Flower: ಬರದ ನಾಡಿನಲ್ಲಿ ರೈತನ ಬಾಳನ್ನ ಬಂಗಾರವಾಗಿಸಿದ ಚೆಂಡು ಹೂವಿನ ಬೆಳೆ
Mexican Marigold: ಬಸವಕಲ್ಯಾಣ ತಾಲೂಕಿನ ಗೊಗ್ಗಾ ಗ್ರಾಮದ ರೈತ ನಾಮದೇವ ಮೇತ್ರೆ ಎಂಬುವರಿಗೆ ಒಂದು ಎಕರೆ ಜಮೀನು ಇದ್ದು ಜಮೀನಿನಲ್ಲಿ ಬರೋಬ್ಬರಿ ಆರು ಸಾವಿರ ಚೆಂಡು ಹೂವಿನ ಸಸಿಗಳನ್ನು ನಾಟಿ ಮಾಡಿ ಉತ್ತಮ ಇಳುವರಿ ಕಂಡು ಆದಾಯ ಪಡೆದುಕೊಂಡಿದ್ದಾರೆ
ಭೂಮಿ (Earth)ತಾಯಿಯ ನಾ ನಂಬಿ ನಾವು ಯಾವುದೇ ಬೆಳೆ ಬೆಳೆದರೂ ಭೂಮಿತಾಯಿ ನಮಗೆ ಮೋಸ ಮಾಡುವುದಿಲ್ಲ.. ಶ್ರಮಕ್ಕೆ(Effort) ತಕ್ಕಂತೆ ಪ್ರತಿಫಲವನ್ನು ಭೂಮಿತಾಯಿ ನೀಡುತ್ತಾಳೆ..ಹೀಗಾಗಿ ಅದೆಷ್ಟೋ ಜನರು ಇಂದು ಸ್ವಾವಲಂಬಿ ಕೃಷಿಕರಾಗಿ(Farmer) ಜೀವನ ಸಾಗಿಸುತ್ತಿದ್ದಾರೆ. ಇರುವ ತುಂಡು ಭೂಮಿಯಲ್ಲಿ ವಿವಿಧ ಬೆಳೆಗಳನ್ನು(Crop) ಬೆಳೆದು ಮಾದರಿ ರೈತ ಎನಿಸಿಕೊಂಡವರು ಇದ್ದಾರೆ.. ಅದ್ರಲ್ಲೂ ಮುಂಚೆಲ್ಲಾ ಕೇವಲ ವಾಣಿಜ್ಯ ಹಾಗೂ ಆಹಾರ ಬೆಳೆಗಳಿಗೆ ಸೀಮಿತವಾಗಿದ್ದ ಜಾಗದಲ್ಲಿ ಈಗ ಹತ್ತಿ(Cotton) ಮೆಕ್ಕೆಜೋಳ ಸೂರ್ಯಕಾಂತಿ ರೇಷ್ಮೆ ಹಣ್ಣು(fruits)-ತರಕಾರಿ(Vegetables) ಬೆಳೆಯುವುದರ ಜೊತೆಗೆ ಹೂವಿನ ಬೆಳೆಗಳನ್ನೂ ಬೆಳೆಯುತ್ತಿರುವ ರೈತರ ಸಂಖ್ಯೆ ಅಧಿಕವಾಗಿದೆ..
ಹಬ್ಬದ ಸಮಯದಲ್ಲಿ ಹೂವಿಗೆ ದುಬಾರಿ ಬೆಲೆ ಇರುವುದರಿಂದ ಇರುವ ಸಣ್ಣ ಭೂಮಿಯಲ್ಲಿ ಅನೇಕ ಜನರು ಹೂವಿನ ಬೆಳೆ ಬೆಳೆದು ಕೈತುಂಬಾ ಲಾಭ ಮಾಡಿಕೊಳ್ಳುತ್ತಿದ್ದಾರೆ.. ಗುಲಾಬಿ ಸೇವಂತಿಗೆ, ಮಲ್ಲಿಗೆ,ಚಂಡು ಹೂ ಸೇರಿ ಅನೇಕ ಹೂವಿನ ಬೆಳೆಗಳನ್ನು ವಿವಿಧ ಬೆಳೆಗಳ ಜೊತೆ ಸೇರಿ ರೈತರು ಬೆಳೆಯುತ್ತಿದ್ದಾರೆ.. ಪ್ರೀತಿ ಈಗ ಬರದ ನಾಡಿನ ರೈತನೊಬ್ಬ ಇರುವ 1 ಎಕರೆ ಭೂಮಿಯಲ್ಲಿ ಚಂಡು ಹೂವು ಬೆಳೆದು ಕೈತುಂಬಾ ಲಾಭ ಮಾಡಿಕೊಂಡಿದ್ದಾರೆ.
ರೈತನ ಬಾಳು ಬಂಗಾರವಾಗಿಸಿದ ಚಂಡು ಹೂ
ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರದೇಶಗಳಲ್ಲಿ ರೈತರು ಚೆಂಡು ಹೂವು ಬೆಳೆದು ಕೈತುಂಬಾ ಲಾಭ ಮಾಡಿಕೊಂಡಿದ್ದಾರೆ.. ಹೆಚ್ಚು ನೀರಾವರಿ ಪ್ರದೇಶದಲ್ಲಿ ಜನರು ಭತ್ತದ ರೀತಿಯ ಬೆಳೆಗಳಿಗೆ ಮೊರೆ ಹೋದರೆ ಬರಡು ಭೂಮಿಯ ಜನರು ಹೂವಿನ ಬೆಳೆಗಳ ಮೊರೆ ಹೋಗುತ್ತಿದ್ದಾರೆ.. ಅದೇ ರೀತಿ ಬೀದರ್ ಜಿಲ್ಲೆಯ ಬಸವಕಲ್ಯಾಣದ ರೈತನೊಬ್ಬ ಇರುವ ಒಂದೇ ಒಂದು ಎಕರೆ ಜಮೀನಿನಲ್ಲಿ ಚಂಡು ಹೂವು ಬೆಳೆದು ಲಕ್ಷಲಕ್ಷ ಸಂಪಾದಿಸುವ ಮೂಲಕ ಅನೇಕ ರೈತರಿಗೆ ಮಾದರಿಯಾಗಿದ್ದಾರೆ...
ಬಸವಕಲ್ಯಾಣ ತಾಲೂಕಿನ ಗೊಗ್ಗಾ ಗ್ರಾಮದ ರೈತ ನಾಮದೇವ ಮೇತ್ರೆ ಎಂಬುವರಿಗೆ ಒಂದು ಎಕರೆ ಜಮೀನು ಇದ್ದು ಜಮೀನಿನಲ್ಲಿ ಬರೋಬ್ಬರಿ ಆರು ಸಾವಿರ ಚೆಂಡು ಹೂವಿನ ಸಸಿಗಳನ್ನು ನಾಟಿ ಮಾಡಿ ಉತ್ತಮ ಇಳುವರಿ ಕಂಡು ಆದಾಯ ಪಡೆದುಕೊಂಡಿದ್ದಾರೆ.
ಸಾವಯವ ವಿಧಾನದಲ್ಲಿ ಬೆಳೆಯಲಾಗಿರುವ ಚೆಂಡುಹೂ
ನಾಮದೇವ ಮೇತ್ರೆ ಅವರು ಒಂದು ಎಕರೆ ನೀರಾವರಿ ಜಮೀನಿನಲ್ಲಿ ಬೆಳೆದಿರುವ ಚಂಡು ಹೂವಿನ ಬೆಳೆ ಸಂಪೂರ್ಣ ಸಾವಯವ ವಿಧಾನದಲ್ಲಿ ಬೆಳೆಯಲಾಗಿದ್ದು,ಎಕರೆಗೆ 6 ಸಾವಿರ ಸಸಿ ನೆಡಲಾಗಿದೆ.ಸಸಿ ನೆಟ್ಟ 47 ದಿನಗಳ ನಂತರ ಚಂಡು ಹೂವಿನ ಫಸಲು ಬರಲು ಪ್ರಾರಂಭವಾಗಿದ್ದು, ಪ್ರತಿ ದಿನ ಟನ್ ಗಟ್ಟಲೆ ಹೂವು ಬರುತ್ತಿದೆ. ಹೆಚ್ಚು ಅಂದರೆ 50ರಿಂದ 60 ಟನ್ ಗಟ್ಲೆ ದಿನಗಳವರೆಗೆ ಹೂವಿನ ಫಸಲು ಕೂಡ ಬಂದಿದೆ.ನಾಮದೇವ ಮೇತ್ರೆ ಅವರು ಒಂದು ಎಕರೆ ಜಮೀನಿನಲ್ಲಿ ಬೆಳೆಯಲು ಖರ್ಚು ಮಾಡಿದ ಖರ್ಚು ಕಳೆದು ಈವರೆಗೂ 70,000 ಲಾಭ ಬಂದಿದೆ.. ಇನ್ನು ಮೂರು ಲಕ್ಷಕ್ಕಿಂತ ಅಧಿಕ ಲಾಭ ಬರುವ ನಿರೀಕ್ಷೆಯಿದೆ ಎನ್ನುತ್ತಾರೆ ನಾಮದೇವ ಮೇತ್ರೆ ಅವರು.
ಇನ್ನು ಸಾಮಾನ್ಯವಾಗಿ ಚಂಡು ಹೂವಿನ ಬೆಳೆಯನ್ನು ದೀಪಾವಳಿಗೆ ಹಾಗೂ ದಸರಾ ಹಬ್ಬದ ಸಮಯದಲ್ಲಿ ಹೆಚ್ಚಾಗಿ ಬೆಳೆದು ಲಾಭ ಪಡೆಯಲಾಗುತ್ತದೆ. ಆದರೆ ಹಿಂದೂಗಳು ವರ್ಷಪೂರ್ತಿ ವಿವಿಧ ಹಬ್ಬಗಳನ್ನು ಆಚರಣೆ ಮಾಡುವುದರಿಂದ ಹೂವಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.ಹೀಗಾಗಿ ಮೇತ್ರೆ ಅವರು ಎಲ್ಲಾ ಸಮಯದಲ್ಲೂ ಚಂಡು ಹೂವು ಬೆಳೆದು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಇನ್ನು ಹೂವಿನ ಬೆಳೆ ಬೆಳೆಯಲು ಬೀದರ್ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮೇತ್ರೆ ಅವರು, ಕಡಿಮೆ ಖರ್ಚಿನಲ್ಲಿ ಚೆಂಡುಹೂವು ಬೆಳೆಯುತ್ತಿದ್ದು ಗರಿಷ್ಠ ಲಾಭ ತಂದು ಇತರ ರೈತರಿಗೆ ಪ್ರೇರಣೆಯಾಗಿದ್ದಾರೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ