• Home
  • »
  • News
  • »
  • state
  • »
  • Accident: ಬರ್ತ್‌ ಡೇ ಪಾರ್ಟಿಗೆ ಹೋದವರಿಗಾಗಿ ಕಾದಿದ್ದ ಜವರಾಯ! ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು

Accident: ಬರ್ತ್‌ ಡೇ ಪಾರ್ಟಿಗೆ ಹೋದವರಿಗಾಗಿ ಕಾದಿದ್ದ ಜವರಾಯ! ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೊಪ್ಪಳದ ಖಾಸಗಿ ಹೋಟೆಲ್‌ನಲ್ಲಿ ಬರ್ತ್ ಡೇ ಕಾರ್ಯಕ್ರಮದ ಇತ್ತು. ಅದನ್ನು ಮುಗಿಸಿ ಬೇಗ ಮನೆ ಸೇರಬೇಕೆಂದು ಹೊರಟಿದ್ದರು. ಕೊಪ್ಪಳದಿಂದ 15 ಕಿಮೀ ದೂರ ಹೋಗಿದ್ದರು. ಇನ್ನೂ ಅರ್ಧ ಗಂಟೆಯಾಗಿದ್ದರೆ, ಅವರು ಬಿನ್ನಾಳದ ಮನೆ ಸೇರುತ್ತಿದ್ದರು. ಅಷ್ಟರಲ್ಲಿ ಆಗಿದ್ದೇ ಬೇರೆ!

  • Share this:

ಕೊಪ್ಪಳ: ಸಂಬಂಧಿಗಳ (Relatives) ಮನೆಯಲ್ಲಿ ಮಗುವಿನ ಹುಟ್ಟ ಹಬ್ಬ (Birthday) ಇತ್ತು. ಹೀಗಾಗಿ ಅವರೆಲ್ಲ ಈ ಹುಟ್ಟು ಹಬ್ಬ ಆಚರಿಸಿದ ನಂತರ ಊಟ ಮಾಡಿ  ತಮ್ಮ ಸ್ವಗ್ರಾಮಕ್ಕೆ ಹೊರಟಿದ್ದರು. ಆದರೆ ವಿಧಿ ಅವರನ್ನು ಸೇರಿಸಿದ್ದು ಮಾತ್ರ ಮಸಣಕ್ಕೆ.‌ ಬರ್ತ್ ಡೇ ಮುಗಿಸಿಕೊಂಡು ಸ್ಕಾರ್ಪಿಯೋದಲ್ಲಿ (Scorpio) ಊರಿಗೆ ಹೊರಟಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ 5 ಜನರು ಧಾರುಣವಾಗಿ ಸಾವನ್ನಪ್ಪಿದ್ದಾರೆ. ಕೊಪ್ಪಳ (Koppal) ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರದ ಬಳಿ ನಿನ್ನೆ ರಾತ್ರಿ 10.30 ರ ಸುಮಾರಿಗೆ ಭೀಕರ ಅಪಘಾತವೊಂದು (Accident) ಸಂಭವಿಸಿದೆ. ಅಪರಿಚಿತ ವಾಹನವೊಂದು ಸ್ಕಾರ್ಪಿಯೋಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಕಾರ್ಪಿಯೋ ದಲ್ಲಿದ್ದ 9 ಜನರ ಪೈಕಿ ಐದು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನುಳಿದ ನಾಲ್ಕು ಜನರು ಗಾಯಾಳು ಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.  


ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಕುಟುಂಬ


ಮೊಮ್ಮಗನ ಹುಟುಹಬ್ಬಕ್ಕೆ ಬಂದಿದ್ದ ಸಂಬಂಧಿಕರು


ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ದೇವಪ್ಪ ಕೊಪ್ಪದ್ ಎನ್ನುವರು ಅವರ ಕುಟುಂಬದವರನ್ನು ಕರೆದುಕೊಂಡು ಕೊಪ್ಪಳದಲ್ಲಿಯ ಮಾಜಿ ಸೈನಿಕ ಹಾಗು ಡಿಆರ್ ಮುಖ್ಯಪೇದೆ ಆಗಿರುವ ಶರಣಪ್ಪ ಕೊಪ್ಪದವರ ಮಗ ಸರ್ವೇಯರ್ ಬಸವರಾಜರ ಮಗಳ ಪ್ರಥಮ ವರ್ಷದ ಹುಟ್ಟು ಹಬ್ಬ ಆಚರಣೆ ಇತ್ತು. ಮಧ್ಯಾಹ್ನವೇ ಬಿನ್ನಾಳದ ಕೊಪ್ಪದ ಕುಟುಂಬವು ತಮ್ಮನ ಮೊಮ್ಮಗಳ ಮನೆಗೆ ಬಂದಿದ್ದರು.  ಹುಟ್ಟು ಹಬ್ಬಕ್ಕೆಂದು ಕೊಪ್ಪಳಕ್ಕೆ ಬಂದಿದ್ದರು.‌


ನುಜ್ಜುಗುಜ್ಜಾಗಿರುವ ವಾಹನ


ರಾತ್ರಿ ಉಳಿದುಕೊಳ್ಳಿ ಎಂದರೂ ಕೇಳದೇ ಹೊರಟಿದ್ದರು


ರಾತ್ರಿ ಹುಟ್ಟುಹಬ್ಬ ಮುಗಿಸಿಕೊಂಡು ಮರಳಿ ಬಿನ್ನಾಳ ಗ್ರಾಮಕ್ಕೆ ಬರುತ್ತಿದ್ದರು. ಆದರೆ ವಿಧಿ ಅವರನ್ನು ಯಮ ಲೋಕಕ್ಕೆ ಕರೆದುಕೊಂಡು ಹೋಗಿದೆ. ಶರಣಪ್ಪ ಕುಟುಂಬದಲ್ಲಿ ಸಮಾರಂಭ 10 ಗಂಟೆಗೆ ಮುಗಿದ ನಂತರ ಇವತ್ತು ಇದ್ದು ನಾಳೆ ಬೆಳಗ್ಗೆ ಬಿನ್ನಾಳಕ್ಕೆ ಹೋಗಿ ಎಂದರೂ ಕೇಳಿರಲಿಲ್ಲ. ಅವರೆಲ್ಲ ಸಂತೋಷ ಸಂಭ್ರಮದ ಸವಿ ನೆನಪಲ್ಲಿ ಹೊರಟಿದ್ದರು.


ಇದನ್ನೂ ಓದಿ: Accident: ಆಂಧ್ರದಲ್ಲಿ ಕರ್ನಾಟಕ ಪೊಲೀಸರ ವಾಹನ ಅಪಘಾತ; ಶಿವಾಜಿನಗರ ಪಿಎಸ್ಐ, ಕಾನ್ಸ್‌ಟೇಬಲ್ ಸೇರಿ ಮೂವರ ದುರ್ಮರಣ


 ಅರ್ಧದಾರಿಯಲ್ಲೇ ನಡೆಯಿತು ಅಪಘಾತ


ಕೊಪ್ಪಳದ ಖಾಸಗಿ ಹೊಟೆಲ್ ನಲ್ಲಿ ಕಾರ್ಯಕ್ರಮದ ನಂತರ ಬೇಗ ಮನೆ ಸೇರಬೇಕೆಂದು ಹೊರಟಿದ್ದರು. ಕೊಪ್ಪಳದಿಂದ 15 ಕಿಮೀ ದೂರ ಹೋಗಿದ್ದರು. ಇನ್ನೂ ಅರ್ಧ ಗಂಟೆಯಾಗಿದ್ದರೆ, ಅವರು ಬಿನ್ನಾಳದ ಮನೆ ಸೇರುತ್ತಿದ್ದರು. ಆದರೆ ಬಾನಾಪುರ ಬಳಿಯ ಟಾಯ್ಸ್ ಕ್ಲಸ್ಟರ್ ಬಳಿ ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ಸ್ಕಾರ್ಪಿಯೋ ಸಂಪೂರ್ಣವಾಗಿ ನಜ್ಜು ಗುಜ್ಜಾಗಿದೆ.


ಮೃತದೇಹ ಹೊರತೆಗೆಯಲು ಹರಸಾಹಸ


ಇನ್ನು ಅಪಘಾತದ ತೀವ್ರತೆ ಎಷ್ಟು ಇತ್ತೇಂದರೆ ಸ್ಕಾರ್ಪಿಯೋ ಗಾಡಿಯ ಮುಂಭಾಗ ಸಂಪೂರ್ಣವಾಗಿ ನುಜ್ಜು ನುಜ್ಜಾಗಿತ್ತು.‌ ಇದರಿಂದಾಗಿ ಮೃತದೇಹ ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಬಳಿಕ ಕಷ್ಟಪಟ್ಟು ಶವಗಳನ್ನು ಹೊರತೆಗೆದರು. ಇನ್ನು ಭಾನಾಪೂರದ ರಸ್ತೆಯಲ್ಲಿ ಮರಳಿನ ಟಿಪ್ಪರ್ ಗಳು ಹೆಚ್ಚಾಗಿ ಓಡಾಡುತ್ತಿದ್ದು, ಚಾಲಕರು ಅತ್ಯಂತ ರಭಸವಾಗಿ ಟಿಪ್ಪರಗಳನ್ನು ಚಲಾಯಿಸುತ್ತಾರೆ. ಹೀಗಾಗಿ ಟಿಪ್ಪರ್ ಗುದ್ದಿರಬೇಕೆನ್ನುವ ಅನುಮಾನಗಳು ವ್ಯಕ್ತವಾಗಿವೆ.


ಐವರು ಸ್ಥಳದಲ್ಲೇ ಸಾವು


ಇನ್ನು ದೇವಪ್ಪ ಕೊಪ್ಪದ (62), ಗಿರಜಮ್ಮ (45), ಪಾರವ್ವ(32) , ಶಾಂತಮ್ಮ(22) ಕಸ್ತೂರೆಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಾಯಾಳುಗಳಾದ ಚಾಲಕ ಹರ್ಷವರ್ಧನ, ಪಲ್ಲವಿ, ಪುಟ್ಟರಾಜು, ಭೂಮಿಕಾರಿಗೆ ಗಾಯವಾಗಿದೆ. ಈ ಗಾಯಾಳುಗಳಲ್ಲಿ ಇಬ್ಬರ ಮಕ್ಕಳ ಸ್ಥಿತಿ ಗಂಭಿರವಾಗಿದೆ.


ಇದನ್ನೂ ಓದಿ: Uttara Kannada: ನಿಧಾನಕ್ಕೆ ಚಲಿಸಿ, ಇಲ್ಲಿ ಆಸ್ಪತ್ರೆಗಳಿಲ್ಲ! ಅಪಘಾತವಾದರೆ ಮಣಿಪಾಲಕ್ಕೆ ಹೋಗಬೇಕಾಗಬಹುದು!


ಸ್ಥಳಕ್ಕೆ ಭೇಟಿ ನೀಡಿದ ಕೊಪ್ಪಳ ಎಸ್ಪಿ ಅರುಣಾಂಗ್ಶುಗಿರಿ ಡಿಕ್ಕಿ ಹೊಡೆದ ವಾಹನದ ಮಡ್ ಗಾರ್ಡ್ ಅಲ್ಲಿಯೇ ಬಿದ್ದಿದೆ. ಈ ಘಟನೆಯಲ್ಲಿ ವಾಹನ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.ಒಟ್ಟಿನಲ್ಲಿ ಹುಟ್ಟುಹಬ್ಬ ಮುಗಿಸಿಕೊಂಡು ಹೊರಟಿದ್ದವರು, ಮಸಣ ಸೇರಿದ್ದು ಮಾತ್ರ ದುರಂತವೇ ಸರಿ.

Published by:Annappa Achari
First published: