• Home
  • »
  • News
  • »
  • state
  • »
  • Lalbagh: ಗಮನಿಸಿ, ಇನ್ಮುಂದೆ ಲಾಲ್​ಬಾಗ್​​ನಲ್ಲಿ  ಹೂವಿನ ಗಿಡ ಸಿಗೋದು ಅನುಮಾನ

Lalbagh: ಗಮನಿಸಿ, ಇನ್ಮುಂದೆ ಲಾಲ್​ಬಾಗ್​​ನಲ್ಲಿ  ಹೂವಿನ ಗಿಡ ಸಿಗೋದು ಅನುಮಾನ

ಲಾಲ್​ಬಾಗ್​

ಲಾಲ್​ಬಾಗ್​

ಸರ್ಕಾರ ಉದ್ಯಾನವನದಲ್ಲಿರುವ ಎರಡು ಸಹಕಾರ ಸಂಘಗಳಿಗೆ ನೀಡಲಾಗಿರುವ ಭೂಮಿ ಗುತ್ತಿಗೆಯನ್ನು ನವೀಕರಿಸಲು (Renew land Lease) ನಿರಾಕರಿಸಿದೆ. ಈ ಸಹಕಾರ ಸಂಘಗಳೇ ನರ್ಸರಿ ಮತ್ತು ಫ್ಲವರ್ ಶೋ ಆಯೋಜನೆ ಮಾಡುತ್ತವೆ. ಆದ್ರೆ ಈ ಎರಡು ಸಂಘಗಳ ಭೂಗುತ್ತಿಗೆ ಮುಕ್ತಾಯಗೊಂಡಿದೆ.

  • Share this:

ಲಾಲ್​ಬಾಗ್ (Lalbagh) ಎಂಟ್ರಿ ಕೊಡುತ್ತಲೇ ಪಕ್ಕದಲ್ಲಿರುವ ನರ್ಸರಿ (nursery) ನಿಮ್ಮನ್ನು ಸ್ವಾಗತ ಮಾಡುತ್ತದೆ. ಇಲ್ಲಿ ನಿಮಗೆ ಎಲ್ಲಾ ಬಗೆಯ ಹೂ, ಹಣ್ಣು, ತೋಟಗಾರಿಕೆಯ ಬೆಳೆ ಸಸಿ, ಬಿತ್ತನೆಯ ಬೀಜಗಳು ಇಲ್ಲಿ ಸಿಗುತ್ತವೆ. ಆದ್ರೆ ಮುಂದೆ ಈ ನರ್ಸರಿ ಇಲ್ಲಿರುತ್ತಾ ಅನ್ನೋ ಅನುಮಾನ ಮೂಡಿದೆ. ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ವಿವಿಧ ಭಾಗದ ಜನರು ಆಗಮಿಸಿ ತಮಗೆ ಬೇಕಾದ ಪ್ಲಾಂಟ್​ಗಳನ್ನು ಖರೀದಿ ಮಾಡುತ್ತಾರೆ. ಆದ್ರೆ ಈಗ ಸರ್ಕಾರ (Government) ತೆಗೆದುಕೊಂಡಿರುವ ನಿರ್ಧಾರದಿಂದ ನರ್ಸರಿ ಮುಂದೆ ಇರುತ್ತಾ ಎಂಬ ಪ್ರಶ್ನೆ ಮೂಡಿದೆ. ಹೌದು, ಸರ್ಕಾರ ಉದ್ಯಾನವನದಲ್ಲಿರುವ ಎರಡು ಸಹಕಾರ ಸಂಘಗಳಿಗೆ ನೀಡಲಾಗಿರುವ ಭೂಮಿ ಗುತ್ತಿಗೆಯನ್ನು ನವೀಕರಿಸಲು (Renew land Lease) ನಿರಾಕರಿಸಿದೆ. ಈ ಸಹಕಾರ ಸಂಘಗಳೇ ನರ್ಸರಿ ಮತ್ತು ಫ್ಲವರ್ ಶೋ ಆಯೋಜನೆ ಮಾಡುತ್ತವೆ. ಆದ್ರೆ ಈ ಎರಡು ಸಂಘಗಳ ಭೂಗುತ್ತಿಗೆ ಮುಕ್ತಾಯಗೊಂಡಿದೆ.


ಶನಿವಾರದಿಂದ ಲಾಲ್​ಬಾಗ್  ಪ್ರವೇಶದ್ವಾರದ ಬಳಿಯಲ್ಲಿರುವ ಎರಡು ಎಕರೆ ಭೂಮಿಯನ್ನು ತೋಟಗಾರಿಕೆ ಇಲಾಖೆ ಸ್ವಾಧೀನಪಡಿಸಿಕೊಂಡಿದೆ. ಈ ಭೂಮಿಯನ್ನು ಮೈಸೂರು ತೋಟಗಾರಿಕಾ ಸೊಸೈಟಿ (MHS) ಮತ್ತು ನರ್ಸರಿಮೆನ್ ಕೋಆಪರೇಟಿವ್ ಸೊಸೈಟಿ (NMS) ಗೆ ಗುತ್ತಿಗೆ ನೀಡಲಾಗಿತ್ತು.


ಎಂಎಚ್​ಎಸ್​ 117 ವರ್ಷ ಮತ್ತು ಎನ್ಎಂಎಸ್​ 60 ವರ್ಷಗಳು ಹಳೆಯದಾದ ಸೊಸೈಟಿಗಳು. ಇದೇ ಎಂಎಚ್​ಎಸ್​ ಸಹಯೋಗದೊಂದಿಗೆ ತೋಟಗಾರಿಕೆ ಇಲಾಖೆ ಪುಷ್ಪ ಪ್ರದರ್ಶನವನ್ನು ಆಯೋಜಿಸುತ್ತದೆ. ಎನ್​​ಎಂಎಸ್​ ನರ್ಸರಿಯನ್ನು ನಿರ್ವಹಣೆಯನ್ನು ಮಾಡುತ್ತಾ, ಸಾರ್ವಜನಿಕರಿಗೆ ಸಸಿಗಳು, ಬೀಜಗಳು ಮತ್ತು ತೋಟಗಾರಿಕೆ ಉಪಕರಣಗಳನ್ನು ಮಾರಾಟ ಮಾಡಿಕೊಂಡು ಬಂದಿದೆ.


flower plant will not available in lalbagh mrq
ಲಾಲ್​ ಬಾಗ್​


ಗುತ್ತಿಗೆಯನ್ನು ನವೀಕರಣ ಮಾಡುತ್ತಿಲ್ಲ ಏಕೆ?


ತನಗಾಗುತ್ತಿರುವ ನಷ್ಟದಿಂದ ಭೂಮಿ ಗುತ್ತಿಗೆಯನ್ನು ನವೀಕರಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಲು ಎಂಹೆಚ್​​ಎಸ್​ ಹಿಂದೇಟು ಹಾಕಿದೆ.ಇನ್ಮುಂದೆ ಷ್ಪ ಪ್ರದರ್ಶನ ಮತ್ತು ಸಸ್ಯ ಮತ್ತು ಬೀಜ ಸಾಮಗ್ರಿಗಳ ಮಾರಾಟವನ್ನು ತೋಟಗಾರಿಕೆ ಇಲಾಖೆ ಮಾಡುತ್ತೆ ಎಂದು ವರದಿಯಾಗಿದೆ.


ಮೈಸೂರು ತೋಟಗಾರಿಕಾ ಸೊಸೈಟಿ (MHS) ಮತ್ತು ನರ್ಸರಿಮೆನ್ ಕೋಆಪರೇಟಿವ್ ಸೊಸೈಟಿ (NMS)ಗಳ ಗುತ್ತಿಗೆಯನ್ನು ಯಾವುದೇ ಕಾರಣಕ್ಕೂ ನವೀಕರಣ ಮಾಡಲ್ಲ. ಸೊಸೈಟಿಗಳು ಬೆಂಗಳೂರಿನ ಯಾವುದೇ ಭಾಗದಲ್ಲಿಯೂ ತಮ್ಮ ನರ್ಸರಿ ಆರಂಭಿಸಲು ನಮ್ಮ  ಅಭ್ಯಂತರವಿಲ್ಲ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.


ಒಪ್ಪಂದ ಮುಕ್ತಾಯ


NMS ನ ಗುತ್ತಿಗೆ ಒಪ್ಪಂದವು 2016 ರಲ್ಲಿ ಮತ್ತು MHS 2021 ರಲ್ಲಿ ಕೊನೆಗೊಂಡಿದೆ. ಈ ಎರಡೂ ಸೊಸೈಟಿಗಳು ತಮ್ಮ ಪರವಾನಿಗೆಯನ್ನು ನವೀಕರಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿವೆ.


ಸರ್ಕಾರಕ್ಕೆ ಕನಿಷ್ಠ ಮೊತ್ತ ಪಾವತಿ


ಈ ಸೊಸೈಟಿಗಳು ಕೋಟಿಗಟ್ಟಲೇ ಅದಾಯವನ್ನು ಸಸಿ ಮಾರಾಟ ಮತ್ತು ಪುಷ್ಟಪ್ರದರ್ಶನದಿಂದ ಕೋಟಿ ಕೋಟಿ ಆದಾಯವನ್ನು ಗಳಿಸುತ್ತಿವೆ. ಎರಡೂ ಸೊಸೈಟಿಗಳು ಸರಕಾರಿ ಜಮೀನಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರವೇಶ ಶುಲ್ಕ, ಪಾರ್ಕಿಂಗ್ ಶುಲ್ಕ ಮತ್ತು ಪುಷ್ಟಪ್ರದರ್ಶನ ಮೂಲಕ ಕೋಟಿ ಆದಾಯವನ್ನು ಪಡೆದು, ಕನಿಷ್ಠ ಮೊತ್ತವನ್ನು ಮಾತ್ರ ಸರ್ಕಾರಕ್ಕೆ ಪಾವತಿಸುತ್ತಿವೆ.


ಪರವಾನಿಗೆಯನ್ನು ನವೀಕರಿಸಲು ಒಪ್ಪುತ್ತಿಲ್ಲ ಯಾಕೆ?


ಸರಕಾರದ ಜಮೀನು ಮತ್ತು ಸಂಪನ್ಮೂಲ ಬಳಸಿಕೊಂಡು ಈ ಎರಡು ಸೊಸೈಟಿಗಳ ಆದಾಯ ಗಳಿಸುತ್ತಿವೆ. ಈ ಹಿನ್ನೆಲೆ ಮೂರನೇ ವ್ಯಕ್ತಿಗೆ ಅವಕಾಶ ಏಕೆ ನೀಡಬೇಕು ಎಂದು ಉದ್ದೇಶದಿಂದ ತೋಟಗಾರಿಕೆ ಇಲಾಖೆ ಪರವಾನಿಗೆಯನ್ನು ನವೀಕರಿಸಲು ಒಪ್ಪುತ್ತಿಲ್ಲ ಎಂದು ವರದಿಯಾಗಿದೆ. ಅತ್ಯಧಿಕ ಹಣ ಗಳಿಸುತ್ತಿರೋದು ಆಧಾರ ರಹಿತ ಎಂದು ಎಂಹೆಚ್​ಎಸ್​ ಹೇಳಿದ್ರೆ, ಎನ್​ಎಂಎಸ್​ ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ.


flower plant will not available in lalbagh mrq
ಲಾಲ್​ ಬಾಗ್​


ಎರಡೂ ಸೊಸೈಟಿಗಳ ಬೈಲಾಗಳ ಪ್ರಕಾರ, ತೋಟಗಾರಿಕಾ ನಿರ್ದೇಶಕರು ಇವುಗಳ ವಾಸ್ತವಿಕ ಅಧ್ಯಕ್ಷರು ಮತ್ತು ಉಪ ನಿರ್ದೇಶಕರು ಅವರ ಕಾರ್ಯದರ್ಶಿಗಳಾಗಿರುತ್ತಾರೆ. ಕಾರ್ಯದರ್ಶಿ ಕಾರ್ಯನಿರ್ವಾಹಕ ಅಧಿಕಾರವನ್ನು ಹೊಂದಿದ್ದಾರೆ. ಈ ಅಧ್ಯಕ್ಷರೇ ಎಲ್ಲಾ ಫೈಲ್​ಗಳನ್ನು ಕ್ಲಿಯರ್ ಮಾಡುತ್ತಾರೆ.


ಸರ್ಕಾರದ ನಿರ್ಧಾರಕ್ಕೆ ವಿರೋಧ


ಒಂದು ವೇಳೆ ಸರಕಾರದ ಈ ನಿರ್ಧಾರಕ್ಕೆ ಆದಾಯವೇ ಕಾರಣವಾಗಿದ್ರೆ ಈ ಬಗ್ಗೆ ನಮ್ಮೊಂದಿಗೆ ಚರ್ಚಿಸಿ ಗುತ್ತಿಗೆ ನವೀಕರಣ ವೇಳೆ ಷರತ್ತುಗಳನ್ನು ವಿಧಿಸಬಹುದಿತ್ತು. ನವೀಕರಣ ವೇಳೆ ಸರ್ಕಾರ ತನ್ನ ಷರತ್ತಗಳನ್ನ ಕೇಳಬಹುದಿತ್ತು. ಆದ್ರೆ ದಿಢೀರ್ ಆಗಿ ಏಕಪಕ್ಷೀಯವಾಗಿ ಪರವಾನಿಗೆ ನವೀಕರಣ ಮಾಡದಿರೋದು ಹಲವು ಉದ್ಯೋಗಿಗಳಿಗೆ ಕಷ್ಟ ತಂದೊಡ್ಡಲಿದೆ. ಅನೇಕ ಜನರು ಎರಡೂ ಸೊಸೈಟಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.


ಈ ಸಂಬಂಧ ಚಿಕ್ಕಪೇಟೆ ಶಾಸಕ ಉದಯ್​ ಗರುಡಾಚಾರ್​ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಗುರುವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದ್ದೇವೆ ಎಂದು ಎಂಹೆಚ್ಎಸ್​ ಮಂಡಳಿಯ ನಿರ್ದೇಶಕರು ಹೇಳಿದ್ದಾರೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

Published by:Mahmadrafik K
First published: