ಇದು ಕೊಡವರ ನಾಡಿನ ಪ್ರತಿಭಾವಂತ ಕ್ರೀಡಾಪಟು ತಶ್ಮಾರ ಕರುಣಾಜನಕ ಕಥೆ..!
news18
Updated:September 3, 2018, 7:23 PM IST
news18
Updated: September 3, 2018, 7:23 PM IST
ನ್ಯೂಸ್ 18 ಕನ್ನಡ
ಸೈನಿಕರ ನಾಡಲ್ಲಿ ಈ ಭಾರಿ ಮಳೆಯಿಂದ ಉಂಟಾದ ದುರಂತ ಎಂದಿಗೂ ಮರೆಯುವಂತಿಲ್ಲ. ಕೊಡವರ ನಾಡು ಪ್ರವಾಹಕ್ಕೆ ಅಕ್ಷರಶಃ ನಲುಗಿ ಹೋಗಿತ್ತು. ಗ್ರಾಮಕ್ಕೆ ಗ್ರಾಮವೇ ಕೊಚ್ಚಿ ಹೋಗಿತ್ತು. ಹೀಗೆ ತಮಗೆ ಬದುಕಲು ಆಸರೆಯಾಗಿದ್ದ ಪುಟ್ಟ ಮನೆಯನ್ನು ಕಳೆದುಕೊಂಡವರಲ್ಲಿ ಮುತ್ತಪ್ಪ ಕುಟುಂಬವೂ ಒಂದು.
ಅದು ಮಡಿಕೇರಿ ಸಮೀಪದ ಮೊಣ್ಣಂಗೇರಿ ಗ್ರಾಮ. ಈ ಗ್ರಾಮದಲ್ಲಿ ಮುತ್ತಪ್ಪ ಅವರದ್ದು ಚಿಕ್ಕದಾದ ಕುಟುಂಬ. ಪತ್ನಿ ಗಿರಿಜಾ ಹಾಗೂ ಪುತ್ರಿ ತಶ್ಮಾ ಅವರೇ ಮತ್ತಪ್ಪ ಅವರ ಪ್ರಪಂಚ. 23 ವರ್ಷ ಪ್ರಾಯದ ಮಗಳು ತಶ್ಮಾ ಅವರು ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಎತ್ತಿದ ಕೈ. ಯಾವುದಾದರು ಸ್ಪರ್ಧೆಯಲ್ಲಿ ತಶ್ಮಾ ಭಾಗವಹಿಸಿದರೆಂದರೆ ಆ ಪ್ರಶಸ್ತಿ ಅವರ ಪಾಲಿಗೆ. ಅದರಲ್ಲೂ ಥ್ರೋ ಬಾಲ್ನಲ್ಲಿ ತನ್ನ ಕೈ ಚಳಕ ಪ್ರದರ್ಶಿಸುತ್ತಿದ್ದ ತಶ್ಮಾ ಉತ್ತಮ ಕ್ರೀಡಾಪಟುವಾಗಿ ಹೊರಮೊಮ್ಮಿದ್ದರು. ಶ್ರೀಲಂಕಾ-ಮಲೇಷ್ಯಾದಲ್ಲಿ ನಡೆದ ಮಹಿಳಾ ಥ್ರೋ ಬಾಲ್ ಪಂದ್ಯಾಟದಲ್ಲಿ ಆಡಿ ಖ್ಯಾತಿ ಗಳಿಸಿದ್ದರು. ಇಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತ ಚಾಂಪಿಯನ್ ಆಗಲು ತಶ್ಮಾ ಅವರ ಪಾತ್ರ ಮುಖ್ಯವಾಗಿತ್ತು. ಇಷ್ಟೇಲ್ಲಾ ಸಾಧನೆ ಮಾಡಿರುವ ಇವರು ಇಂದು ಒಂದು ದಿನ ಕಳೆಯಲು ಕಷ್ಟಪಡುವ ಸ್ಥಿತಿ ಉಂಟಾಗಿದೆ.
ತಂದೆ ಮುತ್ತಪ್ಪ ಅವರು ಮಡಿಕೇರಿಯ ಹೋಂ ಸ್ಟ್ರೇ ಒಂದರಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಮನೆಗೆಲಸ ಮಾಡಿತ್ತಿದ್ದಾರೆ. ಆದರೆ ಮಹಾಮಳೆಯಿಂದಾಗಿ ಇವರ ಮನೆ ನೀರಲ್ಲಿ ಕೊಚ್ಚಿಹೋಗಿದ್ದು, ಸದ್ಯ ಬೀದಿಗೆ ಬಂದು ನಿಂತಿದ್ದಾರೆ. ಅಲ್ಲದೆ ಮಳೆಯ ರುದ್ರ ನರ್ತನಕ್ಕೆ ತಶ್ಮಾ ಅವರಿಗೆ ದೊರಕಿದ್ದ ಪದಕಗಳು, ಪ್ರಮಾಣಪತ್ರ ಎಲ್ಲವೂ ನೀರಿನೊಂದಿಗೆ ಹರಿದುಹೋಗಿದೆ. ಸದ್ಯ ಎಲ್ಲವನ್ನೂ ಕಳೆದುಕೊಂಡಿರುವ ಈ ಬಡಕುಟುಂಬಕ್ಕೆ ತಶ್ಮಾ ಅವರೇ ಆಸರೆಯಾಗಬೇಕಿದೆ. ಅದಕ್ಕಾಗೆ ಮಡಿಕೇರಿಯ ಮೆಡಿಕಲ್ ಕಾಲೇಜಿನಲ್ಲಿ ಕಂಪ್ಯೂಟರ್ ಸಹಾಯಕಿಯಾಗಿ ಉದ್ಯೋಗ ಮಾಡುತ್ತಿದ್ದಾರೆ.ಏನಾದರು ಸಾಧನೆ ಮಾಡಬೇಕು ಎಂಬ ತಶ್ಮಾ ಅವರ ಕನಸು ಸದ್ಯ ಕನಸಾಗಿಯೇ ಉಳಿದಿದೆ. ಕೊಡಗಿನ ನೆರೆ ಸಂತ್ರಸ್ತರ ನೆರವಿಗೆ ಹಸ್ತ ಚಾಚಿದ ಕೈಗಳು ತಶ್ಮಾ ಅವರ ಕಣ್ಣೀರು ಒರೆಸುವ ಕೈಯಾಗಬೇಕಿದೆ. ರಾಜ್ಯ ಸರ್ಕಾರ ಮತ್ತು ಕ್ರೀಡಾ ಇಲಾಖೆ ಇತ್ತ ಗಮನ ಹರಿಸಿ ಗ್ರಾಮೀಣ ಪ್ರತಿಭೆಯ ನೆರವಿಗೆ ನಿಲ್ಲಬೇಕಿದೆ.

Loading...