ಹುಬ್ಬಳ್ಳಿಯಲ್ಲಿ ಚಲನಚಿತ್ರ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

ಅನೇಕ ದಿನಗೂಲಿ ಸಿನಿ ಕಾರ್ಮಿಕರ ಕುಟುಂಬಗಳ ಪರಿಸ್ಥಿತಿ ದಿಕ್ಕು ತೋಚದಂತಾಗಿದ್ದು, ಚಲನಚಿತ್ರ ಕಾರ್ಮಿಕರು ಅಸಂಘಟಿತ ವಲಯಕ್ಕೆ ಬರುತ್ತಾರೆ. ಇವರಿಗೆ ಸರ್ಕಾರ ಕಾರ್ಮಿಕ ಇಲಾಖೆಯಿಂದ ದೊರಕಬೇಕಾದ ಸೌಲಭ್ಯಗಳು ಮತ್ತು ಆರ್ಥಿಕ ನೆರವು ಮಾಡಬೇಕು ಎಂದರು.

news18-kannada
Updated:August 9, 2020, 4:29 PM IST
ಹುಬ್ಬಳ್ಳಿಯಲ್ಲಿ ಚಲನಚಿತ್ರ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ
ಆಹಾರ ಕಿಟ್ ವಿತರಣೆ
  • Share this:
ಹುಬ್ಬಳ್ಳಿ(ಆ.09): ಕೊರೋನಾ ಮಹಾಮಾರಿಯ ಹೊಡೆತಕ್ಕೆ ಕಂಗೆಟ್ಟಿರುವ ಚಲನಚಿತ್ರ ಕಾರ್ಮಿಕರಿಗೆ ಹುಬ್ಬಳ್ಳಿಯಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು. ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಸುಮಾರು 78 ಜನ ಚಲನಚಿತ್ರ ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ನಗರದ ಅಪ್ಸರಾ ಚಿತ್ರಮಂದಿರದಲ್ಲಿ ಕಿಟ್‌ಗಳನ್ನು ಹಸ್ತಾಂತರಿಸಲಾಯಿತು.

ಸಾಮಾಜಿಕ ಹೋರಾಟಗಾರ ರಾಜಶೇಖರ ಮೆಣಸಿನಕಾಯಿ ಹಾಗೂ ಬಾಬಾಜಾನ್ ಮುಧೋಳ ನೇತೃತ್ವದಲ್ಲಿ ‌ಕಿಟ್‌ಗಳನ್ನು ವಿತರಿಸಲಾಯಿತು. ಕೊರೋನಾ ಹಾವಳಿಗೆ ನಲುಗಿ ಹೋಗಿರುವ ಬಡವರು ಮತ್ತು ದಿನಗೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಚಿತ್ರರಂಗ ಸ್ಥಗಿತಗೊಂಡಿದ್ದು, ಚಲನಚಿತ್ರ ಕ್ಷೇತ್ರಕ್ಕೆ ಬದುಕು ಮುಡುಪಾಗಿಟ್ಟಿದ್ದ ಚಲನಚಿತ್ರ ಕಾರ್ಮಿಕರಿ ನೆರವಿಗೆ ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳು ಮುಂದೆ ಬರಬೇಕು ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮೆಣಸಿನಕಾಯಿ ಮನವಿ ಮಾಡಿದರು.

ಇಳಿ ವಯಸ್ಸಿನಲ್ಲಿ ಪ್ರಾಣದ ಹಂಗು ತೊರೆದು ಸೋಂಕಿತ ವ್ಯಕ್ತಿಗಳ ನೆರವಿಗೆ ನಿಂತ ವೃದ್ಧ

ಅನೇಕ ದಿನಗೂಲಿ ಸಿನಿ ಕಾರ್ಮಿಕರ ಕುಟುಂಬಗಳ ಪರಿಸ್ಥಿತಿ ದಿಕ್ಕು ತೋಚದಂತಾಗಿದ್ದು, ಚಲನಚಿತ್ರ ಕಾರ್ಮಿಕರು ಅಸಂಘಟಿತ ವಲಯಕ್ಕೆ ಬರುತ್ತಾರೆ. ಇವರಿಗೆ ಸರ್ಕಾರ ಕಾರ್ಮಿಕ ಇಲಾಖೆಯಿಂದ ದೊರಕಬೇಕಾದ ಸೌಲಭ್ಯಗಳು ಮತ್ತು ಆರ್ಥಿಕ ನೆರವು ಮಾಡಬೇಕು ಎಂದರು. ಆಹಾರ ಕಿಟ್ ನೀಡಲು ಸಹಾಯ ಮಾಡಿದ ದಾನಿಗಳು ಹಾಗೂ ವಕೀಲರಾದ ಶಿವಶಂಕರ ಅಂಬ್ಲಿ, ಸುಜಾತ ಚಿತ್ರಮಂದಿರ ಮಾಲೀಕ ಮಹಾವೀರ ಸೂಜಿ, ಶೃಂಗಾರ ಚಿತ್ರಮಂದಿರದ ಮಾಲೀಕ ಡಾ. ಸಿ. ಎಸ್. ಪಾಟೀಲ, ಉದ್ಯಮಿ ಅಶೋಕ ಗೋಯಲ್, ಗದಿಗೆಯ್ಯಾ ಹಿರೇಮಠ, ಜವಾಹರಲಾಲ್ ಚಾಝೆಡ್, ಬೀರಬಲ್ ವಿಷ್ಣೂಯಿ ಹಾಗೂ ರಾಜೇಶ್ ಜೈನ್ ಅವರು ಉಪಸ್ಥಿತರಿದ್ದರು.

ಚಲನಚಿತ್ರ‌ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂಧಿಸಿದ ಗಣ್ಯರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಮುಖ್ಯ ಅತಿಥಿಯಾಗಿ ಕರ್ನಾಟಕ ಚಲನಚಿತ್ರ ವಿತರಣಾ ಜಂಟಿ ಕಾರ್ಯದರ್ಶಿ ಅರುಣ ಚೌಧರಿ,  ಕೆ. ವೆಂಕಟರಮಣ ಬಾಬಜಿ ಭಾಗವಹಿಸಿದ್ದರು. ‌ಕಾರ್ಯಕ್ರಮಕ್ಕೆ ಬಂದವರನ್ನು ಕಲಾವಿದರಾದ ಡಿ. ಗೋವಿಂದರಾವ್ ಸ್ವಾಗತಿಸಿದರು. ಅಕ್ಕಿ, ಬೇಳೆ, ಎಣ್ಣೆ, ಹಿಟ್ಟು, ಸಕ್ಕರೆ ಸೇರಿದಂತೆ ಹಲವು ದವಸ ಧಾನ್ಯಗಳು ಹಾಗೂ ದಿನಸಿ  ವಸ್ತುಗಳನ್ನು ಒಳಗೊಂಡ ಕಿಟ್ ಹಸ್ತಾಂತರಿಸಿದ ದಾನಿಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವು ನೀಡುವ ಭರವಸೆ ನೀಡಿದರು.

ಚಲನಚಿತ್ರ ಕಾರ್ಮಿಕರು ಎದೆಗುಂದಬೇಕಿಲ್ಲ, ಅವರ ಬೆಂಬಲಕ್ಕೆ ಸಮಾಜ ಮತ್ತು ಚಿತ್ರ ರಂಗಕ್ಕೆ ಸೇರಿದ ಜನರು ಇದ್ದೇವೆ‌ ಏನೇ ಕಷ್ಟಗಳಿದ್ದರು ಗಮನಕ್ಕೆ ತನ್ನಿ. ಎಲ್ಲರೂ ಕೊರೋನಾ ಮಹಾಮಾರಿಯ ವಿರುದ್ಧ ಒಟ್ಟಾಗಿ ಹೋರಾಡೋಣ ಎನ್ನುವ ಸಂದೇಶ ತಿಳಿಸಿದರು. ಅನೇಕ ಬಡ ಕಲಾವಿದರು ಆಹಾರ ಧಾನ್ಯಗಳ ಕಿಟ್ ಸ್ವೀಕರಿಸಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
Published by: Latha CG
First published: August 9, 2020, 4:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading