• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ದೀಪಾವಳಿ ಬಳಿಕ ಶಾಲಾ ಆರಂಭ ದಿನಾಂಕ ನಿಗದಿ?; ಆರ್​​ಟಿಇ ವಿದ್ಯಾರ್ಥಿ, ಪೋಷಕರ ಸಂಘದಿಂದ ಸರ್ಕಾರಕ್ಕೆ ಸಲಹೆ

ದೀಪಾವಳಿ ಬಳಿಕ ಶಾಲಾ ಆರಂಭ ದಿನಾಂಕ ನಿಗದಿ?; ಆರ್​​ಟಿಇ ವಿದ್ಯಾರ್ಥಿ, ಪೋಷಕರ ಸಂಘದಿಂದ ಸರ್ಕಾರಕ್ಕೆ ಸಲಹೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಭೆಯಲ್ಲಿ ಪೋಷಕರ ಸಂಘ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪೋಷಕರ ಅಭಿಪ್ರಾಯ ತೆಗೆದುಕೊಳ್ಳದೆ ವರದಿ ಸಲ್ಲಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 9 ರಿಂದ 12 ನೇ ತರಗತಿ ಆರಂಭಿಸಲಿ ನಮ್ಮ ತಕರಾರಿಲ್ಲ. ಆದರೆ ಆರಂಭವಾಗುವ ಕಾಲೇಜುಗಳ ಪರಿಸ್ಥಿತಿ ಅವಲೋಕಿಸಿ ಶಾಲೆ ಆರಂಭಿಸಿ ಎಂದು ಸಲಹೆ ನೀಡಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು; ಶಾಲೆಗಳ ಪುನರಾರಂಭ ಮಾಡಲು ಶಿಕ್ಷಣ ಇಲಾಖೆ ಈಗಾಗಲೇ ಸಾಲು ಸಾಲು ಸಭೆ ನಡೆಸಿದೆ. ಸಭೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ, ದೀಪಾವಳಿ ಹಬ್ಬ ನಂತರ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯಿದೆ. ಶಾಲೆ ಆರಂಭದ ವಿಷಯವಾಗಿ ಆರ್ ಟಿ ಇ ವಿದ್ಯಾರ್ಥಿ ಹಾಗೂ ಪೋಷಕರ ಸಂಘ ಶಿಕ್ಷಣ ಇಲಾಖೆಗೆ ಸಲಹೆ ನೀಡಿವೆ. ಹಂತ ಹಂತವಾಗಿ ಶಾಲೆ ತೆರೆಯಲು ಅಭ್ಯಂತರವಿಲ್ಲ ಎಂದಿವೆ.


ಶಾಲೆ ಪುನರಾರಂಭ ವಿಚಾರವಾಗಿ ಶಿಕ್ಷಣ ಇಲಾಖೆ ಕಳೆದೊಂದು ವಾರದಿಂದ ಸರಣಿ ಸಭೆ ನಡೆಸಿದೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಖುದ್ದು ಸಾಲು ಸಾಲು ಸಭೆಯಲ್ಲಿ ಭಾಗವಹಿಸಿ ಸಲಹೆ ಪಡೆದಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿ ಶಾಲೆ ಪುನರಾರಂಭ ಕುರಿತು ಮಾಹಿತಿ ಕಲೆಹಾಕಿದ್ದಾರೆ‌. ಈಗಾಗಲೇ ಶಿಕ್ಷಣ ಇಲಾಖೆ ಮಾಹಿತಿ ಕಲೆಹಾಕಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ‌. ಕೋವಿಡ್ ಸಂದರ್ಭ ನೋಡಿಕೊಂಡು ಹಂತ ಹಂತವಾಗಿ ಶಾಲೆ ತೆರೆಯಲು, ಪ್ರೌಢಶಾಲೆವರೆಗೆ ತೆರೆಯಲು ತೊಂದರೆಯಿಲ್ಲ ಎಂದು ವರದಿಯಲ್ಲಿ ಅಭಿಫ್ರಾಯಪಟ್ಟಿದೆ‌. ಈ ಮಧ್ಯೆ ಇಂದು ಸಹ ಶಿಕ್ಷಣ ಇಲಾಖೆಯ ಆಯುಕ್ತರೊಂದಿಗೆ  ಆರ್​ಟಿಇ ವಿದ್ಯಾರ್ಥಿ ಮತ್ತು ಪೋಷಕರ ಸಂಘ ಸಭೆ ನಡೆಸಿದೆ‌.


ಸಭೆಯಲ್ಲಿ ಸಂಘ ಶಾಲೆ ಪುನರಾರಂಭ ಕುರಿತು ತಮ್ಮ  ಸಲಹೆ ಹಾಗೂ ಸುರಕ್ಷತಾ ಕ್ರಮಗಳನ್ನು ಹೇಗಿರಬೇಕು ಎಂದು ತಿಳಿಸಿದೆ. 


  •  ಡಿಸೆಂಬರ್ 15ರ ನಂತರ ಶಾಲೆ ಕಾಲೇಜು ಆರಂಭಿಸಬಹುದು.

  • ಮೊದಲ ಹಂತದಲ್ಲಿ 10 ಮತ್ತು 12ನೇ ತರಗತಿಗಳು ನಂತರ 15, ದಿನ ಬಿಟ್ಟು 9 ಮತ್ತು 11ನೇ ತರಗತಿಗಳನ್ನು ನಡೆಸುವುದು.

  • 10 ಮತ್ತು 12ನೇ ತರಗತಿಗಳನ್ನು ಬೆಳಿಗ್ಗೆ 7 ರಿಂದ 12 ಘಂಟೆಯವರೆಗೆ ನಡೆಸುವುದು. 9 ಮತ್ತು 11ನೇ ತರಗತಿಗಳನ್ನು 1 ರಿಂದ ಸಂಜೆ 5 ಘಂಟೆಯವರೆಗೆ ನಡೆಸುವುದು.

  • ಒಂದು ತರಗತಿಯಲ್ಲಿ ಕೇವಲ 10 ವಿದ್ಯಾರ್ಥಿಗಳು ಮಾತ್ರ ಇರಬೇಕು.

  • ಪ್ರಾರ್ಥನೆ ಸೇರಿದಂತೆ ಯಾವುದೇ ಪಠ್ಯೇತರ ಚಟುವಟಿಕೆಗಳನ್ನು ನಡೆಸಬಾರದು.

  • ಸಮವಸ್ತ್ರ, ಟೈ, ಬೆಲ್ಟ್, ಶೂ, ಸಾಕ್ಸ್ ಕಡ್ಡಾಯವಾಗಿ ಖರೀದಿ ಮಾಡುವಂತೆ ಆಡಳಿತ ಮಂಡಳಿಗಳು ಒತ್ತಾಯಿಸುವಂತಿಲ್ಲ.

  • ತರಗತಿ ಪ್ರಾರಂಭದ ಹೆಸರಿನಲ್ಲಿ ಯಾವುದೇ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುವಂತಿಲ್ಲ.

  • ಆನ್‌ಲೈನ್, ವಿದ್ಯಾಗಮ, ಯೂ ಟ್ಯೂಬ್ ಚಾನೆಲ್, ಚಂದನ ವಾಹಿನಿ ಮೂಲಕ ನೀಡಿರುವ ಶಿಕ್ಷಣದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶಗಳ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ 10 ಮತ್ತು 12ನೇ ತರಗತಿಯ ವಾರ್ಷಿಕ ಪರೀಕ್ಷೆಗಳಲ್ಲಿ ಶೇ. 10ರಷ್ಟು ಕೋವಿಡ್ ಕೃಪಾಂಕ ನೀಡಬೇಕು.


ಇದನ್ನು ಓದಿ: ಅಭಿವೃದ್ಧಿ ಮಾದರಿ ಬಿಹಾರ ಜನರ ಹೃದಯ ಗೆದ್ದಿದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ; ಪ್ರಧಾನಿ ಮೋದಿ

  • ಶಾಲೆಯಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು




  • ಪ್ರತಿಯೊಬ್ಬ ವಿದ್ಯಾರ್ಥಿಯ ಪೋಷಕರಿಂದ ಅನುಮತಿ ಪತ್ರ ಕಡ್ಡಾಯಗೊಳಿಸುವುದು.

  • ಯಾವುದೇ ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದಲ್ಲಿ ಆ ಸಮಯದಲ್ಲಿ ಶಾಲಾಡಳಿತ, ಸರ್ಕಾರ ಚಿಕಿತ್ಸಾ ಖರ್ಚು-ವೆಚ್ಚ ಭರಿಸುವುದು.

  • ಪ್ರತಿಯೊಬ್ಬ ವಿದ್ಯಾರ್ಥಿಗೂ ಆರೋಗ್ಯ ವಿಮೆ ಸೌಲಭ್ಯ ಒದಗಿಸುವುದು.

  • ಶಿಕ್ಷಕರು, ಎಲ್ಲಾ ಸಿಬ್ಬಂದಿಗಳಿಗೂ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡುವುದು.

  •  15 ದಿನಗಳಿಗೊಮ್ಮೆ ಮರು ಪರೀಕ್ಷೆ ನಡೆಸುವುದು.

  • ಶೌಚಾಲಯ, ಶುದ್ಧ ಕುಡಿಯುವ ನೀರು, ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್‌, ಥರ್ಮೋಮೀಟರ್, ಕೋವಿಡ್ ಕಿಟ್‌ಗಳನ್ನು ಕಡ್ಡಾಯವಾಗಿ ಇರುವಂತೆ ಅತ್ಯುತ್ತಮವಾದ SOP ತಯಾರಿಸುವುದು.

  • SOP ಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಇಲಾಖೆಯ ಉಪ ನಿರ್ದೇಶಕರನ್ನು ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಿಸುವುದು.

  • ಶಾಲಾ ವಾಹನಗಳಲ್ಲಿ ಹೆಚ್ಚಿನ ಮಕ್ಕಳನ್ನು ಕರೆದೊಯ್ಯದಂತೆ ನಿಗಾ ವಹಿಸುವುದು.

  • ಶಾಲಾ ಆವರಣದಲ್ಲಿ ಪೋಷಕರು ಗುಂಪಾಗಿ ಸೇರದಂತೆ ಎಚ್ಚರಿಸಬೇಕು.

  • ತರಗತಿ ಆರಂಭದ 15 ದಿನಗಳ ಮುಂಚೆಯೇ SOP ಕುರಿತು ವಿದ್ಯಾರ್ಥಿ ಪೋಷಕರಿಗೆ ಧ್ವನಿ ವರ್ಧಕಗಳ ಮೂಲಕ ಅರಿವು ಮೂಡಿಸಬೇಕು.

  • ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಇರುವ ಭಯ ಆತಂಕ ಹೋಗಲಾಡಿಸಬೇಕು.

  • ಮಕ್ಕಳನ್ನು ತರಗತಿಗಳಿಗೆ ಕಳುಹಿಸಲು ಪ್ರೇರೇಪಿಸುವುದು.



ಇದರ ಜೊತೆಗೆ ಇಂದು ನಡೆದ ಸಭೆಯಲ್ಲಿ ಪೋಷಕರ ಸಂಘ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪೋಷಕರ ಅಭಿಪ್ರಾಯ ತೆಗೆದುಕೊಳ್ಳದೆ ವರದಿ ಸಲ್ಲಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 9 ರಿಂದ 12 ನೇ ತರಗತಿ ಆರಂಭಿಸಲಿ ನಮ್ಮ ತಕರಾರಿಲ್ಲ. ಆದರೆ ಆರಂಭವಾಗುವ ಕಾಲೇಜುಗಳ ಪರಿಸ್ಥಿತಿ ಅವಲೋಕಿಸಿ ಶಾಲೆ ಆರಂಭಿಸಿ ಎಂದು ಸಲಹೆ ನೀಡಿದ್ದಾರೆ.

Published by:HR Ramesh
First published: