ಜೆಡಿಎಸ್​ಗೆ ಅವಕಾಶ ಕೊಟ್ಟರೆ ಪಂಚರತ್ನ ಯೋಜನೆ ಜಾರಿ; ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ

ಇಂದಿನ ಪ್ರಮುಖ ಸಭೆಗೆ 32 ಜನರನ್ನು ಕರೆದಿದ್ದೆವು. ಕೆಲವರು ಒಪ್ಪಿಗೆ ಪಡೆದು ಗೈರಾಗಿದ್ದಾರೆ. ಏಳು ವಿಭಾಗಗಳ ವೀಕ್ಷಕರ ತಂಡ ರಚಿಸಲಾಗಿದೆ. ಮೈಸೂರು, ಬೆಂಗಳೂರು, ಕೋಲಾರ- ಚಿಕ್ಕಬಳ್ಳಾಪುರ, ಕರಾವಳಿ, ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ವಿಭಾಗಗಳ ರಚನೆ ಮಾಡಲಾಗಿದೆ. ಎಲ್ಲಾ ತಂಡಗಳು ಆಯಾ ಜಿಲ್ಲೆಗಳಲ್ಲಿ ಜನರ ಪರ ಹೋರಾಟ ಮಾಡಬೇಕು. ನಿರಂತರವಾಗಿ ಸಭೆಗಳನ್ನು ನಡೆಸಬೇಕು.  ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ.

ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ.

 • Share this:
  ಬೆಂಗಳೂರು; ನಿನ್ನೆ ಗೃಹ ಸಚಿವ ಅಮಿತ್ ಶಾ ಅವರ ಭಾಷಣ ನೋಡಿದೆ. ಭಾಷಣ ನೋಡಿ ನನಗೆ ನಗು ಬರುತ್ತಿತ್ತು. ಕೊಪ್ಪಳದಲ್ಲಿ ಆಟಿಕೆ ತಯಾರಿಕೆಗೆ ನಾನು ಯೋಜನೆ ತಂದಿದ್ದೆ.  ಕಾಂಪಿಟ್ ವಿತ್ ಚೈನಾ ಯೋಜನೆ ತಂದಿದ್ದೆ. ಕೊಪ್ಪಳದಲ್ಲಿ ಆಟಿಕೆ ತಯಾರಿಕೆ ಕೇಂದ್ರ ತಂದಿದ್ದು ನಾನು. ಆದರೆ ಬಿಜೆಪಿ ನಿನ್ನೆ ಅಡಿಗಲ್ಲು ಹಾಕಿದೆ. ಸೌಜನ್ಯಕ್ಕೂ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿಲ್ಲ. ಇದು ಮಾನವೀಯತೆ ಇಲ್ಲದ ಸರ್ಕಾರ  ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

  ಇಂದು ಜೆ.ಡಿ.ಎಸ್ ಪಕ್ಷದ ಕೇಂದ್ರ ಕಚೇರಿ ಜೆ.ಪಿ ಭವನದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಯಿತು. ಸಭೆಯಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಯಾವ ಪಕ್ಷದ ಶಕ್ತಿ ಏನು ಎಂಬುದು ಗೊತ್ತಿದೆ. ನಮ್ಮ ಪಕ್ಷದ ಅಸ್ತಿತ್ವ ಗಟ್ಟಿಯಾಗಿದೆ. ಬಿಜೆಪಿಯವರು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದಿದ್ದೇವೆ ಅಂತಿದ್ದಾರೆ. ಜಿಲ್ಲಾ, ತಾಲ್ಲೂಕು ಪಂಚಾಯ್ತಿಗಳಲ್ಲಿ ಗೆದ್ದೇಬಿಡ್ತೇವೆ ಅಂತಿದ್ದಾರೆ.  ಆದರೆ, ಅದೆಲ್ಲಾ ಆಗೋದಿಲ್ಲಾ ಎಂದು ಹೇಳಿದರು. ಕೊರೋನಾ ಕಾರಣದಿಂದ ರಾಜ್ಯ ಪ್ರವಾಸ ಸಾಧ್ಯವಾಗಲಿಲ್ಲ. ಇದೇ ತಿಂಗಳ ಕೊನೆಯಲ್ಲಿ ಮೊದಲನೇ ಹಂತದ ಪ್ರವಾಸ ಮಾಡುತ್ತೇನೆ. ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚು ಆದ್ಯತೆ ಕೊಡುತ್ತಿದ್ದೇವೆ ಎಂದರು.

  'ಪಂಚರತ್ನ' ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿದ್ದೇನೆ. ನನ್ನ ಯೋಜನೆಗಳನ್ನು ಬೇರೆಯವರು ಹೈಜಾಕ್ ಮಾಡಲು ಸಾಧ್ಯವಿಲ್ಲ. ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಕ್ಷೇತ್ರಗಳ ಜೊತೆಗೆ ಸಾಲ ರಹಿತ ರೈತನ ಬದುಕು ರೂಪಿಸುವುದೇ ನನ್ನ ಪಂಚರತ್ನ ಯೋಜನೆ ಉದ್ದೇಶ. ಯುಕೆಜಿಯಿಂದ ಪಿಯುವರೆಗೆ ಉಚಿತ ಶಿಕ್ಷಣ. ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವುದು ನನ್ನ ಮುಖ್ಯ ಉದ್ದೇಶ. ಮೈತ್ರಿ ಸರ್ಕಾರದ ಹದಿನಾಲ್ಕು ತಿಂಗಳಲ್ಲಿ ಕಾಂಗ್ರೆಸ್ ಯೋಜನೆಗಳನ್ನು ಕಾಪಿ ಮಾಡಿಲ್ಲ. ನನ್ನದೇ ಯೋಜನೆಗಳನ್ನು ಕೊಟ್ಟಿದ್ದೇನೆ.  ಮೋದಿಯವರ ಆತ್ಮನಿರ್ಭಾರ್ ನನ್ನ ಕಾರ್ಯಕ್ರಮ. ನನ್ನ ಪಕ್ಷಕ್ಕೆ ಅವಕಾಶ ಕೊಟ್ಟರೆ ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇನೆ. ಜನರ ಮುಂದೆ ಹೋಗುತ್ತೇವೆ. ಜನರು ಸ್ವೀಕರಿಸುತ್ತಾರೋ ಇಲ್ಲವೋ ನೋಡೋಣ ಎಂದು ಹೇಳಿದರು.

  ಇದನ್ನು ಓದಿ: ಸಿದ್ಧರಾಮಯ್ಯ ಮತ್ತೆ ಸಿಎಂ ಆಗಲು ಹಗಲುಗನಸು‌‌ ಕಾಣುತ್ತಿದ್ದಾರೆ; ಡಿಸಿಎಂ ಗೋವಿಂದ ಕಾರಜೋಳ

  ರೋಗ ಇದ್ರೆ ಚಿಕಿತ್ಸೆ ಕೊಡಿಸಿ ವಾಸಿ ಮಾಡಬಹುದು. ಆದರೆ, ರೋಗ ಬಂದವರ ಹಾಗೆ ನಾಟಕ ಮಾಡುವವರಿಗೆ ಹೇಗೆ ಚಿಕಿತ್ಸೆ ಕೊಡೋದು. ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಅಸಮಾಧಾನ ಇದ್ದಲ್ಲಿ ಬಗೆಹರಿಸುತ್ತೇವೆ. ಪಕ್ಷದ ಮೇಲೆ ನಿಷ್ಠೆ ಇರೋರು ಯಾರೂ ಬಿಟ್ಟು ಹೋಗೋದಿಲ್ಲ. ಹೋಗೋರನ್ನು ತಡೆಯೋದಿಲ್ಲ. ಪಕ್ಷದಲ್ಲಿ ಈಗಲೂ ‌ನಿಷ್ಠಾವಂತರು ಇದ್ದಾರೆ. ಯಾವ ಪಕ್ಷದ ‌ಮನೆ ಬಾಗಿಲಿಗೂ ಬನ್ನಿ ಅಂತಾ ಹೋಗೋದಿಲ್ಲ. ಅವರಾಗಿಯೇ ಬಂದರೆ ಸೇರಿಸಿಕೊಳ್ತೇವೆ. ಸಿಎಂ ಇಬ್ರಾಹಿಂ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ. ಏನಾದರೂ ಜವಾಬ್ದಾರಿ ಕೊಡಬೇಕಲ್ಲಾ? ಸುಮ್ಮಸುಮ್ಮನೆ ಕರೆಸಿಕೊಳ್ಳೋಕೆ ಆಗುತ್ತಾ ಎಂದು ಹೇಳಿದರು.

  ಇಂದಿನ ಪ್ರಮುಖ ಸಭೆಗೆ 32 ಜನರನ್ನು ಕರೆದಿದ್ದೆವು. ಕೆಲವರು ಒಪ್ಪಿಗೆ ಪಡೆದು ಗೈರಾಗಿದ್ದಾರೆ. ಏಳು ವಿಭಾಗಗಳ ವೀಕ್ಷಕರ ತಂಡ ರಚಿಸಲಾಗಿದೆ. ಮೈಸೂರು, ಬೆಂಗಳೂರು, ಕೋಲಾರ- ಚಿಕ್ಕಬಳ್ಳಾಪುರ, ಕರಾವಳಿ, ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ವಿಭಾಗಗಳ ರಚನೆ ಮಾಡಲಾಗಿದೆ. ಎಲ್ಲಾ ತಂಡಗಳು ಆಯಾ ಜಿಲ್ಲೆಗಳಲ್ಲಿ ಜನರ ಪರ ಹೋರಾಟ ಮಾಡಬೇಕು. ನಿರಂತರವಾಗಿ ಸಭೆಗಳನ್ನು ನಡೆಸಬೇಕು.  ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಜಿಲ್ಲಾ, ತಾಲ್ಲೂಕು ಚುನಾವಣೆಗೆ ಪರಿಣಾಮಕಾರಿ ಕೆಲಸ ಮಾಡಬೇಕು. ಹಾಗಾಗಿ ಆಯಾ ಭಾಗದ ಜವಾಬ್ದಾರಿಯನ್ನು ಕೊಟ್ಟಿದ್ದೇವೆ ಎಂದು ಹೇಳಿದರು.
  Published by:HR Ramesh
  First published: