• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Flower Show: ಚಿತ್ರದುರ್ಗದಲ್ಲಿ ಹೂವಿನ ಲೋಕ ಸೃಷ್ಟಿ; ಕಣ್ಣು ಆಡಿಸಿದಲ್ಲೆಲ್ಲಾ ಹೂಗಳು

Flower Show: ಚಿತ್ರದುರ್ಗದಲ್ಲಿ ಹೂವಿನ ಲೋಕ ಸೃಷ್ಟಿ; ಕಣ್ಣು ಆಡಿಸಿದಲ್ಲೆಲ್ಲಾ ಹೂಗಳು

ಫಲಪುಪ್ಪ ಪ್ರದರ್ಶನ

ಫಲಪುಪ್ಪ ಪ್ರದರ್ಶನ

ಈ ಬಾರಿಯ ಪ್ರದರ್ಶನದಲ್ಲಿ ಲಿಲ್ಲಿ, ಗುಲಾಬಿ, ಸೇವಂತಿ, ಆಂಥೋರಿಯಂ, ಆಸ್ಟ್ರೋ, ಪಿಟೋನೊಯಾ, ದೈನಥನ್, ಜೀನಿಯಾ ಸೇರಿದಂತೆ 80ಕ್ಕೂ ಹೆಚ್ಚು ದೇಶಿಯ ಹಾಗೂ ವಿದೇಶೀಯ ಬಗೆ ಬಗೆಯ ಪುಪ್ಪಗಳು ಪುಪ್ಪ ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ.

  • Share this:

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ (Chitradurga) ಜನರ ಮನ ತಣಿಸಲು ಹೂವಿನ ಲೋಕ (Flower Show) ಸೃಷ್ಠಿಯಾಗಿದೆ. ಬಗೆ ಬಗೆಯ ಪುಪ್ಪಗಳ ಸುವಾಸನೆ ಸೂಸುವ ಹೂ ಗಿಡಗಳ ರಾಶಿ ಕಣ್ಣಿಗೆ ಮುದ ನೀಡುತ್ತಿದೆ. ಇಲ್ಲೊಮ್ಮೆ ಸುತ್ತು ಹಾಕಿದ್ರೆ ಯಾವುದೋ ಹೊಸ ಲೋಕಕ್ಕೆ ಬಂದ ಅನುಭವ. ಈ ಅಪರೂಪದ ಫಲಪುಷ್ಪ ಪ್ರದರ್ಶನ ಕಂಡು ಜನರು ಮನಸೂರೆಗೊಳ್ಳುತ್ತಿದ್ದಾರೆ. ಎಲ್ಲೆಲ್ಲೂ ಹೂಗಳ (Flowers) ಚೆಲುವಿನ ಚಿತ್ತಾರ. ಕಣ್ಣು ಆಡಿಸಿದಲ್ಲೆಲ್ಲಾ ಕಂಡು ಬರೋ ಬಣ್ಣ ಬಣ್ಣದ ಹೂವುಗಳು. ತರಕಾರಿ (Vegetables), ಹಣ್ಣುಗಳಲ್ಲಿ ಮೂಡಿರುವ ಕಲಾಕೃತಿಗಳು, ಗಂಧದ ಗುಡಿಯ ರಾಜ್​​​ಕುಮಾರ್, ಕೋಟೆಯ ಉಯ್ಯಾಲೆ ಕಂಬ, ಗಾಳಿ ಗೋಪುರ, ಕಾಂತಾರ ದೈವ ಪ್ರತಿಮೆ. ಈ ದೃಶ್ಯಗಳು ಕಂಡಿದ್ದು ಕೋಟೆನಾಡು ಚಿತ್ರದುರ್ಗದಲ್ಲಿ. ತೋಟಗಾರಿಕೆ ಇಲಾಖೆ (Department of Horticulture) ಮೂರು ದಿನಗಳ ಕಾಲ ಫಲಪುಪ್ಪಗಳ ಪ್ರದರ್ಶನವನ್ನ ಆಯೋಜಿಸಿದೆ.


ತೋಟಗಾರಿಕೆ ಇಲಾಖೆ 30ನೇ ವರ್ಷದ ಫಲಪುಪ್ಪ ಪ್ರದರ್ಶನವನ್ನು ಪ್ರತಿ ವರ್ಷದಂತೆ ಅದ್ಧೂರಿಯಾಗಿಯೇ ಅಯೋಜಿಸಿದೆ. ಇಲ್ಲಿ ನಡೆದಾಡುವ ದೇವರು, ಶಾಂತಿ ಸಂದೇಶವನ್ನು ಸಾರಿದ ಸಿದ್ದೇಶ್ವರ ಸ್ವಾಮಿಜೀ ಚಿತ್ರ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.


ಕೋಟೆ, ಆಡು ಮಲ್ಲೇಶ್ವರ, ಚಂದ್ರವಳ್ಳಿ ಸುತ್ತಿ ಬೇಸರ ಕಳೆಯುತ್ತಿದ್ದ ಜನರು, ಫಲಪುಷ್ಪ ಪ್ರದರ್ಶನದಲ್ಲಿ ಸುತ್ತಾಡಿ  ವಿವಿಧ ಬಗೆಯ ಹೂವುಗಳು, ಕಲಾಕೃತಿ,  ಕಂಡು ಸಖತ್ ಎಂಜಾಯ್ ಮಾಡುತ್ತಿದ್ದಾರೆ.


Flower Show Attract People in chitradurga vtc mrq
ಫಲಪುಪ್ಪ ಪ್ರದರ್ಶನ


ಬೆಳಗ್ಗೆ 10 ರಿಂದ ರಾತ್ರಿ 9ರವರೆಗೆ ಪ್ರದರ್ಶನ


ಇನ್ನೂ  ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿನಿತ್ಯ ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ಪ್ರದರ್ಶನ ಏರ್ಪಡಿಸಲಾಗಿದೆ. ಈ ಬಾರಿಯ ಪ್ರದರ್ಶನದಲ್ಲಿ ಲಿಲ್ಲಿ, ಗುಲಾಬಿ, ಸೇವಂತಿ, ಆಂಥೋರಿಯಂ, ಆಸ್ಟ್ರೋ, ಪಿಟೋನೊಯಾ, ದೈನಥನ್, ಜೀನಿಯಾ ಸೇರಿದಂತೆ 80ಕ್ಕೂ ಹೆಚ್ಚು ದೇಶಿಯ ಹಾಗೂ ವಿದೇಶೀಯ ಬಗೆ ಬಗೆಯ ಪುಪ್ಪಗಳು ಪುಪ್ಪ ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ.


ಕಲ್ಲಂಗಡಿ ಹಣ್ಣು, ತೆಂಗಿನಕಾಯಿಯಲ್ಲಿ ವಿವಿಧ ರೀತಿಯ ಚಿತ್ರಗಳನ್ನು ಕೆತ್ತಲಾಗಿದೆ. ತರಕಾರಿಗಳಿಂದ ವಿವಿಧ ಅಲಂಕಾರ ಮಾಡಲಾಗಿದ್ದು, ಎಲ್ಲರ ಆಕರ್ಷಣೆಯವಾಗಿತ್ತು.


Flower Show Attract People in chitradurga vtc mrq
ಫಲಪುಪ್ಪ ಪ್ರದರ್ಶನ


ಮಕ್ಕಳನ್ನ ಇಲ್ಲಿಗೆ ಕರೆ ತರುತ್ತಿರುವ ಪೋಷಕರು ಆಸಕ್ತಿದಾಯಕ ದೃಶ್ಯಗಳ ಜೊತೆ ಜ್ಞಾನಾರ್ಜನೆ ಅಗತ್ಯವಿರುವ ತರಕಾರಿ ಹೂ ಹಣ್ಣುಗಳ ಪರಿಚಯ ತಿಳಿಸಿಕೊಡಲಿ ಇದು ಹೇಳಿ ಮಾಡಿಸಿದಂತ ಜಾಗವಾಗಿದೆ.


ಇದನ್ನೂ ಓದಿ:  Karnataka Politics: ಕಾಂಗ್ರೆಸ್ ಟಿಕೆಟ್​​​ಗಾಗಿ ಬೀದಿ ರಂಪಾಟ; ಬೊಮ್ಮನಹಳ್ಳಿಯಲ್ಲಿ ಅಸಮಾಧಾನ ಸ್ಫೋಟ


ಸಾವಿರಾರು ಸಂಖ್ಯೆಯಲ್ಲಿ ಜನರ ಆಗಮನ


ಕಳೆದ ಎರಡು ವರ್ಷ ಕೋವಿಡ್ ಕಾರಣಕ್ಕೆ ಕೈಬಿಟ್ಟಿದ್ದ ಫಲಪುಷ್ಪ ಪ್ರದರ್ಶನವನ್ನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಈ ಬಾರಿ ಅಚ್ಚುಕಟ್ಟಾಗಿ ಏರ್ಪಡಿಸಿದ್ದಾರೆ. ವಿದ್ಯಾರ್ಥಿಗಳು, ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ಹೂವಿನ ಅಂದ ಕಂಡು ಪುಳಕಿತರಾದರು.


ಸೆಲ್ಫಿ ಕ್ಲಿಕ್ಕಿಸಿಕೊಂಡ ಜನರು


ಒಟ್ಟಾರೆ ಬೆಂಗಳೂರು, ಮೈಸೂರಿನಂತಹ ಮಹಾನಗರಗಳಿಗೆ ತೆರಳಿ ಫಲಪುಪ್ಪ ಪ್ರದರ್ಶನವನ್ನು ವೀಕ್ಷಿಸುತ್ತಿದ್ದ ದುರ್ಗದ ಜನರಿಗೆ ತಮ್ಮೂರಲ್ಲೇ ಫಲಪುಪ್ಪಗಳ ಪ್ರದರ್ಶನ ನಡೆಯುತ್ತಿರುವುದು ಸಖತ್ ಖುಷಿಯನ್ನು ಕೊಟ್ಟಿದೆ.


Flower Show Attract People in chitradurga vtc mrq
ಫಲಪುಪ್ಪ ಪ್ರದರ್ಶನ


ಇಲ್ಲಿ ಒಂದು ಸುತ್ತು ಸುತ್ತಿ ಬರುವಷ್ಟರಲ್ಲಿ ಮಸ್ಸಿಗೆ ಉಲ್ಲಾಸಗೊಳ್ಳುವಂತಾಗಿದೆ. ಇಷ್ಟೆಲ್ಲಾ ಕಲಾಕೃತಿಗಳನ್ನ ಕಂಡ ಜನರು ಸುಮ್ಮನಿರುತ್ತಾರೆಯೇ, ಮೊಬೈಲ್ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಂಡರು.


ಬೆಂಗಳೂರಿನಲ್ಲಿ ಏರೋ ಷೋ


ಬೆಂಗಳೂರಿನಲ್ಲಿ ಏರೋ ಷೋ ಹಿನ್ನೆಲೆ ಏರ್​​ಪೋರ್ಟ್ ರಸ್ತೆ ಎಲಿವೇಟೆಡ್ ಫ್ಲೈಓವರ್ ಮೇಲೆ ಸಾರ್ವಜನಿಕರ ವಾಹನಗಳಿಗೆ ನಿಷೇಧ ಹೇರಲಾಗಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಬೆಳಗ್ಗೆ 11 ಗಂಟೆಯವರೆಗೆ ಅನ್ವಯಯಾಗಲಿದೆ.


ಹೆಬ್ಬಾಳ ಎಸ್ಟಿಮ್ ಮಾಲ್​ನಿಂದ ಯಲಹಂಕವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಏರೋ ಷೋಗೆ ತೆರಳುವ ವಾಹನ ಸವಾರರು ನಿಗದಿತ ಪಾಸ್ ತೋರಿಸಿ ಫ್ಲೈ ಓವರ್ ಮೇಲೆ ತೆರಳಬಹುದು.




ಯಲಹಂಕ, ಕೊಡಿಗೆಹಳ್ಳಿ, ಬ್ಯಾಟರಾಯನಪುರ ಸುತ್ತಮುತ್ತಲಿನ ಸಾರ್ವಜನಿಕರು ಫ್ಲೈಓವರ್ ಕೆಳಭಾಗದ ಸರ್ವಿಸ್ ರಸ್ತೆ ಬಳಸಲು ಸೂಚನೆ ನೀಡಲಾಗಿದೆ. ಕೆಐಎಎಲ್​ಗೆ ತೆರಳುವ ಪ್ರಯಾಣಿಕರಿಗೆ ಹೆಣ್ಣೂರು ಜಂಕ್ಷನ್ ಮುಖಾಂತರ ತೆರಳಲು ಸೂಚನೆ ನೀಡಲಾಗಿದೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು