• Home
  • »
  • News
  • »
  • state
  • »
  • Bidar: ಮಸೀದಿಗೆ ನುಗ್ಗಿ ದಸರಾ ಪೂಜೆ! 9 ಆರೋಪಿಗಳ ವಿರುದ್ಧ ಪ್ರಕರಣ ದಾಖಲು

Bidar: ಮಸೀದಿಗೆ ನುಗ್ಗಿ ದಸರಾ ಪೂಜೆ! 9 ಆರೋಪಿಗಳ ವಿರುದ್ಧ ಪ್ರಕರಣ ದಾಖಲು

ವಿಡಿಯೋದ ದೃಶ್ಯ

ವಿಡಿಯೋದ ದೃಶ್ಯ

ಭಕ್ತರ ಗುಂಪು ಗೇಟ್ ಮುರಿಯಲು ಯತ್ನಿಸಿ ಘೋಷಣೆಗಳನ್ನು ಕೂಗಿದ್ದಾರೆ.  ಅಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಬೆದರಿಸಿ ಮಸೀದಿಯ ಗೋಡೆಯ ಮೇಲೆ ಕಸ ಎಸೆದಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ಸಮುದಾಯದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.

  • Share this:

ಬೀದರ್‌: ಮಹ್ಮದ್ ಗವಾನ್ ಮದರಸಾ ಮತ್ತು ಮಸೀದಿಯ ಮೈದಾನಕ್ಕೆ ನುಗ್ಗಿ ಘೋಷಣೆಗಳನ್ನು ಕೂಗಿ, ಬಲವಂತವಾಗಿ ಪೂಜೆ ಸಲ್ಲಿಸಿದ ಆರೋಪದಲ್ಲಿ ಒಂಬತ್ತು ಜನರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ. ಆದರೆ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಬೀದರ್‌ನ ಪುರಾತನ ಮಸೀದಿ ಮಹ್ಮದ್ ಗವಾನ್ ಮದರಸಾದಲ್ಲಿ (Mosque In Bidar) ಹಿಂದೂಗಳ ಗುಂಪೊಂದು ಬಲವಂತವಾಗಿ ಪೂಜೆ ಸಲ್ಲಿಸಿದೆ. ದಸರಾ ಹಬ್ಬದ (Dasara Festival) ಸಂದರ್ಭದಲ್ಲಿ ದೇವಿ ಮೆರವಣಿಗೆ ಸಾಗುತ್ತಿರುವ ಸಂದರ್ಭದಲ್ಲಿ ನೂರಾರು ಭಕ್ತರು ನೆರೆದಿದ್ದರು. ಈ ವೇಳೆ ಬೀದರ್‌ನ (Bidar News) ಪುರಾತನ ಮಸೀದಿಗೆ ನುಗ್ಗಿದ ಹಿಂದೂಗಳು ಬೀಗ ಒಡೆದು ಪೂಜೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.


ಮಹ್ಮದ್ ಗವಾನ್ ಮದರಸಾ ಮಸೀದಿಯು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಅಡಿಯಲ್ಲಿ ಬರುತ್ತದೆ. ಪರಂಪರೆಯ ರಚನೆಯು ಪ್ರಮುಖ ರಾಷ್ಟ್ರೀಯ ಸ್ಮಾರಕಗಳ ಪಟ್ಟಿಯಲ್ಲಿದೆ. ಈ ಮದರಸಾಗೆ ನುಗ್ಗಿದ ಗುಂಪು ಘೋಷಣೆಗಳನ್ನು ಕೂಗುತ್ತಾ ಪೂಜೆ ಸಲ್ಲಿಸಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳು ವೈರಲ್‌ ಆಗಿವೆ.


ಎಫ್​ಐಆರ್ ದಾಖಲು
ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೈಕೋರ್ಟ್ ವಕೀಲ ಸೈಯದ್ ತಲ್ಹಾ ಹಶ್ಮಿ ರಾತ್ರಿ 1 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ ಎಂದು ಹೇಳಿದರು. “ಹಿಂದೂ ಗುಂಪು ಜೈ ಶ್ರೀ ರಾಮ್, ಜೈ ಹಿಂದೂ ಧರ್ಮ, ವಂದೇ ಮಾತರಂ ಘೋಷಣೆಗಳನ್ನು ಕೂಗುತ್ತಾ ಬಂದು ನಂತರ ಮಸೀದಿ ಆವರಣದಲ್ಲಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಮುಸ್ಲಿಂ ಸಮುದಾಯದ ಸದಸ್ಯರು ಹಾಗೂ ಎಎಸ್‌ಐ ಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಎಫ್‌ಐಆರ್‌ ಕೂಡ ದಾಖಲಾಗಿದೆ” ಎಂದು ವಕೀಲ ಹಶ್ಮಿ ತಿಳಿಸಿದರು.


ಆರೋಪಿಗಳನ್ನು ಬಂಧಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ
ಭಕ್ತರ ಗುಂಪು ಗೇಟ್ ಮುರಿಯಲು ಯತ್ನಿಸಿ ಘೋಷಣೆಗಳನ್ನು ಕೂಗಿದ್ದಾರೆ.  ಅಲ್ಲಿದ್ದ ಭದ್ರತಾ ಸಿಬ್ಬಂದಿಯನ್ನು ಬೆದರಿಸಿ ಮಸೀದಿಯ ಗೋಡೆಯ ಮೇಲೆ ಕಸ ಎಸೆದಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ಸಮುದಾಯದ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಶುಕ್ರವಾರ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ದೂರುದಾರರು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಒಂಬತ್ತು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.


ಆರೋಪಿಗಳ ಬಂಧನ
ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರ್ ಬಾಬು ಮಾತನಾಡಿ, "ನಿಜಾಮರ ಕಾಲದಿಂದಲೂ ದಸರೆಯಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ, ಮಸೀದಿಯೊಳಗೆ ಮಿನಾರ್ ಇದೆ, ಸಾಮಾನ್ಯವಾಗಿ 2-4 ಜನರು ಭೇಟಿ ನೀಡುತ್ತಿದ್ದರು ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರವೇಶಿಸಿದ್ದರು. ಮಸೀದಿಗೆ ಪ್ರವೇಶಿಸಲು ಯಾರೂ ಅಕ್ರಮವಾಗಿ ಬೀಗ ಮುರಿದಿಲ್ಲ. ನಾವು ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ದುಷ್ಕರ್ಮಿಗಳನ್ನು ಬಂಧಿಸುತ್ತೇವೆ" ಎಂದಿದ್ದಾರೆ.


ಇದನ್ನೂ ಓದಿ: Karnataka Dams Water Level: ನಿಮ್ಮ ಜಿಲ್ಲೆಯ ಡ್ಯಾಂಗಳಲ್ಲಿ ಎಷ್ಟು ನೀರು ತುಂಬಿದೆ? ಇಲ್ಲಿ ಚೆಕ್ ಮಾಡಿ


ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಮಸೀದಿಗಳ ಮೆಟ್ಟಿಲುಗಳ ಮೇಲೆ ನಿಂತಿರುವ ಜನರ ಗುಂಪು ಕಟ್ಟಡದ ಒಳಗೆ ನುಗ್ಗಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ.


ಮಹ್ಮದ್ ಗವಾನ್ ಹಿಂದಿನ ಇತಿಹಾಸ
ಮದ್ರಸಾ-ಎ-ಮಹಮ್ಮದ್ ಗವಾನ್ ಅಥವಾ ಮಹ್ಮದ್ ಗವಾನ್ ಮದರಸಾ ಮಸೀದಿ ಬೀದರಿನ ಪ್ರಾಚೀನ ಇಸ್ಲಾಮಿಕ್ ಸಂಸ್ಥೆಯಾಗಿದೆ. ಮಹ್ಮದ್ ಗವಾನ್ ಮದರಸಾವನ್ನು 15 ನೇ ಶತಮಾನದಲ್ಲಿ ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ.


ಈ ಮಸೀದಿಯು ಬಹಮನಿ ಸಾಮ್ರಾಜ್ಯದ (1347-1518) ವೈಭವದ ದಿನಗಳಲ್ಲಿ ಬೀದರ್ ರಾಜಧಾನಿಯಾಗಿದ್ದಾಗ (1424 ರಿಂದ 1427 ರ ನಡುವೆ ಗುಲ್ಬರ್ಗಾದಿಂದ ಸ್ಥಳಾಂತರಗೊಂಡಾಗ) ಡೆಕ್ಕನ್ ರಾಜವಂಶದ ಅವಶೇಷವಾಗಿದೆ. ಮಹ್ಮದ್ ಗವಾನ್ ಒಬ್ಬ ಪರ್ಷಿಯನ್ ವ್ಯಾಪಾರಿಯಾಗಿದ್ದನು. ಇರಾನ್‌ನಿಂದ ದೆಹಲಿಗೆ ಬಂದು ನಂತರ ದಕ್ಷಿಣ ಭಾರತದ ಬೀದರ್‌ಗೆ ತಲುಪಿದನು. ಮಹಮ್ಮದ್ ಗವಾನ್ ಅವರನ್ನು ಶಂಸುದ್ದೀನ್ ಮುಹಮ್ಮದ್ III ರ ಆಳ್ವಿಕೆಯಲ್ಲಿ ಬಹಮನಿ ಸಾಮ್ರಾಜ್ಯದ ಪ್ರಧಾನ ಮಂತ್ರಿಯನ್ನಾಗಿ ಮಾಡಲಾಯಿತು.


ಇದನ್ನೂ ಓದಿ: Kantara Hindi Trailer: ಬಾಲಿವುಡ್​ಗೂ ಕಾಲಿಟ್ಟ ಕನ್ನಡದ ಕಾಂತಾರ! ರಿಲೀಸ್ ಯಾವಾಗ?


ಮಹ್ಮದ್ ಗವಾನ್ ಅವರು ಶಿಕ್ಷಣ ಸಂಸ್ಥೆಯೊಂದರ ತೀವ್ರ ಅಗತ್ಯವನ್ನು ಗಮನಿಸಿ ತಮ್ಮ ಸ್ವಂತ ಹಣದಿಂದ ಮದ್ರಸಾವನ್ನು ನಿರ್ಮಿಸಿದರು. ಇವರ ಪ್ರಮುಖ ನಿರ್ಮಾಣಗಳಲ್ಲಿ ಮದ್ರಸಾ ಮುಖ್ಯವಾಗಿದೆ. ಆದರೆ 1695/96 ರಲ್ಲಿ ಗನ್ ಪೌಡರ್ ಸ್ಫೋಟದಿಂದಾಗಿ ಸ್ಮಾರಕದ ಮುಂಭಾಗದ ಅರ್ಧದಷ್ಟು ಹಾನಿಗೊಂಡಿದೆ.

Published by:ಗುರುಗಣೇಶ ಡಬ್ಗುಳಿ
First published: