HOME » NEWS » State » FLOOD SCARE IN YADAGIRI BHIMA RIVER NORTH KARNATAKA FLOODS GNR

ಭೀಮಾ ನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ; ವಿರಾಂಜನೇಯ ಮತ್ತು ಕಂಗಳೇಶ್ವರ ದೇಗುಲ ಸಂಪೂರ್ಣ ಜಲಾವೃತ

ಯಾದಗಿರಿ ನಗರದ ಹೊರಭಾಗದ ಭೀಮಾ ನದಿ ತೀರದಲ್ಲಿರುವ ವಿರಾಂಜನೇಯ ಹಾಗೂ ಕಂಗಳೇಶ್ವರ ದೇಗುಲಗಳು ಜಲಾವೃತ ಆಗಿವೆ. ಕಳೆದ ವರ್ಷ ಭೀಮಾ ನದಿಯಲ್ಲಿ ಮೂರು ಲಕ್ಷ ಕ್ಯೂಸೆಕ್ ನೀರು ಹರಿದಿತ್ತು. ಈಗ ಮಹಾರಾಷ್ಟ್ರದ ಉಜನಿ, ವೀರ್ ಜಲಾಶಯಗಳಿಂದ ಕೂಡ ಭೀಮಾನದಿಗೆ 25 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.

news18-kannada
Updated:September 17, 2020, 6:34 PM IST
ಭೀಮಾ ನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ; ವಿರಾಂಜನೇಯ ಮತ್ತು ಕಂಗಳೇಶ್ವರ ದೇಗುಲ ಸಂಪೂರ್ಣ ಜಲಾವೃತ
ಭೀಮಾ ನದಿಯಲ್ಲಿ ಮುಳುಗಿರುವ ದೇವಸ್ಥಾನಗಳು
  • Share this:
ಯಾದಗಿರಿ(ಸೆ.17): ಕಳೆದ ತಿಂಗಳು ತಾನೇ ಕೃಷ್ಣಾ ಹಾಗೂ ಭೀಮಾ ನದಿಯ ಪ್ರವಾಹಕ್ಕೆ ನದಿ ತೀರದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಕೂಡ ಹಾನಿಯಾಗಿತ್ತು. ಈಗ ಯಾದಗಿರಿ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಭೀಮಾ ನದಿ ಅಪಾಯಮಟ್ಟದ ಮೀರಿ ಉಕ್ಕಿ ಹರಿಯುತ್ತಿದೆ. ಭೀಮಾ ನದಿ ತೀರದಲ್ಲಿರುವ ದೇಗುಲಗಳು ಸಂಪೂರ್ಣ ಮುಳುಗಡೆಯಾಗಿವೆ. ನದಿ ತೀರದ ವಿರಾಂಜನೇಯ ಹಾಗೂ ಕಂಗಳೇಶ್ವರ ದೇಗುಲಗಳು ಸಂಪೂರ್ಣವಾಗಿ ಮುಳುಗಡೆಯಾಗಿದೆ. ಭೀಮಾ ನದಿಯಲ್ಲಿ 50 ಸಾವಿರ ಕ್ಯೂಸೆಕ್ ನೀರು ಹರಿ ಬಿಡಲಾಗುತ್ತಿದೆ. ಈ ವರ್ಷ ಮೊದಲನೇ ಬಾರಿ 50 ಸಾವಿರ ಕ್ಯೂಸೆಕ್ ನೀರು ನದಿ ಹರಿದು ಬರುತ್ತಿವೆ. ಯಾದಗಿರಿ ನಗರದ ಹೊರಭಾಗದ ಭೀಮಾ ನದಿ ತೀರದಲ್ಲಿರುವ ವಿರಾಂಜನೇಯ ಹಾಗೂ ಕಂಗಳೇಶ್ವರ ದೇಗುಲಗಳು ಜಲಾವೃತ ಆಗಿವೆ. ಕಳೆದ ವರ್ಷ ಭೀಮಾ ನದಿಯಲ್ಲಿ ಮೂರು ಲಕ್ಷ ಕ್ಯೂಸೆಕ್ ನೀರು ಹರಿದಿತ್ತು. ಈಗ ಮಹಾರಾಷ್ಟ್ರದ ಉಜನಿ, ವೀರ್ ಜಲಾಶಯಗಳಿಂದ ಕೂಡ ಭೀಮಾನದಿಗೆ 25 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ.

ಕಾಗಿಣಾ ನದಿ ಹಾಗೂ ಹಳ್ಳಕೊಳ್ಳದ ನೀರು ಸೇರಿ 25 ಸಾವಿರ ‌ಕ್ಯೂಸೆಕ್ ನೀರು ನದಿಗೆ ಬರುತ್ತಿವೆ‌. ಒಟ್ಟು 50 ಸಾವಿರ ಕ್ಯೂಸೆಕ್ ನೀರು ನದಿಯಲ್ಲಿ ಹರಿದು ಬರುತ್ತಿವೆ. ನದಿಯ ಅಬ್ಬರಕ್ಕೆ ಈಗ ನದಿ ತೀರದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಸೆ.6 ರಂದು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸಣಗಿ ಗ್ರಾಮದ ಸಮೀಪದ ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನ ಮುಂಭಾಗದಲ್ಲಿ ನಾಲ್ವರು ಬಾಲಕರು ಭೀಮಾ ನದಿ ಪಾಲಾಗಿದ್ದರು. ಈ ಘಟನೆ ನಂತರ ಖುದ್ದು‌‌ ಜಿಲ್ಲಾಧಿಕಾರಿ ಡಾ. ರಾಗಾಪ್ರಿಯಾ ಅವರು ಕೂಡ ಭೇಟಿ ನೀಡಿ‌ ಪರಿಶೀಲನೆ ಮಾಡಿ ನದಿ ತೀರಕ್ಕೆ ‌ಜನರು ತೆರಳದಂತೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಅವರ ಸೂಚನೆ ನಂತರ ಬ್ರಿಡ್ಜ್ ಕಂ ಬ್ಯಾರೇಜ್ ನಲ್ಲಿ ನದಿಯೊಳಗೆ ತೆರಳದಂತೆ ಮುಳ್ಳು ಕಂಟಿ ಹಾಕಿ ಜನರ ಪ್ರವೇಶಕ್ಕೆ ನಿಷೇಧ ಮಾಡಲಾಗಿತ್ತು.

ಇದನ್ನೂ ಓದಿ: ರಾಮನಗರದಲ್ಲಿ ಭಾರೀ ಟ್ರಾಫಿಕ್​​ ಸಮಸ್ಯೆ - ಅಧಿಕಾರಿಗಳು ಮತ್ತು ಪೊಲೀಸರಿಗೆ ಜನರ ಹಿಡಿ ಶಾಪ

ಆದರೆ, ಇದೆ ಬ್ಯಾರೇಜ್ ಮುಂಭಾಗದ ಸ್ವಲ್ಪ ದೂರದಲ್ಲಿರುವ ಭೀಮಾನದಿ ಸೇತುವೆ ಭಾಗದ ಸಮೀಪದ ಕಂಗಳೇಶ್ವರ ಮಂದಿರ ಸಮೀಪ ಸಾಕಷ್ಟು ಜನರು ಆಗಮಿಸಿ ನದಿಯ ಒಳಗೆ ಇಳಿದು ಸ್ನಾನ ಮಾಡುವ ಜೊತೆ ನದಿ ಪಾತ್ರದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಹುಚ್ಚು ಸಾಹಸ ಮಾಡುತ್ತಿದ್ದಾರೆ. ಕೆಲ ಮದ್ಯವ್ಯಸನಿಗಳು ಮದ್ಯ ಸೇವಿಸಿ ನದಿ ಪಾತ್ರಕ್ಕೆ ಆಗಮಿಸಿ ಸ್ನಾನ ಮಾಡುತ್ತಿದ್ದಾರೆ .
Published by: Ganesh Nachikethu
First published: September 17, 2020, 6:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories