• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಮರ್ಪಕವಾಗಿ ಬಿಡುಗಡೆಯಾಗದ ಬೆಳೆ ಹಾನಿ ಪರಿಹಾರದ ಹಣ; ಸಂಕಷ್ಟದಲ್ಲಿ ಯಾದಗಿರಿ ಜಿಲ್ಲಾ ರೈತರು

ಸಮರ್ಪಕವಾಗಿ ಬಿಡುಗಡೆಯಾಗದ ಬೆಳೆ ಹಾನಿ ಪರಿಹಾರದ ಹಣ; ಸಂಕಷ್ಟದಲ್ಲಿ ಯಾದಗಿರಿ ಜಿಲ್ಲಾ ರೈತರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಕೇಂದ್ರ ಸರಕಾರ 50 ಕೋಟಿ ರೂ ಪರಿಹಾರದ ಹಣ ಬಿಡುಗಡೆ ಮಾಡದೆ, ಕೇವಲ 24 ಕೋಟಿ ರೂ ಪರಿಹಾರದ ಹಣ ಬಿಡುಗಡೆ ಮಾಡಿದೆ.

  • Share this:

ಯಾದಗಿರಿ (ಜ. 29) : ಕಳೆದ ಮೂರು ತಿಂಗಳ ಹಿಂದೆ ಕೃಷ್ಣಾ, ಭೀಮಾ ನದಿಗಳಲ್ಲಿ ಉಂಟಾದ ಪ್ರವಾಹ ಹಾಗೂ ಭಾರಿ ಮಳೆಯಿಂದ ಜಿಲ್ಲೆಯಲ್ಲಿ  ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಬೆಳೆಹಾನಿಗೆ ಒಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವುದಾಗಿ ಸರ್ಕಾರ ಭರವಸೆ ಕೂಡ ನೀಡಿತ್ತು.  ಆದರೆ,  ರೈತರಿಗೆ ಇನ್ನೂ ಪೂರ್ಣ ಪ್ರಮಾಣದ  ಪರಿಹಾರ ನೀಡುವ ಕೆಲಸ ಸರ್ಕಾರದಿಂದ ಆಗಿಲ್ಲ. ಜಿಲ್ಲೆಯ ರೈತರು ಇನ್ನೂ ಸರಕಾರದ ಪರಿಹಾರದ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ಜಿಲ್ಲೆಯ ಶಹಾಪುರ,ಸುರಪುರ, ಹುಣಸಗಿ, ವಡಗೇರಾ, ಗುರುಮಠಕಲ್ ಸೇರಿದಂತೆ ಮೊದಲಾದ ಕಡೆ  ರೈತರು ಸರಕಾರದ ಪರಿಹಾರದ ಹಣ ಯಾವಾಗ ಜಮಾ ಆಗುತ್ತದೆ ಎಂದು ಕಾಯುತ್ತಾ ಕುಳಿತಿದ್ದಾರೆ. ಕೃಷ್ಣಾ, ಭೀಮಾ ನದಿ ಪ್ರವಾಹ ಹಾಗೂ ಮಳೆಯಿಂದ ಜಿಲ್ಲೆಯಲ್ಲಿ 55 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಸುಮಾರು 50  ಕೋಟಿ ರೂ ಬೆಲೆ ಬಾಳುವಷ್ಟು ಬೆಳೆ ಹಾನಿಯಾಗಿದೆ ಎಂದು ಈಗಾಗಲೇ ಸರಕಾರಕ್ಕೆ ವರದಿ ಕಳುಹಿಸಲಾಗಿದೆ. ಇದರಲ್ಲಿ ಯಾದಗಿರಿ ಜಿಲ್ಲೆಗೆ ಕೇವಲ 24 ಕೋಟಿ ಬಿಡುಗಡೆಯಾಗಿದೆ. 


ಆದರೆ, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಕೇಂದ್ರ ಸರಕಾರ 50 ಕೋಟಿ ರೂ ಪರಿಹಾರದ ಹಣ ಬಿಡುಗಡೆ ಮಾಡದೆ, ಕೇವಲ 24 ಕೋಟಿ ರೂ ಪರಿಹಾರದ ಹಣ ಬಿಡುಗಡೆ ಮಾಡಿದೆ. ಇದರಿಂದ ಪೂರ್ಣ ಪ್ರಮಾಣದ ಬೆಳೆ ಹಾನಿ ಪಡೆಯಲು ಸಾಧ್ಯವಾಗದ ಹಿನ್ನಲೆ ರೈತರ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಉಳಿದ 26 ಕೋಟಿ ಹಣವನ್ನು ಬಿಡುಗಡೆ ಮಾಡುವಂತೆ ಕೂಡ ಆಗ್ರಹಿಸಿದ್ದಾರೆ.


ಯಾದಗಿರಿ, ಸುರಪುರ, ಶಹಾಪುರ,ಗುರುಮಠಕಲ್, ವಡಗೇರಾ, ಹುಣಸಗಿ ಸೇರಿದಂತೆ ಮೊದಲಾದ ಕಡೆ ರೈತರು ಸರಕಾರದ ಹೆಚ್ಚಿನ ಪರಿಹಾರದ ಹಣ ಇವತ್ತು ಬರುತ್ತದೆ. ನಾಳೆ ಬರುತ್ತದೆಂದು ಕಚೇರಿಗಳಿಗೆ ರೈತರು ಅಲೆದಾಡುತ್ತಿದ್ದಾರೆ. ಆದರೆ, ಕೇಂದ್ರ ಸರಕಾರ ಪೂರ್ಣ ಪ್ರಮಾಣದ ಹಣ ಬಿಡುಗಡೆ ಮಾಡದಕ್ಕೆ  ಜಿಲ್ಲೆಯ ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನು ಓದಿ: ಮೈಸೂರಿನಲ್ಲಿ ಇನ್ನೂ ಮುಗಿಯದ ಸಾಲಮನ್ನಾ ಗೊಂದಲ; ಫಲಾನುಭವಿಗಳ ಖಾತೆಗೆ ಬಾರದ ಹಣ


ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ , ನಮ್ಮ ಜಿಲ್ಲೆಯಲ್ಲಿ 55 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆಹಾನಿಯಾಗಿದೆ. ಒಟ್ಟು 50 ಕೋಟಿ ರೂ ಬೆಲೆ ಬಾಳುವಷ್ಟು ಬೆಳೆಹಾನಿಯಾಗಿದೆ. ಈಗ ಸರಕಾರ 24 ರೂ ಕೋಟಿ ರೂಪಾಯಿ ಹಣ ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. ಉಳಿದ 26ಕೋಟಿ ರೂ ಹಣ ನೆರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದರು.


ಮಳೆಯಿಂದಾಗಿ ಈಗಾಗಲೇ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು,  ಕೂಡಲೇ ಸರಕಾರ ಉಳಿದ ಬೆಳೆ ಹಾನಿ ಪರಿಹಾರದ ನೀಡಬೇಕು ಈ ಮೂಲಕ  ಅನ್ನದಾತರಿಗೆ ಅನುಕೂಲ ಮಾಡಬೇ. ಕು ಒಂದು ವೇಳೆ ದಿವ್ಯ ನಿಷ್ಕಾಳಜಿ ಮಾಡಿದರೆ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದು ಇಲ್ಲಿನ ರೈತರು ಎಚ್ಚರಿಕೆ ನೀಡಿದ್ದಾರೆ.

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು