ಬೆಳಗಾವಿ ಕಾಲೇಜೊಂದರಲ್ಲಿ ಜಾನಪದ ಜಾತ್ರೆ; ಗ್ರಾಮೀಣ ಸೊಗಡಿನಲ್ಲಿ ಮಿಂಚಿದ ವಿದ್ಯಾರ್ಥಿಗಳು

ಇನ್ನು ಕೇವಲ ಓದು ಎನ್ನುತ್ತಿದ್ದ ನಮಗೆ ಕಾಲೇಜಿನಲ್ಲಿ ಈ ರೀತಿ ಜಾನಪದ ಜಾತ್ರೆ ಆಯೋಜನೆ ಮಾಡುವ ಮೂಲಕ ರಿಲ್ಯಾಕ್ಸ್ ಆಗಲು ಅನುಕೂಲವಾಗಿದೆ. ನಮ್ಮ ಪ್ರಾಚೀನ ಉಡುಗೆ ತೊಡುಗೆ ಹಾಗೂ ಸಂಪ್ರದಾಯ ತಿಳಿದುಕೊಳ್ಳಲು ಇದೊಂದು ಒಳ್ಳೆಯ ಅವಕಾಶವಾಗಿತ್ತು ಎಂದರು ವಿದ್ಯಾರ್ಥಿಗಳು.

ಕಾಲೇಜು ಜಾನಪದ ಜಾತ್ರೆ

ಕಾಲೇಜು ಜಾನಪದ ಜಾತ್ರೆ

  • Share this:
ಬೆಳಗಾವಿ(ಜ.24): ಕಾಲೇಜು ಕ್ಯಾಂಪಸ್ಸಿನೊಳಗಿಂದು ಇಳಕಲ್ ಸೀರೆ ಉಟ್ಟು ಸಕತ್ತಾಗಿ ರೆಡಿಯಾಗಿ ಫೋಟೋಗೆ ಪೋಸ್​​​ ಕೊಟ್ಟ ವಿದ್ಯಾರ್ಥಿನಿಯರು ಒಂದೆಡೆಯಾದರೆ ಬ್ಲ್ಯಾಕ್​​​​​ ಶರ್ಟ್​ ಧರಿಸಿ ಧೋತಿ ಪಂಚೆಯುಟ್ಟು ಜಬರ್ದಸ್ತ್ ಆಗಿ ಕಾಣುತ್ತಿರುವ ಹುಡುಗರು ಮತ್ತೊಂದೆಡೆ. ಇಂತಹದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾದದ್ದು ಬೆಳಗಾವಿಯ ರಾಜಾ ಲಖಮಗೌಡ ಕಾಲೇಜು.

ಹೌದು ಇಂದು ಬೆಳಗಾವಿಯ ರಾಜಾ ಲಖಮಗೌಡ ಕಾಲೇಜಿನಲ್ಲಿ ಜಾನಪದ ಜಾತ್ರೆ ಏರ್ಪಡಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದಲೂ ಈ ಜಾನಪದ ಜಾತ್ರೆ ಆಯೋಜಿಸುತ್ತಿದ್ದರೂ ಈ ಬಾರಿ ಮಾತ್ರ ಸಖತ್​​​ ಆಗಿ ನಡೆಯಿತು. ಈ ಸಮಾರಂಭಕ್ಕೆ ಉಪನ್ಯಾಸಕರು ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳೆಲ್ಲರೂ ಹಳ್ಳಿಯ ವೇಷಭೂಷಣದಲ್ಲಿ ಬಂದಿದ್ದರು.ಗ್ರಾಮೀಣ ಪ್ರದೇಶದ ಜನಜೀವನ ಹೇಗಿರುತ್ತದೆಯೋ ಅದೇ ರೀತಿ ಇಡೀ ದಿನ ಕಳೆಯುವುದು ಈ ಜಾನಪದ ಜಾತ್ರೆಯ ಉದ್ದೇಶವಾಗಿತ್ತು. ಇದರಲ್ಲಿ ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಉಪನ್ಯಾಸಕರು ಕೂಡ ಮಕ್ಕಳೊಂದಿಗೆ ಮಕ್ಕಳಾಗಿ ತಮ್ಮ ಕಾಲೇಜು ದಿನಗಳನ್ನ ನೆನಪಿಸಿಕೊಂಡರು.

ಇದನ್ನೂ ಓದಿ: ಜೆಎನ್​ಯು ಹಿರಿಯ ವಿದ್ಯಾರ್ಥಿಗಳು ಪ್ರತಿಭಟಿಸದಂತೆ ಪೆನ್ಷನ್ ನೀಡಿ: ಬಾಬಾ ರಾಮದೇವ್ ಹಾಸ್ಯ

ಇನ್ನು ಕೇವಲ ಓದು ಎನ್ನುತ್ತಿದ್ದ ನಮಗೆ ಕಾಲೇಜಿನಲ್ಲಿ ಈ ರೀತಿ ಜಾನಪದ ಜಾತ್ರೆ ಆಯೋಜನೆ ಮಾಡುವ ಮೂಲಕ ರಿಲ್ಯಾಕ್ಸ್ ಆಗಲು ಅನುಕೂಲವಾಗಿದೆ. ನಮ್ಮ ಪ್ರಾಚೀನ ಉಡುಗೆ ತೊಡುಗೆ ಹಾಗೂ ಸಂಪ್ರದಾಯ ತಿಳಿದುಕೊಳ್ಳಲು ಇದೊಂದು ಒಳ್ಳೆಯ ಅವಕಾಶವಾಗಿತ್ತು ಎಂದರು ವಿದ್ಯಾರ್ಥಿಗಳು.ವಿದ್ಯಾರ್ಥಿಗಳು ಹಳ್ಳಿ ಮತ್ತು ನಗರದ ಆಹಾರ ಪದ್ದತಿಯ ಬಗ್ಗೆಯೂ ಹೇಗಿರುತ್ತೇ ಎಂದು ತೋರಿಸುವ ಪ್ರಯತ್ನ ಮಾಡಿದರು. ತಂಡವನ್ನ ಮಾಡಿಕೊಂಡು ತಮ್ಮ ಮನೆಯಿಂದಲೇ ಅಡುಗೆ ಮಾಡಿ ಕ್ಯಾಂಪಸ್​ಗೆ ತಂದಿದ್ದರು. ಅಲ್ಲೇ ಸ್ಟಾಲ್​​ಗಳನ್ನ ಇಟ್ಟುಕೊಂಡು ತಾವು ತಂದ ಅಡುಗೆಯನ್ನ ಕಡಿಮೆ ಹಣಕ್ಕೆ ಮಾರಾಟ ಮಾಡಿದರು.

ಉತ್ತರ ಕರ್ನಾಟಕ ಶೈಲಿಯ ಗೋದಿ ಹುಗ್ಗಿ, ಸಜ್ಜಿ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಮಾದಲಿ, ಮೋಸರನ್ನ ವಿವಿಧ ತೆರನಾದ ಚಟ್ನಿಗಳು ಎಲ್ಲರ ಬಾಯಲ್ಲಿ ನೀರು ತರಿಸುವಂತಿತ್ತು. ಈ ಸಂತೆಯ ನಡುವೆಯೂ ಸುಂದರಿಯರು ತಮ್ಮ ಮೊಬೈಲ್​​ನಲ್ಲಿ ಸೇಲ್ಫಿಗಳನ್ನ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು, ಇನ್ನೂ ಕೆಲವು ಹುಡುಗರಂತೂ ಸಕ್ಕತ್ತಾಗಿ ರೆಡಿಯಾಗಿ ಬಂದಿದ್ದ ವಿದ್ಯಾರ್ಥಿಗಳ ಜತೆಗೆ ಪೋಟೊಗೆ ಪೊಸ್ ಕೊಟ್ಟು ಖುಷಿ ಪಟ್ಟರು.
First published: