Idgah Ground: ವಿವಾದಿತ ಈದ್ಗಾ ಮೈದಾನದಲ್ಲಿ ನಾಳೆ ಧ್ವಜಾರೋಹಣ, ಎಲ್ಲೆಡೆ ಪೊಲೀಸ್ ಸರ್ಪಗಾವಲು

ಸೆನ್ಷೇಷನಲ್ ಪ್ರದೇಶ ಎನಿಸಿಕೊಂಡಿರುವ ಚಾಮರಾಜಪೇಟೆ ಮೈದಾನದಲ್ಲಿ ನಾಳೆ ಧ್ವಜಾರೋಹಣ ನಡೆಯಲಿದೆ. ಮೈದಾನದ ಸುತ್ತ ಬ್ಯಾರಿಕೇಡ್ ಹಾಗೂ ಕಬ್ಬಣದ ಗೇಟ್ಗಳನ್ನ ಹಾಕಿ ಯಾರೂ ಒಳಬಾರದ ರೀತಿ ಸಜ್ಜುಗೊಳಿಸಲಾಗಿದೆ. ಹಾಗೆ ಮೈದಾನದ ಸುತ್ತ ಸೂಕ್ತ ಭದ್ರತೆಯನ್ನ ಏರ್ಪಾಡು ಮಾಡಲಾಗಿದೆ.

ಈದ್ಗಾ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ

ಈದ್ಗಾ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ

  • Share this:
ದೇಶದ ಸ್ವಾತಂತ್ರ್ಯ ಹಬ್ಬಕ್ಕೆ (Independence day) ಕ್ಷಣಗಣನೆ ಶುರುವಾಗಿದೆ. ಈ ಬಾರಿ ಬೆಂಗಳೂರಿನಲ್ಲಿ (Bengaluru) ಎರಡೆರಡು ಕಡೆ ಧ್ವಜಾರೋಹಣ ನಡೆಯುತ್ತಿದೆ. ಈ ಬಾರಿ ಎರಡು ಕಡೆ ಧ್ವಜಾರೋಹಣ (Flag Hosisting) ಹಿನ್ನಲೆ ಸಾಕಷ್ಟು ತಯಾರಿಯ ಜೊತೆಗೆ ಬಿಗಿ ಪೊಲೀಸ್ (Police) ಬಂದೋಬಸ್ತ್ ಮಾಡಲಾಗಿದೆ. ಒಂದು ಮಾಣೇಕ್ ಷಾ ಮೈದಾನದಲ್ಲಿ ಧ್ವಜಾರೋಹಣವಾದರೆ ಮತ್ತೊಂದೆಡೆ ವಿವಾದದ ಕೇಂದ್ರಬಿಂದುವಾದ ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ ನಡೆಯುತ್ತಿದೆ. ಅದರಲ್ಲೂ ಚಾಮರಾಜಪೇಟೆಯ ಈದ್ಗಾ ಮೈದಾನ (Idgah Ground) ಈ ಬಾರಿ ಸೆಂಟರ್ ಆಫ್ ಅಟ್ರಾಕ್ಷನ್. ಹಾಗಾದರೆ ಚಾಮರಾಜಪೇಟೆಯಲ್ಲಿ ಭದ್ರತೆ (Security) ಹೇಗಿದೆ? ಚಾಮರಾಜಪೇಟೆಯಲ್ಲಿ ಪೊಲೀಸ್ ಇಲಾಖೆ ಹೇಗೆ ಭದ್ರತೆ ಕೈಗೊಂಡಿದೆ ಅನ್ನೋದರ ಎಲ್ಲಾ ವಿವರ ನೋಡೋಣ

ಸೆನ್ಷೇಷನಲ್ ಪ್ರದೇಶ ಎನಿಸಿಕೊಂಡಿರುವ ಚಾಮರಾಜಪೇಟೆ ಮೈದಾನದ ಸುತ್ತ ಬ್ಯಾರಿಕೇಡ್ ಹಾಗೂ ಕಬ್ಬಣದ ಗೇಟ್​​ಗಳನ್ನು ಹಾಕಿ ಯಾರೂ ಒಳಬಾರದ ರೀತಿ ಸಜ್ಜುಗೊಳಿಸಲಾಗಿದೆ. ಹಾಗೆ ಮೈದಾನದ ಸುತ್ತ ಸೂಕ್ತ ಭದ್ರತೆಯನ್ನ ಏರ್ಪಾಡು ಮಾಡಲಾಗಿದೆ.

ಈದ್ಗಾ ಮೈದಾನದಲ್ಲಿ ಭಾರೀ ಭದ್ರತೆ

ವಿವಾದಿತ ಪ್ರದೇಶ ಎನಿಸಿಕೊಂಡಿರುವ ಚಾಮರಾಜಪೇಟೆಯಲ್ಲಿ ಕಂಡುಕೇಳರಿಯದ ಭದ್ರತೆ ಕೈಗೊಳ್ಳಲಾಗಿದೆ. ರ್ಯಾಪಿಡ್ ಆಕ್ಷನ್ ಫೋರ್ಸ್ , ಲಾ ಅಂಡ್ ಆರ್ಡರ್, ಕೆಎಸ್ಆರ್ಪಿ ಸೇರಿ ನಾಳೆ 800 ಜನ ಪೊಲೀಸ್ ಮೆನ್ ಗಳು ಚಾಮರಾಜಪೇಟೆ ಮೈದಾನಕ್ಕೆ ಭದ್ರತೆ ಒದಗಿಸಲಿದ್ದಾರೆ. ಒಬ್ಬ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಕಂದಾಯ ಇಲಾಖೆಯ ಎಸಿ ಧ್ವಜಾರೋಹಣ ಮಾಡಲಿದ್ದಾರೆ.

flag hoisting eidgah maidan tomorrow police tight security
ಈದ್ಗಾ ಮೈದಾನ


8 ಗಂಟೆಗೆ ಧ್ವಜಾರೋಹಣ

ನಾಳೆ ಚಾಮರಾಜಪೇಟೆ ಮೈದಾನದಲ್ಲಿ ಬೆಳಗ್ಗೆ ಧ್ವಜಾರೋಹಣ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಕಂದಾಯ ಇಲಾಖೆಯ ಆಯುಕ್ತರು ಧ್ವಜಾರೋಹಣ ಮಾಡಲಿದ್ದಾರೆ. ಮಾಣೆಕ್ ಷಾ ಮೈದಾನದಲ್ಲಿ 9 ಗಂಟೆಗೆ ಧ್ವಜಾರೋಹಣ ನಡೆಯಲಿದೆ.

ಇದನ್ನೂ ಓದಿ: ನಾಳೆ ಬಿಎಂಟಿಸಿಯಲ್ಲಿ ಉಚಿತವಾಗಿ ಓಡಾಡಿ, ಮೆಟ್ರೋದಲ್ಲಿ ಎಲ್ಲೇ ಹೋದರೂ 30 ರೂಪಾಯಿ!

ನಾಳೆ ಧ್ವಜಾರೋಹಣ ಹಿನ್ನೆಲೆ ಇಂದೇ ಪೊಲೀಸರು ಪಥಸಂಚಲನ ನಡೆಸಿದರು. ಸೂಕ್ಷ್ಮ ಪ್ರದೇಶಗಳಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ್ ನ ಎರಡು ತುಕಡಿ ಚಾಮರಾಜಪೇಟೆಯ ಸುಮಾರು 5 ಕಿಲೋಮೀಟರ್ವರೆಗೆ ರೂಟ್ ಮಾರ್ಚ್ ಮಾಡಿ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ರು.

ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಕಂದಾಯ ಇಲಾಖೆಯ ಅಧಿಕಾರಿಗಳು ನಾಳಿನ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿ, ಧ್ವಜಾರೋಹಣ ಕಂಬಗಳನ್ನ ನೆಟ್ಟು ಈಗಾಗಲೆ ತಯಾರಿಯನ್ನ ನಡೆಸಿದ್ದಾರೆ. ನಾಳೆ ಮಕ್ಕಳನ್ನ ಹೊರತುಪಡಿಸಿ ಉಳಿದವರ ಪರಿಶೀಲನೆ ನಡೆಸಿದ ಬಳಕವಷ್ಟೆ ಒಳಬಿಡಲು ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಹಾರಾಡಿತು ದೇಶದ ಅತೀ ಎತ್ತರದ ಧ್ವಜ! ಸಂಭ್ರಮಕ್ಕೆ ಸಾಕ್ಷಿಯಾದ ಕುಂದಾನಗರಿ

ನಾಳೆ ಜೈಕಾರ ಕೂಗುವಂತಿಲ್ಲ

ಚಾಮರಾಜಪೇಟೆ ಮೈದಾನದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ನಾಳೆ ವಂದೇ ಮಾತರಂ, ಭಾರತ್ ಮಾತಾ ಕೀ ಜೈ ಎಂಬ ಘೊಷಣೆ ಬಿಟ್ಟರೆ ಬೇರೇನು ಮಾಡುವಂತಿಲ್ಲ. ಹಾಗೂ ಯಾವುದೇ ಪಕ್ಷಕ್ಕೂ ಜೈಕಾರ ಹಾಕುವಂತಿಲ್ಲ. ಫ್ಲೆಕ್ಸ್ ಗಳನ್ನು ಕೂಡ ಹಾಕುವಂತಿಲ್ಲ.

ಫ್ಲೆಕ್ಸ್​ ತೆರವು ವೇಳೆ ವಾಗ್ವಾದ

ಇಂದು ಚಾಮರಾಜಪೇಟೆ ನಾಗರೀಕರ ಒಕ್ಕೂಟ ಶುಭಾಶಯದ ಫ್ಲೆಕ್ಸ್ ಗಳನ್ನ ಹಾಕಿದ್ದರು. ಹೀಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ಅನುಮತಿಯ ಮೇರೆಗೆ ಪೊಲೀಸರು ಫ್ಲೆಕ್ಸ್ ಗಳನ್ನ ತೆರವುಗೊಳಿಸಲು ಹೋದಾಗ ಮಾತಿನ ಚಕಮಕಿ ನಡೆದಿದೆ.

ಚಾಮರಾಜಪೇಟೆ ಒಕ್ಕೂಟದ ಸದಸ್ಯರು ಗರಂ ಆಗಿ ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಈ ಮೈದಾನದ ಬಗ್ಗೆ ನಾವೇ ಸರ್ಕಾರದ ಗಮನ ಸೆಳೆದು ಈಗ ಧ್ವಜಾರೋಹಣ ಆಗುವಂತೆ ಮಾಡಿದ್ದು ಆದರೆ ನಮಗೇ ಶುಭಾಷಯ ಕೋರಲು ಬಿಡುತ್ತಿಲ್ಲ ಎಂದು ಆಕ್ರೋಷ ವ್ಯಕ್ತ ಪಡಿಸಿದ್ರು.

ಪೊಲೀಸರ ಮನವೊಲಿಕೆ ಬಳಿಕ ಫ್ಲೆಕ್ಸ್ ಗಳನ್ನ ತೆರವುಗೊಳಿಸಲಾಯ್ತು. ನಾಳೆ 8 ಗಂಟೆಗೆ ಈದ್ಗಾ ಮೈದಾನದಲ್ಲಿ ಎಸಿ ಶಿವಣ್ಣ ಧ್ವಜಾರೋಹಣ ಮಾಡಲಿದ್ದು, ಆ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆ ಎಲ್ಲಾ ರೀತಿಯ ಸಿದ್ಧತೆಗಳನ್ನ ಮಾಡಿಕೊಂಡಿದೆ.
Published by:Thara Kemmara
First published: