ಈ ಬಾರಿಯ ರಣಮಳೆ, ಪ್ರವಾಹ (Flood), ಮೇಘಸ್ಫೋಟಕ್ಕೆ(Cloud burst) ಕೊಡಗು ತತ್ತರಿಸಿತ್ತು. ಹಿಂದೆ ಸಂಭವಿಸಿದ ಮಹಾಪ್ರವಾಹದ ಭೀತಿ ಕೂಡ ಮತ್ತೊಮ್ಮೆ ಆವರಿಸಿತ್ತು. ಅದರಲ್ಲೂ ಆಗಸ್ಟ್ 1ರ ರಾತ್ರಿ ಉಂಟಾದ ಜಲಸ್ಫೋಟ, ಭೂಕುಸಿತ (Landslide), ಕುಂಭದ್ರೋಣ ಮಳೆ ಮತ್ತು ಮಾರಿ ಪ್ರವಾಹದಿಂದಾಗಿ ದಕ್ಷಿಣ ಕನ್ನಡ ಮತ್ತು ಕೊಡಗಿನ (Kodagu) ಗಡಿಪ್ರದೇಶಗಳು ಕಂಗೆಟ್ಟು ಹೋಗಿತ್ತು. ಅದರಲ್ಲೂ ಸುಳ್ಯ ತಾಲೂಕಿನ ಕೊಲ್ಲಮೊಗ್ರು, ಕಲ್ಮಕಾರ್, ಹರಿಹರ- ಬಾಳುಗೋಡು ಪರಿಸರದಲ್ಲಿ ಅನಾಹುತಗಳೇ ಸಂಭವಿಸಿತ್ತು. ಈಗ ಸಾಹಸಿಕ ಕಾರ್ಯಾಚರಣೆ (Operation) ಮೂಲಕ ಮತ್ತೆ ಬದುಕು ಕಟ್ಟುವ ಕಾಯಕಕ್ಕೆ ಮುನ್ನುಡಿ ಬರೆಯಲಾಗಿದೆ. ಮುರಿದು ಹೋದ ಪ್ರಮುಖ ಸೇತುವೆಗಳನ್ನು (Bridge) ಮಣ್ಣು, ಮರಳಿನ ಚೀಲಗಳ ಮೂಲಕ ಮತ್ತೆ ಬೆಸೆಯುವ ಸೇತುಬಂಧ ಮುಕ್ತಾಯಗೊಂಡಿದ್ದು, ಜನ- ವಾಹನ ಸಂಚಾರ ಆರಂಭಗೊಂಡಿದೆ.
ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಪ್ರದೇಶದಲ್ಲಿ ಮಳೆಯಿಂದ ಅವಾಂತರಗಳು ಸಂಭವಿಸಿತ್ತು. ಈಗ ಸಾಹಸಿಕ ಕಾರ್ಯಾಚರಣೆ ಮೂಲಕ ಮತ್ತೆ ಬದುಕು ಕಟ್ಟುವ ಕಾಯಕಕ್ಕೆ ಮುನ್ನುಡಿ ಬರೆಯಲಾಗಿದೆ. ಮುರಿದು ಹೋದ ಪ್ರಮುಖ ಸೇತುವೆಗಳನ್ನು ಮಣ್ಣು, ಮರಳಿನ ಚೀಲಗಳ ಮೂಲಕ ಮತ್ತೆ ಬೆಸೆಯುವ ಸೇತುಬಂಧ ಮುಕ್ತಾಯಗೊಂಡಿದ್ದು, ಜನ- ವಾಹನ ಸಂಚಾರ ಶುರುವಾಗಿದೆ.
ಪ್ರವಾಹದಿಂದ ಕೊಚ್ಚಿಹೋಗಿದ್ದ ರಸ್ತೆ
ಹರಿಹರ ಪೇಟೆಯಿಂದ ಬಾಳುಗೋಡು ಕಡೆ ಸಾಗುವ ರಸ್ತೆಯ ಆರಂಭದಲ್ಲೇ ಸೇತುವೆಗೆ ಹಾನಿಯಾಗಿತ್ತು. ಆರಂಭಿಕ ಜಾಗದಲ್ಲೇ ನೀರು ಬಡಿದು ಮಣ್ಣು ಕೊಚ್ಚಿ ಹೋಗಿತ್ತು. ಇದರಿಂದ ಸೇತುವೆ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.
ಸೇತುವೆ ಕಾರ್ಯ ಪೂರ್ಣ
ಬಾಳುಗೋಡು ಜನ ಖಾಸಗಿ ವಾಹನಗಳಲ್ಲಿ ಬಂದು ಸೇತುವೆ ಒಂದು ಬದಿಗೆ ವಾಹನ ನಿಲ್ಲಿಸಿ ನಡೆದುಕೊಂಡು ಹರಿಹರಕ್ಕೆ ಬಂದು ಬಸ್ ಹತ್ತಿ ಸುಬ್ರಹ್ಮಣ್ಯ, ಸುಳ್ಯಕ್ಕೆ ಹೋಗುತ್ತಿದ್ದರು. ಇದೀಗ ಜಿಲ್ಲಾ ಪಂಚಾಯತ್‍ರಾಜ್ ಇಲಾಖೆ ನೇತೃತ್ವದಲ್ಲಿ ನುರಿತ ಕಾರ್ಮಿಕರು ಮತ್ತು ನಾಗರಿಕರ ಸಹಕಾರದಿಂದ ಸವೆದ ಭಾಗದಲ್ಲಿ ಮರಳು ತುಂಬಿದ ಚೀಲಗಳನ್ನು ಪೇರಿಸಿ, ಮಣ್ಣು ಸುರಿದು ಭದ್ರಪಡಿಸಲಾಗಿದೆ.
ಇದನ್ನೂ ಓದಿ: ಭರ್ತಿಯಾದ ತುಂಗಭದ್ರಾ, ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ
ಮತ್ತೆ ಜನ, ವಾಹನ ಸಂಚಾರ ಆರಂಭ
ಆ.12ರಿಂದ ಬಸ್, ವಾಹನ ಓಡಾಟ ಆರಂಭಗೊಂಡಿದೆ. ಸಂತಡ್ಕ ಸೇತುವೆ, ಕಲ್ಮಕಾರ್ ಸಂತಡ್ಕ- ಕೊಪ್ಪಡ್ಕ ಸೇತುವೆ ಮುರಿದ ಕಾರಣ 250 ಮನೆಗಳು ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿದ್ದರು. ತುಂಡಾದ ಜಾಗದಲ್ಲಿ 2 ದೊಡ್ಡ ಮೋರಿಗಳನ್ನು ಅಳವಡಿಸಿ, ಅದರ 2 ಬದಿಗೆ ಮರಳು ತುಂಬಿದ ಚೀಲಗಳನ್ನು ಭದ್ರಪಡಿಸಿ ಮೇಲ್ಭಾಗಕ್ಕೆ ಮಣ್ಣು ಸುರಿದು ಗಟ್ಟಿಗೊಳಿಸಲಾಗಿದೆ.
ಇದೇ ಮಾದರಿಯನ್ನು ಬೆಂಡೋಡಿ ಸೇತುವೆಗೂ ಅಳವಡಿಸಲಾಗಿದೆ. ಎರಡೂ ಕಡೆ ಜನ, ವಾಹನ ಸಂಚಾರ ಆರಂಭಗೊಂಡಿದೆ. ಸಂತಡ್ಕ ಸೇತುವೆ ತುಂಡಾದ ಜಾಗದಲ್ಲಿ ಮಕ್ಕಳು, ಮಹಿಳೆಯರು ಏಣಿ ಮೂಲಕ ಹತ್ತಿ ಇಳಿದು ಹೋಗುತ್ತಿರುವ ಭಯಾನಕ ದೃಶ್ಯ ಕಳೆದ ವಾರ ವೈರಲ್ ಆಗಿತ್ತು.
ಕಂದಾಯ ಇಲಾಖೆಯಿಂದ ಮಳೆಹಾನಿ ಸಮೀಕ್ಷೆ
ಇಂಜಿನಿಯರಿಂಗ್ ಇಲಾಖೆಯ ತುರ್ತು ಕಾಮಗಾರಿಯಿಂದ ಜನ ನಿಟ್ಟುಸಿರು ಬಿಡುವಂತಾಗಿದೆ. ಸೇತುವೆ ಮರು ನಿರ್ಮಾಣ ಮತ್ತಿತರ ಶಾಶ್ವತ ಕಾಮಗಾರಿಗಳ ಬಗ್ಗೆ ಇನ್ನಷ್ಟೇ ಅಂದಾಜು ತಯಾರಿಸಬೇಕಿದೆ. ಮನೆ ನಾಶದ ಬಗ್ಗೆ ಕಂದಾಯ ಇಲಾಖೆಯಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಕೃಷಿ, ಮನೆ, ಸೇತುವೆ, ರಸ್ತೆ ಸೇರಿದಂತೆ ಒಟ್ಟು ನಷ್ಟದ ಲೆಕ್ಕಾಚಾರ ನಡೆಯುತ್ತಿದೆ.
ಇದನ್ನೂ ಓದಿ: ಮಳೆಯಬ್ಬರಕ್ಕೆ 3 ಮಕ್ಕಳು ಸೇರಿ 8 ಮಂದಿ ಸಾವು, 12 ಮಂದಿ ನಾಪತ್ತೆ, 2 ಜಿಲ್ಲೆಗಳ ಶಾಲೆಗಳಿಗೆ ರಜೆ!
ಬೆಳೆನಾಶದ ಬಗ್ಗೆ ಸಮೀಕ್ಷೆ
ಪ್ರವಾಹದಿಂದ ಆಗಿರುವ ತೆಂಗು, ಅಡಕೆ ತೋಟಗಳ ನಾಶದ ಬಗ್ಗೆ ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸುತ್ತಿದೆ. ಸುಳ್ಯ ತಾಲೂಕಿನಲ್ಲಿ 30 ಹೆಕ್ಟರ್ ಕೃಷಿ ಪ್ರದೇಶ ನಾಶಗೊಂಡಿದೆ. 33%ಕ್ಕಿಂತ ಹೆಚ್ಚು ಕೃಷಿ ಹಾನಿಗೊಂಡಲ್ಲಿ ಅವರಿಗೆ ಕಂದಾಯ ಇಲಾಖೆ ಪರಿಹಾರ ನೀಡುತ್ತದೆ. ಎಕರೆಗೆ 28,000 ರೂಪಾಯಿವರೆಗೆ ನೀಡಲು ಅವಕಾಶ ಇದೆ. ರೈತರು ಗ್ರಾಮ ಪಂಚಾಯ್ತಿನಲ್ಲಿ ಅರ್ಜಿ ಸಲ್ಲಿಸಬೇಕು. ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಾರೆ. ಈಗಾಗಲೇ ಇಲಾಖೆಗೆ 65 ಅರ್ಜಿಗಳು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ