Hubballi: ನೆರೆ ಸಂತ್ರಸ್ತರ ಪರಿಹಾರ ಗುಳುಂ! SDA ಅಮಾನತು, ಕ್ರಿಮಿನಲ್ ಕೇಸ್ ದಾಖಲು

ನೆರೆ ಸಂತ್ರಸ್ತರ ಪರಿಹಾರವನ್ನೂ ಗುಳುಂ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಓರ್ವ ಎಸ್.ಡಿ.ಎ. ಯನ್ನು ಅಮಾನತು ಮಾಡಲಾಗಿದೆ. ಧಾರವಾಡ ಜಿಲ್ಲೆ ಅಣ್ಣಿಗೇರಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ದುರ್ಬಳಕೆ ಮಾಡಿಕೊಂಡಾತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿರೋದಾಗಿ ಸಚಿವ ಹಾಲಪ್ಪ ತಿಳಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಹುಬ್ಬಳ್ಳಿ(ಜು.14): ನೆರೆ ಸಂತ್ರಸ್ಥರ ಪರಿಹಾರ ಗೋಲ್‌ಮಾಲ್ ಪ್ರಕರಣದ ತನಿಖಾಧಿಕಾರಿಗೆ 32 ದಿನಗಳ ಕಾಲ ರಜೆ ಕೊಟ್ಟ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ತನಿಖೆ ದಾರಿ ತಪ್ಪುವ ದಿಕ್ಕಿನಲ್ಲಿ, ಕಾಣದ ಕೈಗಳು ಕೈವಾಡ ನಡೆಸಿವೆ ಎಂಬ ಅನುಮಾನ ವ್ಯಕ್ತವಾಗಿದೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಹಶಿಲ್ದಾರರ (Tahasildar) ಕಚೇರಿಯಲ್ಲಿ ಹಗರಣ (Scam) ನಡೆದಿತ್ತು. ಅಣ್ಣಿಗೇರಿ ತಾಲೂಕಿನಲ್ಲಿ ನೆರೆ ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರ ಬೇನಾಮಿಯವರ ಹೆಸರಿಗೆ ಸಂದಾಯ ಮಾಡಲಾಗಿತ್ತು. ನೆರೆ ಹಾವಳಿಗೆ ಬಿದ್ದ ಮನೆಗೆ ಪರಿಹಾರ (Compensation) ನೀಡುವಲ್ಲಿ ಭಾರೀ ಭ್ರಷ್ಟಾಚಾರ (Corruption) ನಡೆದಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಧಾರವಾಡ ಡಿಸಿ ತನಿಖಾಧಿಕಾರಿಗಳನ್ನ ನೇಮಕ ಮಾಡಿದ್ದರು. ಆದ್ರೆ ಅಷ್ಟೇ ಬೇಗನೇ ತನಿಖೆ ಹಳ್ಳ ಹಿಡಿದಿದೆ.

ಈ ಕುರಿತು ಪ್ರತಿಕ್ರಿಯಿಸಿರೋ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಹಣ ದುರ್ಬಳಕೆ ಮಾಡಿಕೊಂಡಾತನನ್ನು ಅಮಾನತುಗೊಳಿಸಿರೋದಾಗಿ ತಿಳಿಸಿದ್ದಾರೆ.
ಅಂದಾಜು 50 ಲಕ್ಷ ರೂಪಾಯಿ ದುರುಪಯೋಗವಾಗಿತ್ತು.

40,55,200 ರೂಪಾಯಿ ಹಣ ಜಮಾ ಆಗಬೇಕಿತ್ತು

ಪ್ರಕರಣಕ್ಕೆ ನಾಟಕೀಯ ಬೆಳವಣಿಗೆ ಸಿಕ್ಕಿದೆ. ನೆರೆ ಹಾವಳಿಯ ಪರಿಹಾರ  ಸಂತ್ರಸ್ಥರಿಗೆ ಖಾತೆಗೆ 40,55,200 ರೂಪಾಯಿ ಹಣ ಜಮಾ ಆಗಬೇಕಿತ್ತು. ಅರ್ಹ ಫಲಾನುವಿಗೆ ಸೇರಬೇಕಾಗಿದ್ದ ಪರಿಹಾರದ ಹಣವನ್ನು ತನ್ನ ತಾಯಿಯ ಹೆಸರಿಗೆ ಸಂದಾಯ ಮಾಡಿಕೊಂಡ ಆರೋಪ ಅಣ್ಣಿಗೇರಿ ತಹಶೀಲ್ದಾರ ಕಚೇರಿಯಲ್ಲಿ ಪ್ರೋಬೆಸನರಿ ಎಸ್.ಡಿ.ಎ ಮಂಜುನಾಥ ಮುಧೋಳ ವಿರುದ್ಧ ಕೇಳಿಬಂದಿತ್ತು. ಭದ್ರಾಪುರ ಮತ್ತು ನಾಗರಳ್ಳಿ ನಿವಾಸಿ ಹೆಸರಿನಲ್ಲಿ 40,55,200 ಹಣವನ್ನ ಜಮಾ ಮಾಡಲಾಗಿತ್ತು.

ಸಹಿ ಪೂರ್ಜರಿ ಮಾಡಿ ದುರುಪಯೋಗ

ತಹಸೀಲ್ದಾರ ಗಮನಕ್ಕೆ ತರದೇ ಮಂಜುನಾಥ ಮುಧೋಳ ಹಣ ಟ್ರಾನ್ಸ್‌ಫರ್ ಮಾಡಿಕೊಂಡಿದ್ದ. ತಹಶಿಲ್ದಾರರ ಸಹಿ ಪೂರ್ಜರಿ ಮಾಡಿ ದುರುಪಯೋಗ ಮಾಡಿಕೊಳ್ಳಲಾಗಿತ್ತು. ತನಿಖಾಧಕಾರಿಗಳಾಗಿ ಜಿಲ್ಲಾಧಿಕಾರಿ ಕಚೇರಿಯ ಯೋಜನಾ ನಿರ್ದೇಶಕರಾದ ರುದ್ರೇಶ ಅವರನ್ನು ನೇಮಕ ಮಾಡಲಾಗಿತ್ತು. ತನಿಖೆ ಚುರುಕುಗೊಳಿಸಯತ್ತಿದ್ದಂತೆ ರುದ್ರೇಶ್ ಬಳ್ಳಾರಿಗೆ ವರ್ಗಾವಣೆಯಾಗಿದ್ದರು.

ಆದೇಶ ಪ್ರತಿ


ಅಣ್ಣಿಗೇರಿ ತಹಶೀಲ್ದಾರ ಮಂಜುನಾಥ ಅಮಾಸಿ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಇದೀಗ ತಹಶೀಲ್ದಾರ ಮಂಜುನಾಥ ಅಮಾಸೆ ದಿಢೀರ್ ರಜೆ ಮೇಲೆ ಕಳಿಸಲಾಗಿದೆ. ಧಾರವಾಡ ಜಿಲ್ಲಾಧಿಕಾರಿ ಗುರುದತ್ ಹೆಗಡೆ 32 ದಿನಗಳ ಕಾಲ ರಜೆ ನೀಡಿರೋದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದನ್ನೂ ಓದಿ: ಚಾಕು ಇರಿತಕ್ಕೊಳಗಾಗಿದ್ದ ಮಾಜಿ ಕಾರ್ಪೊರೇಟರ್​ ಪತಿ ಆಯೂಬ್ ಖಾನ್ ಕೊನೆಯುಸಿರು!

ಯಾರನ್ನೂ ರಕ್ಷಿಸೋ ಪ್ರಶ್ನೆಯೇ ಇಲ್ಲ ಎಂದ ಹಾಲಪ್ಪ

ಧಾರವಾಡ ಜಿಲ್ಲೆ ಅಣ್ಣಿಗೇರಿಯಲ್ಲಿ ನೆರೆ ಸಂತ್ರಸ್ಥರ ಪರಿಹಾರ ಗೋಲ್‌ಮಾಲ್ ಪ್ರಕರಣಕ್ಕೆ ಸಂಬಂಧಿಸಿ ಎಸ್.ಡಿ.ಎ. ಯನ್ನು ಅಮಾನತು ಮಾಡಿರೋದಾಗಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯಾರನ್ನೂ ರಕ್ಷಿಸೋ ಪ್ರಶ್ನೆಯೇ ಇಲ್ಲ. ಹಣ ದುರ್ಬಳಕೆ ಮಾಡಿಕೊಂಡಿದ್ದ ಮಂಜುನಾಥ್ ನನ್ನು ಈಗಾಗಲೇ ಅಮಾನತು ಮಾಡಲಾಗಿದೆ.

ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ರಾಜಕಾರಣಿಯೇ ಇರಲಿ, ಅಧಿಕಾರಿಯೇ ಇರಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಯಾರನ್ನೂ ಬಿಡೋ ಪ್ರಶ್ನೆಯೇ ಇಲ್ಲ. ಈಗಾಗಲೇ ತಪ್ಪಿತಸ್ತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪಿ.ಎಸ್.ಐ. ಪ್ರಕರಣದಲ್ಲಿಯೂ ಎಲ್ಲರನ್ನೂ ಒಳಗೆ ಹಾಕಿಲ್ಲ, ಆ ಪ್ರಕರಣದಲ್ಲಿ ಯಾರನ್ನೂ ಬಿಟ್ಟಿಲ್ಲ.
ತನಿಖಾಧಿಕಾರಿ ಹಾಗೂ ಅಣ್ಣಿಗೇರಿ ತಹಶೀಲ್ದಾರ  ಮಂಜುನಾಥ ಅಮಾಸೆ ಗೆ 32 ದಿನಗಳ ಕಾಲ ರಜೆ ಕೊಟ್ಟಿರುವ ಕುರಿತು ಸಚಿವರು ಸಮರ್ಥಿಸಿಕೊಂಡರು.

ಇದನ್ನೂ ಓದಿ: Siddaramaiah: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸಿದ್ದು ಸ್ಪರ್ಧೆ? ವಿವಿಧ ಸಮುದಾಯ ನಾಯಕರಿಂದ ಬೆಂಬಲ

ಮತ್ತೊರ್ವ ಅಧಿಕಾರಿ ಪ್ರಮೋಶನ್ ಆಗಿದ್ದರಿಂದ ವರ್ಗಾವಣೆ ಆಗಿದೆ ಎಂದು ಪಕ್ಕದಲ್ಲಿಯೇ ಕುಳಿತಿದ್ದ ಡಿಸಿ ಗುರುದತ್ ಹೆಗಡೆ ತಿಳಿಸಿದರು. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಹಶಿಲ್ದಾರರ ಕಚೇರಿಯಲ್ಲಿ ಹಗರಣ ನಡೆದಿತ್ತು. ನೆರೆ ಸಂತ್ರಸ್ತರಿಗೆ ಸಿಗಬೇಕಿದ್ದ ಹಣವನ್ನು ಮಂಜುನಾಥ ಮುಧೋಳ ಎಂಬಾತ ತನ್ನ ತಾಯಿಯ ಹೆಸರಿಗೆ ಸಂದಾಯ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಅಮಾನತು ಮಾಡಿ ಕ್ರಿಮಿನಲ್ ಕೇಸ್ ಹಾಕಿರೋದಾಗಿ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
Published by:Divya D
First published: