HOME » NEWS » State » FLOOD CONTINUE EVEN AFTER RAIN STOP IN KALABURAGI DISTRICT PRIEST WENT ON ROOF WITH CATTLES TO SURVIVE HK

ಕಲಬುರ್ಗಿಯಲ್ಲಿ ಮಳೆ ಇಳಿಮುಖವಾದರೂ ನಿಲ್ಲದ ಪ್ರವಾಹ ; ಗೋವುಗಳೊಂದಿಗೆ ಎತ್ತರದ ಕಟ್ಟಡವೇರಿ ಕುಳಿತ ಅರ್ಚಕ

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರೀತಿರುವ ಹಿನ್ನೆಲೆಯಲ್ಲಿ ಉಜನಿ ಮತ್ತು ವೀರ್ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದಿರಿಂದಾಗಿ ಕಲಬುರ್ಗಿ ಜಿಲ್ಲೆಯ  ಅಫಜಲಪುರದ ಸೊನ್ನ ಬ್ಯಾರೇಜ್ ಬರ್ತಿಯಾಗಿದೆ

news18-kannada
Updated:October 15, 2020, 3:29 PM IST
ಕಲಬುರ್ಗಿಯಲ್ಲಿ ಮಳೆ ಇಳಿಮುಖವಾದರೂ ನಿಲ್ಲದ ಪ್ರವಾಹ ; ಗೋವುಗಳೊಂದಿಗೆ ಎತ್ತರದ ಕಟ್ಟಡವೇರಿ ಕುಳಿತ ಅರ್ಚಕ
ನೆರೆ ಹಾವಳಿ
  • Share this:
ಕಲಬುರ್ಗಿ(ಅಕ್ಟೋಬರ್​. 15): ಕಲಬುರ್ಗಿ ಜಿಲ್ಲೆಯಲ್ಲಿ ಮಳೆ ಅಬ್ಬರ ಒಂದಷ್ಟು ಕಡಿಮೆಯಾದರೂ ಪ್ರವಾಹ ಕಡಿಮೆಯಾಗಿಲ್ಲ. ಜಿಲ್ಲೆಯ ಎಲ್ಲ ನದಿಗಳು ಉಕ್ಕಿ ಹರಿಯುತ್ತಿದ್ದು ಹತ್ತಾರು ಗ್ರಾಮಗಳು ಪ್ರವಾಹಕ್ಕೆ ನಲುಗಿವೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಭೀಮಾ ನದಿಯಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ. ಹತ್ತಾರು ಗ್ರಾಮಗಳಿಗೆ ನೀರು ನುಗ್ಗಿದ್ದು, ಕೆಲ ಗ್ರಾಮಸ್ಥರು ತಮ್ಮ ಊರನ್ನೇ ತೊರೆಯುತ್ತಿದ್ದಾರೆ. ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದ ಉತ್ತರಾಧಿ ಮಠ ಸಂಪೂರ್ಣ ಮುಳುಗಡೆಯಾಗಿದೆ. ಕಾಗಿಣಾ ನದಿ ಉಕ್ಕಿ ಹರಿಯುತ್ತಿದ್ದು, ನದಿಗೆ ಹೊಂದಿಕೊಂಡೇ ಇರುವ ಉತ್ತರಾದಿ ಮಠಕ್ಕೆ ಜಲದಿಗ್ಬಂಧನವಾಗಿದೆ. ಇದರಿಂದಾಗಿ ಆತಂಕದಲ್ಲೆ ಕಾಲ ಕಳೆಯುತ್ತಿರುವ ಅರ್ಚಕರು ಮತ್ತು ಅವರ ಕುಟುಂಬದ ಸದಸ್ಯರು. ಮಠದಲ್ಲಿನ ರಾಯರ ಬೃಂದಾವನ, ಇಂಧ್ರಭವನ ಸಹ ಮುಳುಗಡೆಯಾಗಿದೆ. ಮಠದ ಎತ್ತರದ ಸ್ಥಳದಲ್ಲಿ ಆಶ್ರಯ ಪಡೆದಿರುವ ಅರ್ಚಕರು ಮತ್ತು ಕುಟುಂಬ. ಇನ್ನೂ ಮಠದಲ್ಲಿಯೇ ಇರುವ ನಾಲ್ವರು ಅರ್ಚಕರು ಸೇರಿ 16 ಜನ. ನಿನ್ನೆ ಸಂಜೆಯಿಂದ ಹೆಚ್ಚುತ್ತಲೇ ಇರುವ ನೀರಿನ ಹರಿವು. ಆತಂಕದಲ್ಲಿರುವ ಅರ್ಚಕರು ಮತ್ತು ಕುಟುಂಬದವರು. ಅರ್ಚಕರು ಮತ್ತು ಕುಟುಂಬದವರ ರಕ್ಷಣೆಗೆ ಉತ್ತರಾಧಿ ಮಠದ ಭಕ್ತರ ಆಗ್ರಹಿಸಿದ್ದಾರೆ. 

ಮತ್ತೊಂದೆಡೆ ಅರ್ಚಕರ ಜೊತೆಗೆ ಗೋವುಗಳು ಪ್ರವಾಹದಲ್ಲಿ ಸಿಲುಕಿಕೊಂಡಿವೆ. ಮಠದ ಗೋ ಶಾಲೆಯ ಹಸುಗಳನ್ನ ಮಠದ ಮತ್ತೊಂದು ಎತ್ತರದ ಪ್ರದೇಶದಲ್ಲಿ ಕರೆದುಕೊಂಡು ಹೋಗಿ ಆಶ್ರಯಯವನ್ನು ಅರ್ಚಕರು ಪಡೆದಿದ್ದಾರೆ.ಗುಂಡಗುರ್ತಿ ಸೇತುವೆಗೆ ಹಾನಿ :

ಭಾರಿ ಮಳೆಯಿಂದಾಗಿ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಸೇತುವೆ ಡ್ಯಾಮೇಜ್ ಆಗಿದೆ. ನೀರಿನ ರಭಸಕ್ಕೆಸೇತುವೆಯ ಒಂದು ಭಾಗ ಕೊಚ್ಚಿ ಹೋಗಿದೆ. ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ತೆಲಂಗಾಣ – ಕರ್ನಾಟಕ – ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಾನಿಗೀಡಾಗಿದೆ. ಇದರಿಂದಾಗಿ ಕಲಬುರಗಿಯಿಂದ ಮಳಖೇಡ- ಸೇಡಂ - ಹೈದರಾಬಾದ್​ಗೆ ಹೋಗುವ ರಸ್ತೆ ಸಂಚಾರ ಬಂದ್ ಆಗಿದೆ.

ಭೀಮಾ ನದಿಯಲ್ಲಿ ಪ್ರವಾಹ :

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರೀತಿರುವ ಹಿನ್ನೆಲೆಯಲ್ಲಿ ಉಜನಿ ಮತ್ತು ವೀರ್ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದಿರಿಂದಾಗಿ ಕಲಬುರ್ಗಿ ಜಿಲ್ಲೆಯ ಅಫಜಲಪುರದ ಸೊನ್ನ ಬ್ಯಾರೇಜ್ ಬರ್ತಿಯಾಗಿದೆ. ಸೊನ್ನ ಬ್ಯಾರೇಜ್ ನಿಂದ 1.23 ಲಕ್ಷ ಕ್ಯೂಸೆಕ್ಸ ನೀರು ಭೀಮಾ ನದಿಗೆ ಬಿಡುಗಡೆಯಾಗಿದೆ. ಇದರಿಂದಾಗಿ ದೇವಲಗಾಣಗಾಪುರ ಬಳಿಯ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದೆ.

ಜೊತೆಗೆ ಘತ್ತರಗಾ ಹಾಗೂ ಚಿನಮಳ್ಳಿ ಬಳಿಯ ಸೇತುವೆಗಳೂ ಮುಳುಗಡೆಯಾಗಿವೆ. ಬ್ರಿಡ್ಜ್ ಮೇಲೆ ಐದು ಅಡಿ ಎತ್ತರ ಹರಿಯುತ್ತಿರುವ ನೀರು. ದೇವಲಗಾಣಗಾಪುರ- ಜೇರಟಿಗಿ, ಘತ್ತರಗಾ - ಜೇವರ್ಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಇದನ್ನೂ ಓದಿ : ವಿಜಯಪುರದಲ್ಲಿ ಅಗ್ನಿಶಾಮಕ ಸಿಬ್ಬಂದಿ ಪ್ರಯತ್ನದಿಂದ ಪಾರಾದ ರೈತ ಕುಟುಂಬ ಮತ್ತು ಜಾನುವಾರುಗಳು

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆ ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ. ನದಿ ಅಕ್ಕಪಕ್ಕದ ಗ್ರಾಮಸ್ಥರು ಕಂಗಾಲಾಗುವಂತಾಗಿದೆ. ಹಲವು ಗ್ರಾಮಗಳಿಗೆ ನುಗ್ಗಿದ ನೀರು.  ಅಫಜಲಪುರ ತಾಲೂಕಿನ ಆರು ಗ್ರಾಮಗಳಿಗೆ ನೀರು ನುಗ್ಗಿದೆ. ದಿಕ್ಸಂಗಾ ಗ್ರಾಮದಲ್ಲಿ ಪ್ರವಾಹಕ್ಕೆ ಐದು ಎತ್ತುಗಳು ಕೊಚ್ಚಿ ಹೋಗಿವೆ. ಅಫಜಲಪುರ ತಾಲೂಕಿನ ನಂದರಗಿ, ಜೇವರ್ಗಿ(ಬಿ), ದಿಕ್ಸಂಗಾ, ಬಂಕಲಗಾ, ಅಳ್ಳಗಿ ಗ್ರಾಮಗಳು ಜಲಾವೃತವಾಗಿವೆ. ನೂರಾರು ಮನೆಗಳಿಗೆ ನುಗ್ಗಿದ ನೀರು. ಉಜನಿ ಮತ್ತು ವೀರ್ ಜಲಾಶಯಗಳಿಂದ ಭಾರಿ ನೀರು ಬಿಟ್ಟ ಹಿನ್ನೆಲೆ ಪ್ರವಾಹ ಉಂಟಾಗಿದೆ. ಭೀಮಾ ನದಿಯಲ್ಲಿ ಭಾರಿ ಪ್ರವಾಹಕ್ಕೆ ಬೆಚ್ಚಿ ಗ್ರಾಮವನ್ನೇ ಜನರು ತೊರೆಯುತ್ತಿದ್ದಾರೆ.

ಸೊನ್ನ ಬ್ಯಾರೇಜ್ ನಿಂದ ನೀರು ಬಿಟ್ಟ ಹಿನ್ನೆಲೆ ಗ್ರಾಮ ಮುಳಗಡೆಯಾಗಿದೆ. ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಗಂಟು ಮೂಟೆಯ ಜೊತೆ ಮಕ್ಕಳು ಮರಿಗಳ ಜೊತೆ ಗ್ರಾಮವನ್ನು ಜನರು ತೊರೆಯುತ್ತಿದ್ದಾರೆ. ಮತ್ತೊಂದೆಡೆ ಗ್ರಾಮದಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಮುಂದಾದ ಎನ್.ಡಿ.ಆರ್.ಎಫ್ ತಂಡ. ಬೋಟ್ ಮೂಲಕ ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣೆ ಮಾಡಲಾಗಿದೆ. ಅಫಜಲಪುರದ ಜೇವರ್ಗಿ(ಬಿ) ಗ್ರಾಮದಲ್ಲಿ ಘಟನೆ. ಭೀಮಾ ನದಿ ಪ್ರವಾಹದಿಂದಾಗಿ ಗ್ರಾಮ ಜಲಾವೃತ ಗೊಂಡಿದೆ.
Published by: G Hareeshkumar
First published: October 15, 2020, 3:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories