Onion: ಬಿರಿಯಾನಿ ಜೊತೆ ಈರುಳ್ಳಿ ಬದಲು ಕ್ಯಾಬೇಜ್ - ವೇಟರ್ ಜೊತೆ ಗ್ರಾಹಕರ ಮಾರಾಮಾರಿ

ಬಿರಿಯಾನಿ ಆರ್ಡರ್ ಮಾಡಿದ್ದ ಇವರಿಗೆ ಊಟದ ಜೊತೆಗೆ ಈರುಳ್ಳಿ ಕೊಟ್ಟಿರಲಿಲ್ಲ. ಆಗ ಈರುಳ್ಳಿ ಕೊಡುವಂತೆ ಕೇಳಿದಾಗ, ಈರುಳ್ಳಿ ದರ ಹೆಚ್ಚಾಗಿರುವುದರಿಂದ ಈರುಳ್ಳಿ ಕೊಡುತ್ತಿಲ್ಲ ಎಂದು ವೇಟರ್ ಉತ್ತರಿಸಿದ್ದಾನೆ

G Hareeshkumar | news18-kannada
Updated:December 6, 2019, 7:20 PM IST
Onion: ಬಿರಿಯಾನಿ ಜೊತೆ ಈರುಳ್ಳಿ ಬದಲು ಕ್ಯಾಬೇಜ್ - ವೇಟರ್ ಜೊತೆ ಗ್ರಾಹಕರ ಮಾರಾಮಾರಿ
ಈರುಳ್ಳಿ
  • Share this:
ಬೆಳಗಾವಿ(ಡಿ.06): ಹೊಟೇಲ್​​​ನಲ್ಲಿ ಬಿರಿಯಾನಿ ಜೊತೆಗೆ ಈರುಳ್ಳಿ ಬದಲು ಕ್ಯಾಬೇಜ್​​ ನೀಡಿದಕ್ಕೆ ವೇಟರ್ ಜೊತೆ ಗ್ರಾಹಕರು ಗಲಾಟೆ ನಡೆಸಿರುವ ಘಟನೆ ನಿನ್ನೆ ರಾತ್ರಿ ಬೆಳಗಾವಿಯಲ್ಲಿ ನಡೆದಿದೆ. 

ನಗರದ ರಾಮದೇವ ಬಳಿ‌ ಇರುವ ಹೊಟೇಲ್ ಗೆ ಇಬ್ಬರು ಯುವಕರು ಊಟಕ್ಕೆ ಹೋಗಿದ್ದರು. ‌ಆಗ ಬಿರಿಯಾನಿ ಆರ್ಡರ್ ಮಾಡಿದ್ದ ಇವರಿಗೆ ಊಟದ ಜೊತೆಗೆ ಈರುಳ್ಳಿ ಕೊಟ್ಟಿರಲಿಲ್ಲ. ಆಗ ಈರುಳ್ಳಿ ಕೊಡುವಂತೆ ಕೇಳಿದಾಗ, ಈರುಳ್ಳಿ ದರ ಹೆಚ್ಚಾಗಿರುವುದರಿಂದ ಈರುಳ್ಳಿ ಕೊಡುತ್ತಿಲ್ಲ ಎಂದು ವೇಟರ್ ಉತ್ತರಿಸಿದ್ದಾನೆ. ಈರುಳ್ಳಿ ಬದಲು ಕ್ಯಾಬೇಜ್ ನೀಡಿದ್ದಾನೆ ಎನ್ನಲಾಗಿದೆ.

ಮಾತಿಗೆ ಮಾತು ಬೆಳೆದು ವೇಟರ್ ಹಾಗೂ ಯುವಕರ‌ ಮಧ್ಯೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಹೊಡೆದಾಡಿಕೊಂಡಿದ್ದಾರೆ. ಇಬ್ಬರು ಯುವಕರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಘಟನೆ ಬಗ್ಗೆ ದೂರು ದಾಖಲಾಗಿಲ್ಲ. ಘಟನೆಯಲ್ಲಿ ಇಬ್ಬರು ಯುವಕರು ಗಾಯಗೊಂಡಿದ್ದಾರೆ.

ಇದನ್ನೂ ಓದಿ : ಕಳ್ಳರ ಚಿತ್ತ ಈರುಳ್ಳಿಯತ್ತ - ರಾತ್ರೋರಾತ್ರಿ ಈರುಳ್ಳಿಯನ್ನು ಮಂಗಮಾಯ ಮಾಡಿದ ಖದೀಮರು

ಉಳ್ಳಾಗಡ್ಡಿ ದರ ಏರಿಕೆಯಾದ ಹಿನ್ನಲೆಯಲ್ಲಿ ಬೆಳಗಾವಿ ನಗರದ ಮಾಂಸಹಾರಿ ಹೊಟೇಲ್ ಗಳಲ್ಲಿ ಈರುಳ್ಳಿ ಬದಲಿಗೆ ಕ್ಯಾಬೇಜ್ ಕೊಡಲಾಗುತ್ತಿದೆ.
First published: December 6, 2019, 6:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading