ಸರಣಿ ಸುಲಿಗೆ ಮತ್ತು ಕೊಲೆ ಯತ್ನ ಪ್ರಕರಣ - ಉಡುಪಿಯಲ್ಲಿ ಐವರು ಖತರ್ನಾಕ್​ ಕಳ್ಳರ ಬಂಧನ

ಆರೋಪಿ ಆಶಿಕ್​​ನ ಗರುಡ ತಂಡದ ದುಷ್ಕರ್ಮಿಗಳೆಲ್ಲ ಮಣಿಪಾಲ, ಉಡುಪಿ, ಕಾಪು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸುಲಿಗೆ ಮತ್ತು ಕೊಲೆ ಯತ್ನ ನಡೆಸುತ್ತಿದ್ದರು. ಈ ತಂಡದ ಯುವಕರು ದ್ವಿಚಕ್ರ ವಾಹನದಲ್ಲಿ ಬಂದು ಹಣ, ಮೊಬೈಲ್, ಪರ್ಸ್ ಸುಲಿಗೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದರು ಎಂದರು ಎಸ್ಪಿ ವಿಷ್ಣುವರ್ಧನ್.

news18-kannada
Updated:September 28, 2020, 2:57 PM IST
ಸರಣಿ ಸುಲಿಗೆ ಮತ್ತು ಕೊಲೆ ಯತ್ನ ಪ್ರಕರಣ - ಉಡುಪಿಯಲ್ಲಿ ಐವರು ಖತರ್ನಾಕ್​ ಕಳ್ಳರ ಬಂಧನ
ಉಡುಪಿ ಪೊಲೀಸರ ಸುದ್ದಿಗೋಷ್ಠಿ
  • Share this:
ಉಡುಪಿ(ಸೆ.28): ಕೊಲೆ ಯತ್ನ ನಡೆಸಿ ದರೋಡೆ ಮಾಡುತ್ತಿದ್ದ ಪಡ್ಡೆ ಹುಡುಗರ ಟೀಂ ಗರುಡ ತಂಡದ ಐದು ಮಂದಿಯನ್ನ ಉಡುಪಿ‌ ಜಿಲ್ಲಾ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಈ ತಂಡ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿತ್ತು. ಪ್ರಮುಖ ಆರೋಪಿ‌ ಮೊಹಮ್ಮದ್ ಆಶಿಕ್ ಎಂಬಾತನೇ ಈ ಪಡ್ಡೆ ಹುಡುಗರ ಗರುಡ ಗ್ಯಾಂಗ್​​ನ ಕಿಂಗ್ ಪಿನ್ ಆಗಿದ್ದ. ಈ ಬಗ್ಗೆ ಸುದ್ದಿಗೋಷ್ಟಿ ‌ನಡೆಸಿ ಮಾಹಿತಿ ನೀಡಿರುವ ಎಸ್ಪಿ ವಿಷ್ಣುವರ್ಧನ್, ಪ್ರಮುಖ ಆರೋಪಿ ಆಶಿಕ್​​​ ಟೀಂ ಗರುಡ ಎಂಬ ಪಡ್ಡೆ ಹುಡುಗರ‌ ತಂಡ‌ ರಚನೆ ಮಾಡಿ ಸಣ್ಣ ವಯಸ್ಸಿನ ಹುಡುಗರ ಗುಂಪು ಕಟ್ಟಿ ದರೋಡೆ ಕೃತ್ಯ ಆಗಾಗ್ಗೆ ನಡೆಸುತ್ತಿದ್ದ. ಇತ್ತೀಚೆಗೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಲೆವೂರು ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ವ್ಯಕ್ತಿಯೊಬ್ಬನನ್ನ ಅಡ್ಡಗಟ್ಟಿ ಹಣವನ್ನು ದೋಚಲು ಮುಂದಾಗಿ ಕೊನೆಗೆ ಚೂರಿಯಿಂದ ಹಲ್ಲೆ‌ ನಡೆಸಿ‌ ಮೊಬೈಲ್‌ ಎಳೆದು ಪರಾರಿಯಾಗಿದ್ದ. ಇವರನ್ನು ಈಗ ಬಂಧಿಸಿದ್ದೇವೆ ಎಂದರು.

ಇಷ್ಟೇ ಅಲ್ಲದೆ, ಆರೋಪಿ ಆಶಿಕ್​​ನ ಗರುಡ ತಂಡದ ದುಷ್ಕರ್ಮಿಗಳೆಲ್ಲ ಮಣಿಪಾಲ, ಉಡುಪಿ, ಕಾಪು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸುಲಿಗೆ ಮತ್ತು ಕೊಲೆ ಯತ್ನ ನಡೆಸುತ್ತಿದ್ದರು. ಈ ತಂಡದ ಯುವಕರು ದ್ವಿಚಕ್ರ ವಾಹನದಲ್ಲಿ ಬಂದು ಹಣ, ಮೊಬೈಲ್, ಪರ್ಸ್ ಸುಲಿಗೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದರು ಎಂದರು ಎಸ್ಪಿ ವಿಷ್ಣುವರ್ಧನ್.

ಕೃತ್ಯಕ್ಕೆ ಚೂರಿ, ಸ್ಕ್ರೂ ಡ್ರೈ ವರ್ ಬಳಕೆ‌ ಮಾಡ್ತಿದ್ರು. ಇದೀಗ ಈ ಗರುಡ ತಂಡ‌ದ ಕಿಂಗ್ ಪಿನ್ ಮೊಹಮ್ಮದ್ ಆಶಿಕ್ ಹಾಗೂ ಈತನ ಜೊತೆ ಯಿದ್ದ ಮಹಮ್ಮದ್ ಆಸಿಫ್ ಯಾನೆ ರಮೀಝ್, ಮಿಸ್ವಾ, ಇಜಾಜ್ ಅಹಮ್ಮದ್, ದಾವುದ್ ಇಬ್ರಾಹಿಂ ಸೇರಿ‌ ಒಟ್ಟು ಐದು ಮಂದಿಯನ್ನ ಬಂಧಿಸಿರುವ ಪೊಲೀಸರು‌ ಇನ್ನಷ್ಟು ಆರೋಪಿಗಳಿಗೆ ಹುಡುಕಾಟ ಮುಂದುವರೆಸಿದ್ದಾರೆ.

ಇದನ್ನೂ ಓದಿ: ರೈತರಿಗೆ ಅನ್ಯಾಯ ಆಗುವುದಿಲ್ಲ; ರೈತರ ದಾರಿ ತಪ್ಪಿಸದಿರಿ: ರೈತ ಸಂಘಟನೆಗಳಿಗೆ ಯಡಿಯೂರಪ್ಪ ಮನವಿ

ಬಂಧಿತ‌ ಆರೋಪಿಗಳಿಂದ ಬೈಕ್, ಚೂರಿ, ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಿಂದ ಕಳ್ಳತನ‌ ಮಾಡಿದ್ದ ಬುಲೆಟ್ ಕೂಡಾ ವಶಕ್ಕೆ ‌ಪಡೆಯಲಾಗಿದೆ. ಈ‌ ಎಲ್ಲಾ ಆರೋಪಗಳು ಗಾಂಜಾ ಸೇವನೆ ಮಾಡುವುದು ತಿಳಿದು ಬಂದಿದೆ. ಆರೋಪಿಗಳ ಮೇಲೆ ಹಲ್ಲೆ,‌‌ ಕೊಲೆ ಯತ್ನ, ‌ಸುಲಿಗೆ ಜೊತೆಗೆ ಗಾಂಜಾ ಪ್ರಕರಣ ಕೂಡ ದಾಖಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.‌.
Published by: Ganesh Nachikethu
First published: September 28, 2020, 2:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading