Sad News: ಅಜ್ಜಿ ಮನೆಗೆ ಬಂದು ಈಜಲು ಹೋಗಿದ್ದ ಒಂದೇ ಕುಟುಂಬದ ಐವರು ನೀರುಪಾಲು!

ಐವರು ನೀರುಪಾಲು!

ಐವರು ನೀರುಪಾಲು!

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಐವರು ಕೂಡ ನಿನ್ನೆ ಅಜ್ಜಿ ಮನೆಗೆ ಬಂದಿದ್ದರು. ನಿನ್ನೆಯೂ ನೀರಿನಲ್ಲಿ ಆಟವಾಡಿದ್ದ ಎಲ್ಲರೂ, ಇಂದು ಕೂಡ ದೊಡ್ಡ ಕೊತ್ತಗೆರೆ ಬಳಿಯ ವಿಶ್ವೇಶ್ವರಯ್ಯ ನಾಲೆಯಲ್ಲಿ ಆಟವಾಡ್ತಿದ್ದರು.

  • News18 Kannada
  • 5-MIN READ
  • Last Updated :
  • Mandya, India
  • Share this:

ಮಂಡ್ಯ: ಈಜಲು ಹೋದ ಒಂದೇ ಕುಟುಂಬದ ಐವರು ನೀರುಪಾಲಾಗಿರುವ ಹೃದಯ ವಿದ್ರಾವಕ (Sad News) ಘಟನೆ ಮಂಡ್ಯ (Mandya) ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ತಾಲೂಕಿನ ದೊಡ್ಡಕೊತ್ತಗೆರೆ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದ್ದು, ನೀರುಪಾಲಾದವರ (Death Case) ಪೈಕಿ ಮೂವರ ಶವ ಪತ್ತೆಯಾಗಿದೆ. ಇನ್ನಿಬ್ಬರ ಶವಕ್ಕಾಗಿ ಶೋಧ ಮುಂದುವರೆದಿದೆ.


ಮೃತ ಐವರನ್ನು ಅನೀಷಾ ಬೇಗಂ (10), ತಸ್ಮಿಯಾ (22), ಮೆಹತಾಬ್ (10), ಅಶ್ರಕ್ (28) ಮತ್ತು ಅಫೀಕಾ (22) ಎಂದು ಗುರುತಿಸಲಾಗಿದ್ದು, ಮೃತರೆಲ್ಲರೂ ಬೆಂಗಳೂರು ನಗರದ ನೀಲಸಂದ್ರ ನಿವಾಸಿಗಳು ಎಂದು ತಿಳಿದು ಬಂದಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಐವರು ಕೂಡ ನಿನ್ನೆ ಅಜ್ಜಿ ಮನೆಯಾದ ಹಲ್ಲೆಗೆರೆಗೆ ಬಂದಿದ್ದರು. ನಿನ್ನೆಯೂ ನೀರಿನಲ್ಲಿ ಆಟವಾಡಿದ್ದ ಎಲ್ಲರೂ, ಇಂದು ಕೂಡ ದೊಡ್ಡ ಕೊತ್ತಗೆರೆ ಬಳಿಯ ವಿಶ್ವೇಶ್ವರಯ್ಯ ನಾಲೆಯಲ್ಲಿ ಆಟವಾಡ್ತಿದ್ದರು.


ಇದನ್ನೂ ಓದಿ: Viral Video: ಕೀಬೋರ್ಡ್‌ ನುಡಿಸಿ ಕನ್ನಡ ಹಾಡು ಹೇಳಿದ ಬಾಲಕಿಯ ಪ್ರತಿಭೆಗೆ ಪ್ರದಾನಿ ನರೇಂದ್ರ ಮೋದಿ ಫಿದಾ!


ರಕ್ಷಿಸಲು ಹೋದಾಗ ದುರ್ಘಟನೆ


ನಾಲೆಯ ನೀರಿನಲ್ಲಿ ಈಜಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ನೀರಿನ ರಭಸಕ್ಕೆ ಬಾಲಕನೊಬ್ಬ ಏಕಾಏಕಿ ಕೊಚ್ಚಿಕೊಂಡು ಹೋಗಿದ್ದಾನೆ. ಈ ವೇಳೆ ಆತನನ್ನು ಗಮನಿಸಿದ ನಾಲ್ವರು ಕೂಡ ಬಾಲಕನ ರಕ್ಷಣೆಗೆ ನೀರಿನಲ್ಲಿ ಈಜಾಡಲು ಮುಂದಾಗಿದ್ದು, ಆಗ ನೀರಿನಲ್ಲಿ ಕೊಚ್ಚಿಕೊಂಡು ಹೋಗು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.


ಇನ್ನು ನೀರುಪಾಲಾದವರ ಪೈಕಿ ಅನೀಷಾ ಬೇಗಂ(10), ತಸ್ಮಿಯಾ (22) ಮತ್ತು ಮೆಹತಾಬ್‌ನ (10) ಶವಗಳು ಪತ್ತೆ ಆಗಿದ್ದು, ಆದರೆ ನೀರಿನಲ್ಲಿ ಕೊಚ್ಚಿ ಹೋಗಿರುವ ಅಶ್ರಕ್ (28), ಅಫೀಕಾ (22) ಅವರ ಶವಗಳಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ಮುಂದುವರೆಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನುರಿತ ಈಜಗಾರರಿಂದ ಶವಗಳಿಗಾಗಿ ಶೋಧ ನಡೆಸಲಾಗಿದೆ. ಘಟನೆ ಸಂಬಂಧ ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


ಇನ್ನು ತಮ್ಮ ಮನೆಯ ಮಕ್ಕಳು ನೀರು ಪಾಲಾಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರೆಲ್ಲ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ತಮ್ಮ ಮನೆಯ ಮಕ್ಕಳನ್ನು ಕಳೆದುಕೊಂಡು ದುಃಖಿತರಾದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರ ಮನೆಯ ಮಹಿಳೆಯರು ನೋವಿನಿಂದ ಸ್ಥಳದಲ್ಲೇ ಹೊರಳಾಡಿ ನಮ್ಮ ಮಕ್ಕಳು ಬೇಕು ಎಂದು ಅಳುತ್ತಿದ್ದಾಗ ಅಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾಗಿದ್ದವು.


ಇದನ್ನೂ ಓದಿ: Viral News: ಕುಡಿತದ ನಶೆಯಲ್ಲಿ ಸಹಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ; ದೆಹಲಿ ಏರ್‌ಪೋರ್ಟ್‌ನಲ್ಲಿ ಆರೋಪಿ ಅರೆಸ್ಟ್‌


ಬೆಳಗಾವಿಯಲ್ಲೂ ನಡೆದಿತ್ತು ಅವಘಡ!


ಬೆಳಗಾವಿ: ಇತ್ತೀಚೆಗೆ ಬೆಳಗಾವಿಯಲ್ಲೂ ಈಜಲು ಹೋದ ಯುವಕರು ನೀರುಪಾಲಾಗಿದ್ದ ಘಟನೆ ನಡೆದಿತ್ತು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ದುಪದಾಳ ಬಳಿಯ ಘಟಪ್ರಭಾ ನದಿಗೆ ಈಜಲು ಹೋಗಿದ್ದ ನಾಲ್ವರು ಯುವಕರು ನೀರುಪಾಲಾಗಿದ್ದು, ಮೃತರನ್ನು ಸಂತೋಷ ಬಾಬು ಇಟಗಿ (18), ಅಜಯ್ ಬಾಬು ಜೋರೆ (18), ಕೃಷ್ಣಾ ಬಾಬು ಜೋರೆ (22) ಮತ್ತು ಆನಂದ ಕೋಕರೆ (19) ಎಂದು ಗುರುತಿಸಲಾಗಿದೆ.

top videos


    ಮೃತ ನಾಲ್ವರೂ ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ಹಿರಿಗೆರೆ ಗ್ರಾಮದವರು ಎಂದು ತಿಳಿದು ಬಂದಿದೆ.

    First published: