Accident: ಡಿವೈಡರ್ ಹಾರಿ ಪಲ್ಟಿ ಹೊಡೆದ ಕಾರ್; ಪ್ರತ್ಯೇಕ ಅಪಘಾತ, ಐವರ ಸಾವು

ನೆಲಮಂಗಲ (Nelamangala, Bengaluru) ಬಳಿಯ ದೇವಣ್ಣನ ಪಾಳ್ಯದ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ (National Highway 4) ಕಾರ್ ಅಪಘಾತಕ್ಕೆ (Car Accident) ಒಳಗಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರ್ ಡಿವೈಡರ್ ಹಾರಿ ಕಾರ್ ಪಲ್ಟಿಯಾಗಿದೆ.

ಅಪಘಾತಕ್ಕೊಳಗಾದ ಕಾರ್

ಅಪಘಾತಕ್ಕೊಳಗಾದ ಕಾರ್

  • Share this:
ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಅಪಘಾತ ಪ್ರಕರಣಗಳು (Accident) ವರದಿಯಾಗಿವೆ. ಪ್ರತ್ಯೇಕ ಅಪಘಾತಗಳಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Nelamangala, Bengaluru) ಬಳಿಯ ದೇವಣ್ಣನ ಪಾಳ್ಯದ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ (National Highway 4) ಕಾರ್ ಅಪಘಾತಕ್ಕೆ (Car Accident) ಒಳಗಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರ್ ಡಿವೈಡರ್ ಹಾರಿ ಕಾರ್ ಪಲ್ಟಿಯಾಗಿದೆ. ಪರಿಣಾಮ ಕಾರ್ ಚಾಲಕ (Car Driver) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೆಂಗಳೂರು ಮೂಲದ ಆಶೀಫ್ (30) ಮೃತ ಚಾಲಕ. ಆಶೀಫ್ ಜೊತೆಯಲ್ಲಿ ಪ್ರೀತಮ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವರ ದರ್ಶನಕ್ಕೆ ತೆರಳುತ್ತಿದ್ದ ಭಕ್ತ ಸಾವು

ದೇವರ ದರ್ಶನಕ್ಕೆ ತೆರಳುತ್ತಿದ್ದ ಭಕ್ತ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಹೊರಭಾಗದಲ್ಲಿ ಅಪಘಾತ ಸಂಭವಿಸಿದೆ. ಸಗರ ಗ್ರಾಮದ ನಿವಾಸಿ ಭಾಗಪ್ಪ ಮೃತ ಯುವಕ.

ಇದನ್ನೂ ಓದಿ:  Murder: ಉಂಡು, ಮಲಗಿದವರ ಮೇಲೆ ಅದೆಂಥಾ ದ್ವೇಷ? ಮಂಡ್ಯದಲ್ಲಿ ನಾಲ್ವರು ಮಕ್ಕಳ ಜೊತೆ ಮಹಿಳೆ ಕೊಂದಿದ್ಯಾರು?

ಸಗರ ಯಲ್ಲಮ್ಮ ದೇವಿಯ ದರ್ಶನ ಪಡೆಯಲು ಅಟೋದಲ್ಲಿ ತೆರಳುತ್ತಿದ್ದ ವೇಳೆ ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಭಾಗಪ್ಪ ಮೃತಪಟ್ಟಿದ್ದಾನೆ. ಇನ್ನಿಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರಕ್ಕೆ ಕಾರ್ ಡಿಕ್ಕಿ, ಮೂವರು ಮಹಿಳೆಯರ ಸಾವು

ನಿಯಂತ್ರಣ ತಪ್ಪಿ ಮರಕ್ಕೆ  ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬೀರೇನಹಳ್ಳಿ ಬಳಿ ಅಪಘಾತ ಸಂಭವಿಸಿದೆ. ಮೃತರನ್ನು  ಬೆಂಗಳೂರು RR ನಗರ ಮೂಲದ ವಿಶಾಲಾಕ್ಷಿ (70), ಸುಬೀಕ್ಷ (17) ಮತ್ತು ರೇಣುಕಾ ದೇವಿ (35) ಎಂದು ಗುರುತಿಸಲಾಗಿದೆ.

ಕಾರ್ ನಲ್ಲಿದ್ದ ಪ್ರತೀಕ್ಷಾ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿಯಲ್ಲಿ ಮದುವೆ ಮುಗಿಸಿಕೊಂಡು ಬೆಂಗಳೂರಿಗೆ ತೆರಳುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

25 ವರ್ಷದ ವಿದ್ಯಾರ್ಥಿಗೆ ಹೃದಯಾಘಾತ

ಕೇವಲ 25 ವರ್ಷದ ಕಾನೂನು ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಇಷ್ಟು ಚಿಕ್ಕ ವಯಸ್ಸಿಗೆ ಹಾರ್ಟ್ ಅಟ್ಯಾಕ್ ನಿಂದ ಮೃತಪಟ್ಟಿರುವುದು ಎಲ್ಲರಿಗೂ ಶಾಕ್ ನೀಡಿದೆ. ಮೃತ ಯುವಕನನ್ನು ನಂಜಾಪುರ ಗ್ರಾಮದ ನಿತಿನ್ ಕುಮಾರ್(25) ಎಂದು ಗುರುತಿಸಲಾಗಿದೆ. ಹುಣಸೂರಿನ ಟಿಫಾನಿಸ್ ಹೋಂ ಹೋಟೆಲ್ ನಲ್ಲಿ ಉಪಹಾರ ಸೇವಿಸುತ್ತಿದ್ದಾಗ ನಿತಿನ್ ಏಕಾಏಕಿ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ:  Devadasi System: ಕೆಟ್ಟ ವ್ಯವಸ್ಥೆಗೆ ಸಡ್ಡು ಹೊಡೆದು, Ph.D ಮಾಡ್ತಿರುವ ಬಾಗಲಕೋಟೆಯ ದೇವದಾಸಿಯ ಮಗಳು

ಬೆಳಗಿನ ತಿಂಡಿ ತಿನ್ನುವಾಗ ಹೃದಯಾಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಯುವಕ ಏಕಾಏಕಿ ಕುಸಿದು ಬೀಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೃತ ನಿತಿನ್ ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ನಾಲ್ಕನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ. ಈತನ ಅಕಾಲಿಕ ಸಾವು ಕುಟುಂಬಸ್ಥರು, ಸ್ನೇಹಿತರಿಗೆ ಭಾರೀ ಆಘಾತವನ್ನು ನೀಡಿದೆ.

ಐವರ ಕೊಲೆ

KRSನ ಬಜಾರ್ ಲೈನ್ ನಲ್ಲಿ ಗಂಗಾರಾಮ್ ಎಂಬುವವರ ಕುಟುಂಬ ವಾಸವಿತ್ತು. ಬಟ್ಟೆ, ಅಲಂಕಾರಿಕ ವಸ್ತುಗಳನ್ನ ಹಳ್ಳಿ ಹಳ್ಳಿಗಳಲ್ಲಿ ತಿರುಗಿ ವ್ಯಾಪಾರ ಮಾಡಿಕೊಂಡಿದ್ದ ಈ ಕುಟುಂಬ, ಕಳೆದ 15-20 ವರ್ಷಗಳಿಂದ ಇಲ್ಲೇ ವಾಸವಿತ್ತು. ವ್ಯಾಪಾರ ಸಂಬಂಧ ಗಂಗಾರಾಮ್ ಎರಡು ದಿನಗಳ ಹಿಂದೆಯೇ ಹೊರ ರಾಜ್ಯಕ್ಕೆ ತೆರಳಿದ್ರು. ಗಂಗಾರಾಮ್ ಪತ್ನಿ ಲಕ್ಷ್ಮೀ, ತನ್ನ ಮೂವರು ಮಕ್ಕಳು ಹಾಗೂ ಅಣ್ಣನ ಮಗನ ಜೊತೆ ಮನೆಯಲ್ಲೇ ಮಲಗಿದ್ದರು. ಬೆಳಿಗ್ಗೆ ಎದ್ದು ನೋಡುವಷ್ಟರಲ್ಲಿ ಮನೆಯಲ್ಲಿದ್ದ ಐವರು ಭೀಕರವಾಗಿ ಹತ್ಯೆಯಾಗಿದ್ದಾರೆ..
Published by:Mahmadrafik K
First published: