಕಾರ ಅನುಮತಿ ನೀಡಿದೆ.

ಎರಡು ದಿನದ ಕಾರ್ಯಾಚರಣೆ

ಅದರಂತ ಮಕನ ಆನೆ ಹಿಡಿದು ಸ್ಥಳಾಂತರ ಮಾಡಲಾಗಿದೆ. ಅದಾದ ಬಳಿಕ ಎರಡು ದಿನಗಳ ನಿರಂತರ ಕಾರ್ಯಾಚರಣೆ ನಡೆಸಿ ಮತ್ತೂರು ಎಂದು ಕರೆಯಲ್ಪಡುವ ಕಾಡಾನೆಯನ್ನು ವೈದ್ಯರು ನಮ್ಮ‌ ಇಲಾಖೆ ಸಿಬ್ಬಂದಿ ಸೆರೆ ಹಿಡಿದ್ದಾರೆ.

ಸುಮಾರು 30 ವರ್ಷದ ಆನೆಯನ್ನು ವನ್ಯಜೀವಿ ಧಾಮಕ್ಕೆ ಬಿಡಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಬಸವರಾಜು ತಿಳಿಸಿದರು. ಇತ್ತ ಕಾಡಾನೆ ಸೆರೆ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಕಾಡಾನೆ ದಾಳಿಗೆ ವ್ಯಕ್ತಿಯೋರ್ವ ಬಲಿಯಾಗಿದ್ದಾರೆ.

ಶನಿವಾರ ಆನೆ ದಾಳಿಗೆ ಓರ್ವ ಬಲಿ

ಶನಿವಾರ ಬೆಳಗ್ಗೆ ಒಂಭತ್ತು ಗಂಟೆ ಸುಮಾರಿಗೆ ಸಕಲೇಶಪುರ ತಾಲ್ಲೂಕಿನ ಕೆಳಗಳಲೆ‌ ಗ್ರಾಮದ ಕೃಷ್ಣೇಗೌಡ (67) ಎಂಬವರು ತಮ್ಮ ಮಗ ಸುಧೀಶ್ ಹಾಗೂ ಮಮ್ಮೊಗ ಪ್ರತಮ್ ಜೊತೆ ಕಾಫಿ ತೋಟಕ್ಕೆ ತೆರಳಿದ್ದರು. ಈ ವೇಳೆ ಏಕಾಏಕಿ ಮೂರು ಕಾಡಾನೆಗಳು ದಾಳಿ ಮಾಡಿವೆ.

ಇದನ್ನೂ ಓದಿ:  Sumalatha: ರೆಬಲ್ ಸ್ಟಾರ್ ಅಂಬಿ ಕನಸು ನನಸಾಗಿಸಿದ್ದು ಸೂಪರ್ ಸ್ಟಾರ್ ವಿ. ಸೋಮಣ್ಣ-ಸುಮಲತಾ

ರಸ್ತೆ ತಡೆದು ಪ್ರತಿಭಟನೆ

ಸುದೀಶ್ ಹಾಗೂ ಪ್ರಥಮ್ ಓಡಿ ಜೀವ ಉಳಿಸಿಕೊಂಡರೆ ಕೃಷ್ಣೇಗೌಡರನ್ನು ಕಾಡಾನೆ ಸೊಂಡಲಿನಿಂದ‌ ಎತ್ತಿ ಬಿಸಾಡಿ ಸಾಯಿಸಿದೆ. ಘಟನೆ ಖಂಡಿಸಿ ಜನರು ಸಕಲೇಶಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.75 ರಸ್ತೆ ತಡೆದು ಕೆಲಕಾಲ‌ ಧರಣಿ ನಡೆಸಿದರು. ಇದರಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ನಂತರ ಸ್ಥಳಕ್ಕೆ ಡಿಎಫ್‌ಓ ಡಾ.ಬಸವರಾಜು ಆಗಮಿಸಿ ಪೊಲೀಸರೊಂದಿಗೆ ಪ್ರತಿಭಟನಾಕಾರರ ಮನವೊಲಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
Published by:Mahmadrafik K
First published: