ಗೌರಿ ಲಂಕೇಶ್​ ಹತ್ಯೆಗೈದಿದ್ದು ವಾಗ್ಮೊರೆಯೇ: ಎಫ್​ಎಲ್​ಸಿ ವರದಿಯಿಂದ ದೃಢ


Updated:September 4, 2018, 3:51 PM IST
ಗೌರಿ ಲಂಕೇಶ್​ ಹತ್ಯೆಗೈದಿದ್ದು ವಾಗ್ಮೊರೆಯೇ: ಎಫ್​ಎಲ್​ಸಿ ವರದಿಯಿಂದ ದೃಢ
ಗೌರಿ ಲಂಕೇಶ್ ಪ್ರಾತಿನಿಧಿಕ ಚಿತ್ರ

Updated: September 4, 2018, 3:51 PM IST
ನ್ಯೂಸ್​ 18 ಕನ್ನಡ

ಬೆಂಗಳೂರು(ಸೆ.04): ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ‌ ಲಂಕೇಶ್ ಹತ್ಯೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಗೌರಿ ಹತ್ಯೆ ನಡೆದು ನಾಳೆಗೆ ಒಂದು ವರ್ಷವಾಗುತ್ತಿದೆ. ಈ ಸಂದರ್ಭದಲ್ಲಿ ಎಸ್​ಐಟಿ ತಂಡದ ತನಿಖೆಯಲ್ಲಿ ಮಹತ್ವದ ವಿಚಾರವೊಂದನ್ನು ಪತ್ತೆ ಹಚ್ಚಿದೆ. ಗುಜರಾತ್ ಎಫ್ ಎಸ್ ಎಲ್ ವರದಿಯಿಂದ  ಗೌರಿ ಹಂತಕ ಯಾರು ಎಂಬುವುದನ್ನು ಎಸ್​ಐಟಿ ದೃಡಪಡಿಸಿಕೊಂಡಿದೆ.

ಗೌರಿ ಲಂಕೇಶ್​ರನ್ನು ಪರಷುರಾಮ್ ವಾಗ್ಮೇರೆಯೇ ಗೌರಿಹತ್ಯೆ ನಡೆಸಿರುವುದು ಗುಜರಾತ್ ಎಫ್ ಎಸ್ ಎಲ್ ವರದಿಯಿಂದ ದೃಢವಾಗಿದ್ದು, ಪಿಸ್ತೂಲ್​ನಿಂದ ಶೂಟ್ ಮಾಡಿ ಹತ್ಯೆ ಮಾಡಿರುವುದು ಖಚಿತವಾಗಿದೆ. ಅಲ್ಲದೇ ಸಿಸಿಟಿವಿ ದೃಶ್ಯ, ಮರುಸೃಷ್ಠಿಯ ದೃಶ್ಯಾವಳಿಯಲ್ಲೂ ಸಾಮ್ಯತೆ ಕಂಡು ಬಂದಿದೆ.

ಈ ಹತ್ಯೆ ಪ್ರಕರಣದ ಬೆನ್ನತ್ತಿದ್ದ ಎಸ್​ಐಟಿ ತಂಡವು ಈವರೆಗೆ ಸುಮಾರು 12 ಮಂದಿಯನ್ನು ಬಂಧಿಸಿತ್ತು. ಅಂತಿಮವಾಗಿ ಸಿಂಧಗಿಯ ಪರಶುರಾಮ್​ ವಾಗ್ಮೊರೆಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಕಳೆದ ವರ್ಷ ಸೆಪ್ಟೆಂಬರ್​ 5 ರಂದು ತಾನೇ ಗೌರಿ ಹತ್ಯೆ ನಡೆಸಿದ್ದೆ ಎಂದು ವಾಗ್ಮೊರೆ ಒಪ್ಪಿಕೊಂಡಿದ್ದ. ಆದರೆ ವಸ್ತು ಸಾಕ್ಷಿಗಾಗಿ ಎಸ್​ಐಟಿ ತಂಡವು ಜೂನ್ ತಿಂಗಳಲ್ಲಿ ದೃಶ್ಯಾವಳಿಗಳನ್ನು ಎಫ್ ಎಸ್ ಎಲ್ ಗೆ ಕಳುಹಿಸಿತ್ತು. ಇದೀಗ ಎಸ್ ಐಟಿ ನೀಡಿದ್ದ ಸಾಕ್ಷ್ಯಗಳ ಪರೀಶೀಲಿಸಿದ ಎಫ್​ಎಲ್​ಸಿ ಈ ವಿಚಾರವನ್ನು ಧೃಡ ಪಡಿಸಿದೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ