National Flag: ಬಿಬಿಎಂಪಿಯಿಂದ ದೋಷಪೂರಿತ ತ್ರಿವರ್ಣ ಧ್ವಜ ಹಂಚಿಕೆ; ಎಡವಟ್ಟಿಗೆ ತೇಪೆ ಹಚ್ಚಿದ ಪಾಲಿಕೆ!

ಬಿಬಿಎಂಪಿ ಕಡೆಯಿಂದ ಎಲ್ಲಾ ವಲಯದ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದೇವೆ. ಡಿಫೆಕ್ಟ್ ಇರುವ ಬಾವುಟವನ್ನು ವಿತರಣೆ ಮಾಡದಂತೆ ಸೂಚನೆ ಕೊಡಲಾಗಿದೆ. ಯಾವುದಾದ್ರೂ ಬಾವುಟ ಡಿಫೆಕ್ಟ್ ಇದ್ದರೆ ವಾಪಾಸ್  ಕೊಟ್ಟು ಬೇರೆ ತೆಗೆದುಕೊಂಡು ಹೋಗಲು BBMP ಆಯುಕ್ತರು ಸಾರ್ವಜನರಿಕಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬಿಬಿಎಂಪಿಯಿಂದ ಎಡವಟ್ಟು

ಬಿಬಿಎಂಪಿಯಿಂದ ಎಡವಟ್ಟು

  • Share this:
ಅವೈಜ್ಞಾನಿಕವಾಗಿರುವ ತ್ರಿವರ್ಣ ಧ್ವಜ ನೀಡಿದ ಬಿಬಿಎಂಪಿ (BBMP) ಇದಿಗ ಕೆಟ್ಟಮೇಲೆ ಬುದ್ದಿ ಬಂತು ಎಂಬ ಗಾದೆ ಮಾತಿನಂತೆ ಎಚ್ಚೆತ್ತುಕೊಂಡಿದೆ. ಈಗ ದೋಷಪೂರ್ಣ ಧ್ವಜಗಳನ್ನು (Defect Flag) ವಾಪಾಸ್ ಪಡೆದು ಹೊಸ ಬಾವುಟವನ್ನು ಕೊಡಲು ಮುಂದಾಗಿದೆ. ಅಲ್ಲದೆ ಜಂಟಿ ಆಯುಕ್ತರಿಗೆ ಈ ಬಗ್ಗೆ ಸುತ್ತೋಲೆ ಹೊರಡಿಸಿ ಸೂಚನೆ ಕೊಡಲಾಗಿದೆ. ಕೇಸರಿ, ಬಿಳಿ, ಹಸಿರು. ಈ ಮೂರು ಬಣ್ಣಗಳ (Three color) ಅಳತೆಗೂ ಒಂದು ಸೂಕ್ತ ಶಿಸ್ತಿದೆ. ಮಧ್ಯ ಭಾಗದಲ್ಲಿರುವ ಅಶೋಕ ಚಕ್ರಕ್ಕೂ ಇಂತಿಷ್ಟೇ ಎಂಬ ಅಳತೆಗೋಲಿದೆ. ಆದರೆ ಅವೆಲ್ಲವನ್ನೂ ಗಾಳಿಗೆ ತೂರಿ ಬೇಕಾಬಿಟ್ಟಿ, ಅಡ್ಡಾದಿಡ್ಡಿ ಬಾವುಟ ರಚಿಸಿ ಜನರಿಗೆ ಕೊಡಲಾಗುತ್ತಿದೆ.

ದೋಷಪೂರಿತ ರಾಷ್ಟ್ರ ಧ್ವಜ ಹಂಚಿ ಅವುಗಳನ್ನು ವಾಪಸ್ ಪಡೆದ ಪಾಲಿಕೆ !!

ಕೇಂದ್ರ ಸರ್ಕಾರ ಸ್ವಾತಂತ್ರ್ಯ ಸಿಕ್ಕಿ ದೇಶಕ್ಕೆ 75 ವರ್ಷ ತುಂಬುವ ಗಳಿಗೆಯನ್ನು ಬಹಳ ಅದ್ದೂರಿಯಾಗಿ ಆಚರಿಸುವ ಪಣ ತೊಟ್ಟಿದೆ. ಇದರ ಅಂಗವಾಗಿ ಹರ್ ಘರ್ ತಿರಂಗ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರತಿ ಮನೆಗಳ ಮೇಲೆ ರಾಷ್ಟ್ರೀಯ ಬಾವುಟ ಹಾರಿಸಲು ಪ್ರಧಾನಿ ಮೋದಿ ಕರೆ ಕೊಟ್ಟಿದ್ದಾರೆ. ಅದರಂತೆ ಬೆಂಗಳೂರಿನಲ್ಲಿ ಜನರಿಗೆ ತ್ರಿವರ್ಣ ಧ್ವಜ ಹಂಚುವ ಜವಾಬ್ದಾರಿಯನ್ನು ಬಿಬಿಎಂಪಿಗೆ ಕೊಡಲಾಗಿದೆ. ಆದರೆ ಅದನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಬಿಬಿಎಂಪಿ ಎಡವಿದೆ‌.

ದೇಶದ ತ್ರಿವರ್ಣ ಧ್ವಜಕ್ಕೆ ಒಂದು ಸಂಹಿತೆಯಿದೆ

ಜನರಿಗೆ ಬಿಬಿಎಂಪಿ ಕೊಡುತ್ತಿರೋ ತ್ರಿವರ್ಣ ಧ್ವಜಗಳು ಎಲ್ಲವೂ ಅವೈಜ್ಞಾನಿಕ ತಯಾರಾಗಿದೆ. ದೇಶದ ತ್ರಿವರ್ಣ ಧ್ವಜಕ್ಕೆ ಒಂದು ಸಂಹಿತೆಯಿದೆ. ಕೇಸರಿ, ಬಿಳಿ, ಹಸಿರು. ಈ ಮೂರು ಬಣ್ಣಗಳ ಅಳತೆಗೂ ಒಂದು ಸೂಕ್ತ ಶಿಸ್ತಿದೆ. ಮಧ್ಯ ಭಾಗದಲ್ಲಿರುವ ಅಶೋಕ ಚಕ್ರಕ್ಕೂ ಇಂತಿಷ್ಟೇ ಎಂಬ ಅಳತೆಗೋಲಿದೆ. ಆದರೆ ಅವೆಲ್ಲವನ್ನೂ ಗಾಳಿಗೆ ತೂರಿ ಬೇಕಾಬಿಟ್ಟಿ, ಅಡ್ಡಾದಿಡ್ಡಿ ಬಾವುಟ ರಚಿಸಿ ಜನರಿಗೆ ಕೊಡಲಾಗುತ್ತಿದೆ.

Ganesha Festival Rules: ಈ ಬಾರಿಯೂ ಇಲ್ಲ ಅದ್ಧೂರಿ ಗಣೇಶೋತ್ಸವ; 1 ವಾರ್ಡ್​ಗೆ ಒಂದೇ ಗಣಪತಿ ಮೂರ್ತಿ!?

ದೋಷಪೂರಿತ ಧ್ವಜ ವಾಪಸಾತಿಗೆ ಮುಂದಾಗಿರುವ ಸಿಬ್ಬಂದಿಗಳು !!

ಕೇಂದ್ರದ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಒಟ್ಟು 10 ಲಕ್ಷ ಧ್ವಜವನ್ನು ಹಂಚುವ ಗುರಿ ಹೊಂದಲಾಗಿದೆ. ಆದರೆ ಈವರೆಗೆ ಹಂಚಿರುವ ಬಾವುಟಗಳಲ್ಲಿ ಅನೇಕ ಅವೈಜ್ಞಾನಿಕವಾಗಿದೆ. ಹೀಗಾಗಿ ಅವುಗಳನ್ನು ವಾಪಾಸ್ ಪಡೆದು ಹೊಸ ತ್ರಿವರ್ಣ ಧ್ವಜ ನೀಡಲು ಬಿಬಿಎಂಪಿ ಮುಂದಾಗಿದೆ. ತ್ರಿವರ್ಣ ಧ್ವಜದಲ್ಲಿನ ಎಡವಟ್ಟು ವರದಿಯಾಗ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು, ತ್ರಿವರ್ಣ ಧ್ವಜ ಪ್ರಿಂಟ್ ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ದೋಷಪೂರ್ಣ ಬಾವುಟವನ್ನು ವಾಪಾಸ್​ ಕೊಡಿ

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಕಡೆಯಿಂದ ಎಲ್ಲಾ ವಲಯದ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದೇವೆ. ಡಿಫೆಕ್ಟ್ ಇರುವ ಬಾವುಟವನ್ನು ವಿತರಣೆ ಮಾಡದಂತೆ ಸೂಚನೆ ಕೊಡಲಾಗಿದೆ. ಯಾವುದಾದ್ರೂ ಬಾವುಟ ಡಿಫೆಕ್ಟ್ ಇದ್ದರೆ ವಾಪಾಸ್  ಕೊಟ್ಟು ಬೇರೆ ತೆಗೆದುಕೊಂಡು ಹೋಗಲು ಸಾರ್ವಜನರಿಕಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ:  Cow Dung: ಬಣ್ಣ ಅಲ್ಲ, ಸಗಣಿ ಎರಚಿ ಇಲ್ಲಿ ಓಕುಳಿ ಆಡ್ತಾರೆ ಜನ! ನಾಗರ ಪಂಚಮಿ ಮರುದಿನ ವಿಶಿಷ್ಟ ಆಚರಣೆ

ಒಟ್ಟಾರೆ ಬಿಬಿಎಂಪಿ ಎಡವಟ್ಟುಗಳ ಮೇಲೊಂದು ಎಡವಟ್ಟನ್ನು ಮಾಡಿಕೊಳ್ಳುತ್ತಿದ್ದು, ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದೆ. ಇದೀಗ ಅತ್ಯುನ್ನತ ತ್ರಿವರ್ಣ ಧ್ವಜದ ವಿಚಾರದಲ್ಲೂ ನಿರ್ಲಕ್ಷ್ಯ ತೋರಿದ್ದು, ದೇಶದ ರಾಷ್ಟ್ರೀಯ ಬಾವುಟಕ್ಕೇ ಅಪಮಾನ ಮಾಡಿದೆ. ಇದೀಗ ಅದಕ್ಕೂ ತೇಪೆ ಹಚ್ಚುವ ನಾಟಕವಾಡಿ, ಸಮಸ್ಯೆ ಬಗೆಹರಿದಿದೆ ಎಂದಿದೆ.
Published by:Pavana HS
First published: