• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Chikkamagaluru: ಮೂರು ವರ್ಷ ಕಳೆದ್ರೂ ಸಿಗದ ಪರಿಹಾರ; ಸರ್ಕಾರದ ವಿರುದ್ಧ ಪ್ರವಾಹ ಸಂತ್ರಸ್ತರ ಆಕ್ರೋಶ

Chikkamagaluru: ಮೂರು ವರ್ಷ ಕಳೆದ್ರೂ ಸಿಗದ ಪರಿಹಾರ; ಸರ್ಕಾರದ ವಿರುದ್ಧ ಪ್ರವಾಹ ಸಂತ್ರಸ್ತರ ಆಕ್ರೋಶ

ಮಳೆ ಎಫೆಕ್ಟ್

ಮಳೆ ಎಫೆಕ್ಟ್

ಆಗಸ್ಟ್ ತಿಂಗಳಿಗೆ ಅತೀವೃಷ್ಟಿಗೆ ಮನೆ, ಜಮೀನು ಕಳೆದುಕೊಂಡು 4 ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಸರಕಾರದ ನಿರ್ಲಕ್ಷ್ಯ ಖಂಡಿಸಿ ಮೂಡಿಗೆರೆ ತಾಲೂಕು ಕಚೇರಿ ಎದುರು ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಸಂತ್ರಸ್ಥರು, ತಾಲೂಕು ಕಚೇರಿ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ (Malemane Village, Chikkamagluru) ಗ್ರಾಮದಲ್ಲಿ 2019ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ (Flood) ಜಮೀನು, ಮನೆ ಕಳೆದುಕೊಂಡು ಸಂತ್ರಸ್ತರಾಗಿರುವ ಕುಟುಂಬಗಳಿಗೆ 4 ವರ್ಷ ಕಳೆದರೂ ಪರ್ಯಾಯ ಜಮೀನು, ಮನೆ ಸೇರಿದಂತೆ ಸೂಕ್ತ ಪರಿಹಾರ (Relief) ನೀಡಲು ಸರಕಾರ (Government) ಸಂಪೂರ್ಣವಾಗಿ ವಿಫಲವಾಗಿದೆ. ಸರಕಾರ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಶೀಘ್ರ ಪರಿಹಾರ ನೀಡದಿದ್ದಲ್ಲಿ ಮೂಡಿಗೆರೆ (Mudigere) ತಾಲೂಕು ಕಚೇರಿ ಎದುರು ವಿಷ ಕುಡಿದು ಆತ್ಮಹತ್ಯೆ (Suicide) ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ಕಳೆದ 2019ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಅತೀವೃಷ್ಟಿಯಿಂದಾಗಿ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿದ್ದು, ಗ್ರಾಮದಲ್ಲಿದ್ದ 5 ಕುಟುಂಬಗಳಿಗೆ ಸೇರಿದ್ದ ಮನೆ, ಜಮೀನು ಸಂಪೂರ್ಣವಾಗಿ ಮಣ್ಣುಪಾಲಾಗಿದ್ದವು.


ಸಂಕಷ್ಟಕ್ಕೀಡಾಗಿದ್ದ 5 ಕುಟುಂಬಗಳ ಜನರು ಪಾವಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿ ಮನೆ, ಜಮೀನು ಕಳೆದುಕೊಂಡು ಅಕ್ಷರಶಃ ಬೀದಿಪಾಲಾಗಿದ್ದವು. ಸಂತ್ರಸ್ತರಾದ 5 ಕುಟುಂಬಗಳ ಸದಸ್ಯರು ಆರಂಭದಲ್ಲಿ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, ನಂತರ ಸರಕಾರದ ಭರವಸೆ ಮೇರೆಗೆ ಬಾಡಿಗೆಮನೆಗಳಲ್ಲಿ ವಾಸವಾಗಿದ್ದರು. ಅತೀವೃಷ್ಟಿ ಸಂದರ್ಭ ಅಂದಿನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿದ್ದರು.


ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ್ರು ಅಂದಿನ ಸಿಎಂ


ಬಳಿಕ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಸಚಿವರು ಮಲೆಗ್ರಾಮಕ್ಕೆ ಭೇಟಿ ನೀಡಿ ಅತಿವೃಷ್ಟಿಯ ಭೀಕರ ದೃಶ್ಯಗಳನ್ನು ಕಣ್ಣಾರೆ ಕಂಡು ಸೂಕ್ತ ಪರಿಹಾರದ ಭರವಸೆ, ಪರ್ಯಾಯ ಜಮೀನಿನ ಭರವಸೆಯನ್ನೂ ನೀಡಿದ್ದರು.


Flood victims protest demanding shelter chikkamagaluru vctv mrq
ಮಳೆ ಎಫೆಕ್ಟ್


ಇದನ್ನೂ ಓದಿ:  Karnataka Weather Report: ಮುಂದುವರಿಯಲಿದೆ ಮಳೆ; 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್


ಆದರೆ ಅತೀವೃಷ್ಟಿ ಸಂಭವಿಸಿ ಮೂರು ವರ್ಷ ಕಳೆದ ಆಗಸ್ಟ್ ತಿಂಗಳಿಗೆ ನಾಲ್ಕು ವರ್ಷಗಳು ಪೂರ್ಣಗೊಳ್ಳುತ್ತಿದ್ದರೂ ಸಂತ್ರಸ್ತ ಕುಟುಂಬಗಳಿಗೆ ಇದುವರೆಗೂ ಸೂಕ್ತ ಪರಿಹಾರ, ಮನೆ ಸೇರಿದಂತೆ ಪರ್ಯಾಯ ಜಮೀನು ಮರಿಚೀಕೆಯಾಗಿದ್ದು, ಮನೆ ನಿರ್ಮಾಣಕ್ಕೆ 1 ಲಕ್ಷ ರೂ. ನೀಡಿರುವುದೇ ಸರಕಾರದ ಸಾಧನೆಯಾಗಿದೆ ಎಂದು ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ.


ನಾಲ್ಕು ವರ್ಷವಾದ್ರು ಈಡೇರದ ಭರವಸೆ


ಸರಕಾರದ ನಿರ್ಲಕ್ಷ್ಯ ಖಂಡಿಸಿ ಇತ್ತೀಚೆಗೆ ಸಂತ್ರಸ್ಥರು ರಾಷ್ಟ್ರಪತಿಗಳಿಗೆ ಪತ್ರ ಬರೆದು ಧಯಾಮರಣಕ್ಕೆ ಅವಕಶ ನೀಡುವಂತೆ ಆಗ್ರಹಿಸಿದ್ದರು. ಈ ವೇಳೆ ಜಿಲ್ಲಾಧಿಕಾರಿ ಹಾಗೂ ಕ್ಷೇತ್ರದ ಶಾಸಕರು ಶೀಘ್ರ ಪರಿಹಾರ, ಪುನರ್ವಸತಿ ಕಲ್ಪಿಸುವ ಭರವಸೆಯನ್ನೂ ನೀಡಿದ್ದರಿಂದ ಸಂತ್ರಸ್ತರು ಹೋರಾಟವನ್ನು ಕೈಬಿಟ್ಟಿದ್ದರು.


ಆದರೆ ಸರಕಾರ ನೀಡಿದ್ದ ಭರವಸೆ ಇನ್ನೂ ಈಡೇರದ ಹಿನ್ನೆಲೆಯಲ್ಲಿ ಸಂತ್ರಸ್ಥರು ಆಕ್ರೋಶಗೊಂಡಿದ್ದು, ಆಗಸ್ಟ್ ತಿಂಗಳಿಗೆ ಅತೀವೃಷ್ಟಿಗೆ ಮಅತೀವೃಷ್ಟಿಗೆ ಮನೆ, ಜಮೀನು ಕಳೆದುಕೊಂಡು 4 ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಸರಕಾರದ ನಿರ್ಲಕ್ಷ್ಯ ಖಂಡಿಸಿ ಮೂಡಿಗೆರೆ ತಾಲೂಕು ಕಚೇರಿ ಎದುರು ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಸಂತ್ರಸ್ಥರು, ತಾಲೂಕು ಕಚೇರಿ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.


ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದ ಸಂತ್ರಸ್ತರು


ಸರಕಾರದ ನಿರ್ಲಕ್ಷ್ಯ ಖಂಡಿಸಿ ಇತ್ತೀಚೆಗೆ ಸಂತ್ರಸ್ತರು ರಾಷ್ಟ್ರಪತಿಗಳಿಗೆ ಪತ್ರ ಬರೆದು ದಯಾಮರಣಕ್ಕೆ ಅವಕಶ ನೀಡುವಂತೆ ಆಗ್ರಹಿಸಿದ್ದರು. ಈ ವೇಳೆ ಜಿಲ್ಲಾಧಿಕಾರಿ ಹಾಗೂ ಕ್ಷೇತ್ರದ ಶಾಸಕರು ಶೀಘ್ರ ಪರಿಹಾರ, ಪುನರ್ವಸತಿ ಕಲ್ಪಿಸುವ ಭರವಸೆಯನ್ನೂ ನೀಡಿದ್ದರಿಂದ ಸಂತ್ರಸ್ತರು ಹೋರಾಟವನ್ನು ಕೈಬಿಟ್ಟಿದ್ದರು.


ಇದನ್ನೂ ಓದಿ:  Heavy Rain: ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆ; ರಸ್ತೆಯಲ್ಲಿ ಬಿರುಕು, ಮನೆಗಳು ಕುಸಿತ 


ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ


ಸರಕಾರ ನೀಡಿದ್ದ ಭರವಸೆ ಇನ್ನೂ ಈಡೇರದ ಹಿನ್ನೆಲೆಯಲ್ಲಿ ಸಂತ್ರಸ್ತರು ಆಕ್ರೋಶಗೊಂಡಿದ್ದು, ಆಗಸ್ಟ್ ತಿಂಗಳಿಗೆ ಅತೀವೃಷ್ಟಿಗೆ ಮನೆ, ಜಮೀನು ಕಳೆದುಕೊಂಡು 4 ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಸರಕಾರದ ನಿರ್ಲಕ್ಷ್ಯ ಖಂಡಿಸಿ ಮೂಡಿಗೆರೆ ತಾಲೂಕು ಕಚೇರಿ ಎದುರು ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿರುವ ಸಂತ್ರಸ್ಥರು, ತಾಲೂಕು ಕಚೇರಿ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

top videos
    First published: