HOME » NEWS » State » FLIGHT BEGINS FROM KALABARGI TO DELHI FORM TODAY SESR SAKLB

ಕಲಬುರ್ಗಿಯಿಂದ ದೆಹಲಿಗೆ ವಿಮಾನ ಹಾರಾಟ ಆರಂಭ; ಬಹುದಿನಗಳ ಕನಸು ನನಸಾದ ಖುಷಿ

ಮೊದಲ ದಿನವಾದ ಇಂದು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮತ್ತಿತರರು ದೆಹಲಿಗೆ ಪ್ರಯಾಣ ಬೆಳೆಸಿದರು

news18-kannada
Updated:November 18, 2020, 3:23 PM IST
ಕಲಬುರ್ಗಿಯಿಂದ ದೆಹಲಿಗೆ ವಿಮಾನ ಹಾರಾಟ ಆರಂಭ; ಬಹುದಿನಗಳ ಕನಸು ನನಸಾದ ಖುಷಿ
ವಿಮಾನ ಸೇವೆಗೆ ಸಂಸದ ಉಮೇಶ್ ಜಾಧವ್ ಚಾಲನೆ
  • Share this:
ಕಲಬುರ್ಗಿ (ನ.18): ಇಂದಿನಿಂದ ಕಲಬುರ್ಗಿ-ದೆಹಲಿ ನಡುವೆ ವಿಮಾನ ಹಾರಾಟ ಪ್ರಾಂಭಗೊಂಡಿದ್ದು, ಜಿಲ್ಲೆಯ ಜನರ ಬಹುದಿನದ ಕನಸು ನನಸಾಗಿದೆ.  ಸ್ಟಾರ್ ಏರ್ ಲೈನ್ಸ್ ನಿಂದ ಆರಂಭಗೊಂಡ ವಿಮಾನ ಸೇವೆಗೆ ಇಂದು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸಂಸದ ಉಮೇಶ್ ಜಾಧವ್ ಚಾಲನೆ ನೀಡಿದರು. ವಿಮಾನ ನಿಲ್ದಾಣದಲ್ಲಿ ದೀಪ ಬೆಳಗಿ ಚಾಲನೆ ನೀಡಿದ ಸಂಸದ ಜಾಧವ್ ಮಾತನಾಡಿ, ನಾಗರೀಕ ವಿಮಾನಯಾನ ಸೇವೆಗೆ ಕಲಬುರ್ಗಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 42,697 ಪ್ರಯಾಣಿಕರು ಕಲಬುರ್ಗಿ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ. ಇದರಿಂದಾಗಿ ಮತ್ತಷ್ಟು ವಿಮಾನ ಸೇವೆಗಳನ್ನು ಪ್ರಾರಂಭಿಸಲು ಉತ್ತೇಜನ ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ಮುಂಬೈ, ಹೈದರಾಬಾದ್ ಹಾಗೂ ತಿರುಪತಿ ನಡುವೆಯೂ ವಿಮಾನ ಹಾರಾಟ ಆರಂಭಗೊಳ್ಳಲಿದೆ ಎಂದರು.  ಜೊತೆಗೆ ಪೈಲಟ್ ಗಳ ತರಬೇತಿ ಕೇಂದ್ರವೂ ಆರಂಭಗೊಳ್ಳಲಿದೆ. ಈ ಭಾಗದವರೂ ಪೈಲಟ್ ತರಬೇತಿ ಪಡೆಯಬಹುದಾಗಿದೆ. ಅಲ್ಲದೆ ಕಾರ್ಗೋ ಸಹ ಆರಭಿಸಲು ಉದ್ದೇಶಿಸಲಾಗಿದೆ. ಅಂತರರಾಷ್ಟ್ರೀಯ ವಿಮಾನಗಳನ್ನೂ ಇಳಿಸಲು ಇಲ್ಲಿ ಅನುಮತಿ ಪಡೆಯಲಾಗಿದೆ. ರಾತ್ರಿ ವೇಳೆಯಲ್ಲಿಯೂ ಲ್ಯಾಂಡಿಂಗ್ ಗೆ ಅನುಮತಿ ಕೋರಲಾಗುತ್ತಿದೆ. ಇದಕ್ಕೆ ಅವಕಾಶ ಸಿಕ್ಕರೆ ಮತ್ತಷ್ಟು ವಿಮಾನಗಳ ಸೇವೆ ಆರಂಭಗೊಳ್ಳಲಿದೆಕಲಬುರ್ಗಿ ಮತ್ತು ದೆಹಲಿಗೆ ನಡುವೆ 1800 ಕಿಲೋಮೀಟರ್ ಅಂತರವಿದ್ದು, ರೈಲಿನ ಮೂಲಕ ಸಂಚರಿಸಲು ಕನಿಷ್ಟ 24 ತಾಸುಗಳು ಬೇಕು. ಇಲ್ಲವೆ ಹೈದರಾಬಾದ್ ಗೆ ತೆರಳಿ ದೆಹಳಿಗೆ ಪ್ರಯಾಣ ಮಾಡಬೇಕಾಗುತ್ತಿತ್ತು. ಇದೀಗ ಕಲಬುರ್ಗಿಯಿಂದಲೇ ದೆಹಲಿಗೆ(ಹಿಂಡನ್) ಎರಡು ತಾಸುಗಳಲ್ಲಿ ವಿಮಾನದಲ್ಲಿ ತಲುಪಬಹುದಾಗಿದೆ. ವಾರದಲ್ಲಿ ಮೂರು ದಿನಗಳ ಕಾಲ ಕಲಬುರ್ಗಿಯಿಂದ ದೆಹಲಿ ಬಳಿಯ ಹಿಂಡನ್ ಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ.ಇದನ್ನು ಓದಿ: ಬಿಜೆಪಿ ನಾಯಕಿ ಖುಷ್ಭೂ ಸುಂದರ್​ ಕಾರು ಅಪಘಾತ; ದೇವರೇ ನಿಮ್ಮನ್ನು ಕಾಪಾಡಿದ ಎಂದ ಸಿಟಿ ರವಿ

ಕಲಬುರಗಿ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10:20 ಕ್ಕೆ ವಿಮಾನ ಹಾರಾಟ ಆರಂಭಗೊಂಡು, ಮಧ್ಯಾಹ್ನ 12:40 ಕ್ಕೆ ದೆಹಲಿ ತಲುಪಲಿದೆ. ದೆಹಲಿಯಿಂದ ಮಧ್ಯಾಹ್ನ 1:10 ನಿಮಿಷಕ್ಕೆ ಟೇಕಾಫ್ ಆಗಿ ಮಧ್ಯಾಹ್ನ 3:30ಕ್ಕೆ ಕಲಬುರ್ಗಿ ಏರ್ ಪೋರ್ಟ್ ನಲ್ಲಿ ವಿಮಾನ ಲ್ಯಾಂಡ್ ಆಗಲಿದೆ. ಉದ್ಘಾಟನೆಯ ಮೊಲದ ದಿನವೇ 25 ಜನ ದೆಹಲಿಗೆ ಪ್ರಯಾಣ ಬೆಳೆಸಿದರು.

ಮೊದಲ ದಿನವಾದ ಇಂದು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮತ್ತಿತರರು ದೆಹಲಿಗೆ ಪ್ರಯಾಣ ಬೆಳೆಸಿದರು. ಕಲಬುರ್ಗಿ - ದೆಹಲಿಯ ನಡುವೆ ಕೊನೆಗೂ ವಿಮಾನ ಹಾರಾಟ ಆರಂಭಗೊಂಡಿರೋದ್ರಿಂದ ಕಲಬುರ್ಗಿ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಮುಂಚೆ ರಾಜ್ಯದ ರಾಜಧಾನಿ ಬೆಂಗಳೂರಿಗೆ ಮಾತ್ರ ವಿಮಾನ ಸೇವೆ ಕಲ್ಪಿಸಲಾಗಿತ್ತು. ಇದೀಗ ರಾಷ್ಟ್ರದ ರಾಜಧಾನಿಗೂ ವಿಮಾನ ಸೇವೆ ಕಲ್ಪಿಸಿದ್ದು, ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ.
Published by: Seema R
First published: November 18, 2020, 3:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories