ಸ್ಪರ್ಧಿಸಲೊಪ್ಪದ ಶಾಸಕನಿಗೆ ಕಾಂಗ್ರೆಸ್​ ನಾಯಕರಿಂದ ಟಿಕೆಟ್ ಆಶ್ವಾಸನೆ; ‘ಕೈ’ ಕೊಟ್ಟ ನಾಯಕರ ವಿರುದ್ಧ ಬೆಂಬಲಿಗರ ಆಕ್ರೋಶ


Updated:April 16, 2018, 6:02 PM IST
ಸ್ಪರ್ಧಿಸಲೊಪ್ಪದ ಶಾಸಕನಿಗೆ ಕಾಂಗ್ರೆಸ್​ ನಾಯಕರಿಂದ ಟಿಕೆಟ್ ಆಶ್ವಾಸನೆ; ‘ಕೈ’ ಕೊಟ್ಟ ನಾಯಕರ ವಿರುದ್ಧ ಬೆಂಬಲಿಗರ ಆಕ್ರೋಶ

Updated: April 16, 2018, 6:02 PM IST
-ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಏ.16): ಕಳೆದೆರಡು ತಿಂಗಳ ಹಿಂದೆ ತನಗೆ ಟಿಕೆಟ್ ಬೇಡವೆಂದು ಹೇಳಿದ ಶಾಸಕರಿವರು. ಆದರೆ ಸಚಿವ, ಸಿಎಂ ಹಾದಿಯಾಗಿ ಒತ್ತಾಯಿಸಿದ ಹಿನ್ನೆಲೆ ಗಣಿನಾಡಿನ ಹಾಲಿ ಶಾಸಕ ಸ್ಪರ್ಧೆಗೆ ಒಪ್ಪಿದರು. ಈ ಆತ್ಮವಿಶ್ವಾಸದಿಂದಲೋ ಏನೋ ದೆಹಲಿಗೆ ದೌಡಾಯಿಸದ ಆ ಶಾಸಕನಿಗೆ ಇದೀಗ ಟಿಕೆಟ್ ತಪ್ಪಿದೆ. ಈ ಕಾರಣಕ್ಕೆ ಶಾಸಕರ ಬೆಂಬಲಿಗರು ತನ್ನ ಪಕ್ಷದ ನಾಯಕರ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆ ಕ್ಷಣದಲ್ಲಿ ಟಿಕೆಟ್ ಸಿಗುತ್ತಾ ಎಂದು ಆ ಗಣಿನಾಡು ಕಾಂಗ್ರೆಸ್ ಶಾಸಕ ನಿರೀಕ್ಷೆಯಲ್ಲಿದ್ದಾರೆ. ಅಷ್ಟಕ್ಕೂ ಆ ಯಾರು ಆ ನತದೃಷ್ಟ ಶಾಸಕ ಸಿರುಗುಪ್ಪ ಕ್ಷೇತ್ರದ ಬಿ ಎಂ ನಾಗರಾಜ್.

ಕಾಂಗ್ರೆಸ್ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಗಣಿನಾಡು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಕ್ಷೇತ್ರದ ಹಾಲಿ ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಟಿಕೆಟ್ ಘೋಷಣೆಯಾಗುತ್ತಿದ್ದಂತೆ ನಿನ್ನೆ ತಡ ರಾತ್ರಿ ಸಿರುಗುಪ್ಪ ಪಟ್ಟಣದಲ್ಲಿ ಪ್ರತಿಭಟನೆ ಮಾಡಿದ್ದ ಕಾರ್ಯಕರ್ತರು ಇಂದೂ ಸಹ ತೀವ್ರಸ್ವರೂಪದಲ್ಲಿ ಪ್ರತಿಭಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿರಗುಪ್ಪಾ ಪಟ್ಟಣದ ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಜನ ಕಾರ್ಯಕರ್ತರು ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿ ಮುರಳಿಕೃಷ್ಣ ಅವರಿಗೆ ಸಿರುಗುಪ್ಪ ಕ್ಷೇತ್ರದ ಟಿಕೆಟ್ ನೀಡಿರುವ ಪಕ್ಷದ ತೀರ್ಮಾನವನ್ನು ಖಂಡಿಸಿದರು.

ರಳಿಕೃಷ್ಣ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಸಚಿವ ಸಂತೋಷ್ ಲಾಡ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಟೈರ್​ಗಳಿಗೆ ಬೆಂಕಿ ಹಚ್ಚಿ, ಸಚಿವ ಲಾಡ್ ಚಿತ್ರಕ್ಕೆ ಚಪ್ಪಲಿ ಏಟು ಒಡೆದು, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಹಾಜರಾತಿ ದಾಖಲಿಸಿರುವ ಶಾಸಕ ನಾಗರಾಜ್ ಅವರಿಗೆ ಯಾವ ಕಾರಣಕ್ಕೆ ಟಿಕೆಟ್ ನೀಡಿಲ್ಲ ಎಂಬುದನ್ನು ವರಿಷ್ಠರು ಸ್ಪಷ್ಟ ಪಡಿಸಬೇಕು ಎಂದು ಬೆಂಬಲಿಗರಾದ ಕರಿಬಸಪ್ಪ ಒತ್ತಾಯಿಸಿದರು.

ಕಳೆದ ಕೆಲ ತಿಂಗಳ ಹಿಂದೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ವತಃ ಸಿರುಗುಪ್ಪ ಶಾಸಕ ಬಿ ಎಂ ನಾಗರಾಜ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯಲ್ಲಿ ಶಾಸಕನ ಸಹೋದರ ಟಿಕೆಟ್ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದರು. ಆದರೆ ಆಗ ಸಚಿವ ಸಂತೋಷ್ ಲಾಡ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾದಿಯಾಗಿ ಶಾಸಕ ಬಿ ಎಂ ನಾಗರಾಜ್ ಸ್ಪರ್ಧಿಸಬೇಕು, ಪಕ್ಷ ನಿಮಗೆ ಟಿಕೆಟ್ ಕೊಡುತ್ತೆ ಎಂದೇಳಿದ್ದಂತೆ. ಅಭ್ಯರ್ಥಿ ಪಟ್ಟಿ ಬಿಡುಗಡೆ ಸಂದರ್ಭದಲ್ಲಿ ಶಾಸಕರಿಗೆ ಟಿಕೆಟ್ ಸಿಕ್ಕೇಸಿಗುತ್ತದೆಂಬ ಆಶ್ವಾಸನೆಯನ್ನು ನೀಡಿದ್ದರಂತೆ. ಈ ಕಾರಣಕ್ಕೆ ದೆಹಲಿಗೂ ತೆರಳದೇ ಕ್ಷೇತ್ರದಲ್ಲಿದ್ದ ಶಾಸಕ ನಾಗರಾಜ್ ಅವರಿಗೆ ಟಿಕೆಟ್ ಬಿಡುಗಡೆಯಾದಾಗ ಶಾಕ್ ಆಗಿದೆ. ಇದೀಗ ಟಿಕೆಟ್ ಪಡೆಯಲು ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ಶಾಸಕ ಕೊನೆ ಕ್ಷಣದ ಪ್ರಯತ್ನ ಮಾಡುತ್ತಿದ್ದಾರೆ. ಶಾಸಕ ಸ್ಥಾನಕ್ಕೆ ಟಿಕೆಟ್ ಸಿಗದೇ ಇರುವ ಬಗ್ಗೆ ಬೇಸರವಿದೆ, ಸಿರುಗುಪ್ಪದಲ್ಲಿ ಸಚಿವ ಸಂತೋಷ್ ಲಾಡ್ ಅವರನ್ನು ಟಾರ್ಗೆಟ್ ಮಾಡಿ ಪ್ರತಿಕೃತಿ ದಹಿಸಿ ಬೆಂಬಲಿಗರ ಆಕ್ರೋಶ ಸರಿಯಲ್ಲ ಎಂದು ಹಾಲಿ ಶಾಸಕ ಬಿ ಎಂ ನಾಗರಾಜ್ ಹೇಳಿಕೆ ನೀಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಶಾಸಕ ನಾಗರಾಜ್ ಟಿಕೆಟ್ ಅವಕಾಶ ನೀಡದೇ ವಲಸಿಗರಾಗಿ ಆಗಮಿಸಿದ ಕೂಡ್ಲಿಗಿ ಶಾಸಕ ನಾಗೇಂದ್ರ ಅಳಿಯ ಮುರಳಿಕೃಷ್ಣ ಅವರಿಗೆ ಟಿಕೆಟ್ ಕೊಟ್ಟಿರುವುದು ಸರಿಯಲ್ಲ. ನಮ್ಮ ಕ್ಷೇತ್ರಕ್ಕೆ ಹೊರಗಡೆ ವ್ಯಕ್ತಿ ಬಂದು ಸ್ಪರ್ಧಿಸುವುದು ಬೇಡ ಎಂದು ಶಾಸಕ ನಾಗರಾಜ್ ಅವರಿಗೆ ನೀಡಿ ಎಂದು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಕೆಟ್ ಕೊಡುತ್ತೇನೆಂದು ಮೋಸ ಮಾಡಿದ್ದಾರೆಂದು ತಮ್ಮ ಕಾರ್ಯಕರ್ತರು ತೀವ್ರ ಸ್ವರೂಪದಲ್ಲಿ ಪ್ರತಿಭಟಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...