ರಸ್ತೆಯಲ್ಲಿ ಸೈಡ್​​ ಕೊಡದಿದ್ದಕ್ಕೆ ಲಾಂಗ್​ ತೋರಿಸಿದ ದುಷ್ಕರ್ಮಿಗಳು; ಸಿಲಿಕಾನ್​ ಸಿಟಿಯಲ್ಲಿ ಘಟನೆ

ಬಳಿಕ ಇವರು ಕಾರ್‌ನಲ್ಲಿದ್ದ ಲಾಂಗ್ ಎತ್ತಿ ಟಾಟಾ ಏಸ್​​ ಚಾಲಕನಿಗೆ ಬೆದರಿಸಿ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಬಳಿಕ ಆತನಿಂದ ಮೊಬೈಲ್ ಮತ್ತು ಚೈನ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.

Latha CG | news18-kannada
Updated:November 14, 2019, 8:00 PM IST
ರಸ್ತೆಯಲ್ಲಿ ಸೈಡ್​​ ಕೊಡದಿದ್ದಕ್ಕೆ ಲಾಂಗ್​ ತೋರಿಸಿದ ದುಷ್ಕರ್ಮಿಗಳು; ಸಿಲಿಕಾನ್​ ಸಿಟಿಯಲ್ಲಿ ಘಟನೆ
ಪ್ರಾತಿನಿಧಿಕ ಚಿತ್ರ
  • Share this:
ನೆಲಮಂಗಲ(ನ.14): ರಸ್ತೆಯಲ್ಲಿ ಕಾರ್​​ಗೆ ಸೈಡ್​ ಕೊಡದಿದ್ದಕ್ಕೆ ಚಾಲಕನಿಗೆ ಲಾಂಗ್​​ನಿಂದ ಹಲ್ಲೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರಿನ ನಾಗಸಂದ್ರ ಬಳಿ ನಡೆದಿದೆ.

ನೆಲಮಂಗಲದ ಕಡೆ ಟಾಟಾ ಏಸ್​ ವಾಹನ ತೆರಳುತ್ತಿತ್ತು. ಅದರ ಹಿಂದೆ ಇಟಿಯೋಸ್​ ಕಾರ್ ಹೋಗುತ್ತಿತ್ತು. ಐವರು ದುಷ್ಕರ್ಮಿಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅದು ಬಾಡಿಗೆ ಕಾರು ಎನ್ನಲಾಗಿದೆ. ಈ ವೇಳೆ ಟಾಟಾ ಏಸ್​ ಸೈಡ್​​ ಕೊಡಲಿ ಎಂದು ಕಾರ್​​ ಚಾಲಕ ಹಾರನ್​ ಮಾಡಿದ್ದಾನೆ. ಟಾಟಾ ಏಸ್​ ಚಾಲಕ ಸೈಡ್​ ಕೊಡದೇ ತನ್ನ ಪಾಡಿಗೆ ಹೋಗುತ್ತಿದ್ದ. ಇದರಿಂದ ಕಾರ್​​ನಲ್ಲಿದ್ದವರು ಕೋಪಗೊಂಡಿದ್ದಾರೆ.

ಶಿವಾಜಿನಗರದಲ್ಲಿ ಶರವಣಗೆ ಟಿಕೆಟ್: ಬಿಜೆಪಿಯಿಂದ ಅಧಿಕೃತ ಘೋಷಣೆ; ರೋಷನ್ ಬೇಗ್​ಗೆ ನಿರಾಸೆ

ಬಳಿಕ ಇವರು ಕಾರ್‌ನಲ್ಲಿದ್ದ ಲಾಂಗ್ ಎತ್ತಿ ಟಾಟಾ ಏಸ್​​ ಚಾಲಕನಿಗೆ ಬೆದರಿಸಿ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಬಳಿಕ ಆತನಿಂದ ಮೊಬೈಲ್ ಮತ್ತು ಚೈನ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.

ತಕ್ಷಣವೇ ಪೀಣ್ಯ ಸಂಚಾರಿ ಪೊಲೀಸರು  ಸ್ಥಳಕ್ಕಾಗಮಿಸಿದ್ದಾರೆ. ಕಾರಿನಲ್ಲಿದ್ದ ಐವರಲ್ಲಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರು ಆರೋಪಿಗಳು ಪೊಲೀಸರು ಬರುವಾಗ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಬಂಧಿತ ಆರೋಪಿಗಳು ಪೀಣ್ಯ ಪೊಲೀಸ್ ಠಾಣೆಯಲ್ಲಿದ್ದಾರೆ. ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ. ಆರೋಪಿಗಳಿಂದ ಮೂರು ಲಾಂಗ್​ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.  ಪರಾರಿಯಾಗಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಪೀಣ್ಯ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಮಕ್ಕಳಿಗೆ ವಿಷವುಣಿಸಿ ತಾಯಿಯೂ ಆತ್ಮಹತ್ಯೆಗೆ ಯತ್ನ; ಚಿಕಿತ್ಸೆ ಫಲಿಸದೆ ಮಗು ಸಾವು
First published:November 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ