• Home
  • »
  • News
  • »
  • state
  • »
  • Koppal: ಕಾರಟಗಿಯಲ್ಲಿ ಮತಾಂತರ ಆರೋಪ; ಪಾಸ್ಟರ್ ಮಗನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ?

Koppal: ಕಾರಟಗಿಯಲ್ಲಿ ಮತಾಂತರ ಆರೋಪ; ಪಾಸ್ಟರ್ ಮಗನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ?

ಪಾಸ್ಟರ್ ಸತ್ಯನಾರಾಯಣ ಅಲಿಯಾಸ್ ಸ್ಯಾಮುಯೆಲ್

ಪಾಸ್ಟರ್ ಸತ್ಯನಾರಾಯಣ ಅಲಿಯಾಸ್ ಸ್ಯಾಮುಯೆಲ್

ಚರ್ಚ್​ ಉಚಿತ ಸೇವೆಗೆ ಬಾಲಕಿಯನ್ನು ಕರೆಸಿಕೊಂಡಿದ್ದನು. ಈ ವೇಳೆ ಮದುವೆ ಆಗೋದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

  • Share this:

ರಾಜ್ಯದಲ್ಲಿ ಮತಾಂತರ ಪ್ರಕರಣವೊಂದು (Conversion Case) ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ (Karatagi, Koppal) ಬೆಳಕಿಗೆ ಬಂದಿದೆ. ಬಡ ಹಿಂದೂ ಕುಟುಂಬಗಳನ್ನು (Hindu Family) ಟಾರ್ಗೆಟ್ ಮಾಡಿ ಹಣ ಆಮಿಷ ನೀಡಿ ಮತಾಂತರ ಮಾಡಲಾಗುತ್ತಿತ್ತು. ಹೀಗೆ ಹಣದ ಆಮಿಷಕ್ಕೆ ಒಳಗಾಗಿದ್ದ ಹಿಂದೂ ಕುಟುಂಬವೊಂದು ನಾಲ್ಕು ವರ್ಷದ ನಂತರವೂ ಹಿಂದೂ ದೇವರ ಪೂಜೆ  ಮಾಡೋದನ್ನು ನಿಲ್ಲಿಸಿರಲಿಲ್ಲ. ಈ ಕುಟುಂಬವನ್ನು ಮತಾಂತರ ಮಾಡಿದ್ದ ವ್ಯಕ್ತಿ ಇವರಿಗೆ ಕಿರುಕುಳ ಮತ್ತು ಜೀವ ಬೆದರಿಕೆ ಹಾಕಿದ್ದ ಎಂಬ ಆರೋಪಗಳು (Allegation) ಕೇಳಿ ಬಂದಿವೆ. ಈ ಆರೋಪಗಳ  ಜೊತೆಯಲ್ಲಿ ಪಾಸ್ಟರ್​ನ 17 ವರ್ಷದ ಮಗ ಹಿಂದೂ ಕುಟುಂಬದಲ್ಲಿ ಅಪ್ರಾಪ್ತೆಯನ್ನ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.


ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಚರ್ಚ್ ಪಾಸ್ಟರ್ ಸತ್ಯನಾರಾಯಣ ಅಲಿಯಾಸ್​ ಸ್ಯಾಮುಯೆಲ್ ಎಂಬಾತ ಹಿಂದೂ ಕುಟುಂಬವನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದ್ದನು.


ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುವ ಕೆಲಸ


ಪಾಸ್ಟರ್ ಸತ್ಯನಾರಾಯಣ ಅಲಿಯಾಸ್​ ಸ್ಯಾಮುಯೆಲ್ ಕಾರಟಗಿ ಪಟ್ಟಣದ ಶ್ರೀರಾಮನಗರದಲ್ಲಿ ಗ್ರೇಸ್ ಪ್ರಾರ್ಥನಾ ಮಂದಿರ ನಡೆಸುತ್ತಿದ್ದಾನೆ. ಈತನ ಪತ್ನಿ ಸುತ್ತಲಿನ ಬಡ ಕುಟುಂಬದ ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳಿಸುವ ಕೆಲಸ ಮಾಡುತ್ತಿದ್ದಳು. ಸಹಾಯ ಮಾಡುವ ನೆಪದಲ್ಲಿ ಈ ಕುಟುಂಬವನ್ನು ಮತಾಂತರ ಮಾಡಿಸಿದ್ದಳು.


forced conversion to hindu family in karatagi complaint filed mrq
ಚರ್ಚ್


ಹಿಂದೂ ಕುಟುಂಬಕ್ಕೆ ಜೀವ ಬೆದರಿಕೆ


ಮತಾಂತರಗೊಂಡ ಬಳಿಕವೂ ಈ ಕುಟುಂಬ ಹಿಂದೂ ದೇವರ ಪೂಜೆಯಲ್ಲಿ ತೊಡಗಿಕೊಂಡಿತ್ತು. ಹಿಂದೂ ದೇವರ ಪೂಜೆಗೆ ವಿರೋಧ ವ್ಯಕ್ತಪಡಿಸಿದ್ದ ಪಾಸ್ಟರ್, ಬಡಕುಟುಂಬಕ್ಕೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದಾನೆ. ಇಷ್ಟು ಮಾತ್ರ ಅಲ್ಲದೇ ಕುಟುಂಬದಲ್ಲಿದ್ದ ಅಪ್ರಾಪ್ತೆಗೂ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.


ಅಪ್ರಾಪ್ತೆ ಮೇಲೆ ಅತ್ಯಾಚಾರ


ಇನ್ನು ಪಾಸ್ಟರ್ ಸತ್ಯನಾರಾಯಣನ 17 ವರ್ಷದ ಮಗ ಮತಾಂತರಗೊಂಡ ಕುಟುಂಬದ ಅಪ್ರಾಪ್ತೆಯನ್ನು ಅತ್ಯಾಚಾರಗೈದಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ಸಂತ್ರಸ್ತೆ ಕುಟುಂಬಸ್ಥರು ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಚರ್ಚ್​ ಉಚಿತ ಸೇವೆಗೆ ಬಾಲಕಿಯನ್ನು ಕರೆಸಿಕೊಂಡಿದ್ದನು. ಈ ವೇಳೆ ಮದುವೆ ಆಗೋದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


ಇದನ್ನೂ ಓದಿ:  Srinivas Prasad: ಕಾಂಗ್ರೆಸ್​ಗೆ ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಖರ್ಗೆ ಸಿಕ್ಕಿರೋದು; ಶ್ರೀನಿವಾಸ್ ಪ್ರಸಾದ್ 


ಈ ಎಲ್ಲಾ ಘಟನೆ ಸಂಬಂಧ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪಾಸ್ಟರ್ ಸತ್ಯನಾರಾಯಣ, ಆತನ ಪತ್ನಿ ಹಾಗೂ 17 ವರ್ಷದ ಮಗನ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.


ಮತಾಂತರ ನಿಷೇಧ ವಿಧೇಯಕದಲ್ಲಿ ಏನಿದೆ?


ಮತಾಂತರ ಅಗಬಯಸುವ ವ್ಯಕ್ತಿ 60 ದಿನಗಳ ಮೊದಲು ಫಾರ್ಮ್ 1 ಅನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಬಳಿ ಮಾಹಿತಿ ನೀಡಬೇಕಿದೆ. ಮತಾಂತರ ಮಾಡಿಸುವ ವ್ಯಕ್ತಿಯೂ ಕೂಡ ಒಂದು ತಿಂಗಳ ಮೊದಲು ಈಗಾಗಲೇ ಫಾರ್ಮ್ 2 ಅನ್ನು ಭರ್ತಿಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು.


ಇನ್ನು ಮತಾಂತರವಾದ ಒಂದು ತಿಂಗಳ ಬಳಿಕ ಡಿಕ್ಲರೇಷನ್ ಫಾರ್ಮ್ ಅಥವಾ ಘೋಷಣಾಪತ್ರವನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಭರ್ತಿ ಮಾಡಿ ನೀಡಬೇಕು, ಜೊತೆಗೆ ಡಿಕ್ಲರೇಷನ್ ಮಾಡಿದ 21 ದಿನಗಳ ಬಳಿಕ ಮತಾಂತರ ಹೊಂದಿದ ವ್ಯಕ್ತಿ ಖುದ್ದು ಹಾಜರಾಗಿ ಗುರುತು ನೀಡಬೇಕಿದೆ.


ಇದನ್ನೂ ಓದಿ: Hindi Diwas: ಹಿಂದಿ ದಿವಸ್ ಆಚರಣೆ ಹಿಂದಿ ಹೇರಿಕೆಯ ಹುನ್ನಾರವೇ? ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದ್ದೇಕೆ?


ದಂಡಾಧಿಕಾರಿಗಳಿಂದ ದೃಢೀಕರಣ


ಈ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರೊತ್ತರ ಘಟನೆಯ ಸಂಪೂರ್ಣ ಘಟನೆಯನ್ನು ದಾಖಲಿಸತಕ್ಕದ್ದು. ತಕರಾರುಗಳಿದ್ದಲ್ಲಿ ತಕರಾರು ಎತ್ತಿದ ವ್ಯಕ್ತಿ ಹಾಗೂ ತಕರಾರಿನ ಸ್ವರೂಪವನ್ನ ದಾಖಲಿಸಬೇಕು.


ಮತಾಂತರ ಹೊಂದಿದವರಿಗೆ ಜಿಲ್ಲಾ ದಂಡಾಧಿಕಾರಿಗಳು ದೃಢೀಕರಿಸಿದ ಪ್ರತಿಗಳನ್ನು ನೀಡಬೇಕಾಗುತ್ತದೆ. ತಕರಾರುಗಳಿದ್ದ ಪಕ್ಷದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಬಂಧ ಪಟ್ಟ ಇಲಾಖೆಗಳಾದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೇರಿದಂತೆ ಇತರ ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು