ಮೈಸೂರಿನಲ್ಲಿ ಹಾರುವ ತಟ್ಟೆ ಪತ್ತೆ?; ಸಂಶೋಧನೆಗೆ ಒತ್ತಾಯ

news18
Updated:September 1, 2018, 4:55 PM IST
ಮೈಸೂರಿನಲ್ಲಿ ಹಾರುವ ತಟ್ಟೆ ಪತ್ತೆ?; ಸಂಶೋಧನೆಗೆ ಒತ್ತಾಯ
news18
Updated: September 1, 2018, 4:55 PM IST
-ವೀರೇಶ್ ಜಿ ಹೊಸೂರ್, ನ್ಯೂಸ್ 18 ಕನ್ನಡ 

ಚಿಕ್ಕಮಗಳೂರು,(ಸೆ.01): ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ಪ್ರವಾಸಿಗರೊಬ್ಬರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದ ಹಾರುವ ತಟ್ಟೆಗಳ ಸುದ್ದಿ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಇದೀಗ ಚಿಕ್ಕಮಗಳೂರು ಜಿಲ್ಲೆಯ ಮತ್ತೊಬ್ಬರಿಗೆ ಮೈಸೂರಿನಲ್ಲಿ ಹಾರುವ ತಟ್ಟೆಗಳು ಕ್ಯಾಮೆರಾದಲ್ಲಿ ಗೋಚರಿಸಿದ್ದು ವೈಜ್ಣಾನಿಕ ವಲಯದಲ್ಲಿ ಮತ್ತೆ ಚರ್ಚೆಗಳು ಆರಂಭವಾಗಿವೆ. ಮತ್ತೆ ಈ ಹಾರುವ ತಟ್ಟೆಗಳು ಕಾಣಿಸಿದ್ದು ಹೇಗೆ ಅದು ನಿಜವಾಗಿಯೂ ಅನ್ಯ ಗ್ರಹದ ವಸ್ತುವಾ..? ಎಂಬ ಕೂತುಹಲ ಇದೀಗ ಎಲ್ಲೆಡೆ ಮೂಡಿದೆ.

ಕಳೆದ ಎರಡು ತಿಂಗಳ ಹಿಂದೆ ಚಿಕ್ಕಮಗಳೂರು ನಗರದ ಹೋಟೆಲ್ ಒಂದರಲ್ಲಿ ಹವ್ಯಾಸಿ ಛಾಯಾಗ್ರಹಕನ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದ್ದ ಹಾರುವ ತಟ್ಟೆಗಳ ಆಕಾರದ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದವು. ಇದೀಗ ಅದೇ ಚಿಕ್ಕಮಗಳೂರಿನ ಮೂಡಿಗೆರೆಯ ಕಾಲೇಜು ಯುವಕನ ಕ್ಯಾಮೆರಾದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಮೈಸೂರಿನಲ್ಲಿ ಎಂ.ಎಸ್ಸಿ ವ್ಯಾಸಂಗಕ್ಕೆ ತೆರಳಿರುವ ಪೂಜಿತ್ ಮೈಸೂರು ಅರಮನೆ ಎದುರು ತೆಗೆಸಿಕೊಂಡ ಫೋಟೋಗಳಲ್ಲಿ ಈ ಹಾರುವ ತಟ್ಟೆಗಳು ಗೋಚರಿಸಿವೆ. ವಿವಿಧ ಭಂಗಿಯಲ್ಲಿ ಫೋಟೋ ತೆಗೆಸಿಕೊಂಡು ಮೂಡಿಗೆರೆಯ ಮನೆಗೆ ಬಂದಿದ್ದ ಪೂಜಿತ್ ನಂತರ ಫೇಸ್ ಬುಕ್ ನಲ್ಲಿ ತಾನು ತೆಗೆಸಿ ಕೊಂಡಿದ್ದ ಚಿತ್ರಗಳನ್ನು ಅಪ್ ಲೋಡ್ ಮಾಡುವಾಗ ಫೋಟೋಗಳಲ್ಲಿ ಹಾರುವ ತಟ್ಟೆಗಳ ಆಕಾರ ಮೂಡಿರುವುದು ಕಂಡು ಬಂದಿದೆ. ಇದರಿಂದ ಆಶ್ಚರ್ಯ ಚಕಿತನಾದ ಪೂಜಿತ್ ತಮ್ಮ ಮನೆಯವರಲ್ಲಿ ಈ ವಿಷಯ ತಿಳಿಸಿದ್ದಾರೆ. ಆದರೆ ಇದು ಕುತೂಹಲಕಾರಿ ವಿಷಯವಾಗಿದ್ದ ಹೆಚ್ಚಿನ ಸಂಶೋಧನೆ ನಡೆಯಬೇಕು ಎಂದು ಪೂಜಿತ್ ಆಗ್ರಹಿಸಿದ್ದಾನೆ.

ತಾನೊಬ್ಬ ವಿಜ್ಣಾನದ ವಿದ್ಯಾರ್ಥಿಯಾಗಿ ಇದನ್ನು ನಂಬುವುದಿಲ್ಲ ಎನ್ನುವ ಪೂಜಿತ್ ಆದರೂ ಇದರ ಬಗ್ಗೆ ಸಂಶೋಧಕರು ಪರಿಶೀಲನೆ ಮಾಡಬೇಕು. ಸತ್ಯಾಂಶ ಏನು ಎಂಬುದನ್ನು ಜಗತ್ತಿಗೆ ತೋರಿಸುವ ಕೆಲಸ ಮಾಡಬೇಕು ಎನ್ನುತ್ತಾನೆ. ಅಲ್ಲದೆ ಈತನ ಮನೆಯವರೂ ಸಹಾ ಸಾಕಷ್ಟು ಕುತೂಹಲದಿಂದ ಇದನ್ನು ಗಮನಿಸಿದ್ದಾರೆ. ಇದೊಂದು ಅಪರೂಪದ ಚಿತ್ರವಾಗಿದ್ದು ಅದರಲ್ಲಿ ಇರುವುದು ಹಾರುವ ತಟ್ಟೆಗಳೇ ಹೌದಾ ಎಂಬುದನ್ನು ಕಂಡು ಹಿಡಿಯಬೇಕಿದೆ. ಅಲ್ಲದೆ ಇತ್ತೀಚೆಗೆ ಎರಡು ಮೂರು ಬಾರಿ ಮೈಸೂರಿನಲ್ಲಿ ಏಲಿಯನ್ಸ್ ಗಳು ಪತ್ತೆಯಾದ ಬಗ್ಗೆಯೂ ವರದಿಯಾಗಿದ್ದು ಇದೀಗ ಹಾರುವ ತಟ್ಟೆಗಳು ಸುದ್ದಿಯಾಗಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ವಿಜ್ಞಾನಕ್ಕೆ  ಆಗೊಮ್ಮೆ ಈಗೊಮ್ಮೆ ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಇದೂ ಸಹ ಒಂದು ಹೊಸ ಸವಾಲಾಗಿದ್ದು,  ಇದನ್ನು ಸ್ವೀಕರಿಸಿ ಇದರ ಬಗ್ಗೆ ಜನರಿಗಿರುವ ಕುತೂಹಲವನ್ನು ತಣಿಸಬೇಕಿದೆ. ಅಲ್ಲದೇ ಆತಂಕವನ್ನೂ ಸಹ ದೂರ ಮಾಡಬೇಕಾಗಿದೆ. ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ರೂಮರ್ ಗಳು ಹಬ್ಬುವುದಕ್ಕೂ ಸಹ ಕಡಿವಾಣ ಹಾಕಬೇಕಾದ ಕೆಲಸವನ್ನು ವಿಜ್ಞಾನಿಗಳು ಮಾಡಬೇಕಿದೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ