ಮಳೆಯಿಂದ ಯಾದಗಿರಿಯ ಶಿವನೂರ ಗ್ರಾಮದಲ್ಲಿ ಮುಳುಗಡೆ ಭೀತಿ; 192 ಜನರ ಸ್ಥಳಾಂತರ

ಶಿವನೂರ ಗ್ರಾಮದಲ್ಲಿ 110 ಮನೆಗಳಿವೆ, 500 ಜನಸಂಖ್ಯೆ ಇದೆ. ಈಗಾಗಲೇ 192 ಜನರನ್ನು ಬೆಂಡಬೆಂಬಳಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನೂ 100 ಜನರು ಊರಲ್ಲಿಯೇ ಇದ್ದಾರೆ.

news18-kannada
Updated:October 18, 2020, 10:00 AM IST
ಮಳೆಯಿಂದ ಯಾದಗಿರಿಯ ಶಿವನೂರ ಗ್ರಾಮದಲ್ಲಿ ಮುಳುಗಡೆ ಭೀತಿ; 192 ಜನರ ಸ್ಥಳಾಂತರ
ಯಾದಗಿರಿಯಲ್ಲಿ ಪ್ರವಾಹಕ್ಕೆ ಒಳಗಾದ ಜನರು
  • Share this:
ಯಾದಗಿರಿ (ಅ. 18): ಮನೆಯ ಮುಂಭಾಗದಲ್ಲಿಯೇ ಅಪಾಯಮಟ್ಟದ ನೀರು ಹರಿಯುತ್ತಿದ್ದರೂ ಜನರು ಅನಿವಾರ್ಯವಾಗಿ ಭೀಮಾ ನದಿ ತೀರದಲ್ಲಿ ತಮ್ಮ ಊರಲ್ಲಿ ನೆಲೆ ಕಂಡುಕೊಂಡಿದ್ದರು. ಅವರೆಲ್ಲ ಈಗ ಗ್ರಾಮ ಮುಳುಗಡೆ ಭೀತಿ ಹಿನ್ನಲೆಯಲ್ಲಿ ಊರು ತೊರೆದು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಶಿವನೂರ ಗ್ರಾಮದ ಜನರು ಪ್ರತಿ ವರ್ಷ ಭೀಮಾ ನದಿಗೆ ಹೆಚ್ಚಿನ ಪ್ರವಾಹ ಹಿನ್ನಲೆ ಗ್ರಾಮಕ್ಕೆ ನೀರು ನುಗ್ಗುವ ಹಿನ್ನಲೆ ಗ್ರಾಮಸ್ಥರು ಪ್ರವಾಹ ತಗ್ಗುವರಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದು ನಂತರ ಊರಿಗೆ ವಾಪಾಸ್ ಬಂದು ಮನೆ ಸ್ವಚ್ಛತೆ ಮಾಡಿಕೊಂಡು ಮನೆಯಲ್ಲಿ ಇರುತ್ತಾರೆ. ಆದರೆ, ಪ್ರತಿ ವರ್ಷ ತಮ್ಮ ಜಾನುವಾರುಗಳೊಂದಿಗೆ ಮನೆಯಲ್ಲಿರುವ ಅಗತ್ಯ ದಾಖಲೆ , ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಗಂಟು‌‌ಮೂಟೆ ಕಟ್ಟಿಕೊಂಡು ಕಾಳಜಿ ಕೇಂದ್ರಕ್ಕೆ ತೆರಳುತ್ತಾರೆ. ಅದರಂತೆ ಈಗ ಪ್ರವಾಹ‌ದ ಹಿನ್ನೆಲೆಯಲ್ಲಿ ಶಿವನೂರ ಗ್ರಾಮಸ್ಥರು ಊರು ತೊರೆದು ಕಾಳಜಿ‌ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ.

ಶಿವನೂರ ಗ್ರಾಮದಲ್ಲಿ 110 ಮನೆಗಳಿವೆ, 500 ಜನಸಂಖ್ಯೆ ಇದೆ. ಈಗಾಗಲೇ 192 ಜನರನ್ನು ಬೆಂಡಬೆಂಬಳಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನೂ 100 ಜನರು ಊರಲ್ಲಿಯೇ ಇದ್ದು ನೀರಿನ ಹರಿವಿನ ಮಟ್ಟ ನೋಡಿಕೊಂಡು ಹರಿವು ಹೆಚ್ಚಳವಾದರೆ ಊರಲ್ಲಿ ಇದ್ದವರು ಊರು ತೊರೆಯುತ್ತಾರೆ.ಈಗಾಗಲೇ ಗ್ರಾಮ ಮುಳುಗಡೆ ಭೀತಿ ಹಿನ್ನಲೆ ಜಾನುವಾರುಗಳನ್ನು ಗ್ರಾಮದ ಎತ್ತರ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ.

ಕಳೆದ ವರ್ಷ ಶಿವನೂರ ಗ್ರಾಮಕ್ಕೆ ನೀರು ನುಗ್ಗಿತ್ತು. ಅಂದು ಅಧಿಕಾರಿಗಳು ಭೇಟಿ ನೀಡಿ ಗ್ರಾಮ ಸ್ಥಳಾಂತರ ಮಾಡುತ್ತೇವೆಂದು ಮಾತು ಕೊಟ್ಟಿದ್ದರು. ಈಗ ನುಡಿದಂತೆ ನಡೆದು ಕೊಳ್ಳದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವನೂರ ಗ್ರಾಮಸ್ಥರನ್ನು ಶಿವನೇ ಕಾಪಾಡಿಕೊಂಡು ಬಂದಿದ್ದಾನೆ. ಗ್ರಾಮಸ್ಥರು ಶಿವನ ಮೇಲೆ ಭಾರ ಹಾಕಿ ಊರಲ್ಲಿ ಇದ್ದಾರೆ‌. ಆದರೆ, ಯಾವುದೇ  ಅನಾಹುತ ಘಟನೆ ನಡೆದಿಲ್ಲ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದ ಗೋದಾಮಿನಿಂದ 2.5 ಕೆಜಿ ಚಿನ್ನ ನಾಪತ್ತೆ; ಐವರು ಕಸ್ಟಮ್ಸ್​ ಅಧಿಕಾರಿಗಳ ವಿರುದ್ಧ ಕೇಸ್ ದಾಖಲು

ಶಿವನೂರ ಗ್ರಾಮದಿಂದ ತೆರಳಿ  ಬೆಂಡಬೆಂಬಳಿ ಗ್ರಾಮದ ಕಾಳಜಿ‌ ಕೇಂದ್ರದಲ್ಲಿ ನಿರಾಶ್ರಿತರು ವಾಸವಾಗಿದ್ದಾರೆ. ನಮ್ಮ ಗ್ರಾಮ ಸ್ಥಳಾಂತರ ಮಾಡದಿದ್ದರೆ ಬರುವ ಚುನಾವಣೆಯಲ್ಲಿ ಮತ ಹಾಕುವುದಿಲ್ಲ. ಸರ್ಕಾರ ನಮ್ಮನ್ನು ಸಾಕುವ ಮನಸ್ಸು ಮಾಡಿ ಸಾಕಲಿ. ಶಿವನೂರ ಗ್ರಾಮ ಸ್ಥಳಾಂತರ ಮಾಡುವ ಪಟ್ಟಿಯಲ್ಲಿ ನಮ್ಮ ಹೆಸರು ಇರದಿದ್ದರೆ ನಾವು ಹೊಳೆಗೆ ಬಿದ್ದು ಸಾಯುತ್ತೇವೆ ಎಂದು ಮಹಿಳೆ ನೋವು ತೊಡಿಕೊಂಡಿದ್ದಾರೆ.

ಶಿವನೂರ ಗ್ರಾಮ ಮುಳುಗಡೆ ಭೀತಿ ಹಿನ್ನಲೆಯಲ್ಲಿ ಗ್ರಾಮದಲ್ಲಿರುವ ಬಾಣಂತಿ ಹಾಗೂ ಗರ್ಭಿಣಿಯರು ದೂರದ ಸಂಬಂಧಿಕರ ಊರಲ್ಲಿ ವಾಸವಾಗಿದ್ದಾರೆ. ಆದರೆ, ಅವರ ಕುಟುಂಬಸ್ಥರು ಕಾಳಜಿ ಕೇಂದ್ರದಲ್ಲಿ ವಾಸವಾಗಿದ್ದಾರೆ. ಕಳೆದ ವರ್ಷ ಡಿಸಿ ಸಾಹೇಬ್ರು ಸ್ಥಳಾಂತರ ಮಾಡುತ್ತೆವೆಂದು ಭರವಸೆ ಕೊಟ್ಟಿದ್ದರು. ಆದರೆ, ಅವರು ಯಾವುದೇ ಸ್ಥಳಾಂತರ ಮಾಡಿಲ್ಲವೆಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಪ್ರಭು ಚವ್ಹಾಣ ಅವರೇ ದಯವಿಟ್ಟು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ಸ್ಥಳಾಂತರ ಮಾಡಲು ಕ್ರಮ ಕೈಗೊಂಡು ಶಾಶ್ವತ ಸಮಸ್ಯೆಗೆ ಮುಕ್ತಿ ಕಲ್ಪಿಸಬೇಕೆಂದು ಗ್ರಾಮಸ್ಥ ನಿಂಗಯ್ಯ ನೋವು ತೊಡಿಕೊಂಡಿದ್ದಾರೆ.
ಶಿವನೂರ ಗ್ರಾಮಸ್ಥರು ಈಗ ಭೀಮಾನದಿ  ಜಲಕಂಟಕ ಎದುರಿಸುತ್ತಿದ್ದಾರೆ. ಖುದ್ದು ಯಾದಗಿರಿ ‌ಜಿಲ್ಲಾಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಇಂದು ಬೆಳಿಗ್ಗೆ ಯಾದಗಿರಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಪ್ರವಾಹ ಹಾಗೂ ಮಳೆಯಿಂದ ಬೆಳೆ ಹಾನಿ ಬಹಳ ದಿನಗಳ ನಂತರ ಸಚಿವ ಚವ್ಹಾಣ ಅವರು ನಿರಾಶ್ರಿತರ ಕಣ್ಣೀರು ‌ಒರೆಸಲು ಬರುತ್ತಿದ್ದಾರೆ. ಆದರೆ, ಸಚಿವ ಪ್ರಭು ಚವ್ಹಾಣ ಅವರು ಶಿವನೂರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ಸ್ಥಳಾಂತರ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿ ಶಾಶ್ವತವಾಗಿ ಭೀಮಾನದಿ ಜಲಗಂಡಾಂತರದಿಂದ ಜನರ ಜೀವ ಉಳಿಸುವ ಕಾರ್ಯ ಮಾಡಬೇಕಿದೆ.
Published by: Sushma Chakre
First published: October 18, 2020, 9:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading