Acid Attack: ಆಸಿಡ್ ದಾಳಿಗೆ ಒಳಗಾಗಿದ್ದ ಸಂತ್ರಸ್ತೆಗೆ ಐವರು ಪೊಲೀಸರಿಂದ ರಕ್ತದಾನ

ಗುರುವಾರ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಪ್ರಶಾಂತ್, ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರ್ ವಿಶ್ವನಾಥ್ ರೆಡ್ಡಿ, ಚಂದ್ರಯ್ಯ, ಮೋಹನ್ ಕುಮಾರ್ ಮತ್ತು ನಟರಾಜ್ ಅವರು ರಕ್ತದಾನ ಮಾಡಿದ್ದಾರೆ.

ರಕ್ತದಾನ ಮಾಡುತ್ತಿರುವ ಪೊಲೀಸ್

ರಕ್ತದಾನ ಮಾಡುತ್ತಿರುವ ಪೊಲೀಸ್

  • Share this:
ಆಸಿಡ್ ದಾಳಿಗೆ (Acid Attack) ಒಳಗಾಗಿದ್ದ ಯುವತಿಗೆ ಬೆಂಗಳೂರಿನ ಐವರು ಪೊಲೀಸರು (Police) ರಕ್ತದಾನ (Blood Donate) ಮಾಡಿದ್ದಾರೆ. ಏಪ್ರಿಲ್ 28ರಂದು ಕಾಮಾಕ್ಷಿಪಾಳ್ಯದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಯುವತಿ ಮೇಲೆ ನಾಗೇಶ್ ಅಲಿಯಾಸ್ ನಾಗ ಎಂಬಾತ ದಾಳಿ ನಡೆಸಿದ್ದನು. ಆಸಿಡ್ ದಾಳಿಗೆ ಒಳಗಾಗಿದ್ದಂತೆ ಸಂತ್ರಸ್ತೆಗೆ ಮೂರು ಸರ್ಜರಿ (Surgery) ನಡೆದಿದ್ದು, ಈ ವೇಳೆ ರಕ್ತದಾನ ಮಾಡಿದ್ದಾರೆ. ಗುರುವಾರ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಪ್ರಶಾಂತ್, ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರ್ ವಿಶ್ವನಾಥ್ ರೆಡ್ಡಿ, ಚಂದ್ರಯ್ಯ, ಮೋಹನ್ ಕುಮಾರ್ ಮತ್ತು ನಟರಾಜ್ ಅವರು ರಕ್ತದಾನ ಮಾಡಿದ್ದಾರೆ. ಒಟ್ಟು ಐದು ಯುನಿಟ್ ರಕ್ತದಾನ ಮಾಡಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ (DCP Sanjeev Patil) ಇಂಡಿಯನ್ ಎಕ್ಸ್​ ಪ್ರೆಸ್ ಗೆ ಹೇಳಿದ್ದಾರೆ.

ಆಸಿಡ್ ದಾಳಿ ಬಳಿಕ ಆರೋಪಿ ನಾಗೇಶ್ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ವೇಷ ಬದಲಿಸಿಕೊಂಡು ಮಠವೊಂದರಲ್ಲಿ ಆಶ್ರಯ ಪಡೆದಿದ್ದನು. ಮೇ 13ರಂದು ತಮಿಳುನಾಡಿನಿಂದ ಕರೆ ತರುವಾಗ ಕೆಂಗೇರಿ ಬಳಿ ಪರಾರಿಯಾಗಲು ಪ್ರಯತ್ನಿಸಿದ್ದರು. ಈ ವೇಳೆ ಆರೋಪಿಯ ಕಾಲಿಗೆ ಗುಂಡೇಟು ನೀಡಿದ್ದರು.

ಇನ್ನೂ ಪೊಲೀಸರು ರಕ್ತದಾನ ಮಾಡಿರೋದಕ್ಕೆ ಸೇಂಟ್ ಜಾನ್ಸ್ ಆಸ್ಪತ್ರೆ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವತಿಗೆ ಇದುವರೆಗೂ ಮೂರು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶೀಘ್ರದಲ್ಲಿ ಯೇ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ.

ಮದುವೆಯಾಗಲು ಸಮಯಾವಕಾಶ ಕೇಳಿದ್ದಕ್ಕೆ ಆಸಿಡ್ ಹಾಕಿದ ನೀಚ

ಬೆಂಗಳೂರಿನ ಸಾರಕ್ಕಿ ಸಿಗ್ನಲ್ ಬಳಿ ಮಹಿಳೆಯ ಮೇಲೆ ಆಸಿಡ್ ದಾಳಿ ನಡೆದಿದೆ. ಬೆಂಗಳೂರಿನ ಗೋರಿಪಾಳ್ಯದ ನಿವಾಸಿ ಅಹಮದ್ ಆಸಿಡ್ ದಾಳಿ ನಡೆಸಿದ ಕಿರಾತಕ. ಅಹಮದ್ ಸಂತ್ರಸ್ತ ಮಹಿಳೆಯ (Victim) ಜೊತೆ ಕಳೆದ ಎರಡು ವರ್ಷಗಳಿಂದ ಅಕ್ರಮ ಸಂಬಂಧದಲ್ಲಿದ್ದನು (Relationship) ಎಂದು ತಿಳಿದು ಬಂದಿದೆ.

ಇದನ್ನೂ ಓದಿ:  Acid Attack: ಬೆಂಗಳೂರಿನ ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ

ಇಂದು ಬೆಳಗ್ಗೆ ಕೆ ಎಸ್ ಲೇಔಟ್ (KS Layout) ನಿಂದ ಜೆ ಪಿ ನಗರದ (JP Nagara) ಕಡೆ ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿದ ಅಹಮದ್, ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದನು.  ಸಂತ್ರಸ್ತೆಯ ಮುಖದ ಮೇಲೆ ಆಸಿಡ್ ಬದ್ದಿದ್ದು, ಬಲ ಕಣ್ಣಿನ ಭಾಗದಲ್ಲಿ ಗಂಭೀರ ಗಾಯವಾಗಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ಮಹಿಳೆಯನ್ನು ಮಿಂಟೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದಿ ರಿಲೇಶನ್ ಶಿಪ್

ಸಂತ್ರಸ್ತೆ ಮತ್ತು ಅಹಮದ್ ಇಬ್ಬರು ಒಬ್ಬರನ್ನೊಬ್ಬರು ಇಷ್ಟ ಪಟ್ಟಿದ್ರು. ಕಳೆದ ಎರಡು ವರ್ಷಗಳಿಂದ ರಿಲೇಶನ್ ಶಿಪ್ ನಲ್ಲಿದ್ದರು. ಆದ್ರೆ ಮಹಿಳೆಗೆ ಮದುವೆಯಾಗಿ, ಮಕ್ಕಳಿದ್ದಾರೆ.

ಮಹಿಳೆಗೆ ತನ್ನನ್ನು ಮದುವೆಯಾಗುವಂತೆ ಅಹಮದ್ ಒತ್ತಡ ಹಾಕಿದ್ದನು. ಮೊದಲ ಮದುವೆಯ ಬಂಧನದಿಂದ ಹೊರ ಬರಲು ಮಹಿಳೆ ಸಮಯ ಕೇಳಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು.

ಇದನ್ನೂ ಓದಿ:   Acid Attack: ಆನ್​ಲೈನ್​ನಲ್ಲಿ ಪರಿಚಯವಾದ ಲವರ್​ ಮದುವೆಯಾಗಲು ನಿರಾಕರಿಸಿದ್ದಕ್ಕೆ ಆ್ಯಸಿಡ್ ಎರಚಿದ ಮಹಿಳೆ!

ಆ್ಯಸಿಡ್ ದಾಳಿ ಪ್ರಕರಣಗಳು

ಇಂದು ಪ್ರಪಂಚದ ಅನೇಕ ಭಾಗಗಳಲ್ಲಿ ಆಸಿಡ್ ದಾಳಿಗಳು ವರದಿಯಾಗಿವೆ, ಆದರೂ ಸಾಮಾನ್ಯವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ. 1999 ಮತ್ತು 2013ರ ನಡುವೆ, ಒಟ್ಟು 3,512 ಬಾಂಗ್ಲಾದೇಶದ ಜನರು ಆಸಿಡ್ ದಾಳಿಗೆ ಒಗಾಗಿದ್ದಾರೆ.

ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಾದ ಕಾನೂನು ಮತ್ತು ನಿಯಂತ್ರಣದ ಆಧಾರದ ಮೇಲೆ 2002 ರಿಂದ ಪ್ರತಿ ವರ್ಷ ಪ್ರಕರಣಗಳ ದರವು 15%–20% ರಷ್ಟು ಕಡಿಮೆಯಾಗಿದೆ. ಪ್ರತಿ ವರ್ಷ 250-300 ಘಟನೆಗಳು ವರದಿಯಾಗುತ್ತವೆ, ಆದರೆ "ಆಸಿಡ್ ಸರ್ವೈವರ್ಸ್ ಟ್ರಸ್ಟ್ ಇಂಟರ್ನ್ಯಾಷನಲ್ ಪ್ರಕಾರ, ನಿಜವಾದ ಸಂಖ್ಯೆ 1,000 ಮೀರಬಹುದು".
Published by:Mahmadrafik K
First published: