Kissing Competition: ಮುತ್ತಿನ ಮತ್ತೇ ಆಪತ್ತು! ಕಿಸ್ಸಿಂಗ್ ಸ್ಪರ್ಧೆ ನಡೆಸಿದ್ದ ವಿದ್ಯಾರ್ಥಿಗಳು ವಶಕ್ಕೆ

ಕಿಸ್ಸಿಂಗ್ ಸ್ಪರ್ಧೆ ನಡೆಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಆರೋಪದ ಮೇಲೆ ಐವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರೆಲ್ಲ ಅಪ್ರಾಪ್ತ ವಿದ್ಯಾರ್ಥಿಗಳಾಗಿದ್ದು, ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜ್‌ ವಿದ್ಯಾರ್ಥಿಗಳು (College Students) ನಡೆಸಿದ್ದ ಮುತ್ತಿನ ಸ್ಪರ್ಧೆ (Kissing Competition) ಇಡೀ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು. ಕಿಸ್ಸಿಂಗ್ ಕಾಂಪಿಟೇಷನ್ ವಿಡಿಯೋ ವೈರಲ್ (Video Viral) ಆಗುತ್ತಿದ್ದಂತೆ, ವಿದ್ಯಾರ್ಥಿಗಳ ಈ ವರ್ತನೆ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ದೂರು (Complaint) ದಾಖಲಿಸಿಕೊಂಡಿದ್ದ ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಇದೀಗ ಕಿಸ್ಸಿಂಗ್ ಸ್ಪರ್ಧೆ ನಡೆಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral) ಮಾಡಿದ ಆರೋಪದ ಮೇಲೆ ಐವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರೆಲ್ಲ ಅಪ್ರಾಪ್ತ ವಿದ್ಯಾರ್ಥಿಗಳಾಗಿದ್ದು, ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಇದರಲ್ಲಿ 8 ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಈ ಪೈಕಿ ಓರ್ವ ವಿದ್ಯಾರ್ಥಿ ವಿದೇಶಕ್ಕೆ ಹೋಗಿದ್ದಾನೆ ಎನ್ನಲಾಗುತ್ತಿದೆ.

ಏನಿದು ಕಿಸ್ಸಿಂಗ್ ಪ್ರಕರಣ?

ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಹುಚ್ಚಾಟದ ವಿಡಿಯೋ ವೈರಲ್ ಆಗಿತ್ತು. ಮನೆಯೊಂದರಲ್ಲಿ ನಡೆದ ಪ್ರತಿಷ್ಠಿತ ಖಾಸಗಿ ಕಾಲೇಜಿನ ಕಿಸ್ಸಿಂಗ್ ಸ್ಪರ್ಧೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಲವರ ಆಕ್ರೋಶಕ್ಕೂ ಕಾರಣವಾಗಿತ್ತು. ಇಲ್ಲಿ ಪಂದ್ಯದ ನಿಯಮದಂತೇ ಎಲ್ಲರ ಎದುರೇ ಚುಂಬನ ಮಾಡಬೇಕು. ಇದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ವಿಡಿಯೋದಲ್ಲಿ ವಿದ್ಯಾರ್ಥಿಗಳು ಸಮವಸ್ತ್ರದಲ್ಲಿ ಇರುವುದನ್ನ ಸಹ ಕಾಣಬಹುದಾತಿತ್ತು. ಅಲ್ಲದೇ ಓರ್ವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಪರಸ್ಪರ ಲಿಪ್ ಕಿಸ್ ಮಾಡುತ್ತಿದ್ದು, ಇತರ ವಿದ್ಯಾರ್ಥಿಗಳು ಅವರನ್ನು ಹುರಿದುಂಬಿಸುತ್ತಿರುವುದು ಸಹ ರೆಕಾರ್ಡ್ ಆಗಿತ್ತು.

ಅಪಾರ್ಟ್‌ಮೆಂಟ್‌ನಲ್ಲಿ ಕಿಸ್ಸಿಂಗ್ ಸ್ಪರ್ಧೆ

ಈ ತಂಡದ ಇಬ್ಬರು ವಿದ್ಯಾರ್ಥಿಗಳು ಬಾವುಟಗುಡ್ಡೆಯಲ್ಲಿರುವ ಅಪಾರ್ಟ್ಮೆಂಟ್​ನಲ್ಲಿ ರೂಂ ಪಡೆದಿದ್ದರು. ಅಲ್ಲಿ ಈ ವಿಡಿಯೋ ಮಾಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ರೂಂನಲ್ಲಿ ವಿದ್ಯಾರ್ಥಿಗಳು ಮದ್ಯಪಾನ ಸೇರಿದಂತೆ ಮಾದಕ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರು  ಎನ್ನಲಾಗಿದೆ. ಈ ಘಟನೆ ನಡೆದು ನಾಲ್ಕು ತಿಂಗಳುಗಳು ಆಗಿದೆ. ವಿಡಿಯೋ ಮಾಡಿದ ವಿದ್ಯಾರ್ಥಿ ಇತ್ತೀಚಿಗೆ ತನ್ನ ತರಗತಿಯ ವಾಟ್ಸಪ್ ಗ್ರೂಪ್​ಗೆ ವಿಡಿಯೋ ಹಾಕಿದ್ದಾನೆ . ಬಳಿಕ ಇದು ವೈರಲ್ ಆಗಿತ್ತು.

ಇದನ್ನೂ ಓದಿ: Mangaluru Students Kissing: ಮಂಗಳೂರಿನ ವಿದ್ಯಾರ್ಥಿಗಳಿಂದ ಕಿಸ್ಸಿಂಗ್ ಸ್ಪರ್ಧೆ! ವಿಡಿಯೋ ವೈರಲ್

ಎಂಟು ಮಂದಿಯಿಂದ ಕೃತ್ಯ, ಐವರು ವಶಕ್ಕೆ

ಈ ಪ್ರಕರಣ ಸಂಬಂಧ ಒಟ್ಟು ಐವರನ್ನು ವಶಕ್ಕೆ ಪಡೆದ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ ವಿಡಿಯೋ ಹರಿ ಬಿಟ್ಟ ವಿದ್ಯಾರ್ಥಿ ಸೇರಿ ಐವರು ವಶಕ್ಕೆ ಪಡೆಯಲಾಗಿದೆ. ಈ ಕೃತ್ಯದಲ್ಲಿ ಎಂಟು ಮಂದಿ ಕೃತ್ಯದಲ್ಲಿ ಭಾಗಿಯಾಗಿದ್ದು, ಓರ್ವ ವಿದೇಶಕ್ಕೆ ಹೋಗಿರುವ ಅನುಮಾನ ವ್ಯಕ್ತವಾಗಿದೆ.

ಪೋಕ್ಸೋ ಮತ್ತು ಐಟಿ ಕಾಯ್ದೆ ಅಡಿ ಪ್ರಕರಣ

ಇನ್ನು ದೌರ್ಜನ್ಯ ‌ನಡೆಸಿದ ಮತ್ತು ಒಳಗಾದ ಎಲ್ಲರೂ ಅಪ್ರಾಪ್ತ ವಿದ್ಯಾರ್ಥಿಗಳು ಎನ್ನಲಾಗಿದೆತ ಸದ್ಯ ಎಂಟು ವಿದ್ಯಾರ್ಥಿಗಳ ವಿರುದ್ದ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇನ್ನು ಐಟಿ ಕಾಯಿದೆಯಡಿ ಕೂಡ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Truth & Dare ಗೇಮ್​ಗಾಗಿ ವಿದ್ಯಾರ್ಥಿಗಳಿಂದ ಕಿಸ್ಸಿಂಗ್ ಪಂದ್ಯ! ಮಂಗಳೂರು ಪೊಲೀಸರಿಂದ ಶಾಕಿಂಗ್ ಮಾಹಿತಿ

ಅಗತ್ಯ ಬಿದ್ದರೆ ವಿಚಾರಣೆಗೆ ಹಾಜರಾಗಲು ಸೂಚನೆ

ಪ್ರಕರಣ ಸಂಬಂಧ ಐವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಬಾಲ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈನ ಬಗ್ಗೆ ವಿಚಾರಣೆ ನಡೆಸಿದ ಬಾಲ ನ್ಯಾಯಾಲಯವು ವಿದ್ಯಾರ್ಥಿಗಳನ್ನು ಹೆತ್ತವರ ಕಸ್ಟಡಿಗೆ ನೀಡಿದ್ದು, ಅಗತ್ಯ ಬಿದ್ದಾಗ ತನಿಖಾಧಿಕಾರಿ ಮುಂದೆ ಹಾಜರಾಗಲು ಸೂಚಿಸಲಾಗಿದೆ.
Published by:Annappa Achari
First published: