ಬೆಂಗಳೂರು: ಎರಡನೇ ಬಾರಿ ಸಿಎಂ ಗದ್ದುಗೆ ಏರಲು ಸಿದ್ದರಾಮಯ್ಯ (Siddaramaiah) ಸಿದ್ಧರಾಗಿದ್ದಾರೆ. ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾದರೂ ಸಿಎಂ ಆಯ್ಕೆ ಕಾಂಗ್ರೆಸ್ ಹೈಕಮಾಂಡ್ಗೆ (Congress High Command) ಕಬ್ಬಿಣದ ಕಡಲೆ ಆಗಿತ್ತು. ತಡರಾತ್ರಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಹೈಕಮಾಂಡ್ ನಾಯಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಮುಂದಿನ ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಭರವಸೆ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅಧಿಕಾರ ಹಂಚಿಕೆಗೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೈಕಮಾಂಡ್ ಆರಂಭದಿಂದಲೂ ಮೊದಲ ಅವಧಿಗೆ ಸಿದ್ದರಾಮಯ್ಯ ಅವರ ಹೆಸರನ್ನ ಸೂಚಿಸಿತ್ತು.
ಸಿದ್ದರಾಮಯ್ಯ ಮೊದಲ ಆಯ್ಕೆಗೆ ಹೈಕಮಾಂಡ್ ಕೆಲವು ಕಾರಣಗಳನ್ನು ಡಿಕೆ ಶಿವಕುಮಾರ್ ಮುಂದಿರಿಸಿ ಒಪ್ಪಿಸಿದೆ ಎನ್ನಲಾಗಿದೆ. ಮೊದಲ ಅವಧಿ ಅಂದರೆ ಎರಡು ವರ್ಷ ಸಿದ್ದರಾಮಯ್ಯ ಮತ್ತು ಮೂರು ವರ್ಷ ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಆಯ್ಕೆಗೆ ಕಾರಣಗಳೇನು?
1.ಲೋಕಸಭೆ ಚುನಾವಣೆ
2.ಅಹಿಂದ ಮತ ಬ್ಯಾಂಕ್
3.ರಾಹುಲ್ ಗಾಂಧಿ ಬೆಂಬಲ
4.ಸಮುದಾಯದ ನಾಯಕ, ಶಾಸಕರ ಬೆಂಬಲ
5.ಎಲ್ಲೂ ಶಕ್ತಿ ಪ್ರದರ್ಶನ ಮಾಡದಿರೋದು
ಸಿದ್ದರಾಮಯ್ಯ ಮನೆ ಮುಂದೆ ರಾರಾಜಿಸುತ್ತಿರುವ ಫ್ಲೆಕ್ಸ್‌ಗಳು
2ನೇ ಬಾರಿ ಸಿಎಂ ಪಟ್ಟ ಅಲಂಕರಿಸುತ್ತಿರುವ ಸಿದ್ದರಾಮಯ್ಯ ಅವರ ಮನೆ ಮುಂದೆ ಶುಭಾಶಯ ಕೋರಿ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಶುಭ ಕೋರಲು ಅಭಿಮಾನಿಗಳು ಆಗಮಿಸುವ ಹಿನ್ನೆಲೆ ಸಿದ್ದರಾಮಯ್ಯ ನಿವಾಸದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇಂದು ಸಂಜೆ ಏಳು ಗಂಟೆಗೆ ಶಾಸಕಾಂಗ ಸಭೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆದಿದ್ದಾರೆ. ಈ ಸಭೆ ಬಳಿಕ ಸಿದ್ದರಾಮಯ್ಯ ಅವರ ಹೆಸರನ್ನು ಘೋಷಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ