ಚಿಕ್ಕಬಳ್ಳಾಪುರ: ಕಣ್ಮನ ಸೆಳೆದ ಕೃಷಿ, ಸಿರಿಧಾನ್ಯ, ಫಲಪುಷ್ಪ ಮೇಳ

ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ಮಾಡುವ ಅವಕಾಶವನ್ನ ರೈತರಿಗೆ ಮಾಡಿ ಕೊಡಲಾಗಿದ್ದು ಇದೇ ಕಾರ್ಯಕ್ರಮದಲ್ಲಿ. ಸದಾ ಕೃಷಿಯಲ್ಲಿಯೇ ಮುಳುಗಿರುವ ಜಿಲ್ಲೆಯ ಪ್ರಗತಿಪರ ರೈತರಿಗೆ ಕೃಷಿ ಮೇಳ, ವಸ್ತು ಪ್ರದರ್ಶನ ಜ್ಞಾನಾರ್ಜನೆಯ ಅಲಯವೇ ಆಗಿತ್ತು. ಮಕ್ಕಳು ಜೊತೆ ರೈತರು ಮೇಳದಲ್ಲಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರ: ಕಣ್ಮನ ಸೆಳೆದ ಕೃಷಿ, ಸಿರಿಧಾನ್ಯ, ಫಲಪುಷ್ಪ ಮೇಳ!

ಚಿಕ್ಕಬಳ್ಳಾಪುರ: ಕಣ್ಮನ ಸೆಳೆದ ಕೃಷಿ, ಸಿರಿಧಾನ್ಯ, ಫಲಪುಷ್ಪ ಮೇಳ!

  • Share this:
ಚಿಕ್ಕಬಳ್ಳಾಪುರ(ಫೆ.15): ಇದು ಬಯಲು ಸೀಮೆ ಜಿಲ್ಲೆಯಾದರೂ ಇಲ್ಲಿ ಹಂಪಿ ಕಲ್ಲಿನ ರಥ ಸೃಷ್ಟಿಯಾಗಿತ್ತು. ಸ್ವಾತಂತ್ರ್ಯ ಹೋರಾಟದ ಕಿಚ್ಚು‌ಹಚ್ಚಿದ ಸುಭಾಷ್ ಚಂದ್ರ ಬೋಸ್ ಆಕರ್ಷಿತರಾದರು. ಕೃಷಿಯನ್ನೇ ಜೀವಾಳವಾಗಿರಿಸಿಕೊಂಡು ಇರುವ ಇಲ್ಲಿ ಕೃಷಿ ಪ್ರಯೋಗ ಶಾಲೆಯ ನೆಲೆಯೂ ಹೌದು. ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರ ಅಳವಡಿಸಿ ಭರ್ಜರಿ ಫಸಲು ಬೆಳೆಯುವ ಸಾಕಷ್ಟು ರೈತರು ಇಲ್ಲಿದ್ದಾರೆ. ಸಿರಿಧಾನ್ಯಗಳ ಮಹತ್ವ ಸಾರುವ ಕೃಷಿ ಮೇಳದ ಸಣ್ಣದೊಂದು ಝಲಕ್.

ವಿವಿಧ ಹೂವುಗಳಲ್ಲಿ ಅರಳಿ ನಿಂತ ಹಂಪಿ ಕಲ್ಲಿನ. ವೀರಾಜಮಾನವಾಗಿರುವ ರಂಗನಾಥಸ್ವಾಮಿ, ಮರಳಿನಲ್ಲಿ ಸೃಷ್ಟಿಯಾದ ದೇಶಪ್ರೇಮಿ ಸುಭಾಷ್ ಚಂದ್ರ ಬೋಸ್​​. ಎಲ್ಲಕ್ಕೂ ಮಿಗಿಲಾಗಿ ಫಲಪುಷ್ಪಗಳಲ್ಲಿ ಪ್ರತ್ಯಕ್ಷರಾಗಿ ಮಿಂಚಿ‌ ಆಕರ್ಷಿತರಾಗಿದ್ದು, ಸಿದ್ದಗಂಗ ಶ್ರೀಗಳು, ಕ್ರಿಕೆಟ್ ಆಟಗಾರರು, ದೇಶಪ್ರೇಮಿಗಳು. ಇವೆಲ್ಲವೂ ಜನಾಕರ್ಷಣೆ ಪಡೆದಿದ್ದು, ಕರ್ನಾಟಕದ ಸಿಲ್ಕ್ ಅಂಡ್ ಮಿಲ್ಕ್ ಜಿಲ್ಲೆ ಅಂತಾನೇ ಕರೆಸಿಕೊಳ್ಳುವ ಚಿಕ್ಕಬಳ್ಳಾಪುರದ ಕೃಷಿ ಮೇಳ, ಫಲಪುಷ್ಪ ಪ್ರದರ್ಶನ ಮತ್ತು ಸಿರಿಧಾನ್ಯ ಮೇಳದಲ್ಲಿ.

ಚಿಕ್ಕಬಳ್ಳಾಪುರ ಜಿಲ್ಲೆ ಸಂಪೂರ್ಣ ಮಳೆಯಾಶ್ರಿತ ನೆಲ. ಯಾವುದೇ ನದಿ ಮೂಲಗಳು ಇಲ್ಲದ ಜಿಲ್ಲೆಯಲ್ಲಿ ಅಂತರ್ಜಲವೇ ಜೀವಾಳ. ಲಭ್ಯವಿರುವ ಮಿತ ನೀರಿನಲ್ಲಿ ಭರ್ಜರಿ ಫಸಲು ಬೆಳೆಯುವ ರೈತರು ಇಲ್ಲಿದ್ದಾರೆ. ಸದಾ ಕೃಷಿಯಲ್ಲಿ ಹೊಸತನ ಬಯಸುವ ಇಲ್ಲಿನ ಕೃಷಿಕರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಕೃಷಿಕರಿಗೆ ಅನುಕೂಲವಾಗಲೆಂದು ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾಡಳಿತ ಸಹಯೋಗದೊಂದಿಗೆ ಆಯೋಜನೆ ಮಾಡಿರುವ‌ ಕೃಷಿ ಮೇಳ 2020ಕ್ಕೆ ವೈದ್ಯಕೀಯ ಶಿಕ್ಷಣ ಸಚಿವ‌ ಡಾ.ಕೆ.ಸುಧಾಕರ್, ಸಂಸದ ಬಿ.ಎನ್ ಬಚ್ಚೇಗೌಡ ಉದ್ಘಾಟಿಸಿರು.

ಇದನ್ನೂ ಓದಿ: ಮಂಗಳೂರು ಗೋಲಿಬಾರ್​​ ಕೇಸ್​​: ಫೆ.19ರಂದು ವೀಡಿಯೋ ತುಣುಕು ಮತ್ತು ಸಾಕ್ಷ್ಯ ಸಲ್ಲಿಸಲು ಅವಕಾಶ

ಇನ್ನೂ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯುವ ಕೃಷಿ ಮೇಳದಲ್ಲಿ ವಿವಿಧ ತಳಿಯ ಮತ್ತು ಒಣ ಬೇಸಾಯ, ನರೇಗಾದ ಬಗ್ಗೆ ಜನ ಮಾಹಿತಿ ಪಡೆದರು. ಸದಾ ಬಿಸಿಲ ಬೇಗೆಗೆ ಹೊರ ಬರದ ರೈತರು ಮೇಳದಲ್ಲಿ ಬಿಸಿಲ ಬೇಗೆಗೂ ಲೆಕ್ಕಿಸದೆ ಭಾಗವಹಿಸಿ ಬೇಕಾದ ಮಾಹಿತಿ‌ ಪಡೆದು ಸಂತಸ ವ್ಯಕ್ತ ಪಡಿಸಿದರು. ಇನ್ನು ಮಕ್ಕಳ ಚಿತ್ರಕಲೆ, ಶ್ವಾನ ಪ್ರದರ್ಶನ, ಮತ್ಸ ಪ್ರದರ್ಶನಗಳು ನೋಡುಗರ ಗಮನ ಸೆಳೆದವು.

ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ಮಾಡುವ ಅವಕಾಶವನ್ನ ರೈತರಿಗೆ ಮಾಡಿ ಕೊಡಲಾಗಿದ್ದು ಇದೇ ಕಾರ್ಯಕ್ರಮದಲ್ಲಿ. ಸದಾ ಕೃಷಿಯಲ್ಲಿಯೇ ಮುಳುಗಿರುವ ಜಿಲ್ಲೆಯ ಪ್ರಗತಿಪರ ರೈತರಿಗೆ ಕೃಷಿ ಮೇಳ, ವಸ್ತು ಪ್ರದರ್ಶನ ಜ್ಞಾನಾರ್ಜನೆಯ ಅಲಯವೇ ಆಗಿತ್ತು. ಮಕ್ಕಳು ಜೊತೆ ರೈತರು ಮೇಳದಲ್ಲಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.
First published: