ಯುಜಿಸಿ ನೆಟ್ (NET) 2021 ರ ಫಲಿತಾಂಶವನ್ನು(Result) ಆನ್ಲೈನ್ ನಲ್ಲಿ ಬಿಡುಗಡೆ (Published) ಮಾಡಲಾಗಿದೆ. ಮೇ 2021 5ರ ನಡುವೆ ನಡೆದ ಪರೀಕ್ಷೆಯನ್ನು (Exam) ಕೋವಿಡ್ -19 ಬಿಕ್ಕಟ್ಟಿನ ಕಾರಣದಿಂದಾಗಿ ಡಿಸೆಂಬರ್ 24, 27 - 2021 ರಂದು ನಡೆಸಲಾಗಿತ್ತು. ಡಿಸೆಂಬರ್ ಮತ್ತು ಜೂನ್ ನಲ್ಲಿ ನಡೆದ ಪರೀಕ್ಷೆಯ ಫಲಿತಾಂಶ ಇಂದು ಅಂದರೆ 19ನೇ ಫೆಬ್ರವರಿ 2022 ರಂದು ಪ್ರಕಟಿಸಲಾಗಿದೆ. ವೆಬ್ಸೈಟ್ ಲಾಗಿನ್ (Website login ) ಆಗುವ ಮೂಲಕ ಅಭ್ಯರ್ಥಿಗಳು ತಮ್ಮ ರೋಲ್ ಸಂಖ್ಯೆ, ಅಪ್ಲಿಕೇಶನ್ ಸಂಖ್ಯೆ (Application number) ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ಫಲಿತಾಂಶ ಪ್ರಕಟವಾದ ನಂತರ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ.
80ಕ್ಕೂ ಹೆಚ್ಚು ವಿಷಯಗಳಿಗೆ ಯುಜಿಸಿ ನೆಟ್ (UGC NET) ಪರೀಕ್ಷೆಯನ್ನು ನಡೆಸಲಾಗಿತ್ತು. ದೇಶದ 239 ನಗರಗಳಲ್ಲಿ 837 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. 12 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ವೆಬ್ ಸೈಟ್ ನಲ್ಲಿ ಫಲಿತಾಂಶ ನೋಡಲು ಅನುಸರಿಸಬೇಕಾದ ಹಂತಗಳು:
ವೆಬ್ಸೈಟ್ನ ಹೋಮ್ ಪೇಜ್ನಲ್ಲಿ ಫಲಿತಾಂಶ ಪರಿಶೀಲಿಸಲು ಲಿಂಕ್ ಕ್ಲಿಕ್ ಮಾಡಿ
ಅದು ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸುತ್ತದೆ. ಪುಟದಲ್ಲಿ ನಿಮ್ಮ ರೋಲ್ ನಂಬರ್ ಮತ್ತು ಇತರೆ ವಿವರಗಳನ್ನು ನಮೂದಿಸಿ.
ಈಗ ನಿಮ್ಮ UGC NET ಫಲಿತಾಂಶ ಪ್ರಕಟವಾಗುತ್ತದೆ. ಫಲಿತಾಂಶವನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟೌಟ್ ತೆಗೆದುಕೊಳ್ಳಿ.
ಈ ಹಿಂದೆ ಫಲಿತಾಂಶವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಯುಜಿಸಿ ಹೇಳಿತ್ತು. ಆದರೆ ನಿಖರವಾದ ದಿನಾಂಕ ಮತ್ತು ಸಮಯವನ್ನು ಬಿಡುಗಡೆ ಮಾಡಿರಲಿಲ್ಲ. ಈಗ ಫಲಿತಾಂಸ ಪ್ರಕಟವಾಗಿದ್ದು, ಅಭ್ಯರ್ಥಿಗಳು UGC NETನ ಅಧಿಕೃತ ವೆಬ್ಸೈಟ್ ugcnet.nta.nic.inಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ.
UGC NET 2021ರ ಕೀ ಆನ್ಸರ್ಸ್ ಜನವರಿ 2022ರಲ್ಲಿ ಪ್ರಕಟವಾಗಿತ್ತು:
UGC NET ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಪರೀಕ್ಷೆ ನಡೆಸುವ ಪ್ರಾಧಿಕಾರವು 55 NET ವಿಷಯಗಳಿಗೆ ಕೀ ಆನ್ಸರ್ಸ್ ಬಿಡುಗಡೆ ಮಾಡಿದೆ. UGC NET ಕೀ ಆನ್ಸರ್ಸ್ ನ್ನು 21 ಜನವರಿ 2022 ರಂದು ಬಿಡುಗಡೆ ಮಾಡಲಾಗಿತ್ತು. ಅಭ್ಯರ್ಥಿಗಳಿಗೆ OMR ಶೀಟ್/ ಕೀ ಆನ್ಸರ್ಸ್ ಬಗ್ಗೆ ತಕರಾರು ಎತ್ತಲು ಪ್ರಾಧಿಕಾರ ಅವಕಾಶ ಮಾಡಿ ಕೊಟ್ಟಿತ್ತು. ಪ್ರತಿ ಪ್ರಶ್ನೆಗೆ ಅರ್ಥಿಗಳು 1000 ರೂ. ಶುಲ್ಕ ಭರಿಸಿ ಪ್ರಶ್ನೆ ಕೇಳಲು ಅವಕಾಶ ನೀಡಿತ್ತು. ಪ್ರಾಧಿಕಾರ ಸವಾಲನ್ನು ಸ್ವೀಕರಿಸಿದರೆ, ಶುಲ್ಕ ಮರುಪಾವತಿ ಮಾಡಲಾಗಿತ್ತು.
UGC NET 2021 ರಲ್ಲಿ ಪಡೆದ ಕನಿಷ್ಠ ಅಂಕಗಳು
ವರ್ಗಗಳು ಪೇಪರ್-I ಪೇಪರ್-II
ಸಾಮಾನ್ಯ 40% 40%
OBC 35% 35%
(ನಾನ್-ಕೆನೆ ಲೇಯರ್)
/PWD/SC/ST
UGC NET ಮೆರಿಟ್ ಪಟ್ಟಿ 2021
ಅರ್ಹತಾ ಶೇಕಡಾವಾರು ಅಂಕಗಳನ್ನು ಪಡೆದ ಅಭ್ಯರ್ಥಿಗಳಿಗೆ ಪ್ರತ್ಯೇಕ ವರ್ಗವಾರು ಮತ್ತು ವಿಷಯವಾರು ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಮೆರಿಟ್ ಪಟ್ಟಿಯಿಂದ ಟಾಪ್ 15% ಅಭ್ಯರ್ಥಿಗಳನ್ನು ಸಹಾಯಕ ಪ್ರಾಧ್ಯಾಪಕರ ಅರ್ಹತೆಗಾಗಿ ಮಾತ್ರ NET ಅರ್ಹತೆ ಎಂದು ಘೋಷಿಸಲಾಗುತ್ತದೆ. NET ಅರ್ಹತೆ ಪಡೆದ ಅಭ್ಯರ್ಥಿಗಳಲ್ಲಿ JRF ಪ್ರಶಸ್ತಿಗಾಗಿ ಪ್ರತ್ಯೇಕ ಮೆರಿಟ್ ಪಟ್ಟಿಯನ್ನು ನೀಡಲಾಗುತ್ತದೆ. NTA/UGC ಯಿಂದ ನಿಗದಿಪಡಿಸಿದ ಅರ್ಹತಾ ಅಂಕಗಳ ಮಾನದಂಡವು ಅಂತಿಮವಾಗಿರುತ್ತದೆ.
UGC NET 2021 ರ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳನ್ನು ವಿಷಯ ಮತ್ತು ವರ್ಗವಾರು ಮೆರಿಟ್ ಪಟ್ಟಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ಎರಡೂ ಪತ್ರಿಕೆಗಳಿಗೆ ಹಾಜರಾಗುವ ಒಟ್ಟು ವಿದ್ಯಾರ್ಥಿಗಳ ಪೈಕಿ ಟಾಪ್ 6% ರಷ್ಟು ವಿದ್ಯಾರ್ಥಿಗಳನ್ನು ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ ಎಂದು ಪರಿಗಣಿಸಲಾಗುತ್ತದೆ.
Published by:renukadariyannavar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ