ತುಂಗಭದ್ರೆಯಲ್ಲಿ ಪ್ರವಾಹ; ವಿಶ್ವ ಪ್ರಸಿದ್ಧ ಹಂಪಿ-ವಿರುಪಾಪೂರಗಡ್ಡಿಯಲ್ಲಿ ಸಿಲುಕಿದ್ದ 400ಕ್ಕೂ ಹೆಚ್ಚು ಜನರ ರಕ್ಷಣೆ

ಸೋಮವಾರ ವಿರೂಪಾಪೂರಗಡ್ಡಿಯಲ್ಲಿ ಸಿಲುಕಿದ್ದ ಸಂತ್ರಸ್ತರ ಸಹಾಯಕ್ಕೆ ದಾವಿಸಿದ್ದ ಎನ್​ಡಿಆರ್​ಎಫ್​ ಬೋಟ್ 5 ಜನ ಕಮಾಂಡರ್​ಗಳ ಜೊತೆಗೆ ಪ್ರವಾಹದ ರಭಸಕ್ಕೆ ನೀರಿನಲ್ಲಿ ಮಗುಚಿತ್ತು. ಅದೃಷ್ಟವಶಾತ್ ಅವರು ಸಹ ಅಪಾಯದಿಂದ ಬಚಾವಾಗಿದ್ದಾರೆ.

MAshok Kumar | news18-kannada
Updated:August 13, 2019, 4:06 PM IST
ತುಂಗಭದ್ರೆಯಲ್ಲಿ ಪ್ರವಾಹ; ವಿಶ್ವ ಪ್ರಸಿದ್ಧ ಹಂಪಿ-ವಿರುಪಾಪೂರಗಡ್ಡಿಯಲ್ಲಿ ಸಿಲುಕಿದ್ದ 400ಕ್ಕೂ ಹೆಚ್ಚು ಜನರ ರಕ್ಷಣೆ
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಹೆಲಿಕಾಪ್ಟರ್​.
  • Share this:
ಕೊಪ್ಪಳ (ಆಗಸ್ಟ್.13); ತುಂಗಭದ್ರಾ ನದಿಯಲ್ಲಿ ಸೋಮವಾರ ಕಾಣಿಸಿಕೊಂಡಿದ್ದ ಭಾರೀ ಪ್ರವಾಹದ ಕಾರಣದಿಂದ ವಿಶ್ವವಿಖ್ಯಾತ ಹಂಪಿಯ ವಿರುಪಾಪೂರಗಡ್ಡಿಯ ನಡು ಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ವಿದೇಶಿಗರೂ ಸೇರಿದಂತೆ 400ಕ್ಕೂ ಹೆಚ್ಚು ಸಂತ್ರಸ್ತರನ್ನು ಎರಡು ದಿನಗಳ ಸತತ ಕಾರ್ಯಾಚರಣೆಯ ಮೂಲಕ ಇಂದುಯಶಸ್ವಿಯಾಗಿ ರಕ್ಷಿಸಲಾಗಿದೆ.

ಮಲೆನಾಡಿನಲ್ಲಿ ಮುಂದುವರೆದಿದ್ದ ಭಾರೀ ಮಳೆ ಹಾಗೂ ತುಂಗಭದ್ರಾ ಜಲಾಶಯದಿಂದ ತೆರೆದು ಬಿಡಲಾಗದ್ದ 2.50 ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದ ನೀರಿನಿಂದ ತುಂಗಭದ್ರಾ ನದಿಯಲ್ಲಿ ಭಾನುವಾರ ಪ್ರವಾಹದ ಪರಿಸ್ಥಿತಿ ಉಂಟಾಗಿತ್ತು. ವಿಶ್ವ ಪ್ರಸಿದ್ಧ ಹಂಪಿ ಸಂಪೂರ್ಣ ಜಲಾವೃತವಾಗಿದ್ದರೆ, ವಿದೇಶಿಗರ ನೆಚ್ಚಿನ ತಾಣವಾದ ವಿರುಪಾಪೂರಗಡ್ಡಿಯೂ ನಡುಗಡ್ಡೆಯಾಗಿತ್ತು. ಇಲ್ಲಿ ಸಿಕ್ಕಿಕೊಂಡಿದ್ದ 400ಕ್ಕೂ ಹೆಚ್ಚು ಜನರನ್ನು ರಕ್ಷಿಸುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿತ್ತು.

ಆದರೂ, ಎರಡು ದಿನ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರೇಣುಕಾ ಸುಕುಮಾರ್ ರಕ್ಷಣಾ ಕಾರ್ಯಾಚರಣೆಯ ಮೇಲುಸ್ತುವಾರಿ ನಡೆಸಿದ್ದರು. ಪರಿಣಾಮ ಎರಡು ದಿನ ಹೆಲಿಕಾಪ್ಟರ್ ಮೂಲಕ ಸತತ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಈ ಮೂಲಕ ಸೋಮವಾರ 250ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದರೆ, ಇಂದು 190ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಈ ಮೂಲಕ ವಿರುಪಾಪೂರಗಟ್ಟಿಯಲ್ಲಿದ್ದ ಎಲ್ಲರನ್ನೂ ರಕ್ಷಿಸಿದಂತಾಗಿದೆ.

ಸೋಮವಾರ ವಿರೂಪಾಪೂರಗಡ್ಡಿಯಲ್ಲಿ ಸಿಲುಕಿದ್ದ ಸಂತ್ರಸ್ತರ ಸಹಾಯಕ್ಕೆ ದಾವಿಸಿದ್ದ ಎನ್​ಡಿಆರ್​ಎಫ್​ ಬೋಟ್ 5 ಜನ ಕಮಾಂಡರ್​ಗಳ ಜೊತೆಗೆ ಪ್ರವಾಹದ ರಭಸಕ್ಕೆ ನೀರಿನಲ್ಲಿ ಮಗುಚಿತ್ತು. ಅದೃಷ್ಟವಶಾತ್ ಅವರು ಸಹ ಅಪಾಯದಿಂದ ಬಚಾವಾಗಿದ್ದಾರೆ.

(ವರದಿ-ಬಸವರಾಜ ಕರುಗಲ್)

ಇದನ್ನೂ ಓದಿ : ಸಂತ್ರಸ್ತರನ್ನು ರಕ್ಷಿಸಲು ಮುಂದಾಗಿ ಅಪಾಯಕ್ಕೀಡಾದ ಎನ್​ಡಿಆರ್​ಎಫ್​ ತಂಡ; 12 ಕಿಮೀ ಈಜಿ ದಡ ಸೇರಿದ ಕಮಾಂಡರ್ ಚೇತನ್!

First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...