ವ್ಯಾಸರಾಜರ ಸಮಾಧಿ ಧ್ವಂಸ ನಿಧಿಗಳ್ಳರ ಕೆಲಸ; ರಾಮ ದೇವಸ್ಥಾನದ ಅರ್ಚಕನೇ ರೂವಾರಿ

ಈ ಕೃತ್ಯದ ದೇವಸ್ಥಾನ ಅರ್ಚನ ಕೈವಾಡವಿದೆ ಎಂದು ಹೇಳಿದ್ಧಾರೆ. ಅಲ್ಲದೇ ಈ ಸಂಬಂಧ ಇಬ್ಬರನ್ನು ಬಂಧಿಸಿದ್ದು, ಇನ್ನೂ ಮೂವರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದ್ಧಾರೆ.

Ganesh Nachikethu | news18
Updated:July 21, 2019, 11:22 PM IST
ವ್ಯಾಸರಾಜರ ಸಮಾಧಿ ಧ್ವಂಸ ನಿಧಿಗಳ್ಳರ ಕೆಲಸ; ರಾಮ ದೇವಸ್ಥಾನದ ಅರ್ಚಕನೇ ರೂವಾರಿ
ನಿಧಿಗಳ್ಳರ ತಂಡ
  • News18
  • Last Updated: July 21, 2019, 11:22 PM IST
  • Share this:
ಬೆಂಗಳೂರು(ಜುಲೈ.21): ಕೊಪ್ಪಳದ ನವವೃಂದಾವನ ಗಡ್ಡೆಯಲ್ಲಿರುವ ವ್ಯಾಸರಾಜ ತೀರ್ಥರ ಧ್ವಂಸ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ರಾಮ ಸೇವಸ್ಥಾನದ ಅರ್ಚಕನೇ ನಿಧಿಯ ಆಸೆಗಾಗಿ ವ್ಯಾಸರಾಜ ತೀರ್ಥರ ಸಮಾಧಿ ಧ್ವಂಸ ಮಾಡಿಸಿದ್ಧಾನೆ ಎಂದು ಪೊಲೀಸ್​​ ತನಿಖೆಯಲ್ಲಿ ಬಯಲಾಗಿದೆ.

ಗಂಗಾವತಿ ತಾಲೂಕಿನ ಆನೆಗುಂದಿ ಸಮೀಪವಿರುವ ನವಬೃಂದಾವನ ಗಡ್ಡೆ ತುಂಗಭದ್ರಾ ನದಿಯ ಮಧ್ಯದಲ್ಲಿದೆ. ಇಲ್ಲಿ ವ್ಯಾಸರಾಜರು ಸೇರಿದಂತೆ ಒಟ್ಟು ಒಂಬತ್ತು ಯತಿಗಳ ಸಮಾಧಿಗಳು ಇವೆ. ಈ ಅರ್ಚಕ ನಿಧಿಯ ಆಸೆಗಾಗಿ ಬುಧವಾರ ರಾತ್ರಿ ನಿಧಿಗಳ್ಳರ ಮುಖೇನ ನವಬೃಂದಾವನವನ್ನು ಅಗೆದು ಹಾಕಿಸಿದ್ಧಾನೆ. ಅಲ್ಲದೇ ಸಮಾಧಿಯ ಕೆಳಭಾಗವನ್ನು ಸಹ ಸಂಪೂರ್ಣ ಅಗೆದಿದ್ದು, ನಿಧಿಗಾಗಿಯೇ ಹೀಗೆ ಮಾಡಿದ್ದು ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ಧಾನೆ.

ಇದೇ ಬುಧವಾರ( ಜುಲೈ.17) ರಾತ್ರಿ ವ್ಯಾಸರಾಜ ತೀರ್ಥರ ವೃಂದಾವನವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ಕೃತ್ಯದ ಸುದ್ದಿ ತಿಳಿಯುತ್ತಿದಂತೆಯೇ ಮಂತ್ರಾಲಯ ರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥರು, ಮೈಸೂರು ವ್ಯಾಸರಾಜ (ಸೋಸಲೆ) ಮಠದ ವಿದ್ಯಾಶ್ರೀಶ ತೀರ್ಥರು, ಇದೇ ಮಠದ ಕಿರಿಯ ಶ್ರೀ ಹಾಗೂ ಮಾಧ್ವ ಪರಂಪರೆಯ ವಿವಿಧ ಯತಿಗಳು ಸ್ಥಳಕ್ಕಾಗಮಿಸಿದರು.

ಇದನ್ನೂ ಓದಿ: ಸಿಎಂ ಎಚ್​​ಡಿಕೆ ಪರ ವೋಟ್​​ ಮಾಡುವಂತೆ ಬಿಎಸ್​ಪಿ ಶಾಸಕ ಎನ್​​. ಮಹೇಶ್​​ಗೆ ಮಾಯಾವತಿ ಆದೇಶ

ಬಳಿಕ ಸುದ್ದಿಗಾರರ ಜತೆಗೆ ಮಾತಾಡಿದ ಪುತ್ತಿಗೆ ಮಠದ ಸುಗಣೇಂದ್ರ ಶ್ರೀಗಳು, ವ್ಯಾಸರಾಜರ ವೃಂದಾವನ ಧ್ವಂಸಕ್ಕೆ ಆಘಾತ ವ್ಯಕ್ತಪಡಿಸಿದರು. ಹಾಗೆಯೇ ತಪ್ಪಿತಸ್ಥರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್​​ ಠಾಣೆಯಲ್ಲಿ ಪ್ರಕರಣವೂ ದಾಖಲಾಯ್ತು.

ಎಸ್ಪಿ ರೇಣುಕಾ ಕೆ.ಸುಕುಮಾರ್ ನೇತೃತ್ವದ ಪೊಲೀಸ್​ ತಂಡ ಪ್ರಕರಣದ ಬೆನ್ನತ್ತಿತ್ತು. ಇದೀಗ ನಿಧಿಗಳ್ಳರೇ ಈ ಕೃತ್ಯ ಎಸಗಿದ್ದಾರೆ. ಈ ಕೃತ್ಯದ ದೇವಸ್ಥಾನ ಅರ್ಚನ ಕೈವಾಡವಿದೆ. ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಇಬ್ಬರಿಗಾಗಿ ಶೋಧಕಾರ್ಯ ನಡೆಸುತ್ತಿದ್ದೇವೆ ಎಂದು ಎಸ್ಪಿ ರೇಣುಕಾ ಕೆ.ಸುಕುಮಾರ್ ತಿಳಿಸಿದ್ಧಾರೆ.

ಪೇಜಾವರ ಶ್ರೀ ಖಂಡನೆ: ವ್ಯಾಸರಾಜರ ವೃಂದಾವನದ ಮೇಲಿನ ದಾಳಿಯಿಂದ ಸಮಸ್ತ ಮಾಧ್ವ ಸಮಾಜ ಹಾಗೂ ಹಿಂದೂ ಸಮಾಜಕ್ಕೆ ಆಘಾತವಾಗಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ.--------------
First published:July 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ