Crime News: ಮಹಿಳೆ ಮುಖಕ್ಕೆ ಪಂಚ್ ಮಾಡಿದ ಪುಡ್ ಡೆಲಿವರಿ ಬಾಯ್: ಕ್ಷಮೆ ಕೇಳಿದ ಜೊಮೊಟೊ ಸಂಸ್ಥೆ
ಆರ್ಡರ್ ನೀಡಿ ಅರ್ಧ ಗಂಟೆಯಾದರೂ ಪುಡ್ ಡೆಲಿವರಿಯಾಗದಿದ್ದರಿಂದ ಅಸಮಾಧಾನಗೊಂಡು ಮಹಿಳೆ ಆರ್ಡರ್ ರದ್ದು ಮಾಡಿದ್ದರು. 4.30 ವೇಳೆಗೆ ಡೆಲಿವರಿ ಬಾಯ್ ಕಾಮರಾಜ್ ಊಟ ತೆಗೆದುಕೊಂಡು ಮನೆ ಬಳಿ ಬಂದಿದ್ದಾನೆ.
ಬೆಂಗಳೂರು (ಮಾರ್ಚ್ 10); ನಗರದಲ್ಲಿ ಆಹಾರ ಪೂರೈಕೆ ಮಾಡುವ ಜೊಮೋಟೋ ಕಂಪೆನಿಗೆ ಊಟಕ್ಕಾಗಿ ಆರ್ಡರ್ ಮಾಡಿದ್ದ ಮಹಿಳೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪ ಸಂಬಂಧ ಡೆಲಿವರಿ ಬಾಯ್ ನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಇಂದು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಕಾಮರಾಜ್ ಬಂಧಿತ ಆರೋಪಿ..ಕೆಲ ವರ್ಷಗಳಿಂದ ಜೊಮ್ಯಾಟೋ ಕಂಪೆನಿಯಲ್ಲಿ ಪುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಹಾಗೂ ಮೇಕಪ್ ಆರ್ಟಿಸ್ ಆಗಿರುವ ಆಂಧ್ರ ಪ್ರದೇಶದ ಹಿತೇಶ್ ಚಂದ್ರಾಣಿ ಎಂಬುವರು ನಿನ್ನೆ ಮಧ್ಯಾಹ್ನ 3.30ರ ವೇಳೆ ಊಟಕ್ಕಾಗಿ ಆನ್ ಲೈನ್ ಮೂಲಕ ಜೊಮ್ಯಾಟೊ ಕಂಪೆನಿಗೆ ಆರ್ಡರ್ ಮಾಡಿದ್ದಾರೆ.
ಆರ್ಡರ್ ನೀಡಿ ಅರ್ಧ ಗಂಟೆಯಾದರೂ ಪುಡ್ ಡೆಲಿವರಿಯಾಗದಿದ್ದರಿಂದ ಅಸಮಾಧಾನಗೊಂಡು ಮಹಿಳೆ ಆರ್ಡರ್ ರದ್ದು ಮಾಡಿದ್ದರು. 4.30 ವೇಳೆಗೆ ಡೆಲಿವರಿ ಬಾಯ್ ಕಾಮರಾಜ್ ಊಟ ತೆಗೆದುಕೊಂಡು ಮನೆ ಬಳಿ ಬಂದಿದ್ದಾನೆ. ಆರ್ಡರ್ ಕ್ಯಾನ್ಸಲ್ ಮಾಡಿದ್ದು ವಾಪಸ್ ತೆಗದುಕೊಂಡು ಹೋಗಿ ಎಂದು ಮಹಿಳೆ ತಿಳಿಸಿದ್ದಾಳೆ. ಇದರಿಂದ ಕೋಪದಿಂದಲೇ ಊಟದ ಪಾರ್ಸೆಲ್ ತೆಗೆದುಕೊಳ್ಳುವಂತೆ ಡೆಲಿವರಿ ಬಾಯ್ ಹೇಳಿದ್ದಾನೆ. ಆದರೆ ಮಹಿಳೆ ಮಾತ್ರ ಸ್ವೀಕರಿಸಲಿರಲಿಲ್ಲ. ಇದರಿಂದ ರೊಚ್ಚಿಗೆದ್ದು ಮನೆಗೆ ನುಗ್ಗಿ ಟೇಬಲ್ ಮೇಲೆ ಪಾರ್ಸೆಲ್ ಇಟ್ಟು 'ನಾನು ನಿಮ್ಮ ಮನೆಯ ಗುಲಾಮನಲ್ಲ ಎಂದಿದ್ದಾನೆ.
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಕಾಮರಾಜ್ ಆಕೆಯ ಮುಖಕ್ಕೆ ಕೈಯಿಂದ ಬಲವಾಗಿ ಹೊಡೆದು ಹಲ್ಲೆ ಮಾಡಿದ್ದಾನೆ. ಇದಕ್ಕೆ ಆಕೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಂತೆ ಡೆಲಿವರಿ ಬಾಯ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಹಲ್ಲೆಗೊಳಗಾದ ಮಹಿಳೆ ಸಾಮಾಜಿಕ ಜಾಲತಾಣ ಇನ್ ಸ್ಟ್ರಾಗ್ರಾಮ್ ಅಕೌಂಟ್ ನಲ್ಲಿ ತನ್ನ ಮೇಲೆ ಆಗಿರುವ ಹಲ್ಲೆ ಕುರಿತಂತೆ ನೋವು ತೋಡಿಕೊಂಡಿದ್ದರು. ಅಲ್ಲದೆ ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕ ಪ್ರವೀಣ್ ಸೂದ್, ಜೊಮ್ಯಾಟೊ ಕಂಪೆನಿಗೆ ವಿಡಿಯೊ ಪೋಸ್ಟ್ ಮಾಡಿದ್ದರು.
ಬಳಿಕ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು..ವಿಡಿಯೊ ವೈರಲ್ ಆಗುತ್ತಿದ್ದಂತೆ ಘಟನೆ ಗಂಭೀರತೆ ಅರಿತ ಪೊಲೀಸರು ಡೆಲಿವರಿ ಬಾಯ್ ನನ್ನು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ವೇಳೆ ಮಹಿಳೆ ಮೇಲೆ ಹಲ್ಲೆ ಮಾಡಿದ್ದು ನಿಜ. ಆಕೆ ಪುಡ್ ಆರ್ಡರ್ ಕ್ಯಾನ್ಸಲ್ ಮಾಡಿದ್ದರಿಂದ ಕೋಪದಿಂದ ಮುಖಕ್ಕೆ ಹೊಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಜೊಮ್ಯಾಟೊ ಸಂಸ್ಥೆ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಕಂಪೆನಿ ಸಿಬ್ಬಂದಿ ಅವಾಂತರ ಕುರಿತಂತೆ ಕ್ಷಮಾಪಣೆ ಕೇಳಿದ್ದು. ಮಹಿಳೆಯ ಅಗಿರುವ ಗಾಯದ ಕುರಿತಂತೆ ವೈದ್ಯಕೀಯ ವೆಚ್ಚ ಭರಿಸುವುದಾಗಿ ಭರವಸೆ ನೀಡಿದೆ.
ಇದೇ ಮಹಿಳೆ ಸಹ ಪೊಲೀಸರಿಗೆ ದೂರು ನೀಡಿದ್ದು ಕಾನೂನು ಕ್ರಮ ಕೈಗೊಳ್ಳಲು ಹೇಳಿದ್ರೆ. ಆದ್ರೆ ಈಗ ಜೊಮೋಟೋ ಸಂಸ್ಥೆ ಕ್ಷಮೆ ಕೇಳಿದ್ದು ಚಿಕಿತ್ಸೆ ವೆಚ್ಚ ಬರಿಸುತ್ತೀವಿ ಅಂದಿದ್ದು ಯುವತಿ ಕೇಸ್ ವಾಪಸ್ ತಗೋಳೊ ಸಾಧ್ಯತೆ ಸಹ ಜಾಸ್ತಿಯಾಗಿದೆ. ಒಟ್ನಲ್ಲಿ ಡೆಲಿವರಿ ಕೊಡೋಕೆ ಬಂದ ಡೆಲಿವರಿ ಬಾಯ್ ಮಾತ್ರ ಇಂತಹ ವರ್ತನೆ ಮಾಡಿದ್ದು ಸರಿಯಲ್ಲ ಎಂಬುದು ಎಲ್ಲರ ಮಾತು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ