• Home
  • »
  • News
  • »
  • state
  • »
  • Flag Hoisters Payment: ವಿಧಾನಸೌಧದದಲ್ಲಿ ಪ್ರತಿನಿತ್ಯ ತ್ರಿವರ್ಣ ಧ್ವಜ ಹಾರಿಸುವವರ ವೇತನ ಕೇವಲ 50 ರೂಪಾಯಿ!

Flag Hoisters Payment: ವಿಧಾನಸೌಧದದಲ್ಲಿ ಪ್ರತಿನಿತ್ಯ ತ್ರಿವರ್ಣ ಧ್ವಜ ಹಾರಿಸುವವರ ವೇತನ ಕೇವಲ 50 ರೂಪಾಯಿ!

ವಿಧಾನ ಸೌಧ

ವಿಧಾನ ಸೌಧ

ವಿಧಾನ ಸೌಧದ ಮೇಲೆ ಪ್ರತಿನಿತ್ಯ 50 ರೂಪಾಯಿ ನಿಯಮಿತ ವೇತನಕ್ಕೆ ವಿಧಿವತ್ತಾಗಿ ತ್ರಿವರ್ಣ ಧ್ವಜ ಹಾರಿಸುವ ಅಪ್ರಪತಿಮ ವೀರರಿದ್ದಾರೆ. ತಮ್ಮ ವೇತನವನ್ನು 100 ರೂಪಾಯಿಗೆ ಹೆಚ್ಚಿಸಬೇಕೆಂಬ ಇವರ ಬೇಡಿಕೆ ಇನ್ನೂ ಈಡೆರಿಲ್ಲ.

  • News18 Kannada
  • Last Updated :
  • Bangalore [Bangalore]
  • Share this:

ತ್ರಿವರ್ಣ ಧ್ವಜ (Tricolor Flag) ಭಾರತ (Indian) ದೇಶದ ಸ್ವಾತಂತ್ರ್ಯದ ಪ್ರತೀಕವಾಗಿದೆ. ದೇಶದ ಸಮಗ್ರ ಜನತೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ 'ಹರ್ ಘರ್ ತಿರಂಗಾ' (Har Ghar Tiranga) ಅಭಿಯಾನದ ಆಚರಣೆಯ ಸಂಭ್ರಮದಲ್ಲಿದ್ದಾರೆ. ಆದರೆ ಬೆಂಗಳೂರಿನ (Bangalore) ವಿಧಾನ ಸೌಧದ (Vidhana Soudha) ಮೇಲೆ ಪ್ರತಿನಿತ್ಯ ವರ್ಷಗಳಿಂದ 50 ರೂಪಾಯಿ ನಿಯಮಿತ ವೇತನಕ್ಕೆ ವಿಧಿವತ್ತಾಗಿ ತ್ರಿವರ್ಣ ಧ್ವಜ ಹಾರಿಸುವ (Hoisters) ಅಪ್ರಪತಿಮ ವೀರರಿದ್ದಾರೆ. ಇವರು ತಮ್ಮ ವೇತನವನ್ನು (Wages) 100 ರೂಪಾಯಿಗೆ ಹೆಚ್ಚಿಸಬೇಕೆಂದು ಬೇಡಿಕೆಯಿಟ್ಟರು ಇನ್ನೂ ಇವರ ಬೇಡಿಕೆ ಈಡೇರಲಿಲ್ಲ. 


100 ರೂಪಾಯಿಗೆ ಭತ್ಯೆಯನ್ನು ಹೆಚ್ಚಿಸಿ ಎಂಬ ಬೇಡಿಕೆ
ಪ್ರತಿ ನಿತ್ಯ ವಿಧಾನ ಸೌಧದಲ್ಲಿ ಧ್ವಜ ಹಾರಿಸುತ್ತಿರುವ ಏಳು ಮಂದಿ ನೌಕರರು ಗ್ರೂಪ್ ಡಿ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಪ್ರತಿ ನಿತ್ಯ 3 ಶಿಪ್ಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಹೋಮ್ ಗಾರ್ಡ್ ಅಥವ ಪೋಲಿಸ್ ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಾರೆ. ಅವರು ತಮ್ಮ ಈ ಕೆಲಸದ ವೇತನವನ್ನು 100 ರೂಪಾಯಿಗೆ ಹೆಚ್ಚಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ.


ಇದನ್ನೂ ಓದಿ: Har Ghar Tiranga: ಹರ್​ ಘರ್​ ತಿರಂಗಾ ಸಾಂಗ್​​ ರಿಲೀಸ್​, ಮನೆ ಮನೆಗೂ ತ್ರಿವರ್ಣ ಎಂದ ಕೆಎಲ್​ ರಾಹುಲ್


180 ಅಡಿ ಎತ್ತರದ ಧ್ವಜ ಸ್ತಂಭ
 ಧ್ವಜಸ್ತಂಭ ಇಲ್ಲಿರುವ ನಾಲ್ಕನೇ ಮಹಡಿಯಿಂದ 30 ಅಡಿ ಎತ್ತರವಿದೆ. ಈ ನಾಲ್ಕನೇ ಮಹಡಿಯು ನೆಲದಿಂದ 150 ಅಡಿ ಎತ್ತರದಲ್ಲಿದೆ. ಅಂದರೆ ನಾವು ವಿಧಾನಸೌಧದ ಹೊರಗಿನಿಂದ ನೋಡುವ ಹಾರುತ್ತಿರುವ ಧ್ವಜ ನೆಲಮಟ್ಟದಿಂದ 180 ಅಡಿ ಎತ್ತರದಲ್ಲಿ ಹಾರಾಡುತ್ತಿವೆ.


ಧ್ವಜ ಕರ್ತವ್ಯದಲ್ಲಿರುವ ಇಲ್ಲಿನ ನೌಕರರು ಮೂರನೇ ಮಹಡಿಯವರೆಗೆ ಲಿಫ್ಟ್‌ಗಳನ್ನು ಬಳಸುತ್ತಾರೆ ಮತ್ತು ನಂತರ ಮೆಟ್ಟಿಲುಗಳ ಮೂಲಕ ಮೇಲೆ ಹೋಗಿ ಅಲ್ಲಿ ಧ್ವಜ ಹಾರಿಸುವ ಕಾರ್ಯ ನಿರ್ವಹಿಸುತ್ತಾರೆ.


ಧ್ವಜ ಹಾರಿಸಲು ಕೆಲವು ನಿಯಮಗಳಿವೆ
ವಿಧಾನಸೌಧದ ಮೇಲೆ ಧ್ವಜಾರೋಹಣ ಮಾಡುವುದು ಅಷ್ಟು ಸುಲಭವಾದ ಕೆಲಸವಲ್ಲ. ಅದಕ್ಕೆ ಅನುಸರಿಸಬೇಕಾದ ಕೆಲವು ಪ್ರಮುಖ ನಿಯಮಗಳಿವೆ. ಧ್ವಜವನ್ನ ಸೂರ್ಯೋದಯದ ಹೊತ್ತಲ್ಲಿ ಒಂದು ನಿರ್ದಿಷ್ಟ ಸಮಯದಲ್ಲಿ ಹಾರಿಸಬೇಕು ಮತ್ತು ಸೂರ್ಯಾಸ್ತದ ವೇಳೆ ನಿಗದಿತ ಸಮಯದಲ್ಲಿ ಧ್ವಜ ಅವರೋಹಣ ಮಾಡಬೇಕು.


ಧ್ವಜ ಹಾರಿಸುವಾಗ ಬರಿಗಾಲಿನಲ್ಲಿರಬೇಕು ಮತ್ತು ಅವರೋಹಣ ಮಾಡಿದ ನಂತರವೂ ಅದನ್ನು ಧ್ವಜವನ್ನು ಮಡಚಿ ಇಡಲು ಕೆಲವೊಂದು ನಿರ್ದಿಷ್ಟ ಕ್ರಮಗಳಿವೆ. ಎಂದು ಧ್ವಜ ಕರ್ತವ್ಯದಲ್ಲಿರುವ ಹಿರಿಯ ಧ್ವಜ ಸಿಬ್ಬಂದಿ ಆಂಟೋನಿ ವರದಿಯಲ್ಲಿ  ಹೇಳಿಕೊಂಡಿದ್ದಾರೆ. ಇವರು 26 ವರ್ಷಗಳಿಂದ ಇಲ್ಲಿ ಈ ಕೆಲಸವನ್ನು ಮಾಡುತ್ತಿದ್ದಾರೆ.


ಹಗಲು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿರುವ ನೌಕರರು
ಆಂಟೋನಿ ಅವರಂತೆಯೇ ಅವರ ಸಹೋದ್ಯೋಗಿಗಳು ಹಗಲು ರಾತ್ರಿ ಪಾಳಿಯಲ್ಲಿ (Shift) ಕೆಲಸ ಮಾಡುತ್ತಾರೆ. ಮಳೆ ಇರಲಿ ಬಿಸಿಲು ಇರಲಿ ಅವರಿಗೆ ಯಾವುದೇ ರಜೆ ಇಲ್ಲ. ಬೆಳಗ್ಗೆ ಸುಮಾರು 6.22 ರ ವೇಳೆಗೆ ಧ್ವಜಾರೋಹಣ ಮಾಡುತ್ತಾರೆ. ಈ ಸಮಯಕ್ಕಿಂತ ಸುಮಾರು 15 ನಿಮಿಷಕ್ಕಿಂತಲೂ ಮೊದಲು ಇಲ್ಲಿಗೆ ಬರುತ್ತಾರೆ.


ಹೆಚ್ಚಳವಾಗದ 50ರೂಪಾಯಿ ವೇತನ
ದಿನಕ್ಕೆ 50 ರೂಪಾಯಿ ವೇತನವನ್ನು ಧ್ವಜ ಕಾರ್ಯನಿರ್ವಹಣೆಗಾಗಿ ನೌಕರರಿಗೆ ನೀಡಲಾಗುತ್ತದೆ ಎಂದು ಕರ್ನಾಟಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಮೂಲಗಳು ತಿಳಿಸಿವೆ. ಇದು 2013 ರಲ್ಲಿ ದಿನಕ್ಕೆ 15 ರೂ. ಮತ್ತು 2016 ರಲ್ಲಿ ದಿನಕ್ಕೆ 25 ರೂ. ಮತ್ತು ಪ್ರಸ್ತುತ 50 ರೂಪಾಯಿದೆ. ವೇತನವನ್ನು ದಿನಕ್ಕೆ 100 ರೂ.ಗೆ ಹೆಚ್ಚಿಸಬೇಕೆಂಬ ನೌಕಕರರ ಬೇಡಿಕೆ ಇದುವರೆಗೆ ಈಡೆರಿಲ್ಲ.


ಇದನ್ನೂ ಓದಿ: RBI Repo Rate Hike:ರೆಪೋ ರೇಟ್​ ಮತ್ತೆ ಹೆಚ್ಚಳ, ಲೋನ್​ ಪಡೆದವರಿಗೆ ಮತ್ತಷ್ಟು ಹೊರೆ!


ಕರ್ನಾಟಕದ ಅತಿ ದೊಡ್ಡ ಧ್ವಜ
ವಿಧಾನಸೌಧದಲ್ಲಿ ಹಾರಿಸುವ ಈ ಧ್ವಜವು 8 ಅಡಿ ಎತ್ತರ ಮತ್ತು 12 ಅಡಿ ಅಗಲವಿರುವ ಕರ್ನಾಟಕದ ಅತಿದೊಡ್ಡ ಧ್ವಜಗಳಲ್ಲಿ ಒಂದಾಗಿದೆ. ಇದು ಎಷ್ಟು ದೊಡ್ಡದಾಗಿದೆ ಎಂದರೆ ಮೊದಲು ಕೆ.ಆರ್.ಮಾರುಕಟ್ಟೆ ಪ್ರದೇಶದವರೆಗೂ ಗೋಚರಿಸುತ್ತಿತ್ತು. ಈ ಧ್ವಜ ಹುಬ್ಬಳ್ಳಿಯ ಖಾದಿ ಗ್ರಾಮೋದ್ಯೋಗ ಘಟಕದಿಂದ ತಯಾರಾದುದಾಗಿದೆ.

Published by:Nalini Suvarna
First published: