ಸಿದ್ದಾಪುರದ ಸಾಂತ್ವನ ಕೇಂದ್ರದ ಗೋಡೆ ಹಾರಿ ವಿದೇಶಿ ಮಹಿಳೆಯರು ಪರಾರಿ

ವಿದೇಶಿಯರನ್ನು ನೋಡಿಕೊಳ್ಳುವುದಕ್ಕಾಗಿಯೇ ಮೂರು ಪಾಳಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸ್ ಭದ್ರತೆ ನಡುವೆಯೂ ಪರಾರಿಯಾಗಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಆ. 17):  ಕಾನೂನು ಬಾಹಿರವಾಗಿ ನಗರದಲ್ಲಿ ನೆಲೆಯೂರಿದ್ದ 13 ಮಂದಿ ಅಫ್ರಿಕಾ ಪ್ರಜೆಗಳನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ ವೇಳೆ ಈ ಪೈಕಿ ಐವರು ಮಹಿಳೆಯರು ಗೋಡೆ ಹಾರಿ ಪರಾರಿಯಾಗಿದ್ದಾರೆ. ನಗರದಲ್ಲಿ ಅಫ್ರಿಕಾ‌ ಪ್ರಜೆಗಳ ಹಾವಳಿ ಮುಂದುವರೆದಿದ್ದು ಪೊಲೀಸರಿಗೆ ತಲೆ ಬಿಸಿಯಾಗಿ‌ ಪರಿಣಮಿಸಿದೆ. ಅನಧಿಕೃತವಾಗಿ ವಾಸದ ಜೊತೆ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿ ಕಾನೂನು‌ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಹದ್ದು ಮೀರಿ ವರ್ತಿಸುವ ದಂಧೆಕೋರರಿಗೆ ಹೆಡೆಮುರಿ ಕಟ್ಟಲಾಗಿತ್ತು.  ಪೊಲೀಸ್ ಕಸ್ಟಡಿಯಲ್ಲಿ ಇರುವಾಗಲೇ ರಾತ್ರೋ ರಾತ್ರಿ ಈಗ ಮಹಿಳೆಯರು ಗೋಡೆ ಹಾರಿ ಪರಾರಿ ಆಗಿರುವುದು ಹೊಸ ತಲೆ ನೋವು ಸೃಷ್ಟಿಸಿದೆ. 

ವೀಸಾ, ಪಾರ್ಸ್ ಪೋರ್ಟ್ ಅವಧಿ ಮೀರಿದರೂ ವಿದೇಶಿಯರು ನಗರದಲ್ಲಿ ಅಕ್ರಮವಾಗಿ ನೆಲೆಯೂರಿದ್ದರು. ಈ ಸಂಬಂಧ ಹೆಣ್ಣೂರು ಸೇರಿದಂತೆ ಪೂರ್ವ ವಿಭಾಗದ ಪೊಲೀಸರು 13 ಮಂದಿ ವಿದೇಶಿಯರನ್ನು ಬಂಧಿಸಿದ್ದರು‌. ಬಳಿಕ ಸಿದ್ದಾಪುರ ಬಳಿಯ ಮಹಿಳಾ ಸಾಂತ್ವ‌ನ ಕೇಂದ್ರದಲ್ಲಿ‌ ಬಂಧಿತರನ್ನು ಇರಿಸಲಾಗಿತ್ತು. ಮೂವರು ಕಾಂಗೋ ಇಬ್ಬರು ನೈಜಿರೀಯಾ ದೇಶದ ಮಹಿಳೆಯರು ಮಧ್ಯರಾತ್ರಿ ಕುಡಿಯಲು ನೀರು ಕೇಳಿದ್ದಾರೆ. ಈ ವೇಳೆ ಬಾಗಿಲು ತೆಗೆದು ಭದ್ರತಾ ಸಿಬ್ಬಂದಿ ನೀರು ಕೊಟ್ಟಿದ್ದಾರೆ.‌ ಇದೇ ಸಮಯ ಉಪಯೋಗಿಸಿಕೊಂಡು ಸಿಬ್ಬಂದಿ ಕಣ್ತಪ್ಪಿಸಿ ಈ ಕೃತ್ಯ ಎಸಗಿದ್ದಾರೆ.

ಇದನ್ನು ಓದಿ: ನ್ಯೂಜಿಲೆಂಡ್​ನಲ್ಲಿ ಪತ್ತೆಯಾಯ್ತು ಒಂದೇ ಒಂದು ಡೆಲ್ಟಾ ಪ್ರಕರಣ; ದೇಶಾದ್ಯಾಂತ ಲಾಕ್​​ಡೌನ್ ಘೋಷಣೆ

ವಿದೇಶಿಯರನ್ನು ನೋಡಿಕೊಳ್ಳುವುದಕ್ಕಾಗಿಯೇ ಮೂರು ಪಾಳಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸ್ ಭದ್ರತೆ ನಡುವೆಯೂ ಪರಾರಿಯಾಗಿದ್ದಾರೆ. ಸಾಂತ್ವನ ಕೇಂದ್ರದಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಗೋಡೆ ಹತ್ತುವಾಗ ಆಯತಪ್ಪಿ  ಓರ್ವ ವಿದೇಶಿ ಮಹಿಳೆ ಕಾಲು ಮುರಿದುಕೊಂಡಿದ್ದಾಳೆ‌. ಗಾಯಗೊಂಡ ಮಹಿಳೆಯನ್ನು  ಸ್ಥಳೀಯ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಬಂಧನ ವೇಳೆಯೂ‌ ಡ್ರಗ್ಸ್ ಗಾಗಿ ಸಿಬ್ಬಂದಿ ಜೊತೆ ಗಲಾಟೆ
ಮಹಿಳಾ ಸಾಂತ್ವನ ಕೇಂದ್ರದಲ್ಲಿರುವಾಗಲೂ ಅಫ್ರಿಕಾ ಪ್ರಜೆಗಳು ಪುಂಡಾಟಿಕೆ ಮೆರೆದಿದ್ದಾರೆ. ಡ್ರಗ್ಸ್ ಬೇಕು ಎಂದು ಸಿಬ್ಬಂದಿಯೊಂದಿಗೆ ಕಳೆದ ಒಂದು ವಾರದಲ್ಲಿ ಮೂರು ಬಾರಿ ಗಲಾಟೆ ಮಾಡಿದ್ದಾರೆ‌. ವಿವಿಧ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ವಿದೇಶಿ ಪ್ರಜೆಗಳು ಪೊಲೀಸರ ವಶದಲ್ಲಿರುತ್ತಿದ್ದಂತೆ ಕಳ್ಳಾಟ ಆಡಿ ಅನುಚಿತ ವರ್ತನೆ ತೋರಿದ್ದಾರೆ. ಈ ಹಿನ್ನೆಲೆ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ ಭದ್ರತೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಿದರೂ ಯಾವುದೇ ಆತಂಕವಿಲ್ಲದೆ ಗಲಾಟೆ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು.

ವಿದೇಶಿ ಪ್ರಜೆಗಳು ನಾಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ನಗರ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ನಿನ್ನೆ  ಮಧ್ಯರಾತ್ರಿ 2:30 ರ ಸುಮಾರಿಗೆ ಘಟನೆ ಆಗಿದೆ. ಐವರು ವಿದೇಶಿ ಮಹಿಳೆಯರು ಮಹಿಳಾ ಸಾಂತ್ವನ ಕೇಂದ್ರದ ಗೋಡೆ ಜಿಗಿದು ಎಸ್ಕೇಪ್ ಆಗಿದ್ದಾರೆ‌. ಪ್ರಕರಣ ಕುರಿತು ಸಿದ್ದಾಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕಟ್ಟಡದ ಸುತ್ತಮುತ್ತಲಿನ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಲಾಗುತ್ತಿದೆ‌. ಪರಾರಿಯಾಗಲು ಯತ್ನಿಸುತ್ತಿದ್ದಾಗ ವಿದೇಶಿ ಪ್ರಜೆಯ ಕಾಲಿಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: