ಧಾರವಾಡ: ಆತ ಅಗ್ನಿಪಥ್ ಯೋಜನೆಯಡಿ (Agnipath Scheme) ಸೈನ್ಯಕ್ಕೆ ಆಯ್ಕೆಯಾಗಿದ್ದ ಯುವಕ (Youth). ಮನೆ ಮಗ ಭಾರತೀಯ ಸೈನ್ಯಕ್ಕೆ (Indian Army) ಸೇರುತ್ತಿರುವ ಸಂಸತಕ್ಕೆ ಆತನನ್ನು ರೈಲು (Railway) ಹತ್ತಿಸಲು ಸಂಬಂಧಿಕರು ತಮ್ಮ ಊರಿನಿಂದ ಆಗಷ್ಟೇ ಪ್ರಯಾಣ (Travel) ಆರಂಭಿಸಿದ್ದರು. ಅವರೆಲ್ಲ ಹತ್ತು ಕಿಲೋ ಮೀಟರ್ ಅಂತರದಲ್ಲಿ ಭೀಕರ ರಸ್ತೆ ಅಪಘಾತಕ್ಕೆ (Accident) ಸಿಲುಕಿದ ಪರಿಣಾಮ ನಾಲ್ವರು ಮಸಣ ಸೇರಿದರೆ, ಸೈನ್ಯಕ್ಕೆ ಸೇರಬೇಕಾದ ಯುವಕ ಆಸ್ಪತ್ರೆ (Hospital ) ಸೇರಿರುವ ಘಟನೆ ಧಾರವಾಡದಲ್ಲಿ (Dharwad) ನಡೆದಿದೆ.
ಪಾದಚಾರಿಯನ್ನು ಉಳಿಸಲು ಹೋದಾಗ ಭೀಕರ ಅಪಘಾತ
ನಜ್ಜುಗುಜ್ಜಾಗಿ ಹೋಗಿರುವ ಕಾರು. ಕಾರಿನಲ್ಲಿ ಕುಳಿತಲ್ಲಿಯೇ ಪ್ರಾಣ ಬಿಟ್ಟಿರುವ ಜನರು. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ವೈದ್ಯರಿಂದ ನಡೆದಿರುವ ಚಿಕಿತ್ಸೆ. ಇದೆಲ್ಲವೂ ನಡೆದಿದ್ದು ಧಾರವಾಡದಲ್ಲಿ. ಹೌದು, ಧಾರವಾಡ ತಾಲೂಕಿನ ತೇಗೂರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಫೆ.23ರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ.
ರಸ್ತೆ ದಾಟುತ್ತಿದ್ದ ಪಾದಚಾರಿಯನ್ನು ಉಳಿಸಲು ಹೋದ ಕಾರು, ಪಾದಚಾರಿಗೂ ಡಿಕ್ಕಿ ಹೊಡೆದು ರಸ್ತೆ ಪಕ್ಕ ನಿಂತಿದ್ದ ಲಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಪಾದಚಾರಿ ಸೇರಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: CT Ravi: ಮಾಂಸ ತಿಂದಿದ್ದು ನನಗೆ ನೆನಪು ಇರಲಿಲ್ಲ; ವಿವಾದ ಭುಗಿಲೆದ್ದ ಬೆನ್ನಲ್ಲೇ ಸಿ ಟಿ ರವಿ ಸ್ಪಷ್ಟನೆ
ಪಾದಚಾರಿ, 5 ವರ್ಷದ ಬಾಲಕ ಸಾವು
ಮೃತರನ್ನು ಮಹಾಂತೇಶ್ ಮುದ್ದೋಜಿ, ಬಸವರಾಜ್ ನರಗುಂದ (35), ನಾಗಪ್ಪ ಮುದ್ದೋಜಿ, ಐದು ವರ್ಷದ ಬಾಲಕ ಶ್ರೀಕುಮಾರ್ ಎಂದು ಗುರುತಿಸಲಾಗಿದ್ದು, ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಹಾಗೂ ಬಸವರಾಜ್, ಬಾಲಕ ಶ್ರೀಕುಮಾರ ನಿಚ್ಚಣಕಿ ತಾಲೂಕಿನವರು.
ಇನ್ನೂ ಮೃತ ಪಾದಚಾರಿ ಈರಣ್ಣ ರಾಮನಗೌಡರ (35) ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ಈರಣ್ಣಟ ರಸ್ತೆ ದಾಟುತ್ತಿದ್ದ ವೇಳೆ ಕಿತ್ತೂರು ಕಡೆಯಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ಕಾರು ಈ ಅಪಘಾತಕ್ಕೆ ಒಳಗಾಗಿದೆ.
ಕೇಕ್ ಕತ್ತರಿಸಿ ಊಟ ಮುಗಿಸಿಕೊಂಡು ಹೊರಟ್ಟಿದ್ದ ಕುಟುಂಬಸ್ಥರು
ಅಪಘಾತದಲ್ಲಿ ಗಾಯಗೊಂಡಿರುವ ಮಂಜುನಾಥ ಮುದ್ದೋಜಿ (22) ಅಗ್ನಿಪಥ ಅಡಿಯಲ್ಲಿ ಸೈನ್ಯಕ್ಕೆ ಆಯ್ಕೆಯಾಗಿದ್ದ. ಆತ ತರಬೇತಿಗೆ ನಾಸಿಕ್‌ಗೆ ಹೋಗಬೇಕಿತ್ತು. ಅದಕ್ಕಾಗಿ ಹುಬ್ಬಳ್ಳಿಯಿಂದ ಆತ ರೈಲಿಗೆ ಹೋಗುವವನಿದ್ದ. ಹೀಗಾಗಿ ಆತನನ್ನು ಹುಬ್ಬಳ್ಳಿವರೆಗೆ ಬಿಡಲು ಸಂಬಂಧಿಗಳು ಮತ್ತು ಸ್ನೇಹಿತರು ಸೇರಿ ಮಂಜುನಾಥ ನೊಂದಿಗೆ ಕೇಕ್ ಕತ್ತರಿಸಿ ಊಟ ಮುಗಿಸಿಕೊಂಡು ಅವರಾದಿ ಗ್ರಾಮ ಬಿಟ್ಟಿದ್ದರು.
ಇದನ್ನೂ ಓದಿ: CT Ravi: 'ಸಿ ಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಹೋದರೂ ಮಠಾಧೀಶರ ಮೌನ' -ಮಾಜಿ ಸಿಎಂ ಸಿದ್ದರಾಮಯ್ಯ ಅಚ್ಚರಿ
ಗ್ರಾಮದಿಂದ ಕೇವಲ ಹತ್ತೇ ಹತ್ತು ಕಿಮೀ ಬಂದಿದ್ದಾಗ ಈ ಘಟನೆ ನಡೆದಿದೆ. ಇನ್ನೂ ಮಂಜುನಾಥ ಸೇರಿದಂತೆ ಒಟ್ಟು ನಾಲ್ವರು ಗಾಯಗೊಂಡಿದ್ದು, ಆ ಪೈಕಿ ಮಂಜುನಾಥ ಸೇರಿ ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ರವಾನಿಸಿದರೆ, ಮತ್ತೊಬ್ಬರಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಒಟ್ಟಾರೆಯಾಗಿ ಮನೆ ಮಗ ಸೈನ್ಯಕ್ಕೆ ಸೇರುವ ಹೊತ್ತು ಆತನನ್ನು ಹಲವು ಕನಸುಗಳನ್ನು ಹೊತ್ತು ಬಿಳ್ಕೊಡಲಾಗಿತ್ತು. ಮನೆ ಮಂದಿ ಸಂಬಂಧಿಕರೆಲ್ಲ ಸಂತೋಷದಿಂದಲೇ ಬಿಳ್ಕೋಟ್ಟಿದ್ದರು. ಆದರೆ ವಿಧಿ ಆಟಕ್ಕೆ ಕೆಲವೇ ಸೈನಿಕನಾಗಬೇಕಿದ್ದ ಕುಟುಂಬದಲ್ಲಿ ಘೋರ ದುರಂತ ನಡೆದು ಹೋಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ