ತುಮಕೂರು (ಡಿ.06): ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (H D Kumaraswamy) ಅವರ ಪಂಚರತ್ನ ಯಾತ್ರೆಗೆ ತುಮಕೂರಿನಲ್ಲಿ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಗುಬ್ಬಿ ಪಟ್ಟಣದ ಮುಖ್ಯರಸ್ತೆಯಲ್ಲಿ ಪಂಚರತ್ನ ಯಾತ್ರೆ ಸಾಗಿದೆ. ಜೆಡಿಎಸ್ ಬೆಂಬಲಿಗರು ಹಾಗೂ ಎಚ್ಡಿಕೆ ಅಭಿಮಾನಿಗಳು (HDK Fans) ಕುಮಾರಸ್ವಾಮಿ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಹೆಲಿಕಾಪ್ಟರ್ ಮೂಲಕ ಕುಮಾರಸ್ವಾಮಿ ಅವರ ಮೇಲೆ ಪುಷ್ಪವೃಷ್ಠಿ ಸುರಿಸಿ ಸ್ವಾಗತಿಸಿದ್ದಾರೆ.
ಅಭಿಮಾನಿಗಳ ಪ್ರೀತಿಗೆ ಕುಮಾರಣ್ಣ ಖುಷ್
ಗುಬ್ಬಿ ಪಟ್ಟಣದಲ್ಲಿ ಪಂಚರತ್ನ ಯಾತ್ರೆ ನಡೆಯುತ್ತಿದೆ. ಅಭಿಮಾನಿಗಳು ಮಾಜಿ ಸಿಎಂ ಕುಮಾರಸ್ವಾಮಿ ಬರ್ತಿದ್ದಂತೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿ ಸುರಿಸಿದ್ರು. ಮೂರು ಸುತ್ತು ಹೆಲಿಕಾಪ್ಟರ್ ಮೂಲಕ ಗುಲಾಬಿ ಹೂ ಮಳೆಗೈದಿದ್ದಾರೆ. ಪಂಚರತ್ನ ಯಾತ್ರೆಯಲ್ಲಿ ಅಭಿಮಾನಿಗಳ ಪ್ರೀತಿಗೆ ಕುಮಾರಸ್ವಾಮಿ ಪುಲ್ ಖುಷ್ ಆಗಿದ್ದಾರೆ.
ಗುಬ್ಬಿ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ
ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್ ಉಚ್ಛಾಟಿತ ಶಾಸಕ ಎಸ್. ಆರ್ ಶ್ರೀನಿವಾಸ್ ಕ್ಷೇತ್ರವಾಗಿದ್ದು, ಪಕ್ಷ ವಿರೋಧಿ ಚಟುವಟಿಕೆಯಿಂದ ಎಸ್ ಆರ್ ಶ್ರೀನಿವಾಸ್ ರನ್ನು ವಜಾಗೊಳಿಸಲಾಗಿತ್ತು. ಇಲ್ಲಿ ಶ್ರೀನಿವಾಸ್ಗೆ ಪರ್ಯಾಯವಾಗಿ ಸಿ.ಎಸ್.ಪುರ ನಾಗರಾಜು ಅವರನ್ನು ಎಚ್ಡಿಕೆ ಮುಂಚೂಣಿಗೆ ತಂದಿದ್ದಾರೆ. ಸಿ.ಎಸ್.ಪುರ ನಾಗರಾಜು ನೇತೃತ್ವದಲ್ಲಿ ಪಂಚರತ್ನ ಯಾತ್ರೆ ನಡೆಯುತ್ತಿದೆ.
ನನ್ನ ಬಗ್ಗೆ ಕೆಲವರು ಅಪಪ್ರಚಾರ ಮಾಡ್ತಿದ್ದಾರೆ
ತುಮಕೂರಿನ ಗುಬ್ಬಿಯಲ್ಲಿ ನಡೆಯುತ್ತಿರುವ ಪಂಚರತ್ನ ಯಾತ್ರೆಯಲ್ಲಿ ಮಾತಾಡಿದ ಎಚ್ ಡಿ ಕುಮಾರಸ್ವಾಮಿ ಅವರು, ದಲಿತರ ವಿರೋಧಿ ಎಂದು ಗುಬ್ಬಿಯಲ್ಲಿ ಕೆಲವರು ನನ್ನ ವಿರುದ್ಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆ ದಲಿತ ಮುಖಂಡರಿಗೆ ಯಾರು ಚಿತಾವಣೆ ಮಾಡಿದ್ದಾರೆ ಅಂತ ಗೊತ್ತು ಎಂದು ಹೇಳಿದ್ರು.
ಎಸ್.ಆರ್. ಶ್ರೀನಿವಾಸ್ ವಿರುದ್ಧ ವಾಗ್ದಾಳಿ
ಇಂತಹ ಕುತಂತ್ರಕ್ಕೆಲ್ಲಾ ಹೆದರುವ ಮಗ ಅಲ್ಲ ನಾನಲ್ಲ, ನನಗೂ ಮಾತನಾಡಲು ಬರುತ್ತೆ. ಆದ್ರೆ ಕೆಸರಿನ ಮೇಲೆ ಕಲ್ಲು ಎಸೆಯಲ್ಲ. ಕೆಸರಿನ ಮೇಲೆ ಕಲ್ಲೆಸೆದರೆ ನನ್ನ ಮುಖಕ್ಕೆ ಸಿಡಿಯುತ್ತದೆ. ಆ ಕೆಸರನ್ನ ಏನ್ ಮಾಡಬೇಕು ಎನ್ನುವ ನಿರ್ಧಾರವನ್ನು ನಿಮಗೆ ಬಿಡ್ತೀನಿ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ವಿರುದ್ಧ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದ್ರು.
ಜೆಡಿಎಸ್ ಕೈ ಹಿಡಿಯುತ್ತಾ ಪಂಚರತ್ನ ಯಾತ್ರೆ?
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರದಲ್ಲಿ ರಥಯಾತ್ರೆ ನಡೆಸುತ್ತಿದ್ದಾರೆ. ಇದೀಗ ತುಮಕೂರಿನಲ್ಲಿ ಯಾತ್ರೆ ಸಾಗುತ್ತಿದೆ. ಚುನಾವಣಾ ಪ್ರಚಾರದಲ್ಲಿ ಶಾಲೆ, ಆರೋಗ್ಯ, ಮಹಿಳೆಯ ಸಮಸ್ಯೆಗಳು, ರೈತರ ಸಮಸ್ಯೆಗಳು, ಶಿಕ್ಷಣ, ಉದ್ಯೋಗ ವಿಚಾರವಾಗಿ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಪ್ರಚಾರದ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡುವುದು, ಮಕ್ಕಳ ಸಮಸ್ಯೆಗಳನ್ನು ಆಲಿಸುವುದು ಹಾಗೂ ಮಕ್ಕಳ ಜೊತೆ ಊಟ ಮಾಡುವ ಮೂಲಕ ಕುಮಾರಸ್ವಾಮಿ ಜನಸಾಮಾನ್ಯ ಗಮನ ಸೆಳೆಯುತ್ತಿದ್ದಾರೆ.
ಇದನ್ನೂ ಓದಿ: CM Basavaraj Bommai: ರಾಜ್ಯದಲ್ಲಿ 2023ಕ್ಕೆ ನೂರಕ್ಕೆ ನೂರು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ- ಸಿಎಂ ಬೊಮ್ಮಾಯಿ
HDK ಮುಖ್ಯಮಂತ್ರಿಯಾಗುವುದು ಫಿಕ್ಸ್
ಚನ್ನಪಟ್ಟಣದಲ್ಲಿ ನಿನ್ನೆ ಮಾತಾಡಿದ್ದ ನಿಖಿಲ್ ಕುಮಾರಸ್ವಾಮಿ, ಜಗತ್ತಿನಲ್ಲಿ ಸೂರ್ಯಚಂದ್ರರಿರುವುದು ಎಷ್ಟುಸತ್ಯವೋ ಮುಂದಿನ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದೂ ಕೂಡ ಅಷ್ಟೇ ಸತ್ಯ. ಯಾರೂ ಏನೇ ಕುತಂತ್ರ ಮಾಡಿದರೂ ಕುಮಾರಣ್ಣ ಈ ಬಾರಿ ಇಪ್ಪತ್ತಲ್ಲ ಐವತ್ತು ಸಾವಿರ ಮತಗಳ ಲೀಡ್ ಪಡೆದು ಜಯಭೇರಿ ಬಾರಿಸಲಿದ್ದಾರೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಹೇಳಿದ್ರು.
ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡಿ ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದ ಕುಮಾರಸ್ವಾಮಿಯವರ ಸರ್ಕಾರವನ್ನು ಕೆಲವರೊಂದಿಗೆ ಸೇರಿ ಇಲ್ಲಿನ ಮಾಜಿ ಶಾಸಕರೊಬ್ಬರು ಕೆಡವಿದರು. ಅದರೆ, ಮುಂದಿನ ಬಾರಿ ಎಚ್ಡಿಕೆ ಮತ್ತೊಮ್ಮೆ ರಾಜ್ಯದ ಸಿಎಂ ಆಗಲಿದ್ದು, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ