• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಇವ್ಳು ನನ್ನ  ಹೆಂಡ್ತಿ, ಒಂದ್ಸಲ ಕಳಿಸ್ತೀನಿ; ಅಬ್ಬಬ್ಬಾ, ಬೆಂಗ್ಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಬಯಲು

Bengaluru: ಇವ್ಳು ನನ್ನ  ಹೆಂಡ್ತಿ, ಒಂದ್ಸಲ ಕಳಿಸ್ತೀನಿ; ಅಬ್ಬಬ್ಬಾ, ಬೆಂಗ್ಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಬಯಲು

ವೇಶ್ಯಾವಾಟಿಕೆ

ವೇಶ್ಯಾವಾಟಿಕೆ

ಈ ರೀತಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಐದು ಜೋಡಿಗಳು ಸಿಸಿಬಿ ಪೊಲೀಸರ (CCB Police) ಬಲೆಗೆ ಬಿದ್ದಿವೆ. ಪೂರ್ವ ನಿಗದಿಯಂತೆ ಬೆಂಗಳೂರಿಗೆ ಈ ಜೋಡಿಗಳು ಬಂದು ಹೋಗುತ್ತಿದ್ದವು ಎಂದು ವರದಿಯಾಗಿದೆ.

  • Share this:

ಬೆಂಗಳೂರು: ರಾಜಧಾನಿಯಲ್ಲೊಂದು (Bengaluru) ಹೈಟೆಕ್​ ವೇಶ್ಯಾವಾಟಿಕೆ (Prostitution) ದಂಧೆ ಬೆಳಕಿಗೆ ಬಂದಿದೆ. ನಾವಿಬ್ಬರು ಗಂಡ ಮತ್ತು ಹೆಂಡತಿ (Husband And Wife). ಒಂದು ಬಾರಿ ನಿನ್ನ ಜೊತೆ ಕಳುಹಿಸುತ್ತೇನೆ ಎಂದು ಹೇಳಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ. ಈ ದಂಧೆ ಯಾವ ರಸ್ತೆಯ ಇಕ್ಕೆಲಗಳಲ್ಲಿ ನಡೆಯುತ್ತಿಲ್ಲ. ಬದಲಾಗಿ ಟ್ವಿಟರ್ (Twitter), ಟೆಲಿಗ್ರಾಂ (Telegram), ಫೇಸ್​ಬುಕ್ (Facebook)​ ಮೂಲಕ ಗಿರಾಕಿಗಳನ್ನು ಹುಡುಕಲಾಗುತ್ತಿದೆ. ಸೋಶಿಯಲ್ ಮೀಡಿಯಾ ಮೂಲಕ ಚೆಂದದ ಚೆಲುವೆಯರ ಪೋಟೋಗಳನ್ನು (Young Girls Photos) ಕಳುಹಿಸಿ ಗಿರಾಕಿಗಳಿಗೆ ಗಾಳ ಹಾಕಲಾಗುತ್ತದೆ. ಈ ಮೂಲಕ ಗಂಟೆಗಳ ಲೆಕ್ಕದಲ್ಲಿ ಲಕ್ಷ ಲಕ್ಷ ಹಣ ಸಂಪಾದಿಸಲಾಗುತ್ತದೆ ಎಂದು ತಿಳಿದು ಬಂದಿದೆ.


ಈ ವೇಶ್ಯಾವಾಟಿಕೆ ದಂಧೆಗಾಗಿ ಪ್ರತಿ ವೀಕೆಂಡ್​ಗಾಗಿ ನಗರಕ್ಕೆ ಸುಮಾರು 50 ರಿಂದ 60 ಜೋಡಿಗಳು ಬೆಂಗಳೂರು ನಗರಕ್ಕೆ ಎಂಟ್ರಿ ಕೊಡುತ್ತಿವೆ. ಬ್ಯುಸಿನೆಸ್​​ನಲ್ಲಿ ಸಿಕ್ಕಾಪಟ್ಟೆ ನಷ್ಟ ಆಗಿದೆ. ಹಾಗಾಗಿ ನನ್ನ ಹೆಂಡತಿಯನ್ನು ಒಂದು ದಿನ ಅಥವಾ ಕೆಲ ಗಂಟೆಗಳಿಗಾಗಿ ನಿನ್ನ ಜೊತೆ ಕಳುಹಿಸುತ್ತಿರೋದಾಗಿ ಹೇಳಿ ಗಿರಾಕಿಗಳನ್ನು ಬಲೆಗೆ ಬೀಳಿಸಿಕೊಳ್ಳಲಾಗುತ್ತದೆ.


ಸಿಸಿಬಿ ಪೊಲೀಸರ ಬಲೆಗೆ 5 ಜೋಡಿಗಳು


ಈ ರೀತಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಐದು ಜೋಡಿಗಳು ಸಿಸಿಬಿ ಪೊಲೀಸರ (CCB Police) ಬಲೆಗೆ ಬಿದ್ದಿವೆ. ಪೂರ್ವ ನಿಗದಿಯಂತೆ ಬೆಂಗಳೂರಿಗೆ ಈ ಜೋಡಿಗಳು ಬಂದು ಹೋಗುತ್ತಿದ್ದವು ಎಂದು ವರದಿಯಾಗಿದೆ.


ಅಡ್ವಾನ್ಸ್ ಹಣ ಬಂದ್ರೆ ನಗರಕ್ಕೆ ಎಂಟ್ರಿ


ಮೊದಲೇ ಬುಕ್ ಮಾಡಿಕೊಂಡ ಗಿರಾಕಿಗಳು ಇವರಿಗಾಗಿ ನಗರದ ಐಷಾರಾಮಿ ಹೋಟೆಲ್​ಗಳಲ್ಲಿ ರೂಮ್  ಬುಕ್ ಮಾಡಿಕೊಳ್ಳುತ್ತಿದ್ದರು. ಮುಂಗಡ ಹಣವನ್ನು ಇವರ ಖಾತೆಗೆ ಹಾಕಿದ್ರೆ ಮಾತ್ರ ಮಹಿಳೆಯರು ಬೆಂಗಳೂರಿಗೆ ಬರುತ್ತಿದ್ದರು. ವೇಶ್ಯಾವಾಟಿಕೆ ದಂಧೆಯಲ್ಲಿದ್ದವರು ಬಹುತೇಕರು ಉತ್ತರ ಭಾರತ ಮೂಲದವರು ಎಂದು ತಿಳಿದು ಬಂದಿದೆ.


20 police from karnataka awarded for President Police Medal for Distinguished Service on republic day
ಸಾಂದರ್ಭಿಕ ಚಿತ್ರ


ವೇಶ್ಯಾವಾಟಿಕೆ ದಂಧೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ


ದೇಶದಲ್ಲಿ ಅತೀ ಹೆಚ್ಚು ವೇಶ್ಯಾವಾಟಿಕೆ ನಡೆಯುತ್ತಿರುವುದು ಯಾವ ರಾಜ್ಯದಲ್ಲಿ ಎಂದು ನಡೆಸಿದ ಸಮೀಕ್ಷೆಯಲ್ಲಿ ಮಹಾರಾಷ್ಟ್ರ (Maharashtra) ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ (Karnataka) ಎರಡನೇ ಸ್ಥಾನದಲ್ಲಿ ಹಾಗೂ ಮೂರನೇ ಸ್ಥಾನದಲ್ಲಿ ಆಂಧ್ರಪ್ರದೇಶವಿದೆ (Andrapradesh).


ಹೌದು, ಈ ಮೂರು ರಾಜ್ಯಗಳಲ್ಲಿ ವೇಶ್ಯಾವಾಟಿಕೆ ವಿಸ್ತರಿಸುತ್ತಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ ವೇಶ್ಯಾವಾಟಿಕೆ ಹೆಚ್ಚಾಗುತ್ತಲೇ ಇದೆ. ಇನ್ನೂ ಆಂಧ್ರ ಪ್ರದೇಶದಲ್ಲಿ ವಾರ್ಷಿಕವಾಗಿ ಶೇ.10ರಿಂದ 15ರಷ್ಟು ಏರಿಕೆಯಾಗುತ್ತಲೇ ಇದೆ. ಅದರಲ್ಲಿಯೂ ಈ ವೃತ್ತಿಗೆ ಇಳಿಯುವವರ ಸರಾಸರಿ ವಯಸ್ಸು 18 ರಿಂದ 40 ವರ್ಷದವರಾಗಿದ್ದಾರೆ.
ಕರ್ನಾಟಕದಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಪ್ರಕರಣಗಳು


ಕೌಟುಂಬಿಕ ಸ್ಥಿತಿಗತಿಗಳು ಮತ್ತು ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡ ಮಹಿಳೆಯರು ಈ ರೀತಿಯ ವೃತ್ತಿಗೆ ಪ್ರವೇಶಿಸುತ್ತಿದ್ದಾರೆ. ವೇಶ್ಯಾವಾಟಿಕೆ ವ್ಯಾಪಕವಾಗಿರುವುದರಿಂದ ಎಚ್‌ಐವಿ ಪ್ರಕರಣಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. ಮಹಾರಾಷ್ಟ್ರದಲ್ಲಿ 3.94 ಲಕ್ಷ ಪ್ರಕರಣಗಳು, ಕರ್ನಾಟಕದಲ್ಲಿ 2.76 ಲಕ್ಷ ಪ್ರಕರಣಗಳು, ಆಂಧ್ರಪ್ರದೇಶದಲ್ಲಿ 2.09 ಲಕ್ಷ ಪ್ರಕರಣಗಳನ್ನು ಹೊಂದಿದೆ.


ಹೆಂಡತಿಯನ್ನು ಅದಲು-ಬದಲು ಮಾಡಿಕೊಳ್ಳಲು ಗಂಡನ ಟಾರ್ಚರ್


ತನ್ನ ಪತಿ ತನ್ನನ್ನು ಪತ್ನಿ ವಿನಿಮಯದ (Wife Swapping) ಪಾರ್ಟಿಗಳಿಗೆ ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದ. ತನ್ನ ಸ್ವಂತ ಸಹೋದರನೊಂದಿಗೆ ದೈಹಿಕ ಸಂಬಂಧವನ್ನು ಹೊಂದುವಂತೆ ಒತ್ತಾಯಿಸುತ್ತಿದ್ದ ಎಂದು 30 ವರ್ಷದ ಗೃಹಿಣಿ ಆರೋಪಿಸಿ, ದೂರು ದಾಖಲಿಸಿದ್ದಾರೆ.


ಇದನ್ನೂ ಓದಿ: Prostitution: ಸಿಲಿಕಾನ್ ಸಿಟಿಯಲ್ಲಿ ಅಕ್ರಮ ವಲಸಿಗರಿಂದ ವೇಶ್ಯಾವಾಟಿಕೆ: ಪಿಂಪ್​ಗಳು ಅರೆಸ್ಟ್​


ನ್ಯಾಯಾಲಯದ ನಿರ್ದೇಶನದ ನಂತರ ಯುಪಿ ಪೊಲೀಸರು ಆಕೆಯ ಪತಿ ಮತ್ತು ಆಕೆಯ ಸೋದರ ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮುಜಾಫರ್ ನಗರದ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್-ಫಸ್ಟ್ (ACJM 1) ನ್ಯಾಯಾಲಯಕ್ಕೆ ಕಂಪ್ಲೇಂಟ್ ಕೊಟ್ಟಿದ್ದಾರೆ.


ದೂರಿನಲ್ಲಿ ತಮ್ಮ ಪತಿ, ಉದ್ಯಮಿ ಮತ್ತು ದೆಹಲಿಯ ಗುರುಗ್ರಾಮ್ ನಿವಾಸಿ ಆಗಿದ್ದಾರೆ. ತನಗೆ ಬೆದರಿಕೆ ಹಾಕುತ್ತಾನೆ, ಬಲವಂತವಾಗಿ ವೈಫ್ ಸ್ವಾಪಿಂಗ್ ಪಾರ್ಟಿಗಳಿಗೆ ಕರೆದೊಯ್ಯುತ್ತಾನೆ ಎಂದು ದೂರಿದ್ದಾರೆ.

Published by:Mahmadrafik K
First published: