ಮಂಗಳೂರು: ವಿಮಾನ ನಿಲ್ದಾಣದಲ್ಲಿ (Airport) ಯುವಕ (Young Boy) ಹಾಗೂ ಯುವತಿ (Young Girl) ಇಬ್ಬರು ನಡೆಸಿದ ಚಾಟಿಂಗ್‌ನಿಂದ (Chatting) ವಿಮಾನ ಹಾರಾಟವೇ ವಿಳಂಬವಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ (Mangaluru Airport) ಇಂಥದ್ದೊಂದು ಘಟನೆ ನಡೆದಿದೆ. ಯುವತಿಯೊಬ್ಬಳು ಮುಂಬೈಗೆ (Mumbai) ಪ್ರಯಾಣಿಸುತ್ತಿದ್ದ ತನ್ನ ಗೆಳೆಯನಿಗೆ You are a Bomber ಎಂದು ಮಾಡಿದ ಮೆಸೇಜ್‌ನಿಂದ (Message) ವಿಮಾನ ನಿಲ್ದಾಣದಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು. ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್ನ ಇಂದಿರಪುರಂ ತಾಲೂಕಿನ 23 ವರ್ಷದ ಸಿಮ್ರಾನ್ ಟಾಮ್ ಮತ್ತು ಗಾಜಿಯಾಬಾದ್ನ ಸಾಹಿಬಬಾದ್ ತಾಲೂಕಿನ ನಿವಾಸಿ, 23 ವರ್ಷದ ದಿಪಯಾನ್ ಮಾಂಜಿ ಎಂಬಿಬ್ಬರು ಮಾಡಿದ ವಾಟ್ಸ್ ಆ್ಯಪ್ ಮೆಸೇಜ್ ನಿಂದ (WhatsApp Message) ಗೊಂದಲ ಉಂಟಾದ ಘಟನೆ ನಡೆದಿದೆ.
ಯುವಕ, ಯುವತಿಯರ ಚಾಟಿಂಗ್‌ನಿಂದ ಗೊಂದಲ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಸಹ ಪ್ರಯಾಣಿಕರೊಬ್ಬರ ಫೋನ್‌ಗೆ ಬಂದ ಅನುಮಾನಾಸ್ಪದ ಸಂದೇಶದ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ನೀಡಿದ್ದಾರೆ. ಹೀಗಾಗಿ ಮಂಗಳೂರಿನಿಂದ ಮುಂಬೈಗೆ ಹೊರಡಬೇಕಿದ್ದ ವಿಮಾನವು ಆರು ಗಂಟೆಗಳ ಕಾಲ ವಿಳಂಬವಾಯಿತು. ಇದಕ್ಕೆ ಕಾರಣ ಹುಡುಗಿಯೊಬ್ಬಳು ಹುಡುಗನಿಗೆ ಕಳಿಸಿದ್ದ ಯೂ ಆರ್ ಬಾಂಬರ್ ಎಂಬ ಮೆಸೇಜ್.
ಚಾಟಿಂಗ್ ಮಾಡಿದ ಯುವಕ, ಯುವತಿ ಯಾರು?
ವಿಮಾನ ನಿಲ್ದಾಣದಲ್ಲಿ ಮೆಸೇಜ್ ಮಾಡಿದ್ದ ಯುವಕ, ಯುವತಿಯನ್ನು ಸಿಮ್ರಾನ್ ಟಾಮ್ ಮತ್ತು ದಿಪಯಾನ್ ಮಾಂಜಿ ಎಂದು ಗುರುತಿಸಲಾಗಿದೆ. ದಿಪಯಾನ್ ಮಾಂಜಿ ಮಣಿಪಾಲ ಐಐಟಿಯಲ್ಲಿ 2021 ರಲ್ಲಿ ವ್ಯಾಸಂಗ ಮಾಡಿದ್ದು, ಸಿಮ್ರಾನ್ ಟಾಮ್ ಜೊತೆಗೆ ಮಣಿಪಾಲಕ್ಕೆ ಬಂದಿದ್ದರು. ದಿಪಯಾನ್ ಮಾಂಜಿ ಗುಜರಾತ್ನ ವಡೋದರದಲ್ಲಿ ಎಲ್ ಆ್ಯಂಡ್ ಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಸಿಮ್ರಾನ್ ಟಾಮ್ ಚೆನ್ನೈ ಗೋಪಲಪುರಂನಲ್ಲಿ ಸೆಲ್ವ ಮೇರಿಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಎ. ( ಹೆಚ್ಆರ್) ವ್ಯಾಸಂಗ ಮಾಡುತ್ತಿದ್ದಾರೆ.
ಇದನ್ನೂ ಓದಿ: Evening Digest: ಶಿವಮೊಗ್ಗದಲ್ಲಿ ಚಾಕು ಇರಿತ, ಧ್ವಜಾರೋಹಣದ ವೇಳೆ ಸೈನಿಕ ಸಾವು! ಇಂದಿನ ಟಾಪ್ ನ್ಯೂಸ್ ಇಲ್ಲಿವೆ
ನಿನ್ನೆ ಸಿಮ್ರಾನ್ ಟಾಮ್ ಬೆಂಗಳೂರು ತೆರಳಿ ಅಲ್ಲಿಂದ ಚೆನ್ನೈಗೆ ಹೋಗಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ದಿಪಯಾನ್ ಮಾಂಜಿ ಮುಂಬೈಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ. ದಿಪಯಾನ್ ಮಾಂಜಿ ಮುಂಬೈಗೆ ಹೋಗುವ ಇಂಡಿಗೋ ವಿಮಾನದಲ್ಲಿ ಕುಳಿತುಕೊಂಡು ಸಿಮ್ರಾನ್ ಟಾಮ್ ಗೆ ವಾಟ್ಸ್ಆ್ಯಪ್ ಚಾಟಿಂಗ್ ಮಾಡುತ್ತಿದ್ದ. ಈ ವೇಳೆ ಆಕೆ ಈತನಿಗೆ ಯೂ ಆರ್ ಬಾಂಬರ್ ಅಂತ ಮೆಸೇಜ್ ಮಾಡಿದ್ದಾಳೆ ಎನ್ನಲಾಗಿದೆ.
ಯುವಕ, ಯುವತಿಯರ ಚಾಟಿಂಗ್‌ನಿಂದ ಗೊಂದಲ
ಇವರು ಮಾಡುತ್ತಿದ್ದ ಚಾಟ್ನ್ನು ವಿಮಾನದಲ್ಲಿ ದಿಪಯಾನ್ ಮಾಂಜಿಯ ಹಿಂಬದಿಯ ಸೀಟಿನಲ್ಲಿದ್ದ ಯುವತಿಯೊಬ್ಬಳು ಗಮನಿಸಿ ವಿಮಾನ ನಿಲ್ದಾಣ ಸಿಬ್ಬಂದಿಗೆ ತಿಳಿಸಿದ್ದಾರೆ. ಈ ವೇಳೆ ವಿಮಾನ ಸಿಬ್ಬಂದಿ ಈ ವಿಚಾರವನ್ನು ಇಂಡಿಗೋ ಸಂಸ್ಥೆಯ ಮ್ಯಾನೇಜರ್. ಕೆ.ಪಿ ಬೋಪಣ್ಣ ಅವರಿಗೆ ತಿಳಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಗೊಂದಲದ ವಾತಾವರಣ
ಇನ್ನು ಕೂಡಲೇ ಅವರು ಸಿಐಎಸ್ಎಫ್, ಬಿಡಿಡಿಎಸ್, ಇಂಡಿಗೋ ಸೆಕ್ಯುರಿಟಿ ಮತ್ತು ತಾಂತ್ರಿಕ ಸಿಬ್ಬಂದಿ ಸಹಕಾರದಿಂದ ವಿಮಾನದ ಪ್ರಯಾಣಿಕರನ್ನು ಮತ್ತು ಲಗೇಜ್ ಗಳನ್ನು ತಪಾಸಣೆ ನಡೆಸಿದ್ದಾರೆ. ಆ ಬಳಿಕ ಸಿಐಎಸ್ಎಫ್ ಸಿಬ್ಬಂದಿ ದಿಪಯಾನ್ ಮಾಂಜಿ ಮತ್ತು ಸಿಮ್ರಾನ್ ಟಾಮ್ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Savarkar Photo: ಮಂಗಳೂರಲ್ಲೂ ಸಾವರ್ಕರ್ ಫೋಟೋ ವಿವಾದ, ಸ್ವಾತಂತ್ರ್ಯ ಸಂಭ್ರಮದ ನಡುವೆ ಪರ-ವಿರೋಧ!
ವಿಮಾನ ಹಾರಾಟ ವಿಳಂಬ
ತಕ್ಷಣ ಪಿಐಸಿ ಮೂಲಕ ಮಾಹಿತಿ ರವಾನಿಸಿ ಟೇಕಾಫ್‌ಗೆ ಸಿದ್ದವಾಗಿದ್ದ ಮುಂಬೈ ವಿಮಾನ ಇಂಡಿಗೋವನ್ನು ತಡೆದು ಎಲ್ಲಾ ಪ್ರಯಾಣಿಕರನ್ನು ಇಳಿಸಿ ತೀವ್ರ ತಪಾಸಣೆ ನಡೆಸಲಾಗಿದೆ. ವಿಚಾರಣೆಯಿಂದಾಗಿ ವಿಮಾನ ಹಾರಾಟ ಬರೋಬ್ಬರಿ 6 ಗಂಟೆಗಳ ಕಾಲ ವಿಳಂಬವಾಗಿದೆ ಅಂತ ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ