News18 India World Cup 2019

ದೇವಸ್ಥಾನದ ಸಿಬ್ಬಂದಿ ನಿರ್ಲಕ್ಷ್ಯ; ತುಮಕೂರಿನಲ್ಲಿ ಪ್ರಸಾದ ಸೇವಿಸಿ ಬಾಲಕ ಸಾವು, ಹಲವರು ಅಸ್ವಸ್ಥ

ಅಡುಗೆ ತಯಾರಿಸಲು ಶುದ್ಧ ನೀರು ಬಳಸದ ಕಾರಣ ಈ ಘಟನೆ ಸಂಭವಿಸಿದೆ ಎಂದು ಭಕ್ತರು ಅನುಮಾನ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latha CG | news18
Updated:May 22, 2019, 1:49 PM IST
ದೇವಸ್ಥಾನದ ಸಿಬ್ಬಂದಿ ನಿರ್ಲಕ್ಷ್ಯ; ತುಮಕೂರಿನಲ್ಲಿ ಪ್ರಸಾದ ಸೇವಿಸಿ ಬಾಲಕ ಸಾವು, ಹಲವರು ಅಸ್ವಸ್ಥ
ನಿಡಗಲ್ಲು ವೀರಭದ್ರಸ್ವಾಮಿ ದೇವಾಲಯ
Latha CG | news18
Updated: May 22, 2019, 1:49 PM IST
ತುಮಕೂರು,(ಮೇ 22): ದೇವಸ್ಥಾನದ ಪ್ರಸಾದ ಸೇವಿಸಿ ಒಬ್ಬ ಬಾಲಕ ಸಾವನ್ನಪ್ಪಿದ್ದು, ಹಲವರು ಅಸ್ವಸ್ಥಗೊಂಡಿರುವ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಿಡಗಲ್ಲು ವೀರಭದ್ರಸ್ವಾಮಿ ದೇಗುಲದಲ್ಲಿ ನಡೆದಿದೆ.

11 ವರ್ಷದ ವೀರಭದ್ರಪ್ಪ ಎಂಬ ಬಾಲಕ ಸಾವನ್ನಪ್ಪಿದ ಮೃತದೈವಿ. ಶುದ್ಧ ನೀರು ಇಲ್ಲದ ಕಾರಣ ತೊಟ್ಟಿ ನೀರು ಬಳಸಿ ಅಡುಗೆ ಮಾಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಾಗಿ ಊಟ ತಿಂದ ಭಕ್ತರು ಅಸ್ವಸ್ಥಗೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.  ನಿಡಗಲ್ಲು ವೀರಭದ್ರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಇದ್ದಿದ್ದರಿಂದ  ಸೋಮವಾರ ಹಲವಡೆಯಿಂದ ಭಕ್ತರು ಆಗಮಿಸಿದ್ದರು. ಮಂಗಳವಾರ ದೇವಸ್ಥಾನದಲ್ಲಿ ಬೇಳೆಕಾಳು ಸಾಂಬರ್, ಪಲ್ಯ, ಕರಿಕಡಬು, ಚಿತ್ರಾನ್ನ, ಹೆಸರುಬೇಳೆ ಅಡುಗೆ ಮಾಡಲಾಗಿತ್ತು. ಊಟ ತಿಂದ ಕೆಲವೇ ಹೊತ್ತಿನಲ್ಲಿ ವಾಂತಿ-ಭೇದಿ ಶುರುವಾಗಿತ್ತು.

ಪ್ರಸಾದ ಸೇವಿಸಿದ್ದ ಬಾಲಕ ವೀರಭದ್ರಪ್ಪ ತೀವ್ರ ಅಸ್ವಸ್ಥಗೊಂಡಿದ್ದ. ಅಸ್ವಸ್ಥಗೊಂಡ ಬಾಲಕನನ್ನು ಬರಗೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಅಲ್ಲಿಂದ ತುಮಕೂರಿಗೆ ಕರೆತರುವ ವೇಳೆ ಸಾವನ್ನಪ್ಪಿದ್ದಾನೆ. ಮಡಕಶಿರಾ ತಾಲೂಕಿನ ಗುಣೆಮೂರುಬಾಗಿಲು‌ ಗ್ರಾಮದ ಬಾಲಕ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನಾಳೆ ಸಂಜೆಯವರೆಗೆ ಮಾತ್ರ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ, ನಂತರ ಹೊಸ ಸರ್ಕಾರಕ್ಕೆ ವೇದಿಕೆ ಸಿದ್ಧವಾಗಲಿದೆ; ಸದಾನಂದಗೌಡ

ಅಡುಗೆ ತಯಾರಿಸಲು ಶುದ್ಧ ನೀರು ಬಳಸದ ಕಾರಣ ಈ ಘಟನೆ ಸಂಭವಿಸಿದೆ ಎಂದು ಭಕ್ತರು ಅನುಮಾನ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಅಸ್ವಸ್ಥಗೊಂಡವರನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಿಂದಲೂ ಭಕ್ತರು ಆಗಮಿಸಿದ್ದು,  ಅವರೂ ಸಹ ಪ್ರಸಾದ ತಿಂದು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಗಂಗಾಧರ್, ತಿಪ್ಪೇಸ್ವಾಮಿ, ರುದ್ರೇಶ್, ನಾಗರತ್ನ, ಪವನ್, ಅರ್ಪಿತ, ವಿರೂಪಾಕ್ಷ ಎಂಬುವರಿಗೆ ಶಿರಾ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ವರ್ಷ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಮಾರಮ್ಮ ದೇಗುಲದಲ್ಲಿ ವಿಷಪ್ರಸಾದ ಸೇವಿಸಿ ಒಟ್ಟು 17 ಮಂದಿ ಅಸುನೀಗಿದ್ದರು. ಎರಡು ಬಣಗಳ ದ್ವೇಷಕ್ಕೆ ಅಮಾಯಕ ಜನರು ಬಲಿಯಾಗಿದ್ದರು. ದೇವಾಲಯದಲ್ಲಿ ಸಿದ್ಧ ಮಾಡಿದ್ದ ಪ್ರಸಾದಕ್ಕೆ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ವಿಷ ಬೆರೆಸಿದ್ದರು. ಇನ್ನೂ ಇದೇ ವರ್ಷ ಜನವರಿಯಲ್ಲಿ ಚಿಂತಾಮಣಿಯ ಗಂಗಾಭವಾನಿ ದೇಗುಲದಲ್ಲಿ ವಿಷ ಪ್ರಸಾದ ಸೇವಿಸಿ ಇಬ್ಬರು ಮೃತಪಟ್ಟಿದ್ದರು. ಹಲವರು ಅಸ್ವಸ್ಥಗೊಂಡಿದ್ದರು.
Loading...

First published:May 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...