• Home
  • »
  • News
  • »
  • state
  • »
  • Bank Scam: ಬೆಂಗಳೂರಿನಲ್ಲಿ 100 ಕೋಟಿ ಬ್ಯಾಂಕ್ ಹಗರಣ; ಐವರು ಅರೆಸ್ಟ್

Bank Scam: ಬೆಂಗಳೂರಿನಲ್ಲಿ 100 ಕೋಟಿ ಬ್ಯಾಂಕ್ ಹಗರಣ; ಐವರು ಅರೆಸ್ಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾವಿರಾರು ಜನರು ಬ್ಯಾಂಕ್​ನಲ್ಲಿರಿಸುವ ಹಣ ದುರ್ಬಳಕೆ ಆಗಿರೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಸಂಬಂಧ ಹಣ ಕಳೆದುಕೊಂಡ ಠೇವಣಿದಾರರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

  • News18 Kannada
  • Last Updated :
  • Bangalore, India
  • Share this:

ಬೆಂಗಳೂರಿನಲ್ಲಿ (Bengaluru) ಮತ್ತೊಂದು ಬ್ಯಾಂಕ್ ಹಗರಣ (Bank Scam) ಬೆಳಕಿಗೆ ಬಂದಿದ್ದು, ಮಾಜಿ ನಿರ್ದೇಶಕ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಚಾಮರಾಜಪೇಟೆಯ (Chamarajapet, Bengaluru) ಕುರುಹಿನ ಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್​​ನಲ್ಲಿ (Kuruhinasetty Souharda Credit Co-operative LTD) ಬರೋಬ್ಬರಿ 100 ಕೋಟಿಯ ವಂಚನೆ ನಡೆದಿರೋದು ಬೆಳಕಿಗೆ ಬಂದಿದೆ. ಈ ಸಂಬಂಧ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. ಬ್ಯಾಂಕಿನ ಮಾಜಿ ಅಧ್ಯಕ್ಷ ಸೇರಿದಂತೆ ಐವರ ಬಂಧನವಾಗಿದೆ. ಇನ್ನು ಈ ವಂಚನೆ ಪ್ರಕರಣದಲ್ಲಿ ಹಲವರು ತಲೆಮರೆಸಿಕೊಂಡಿದ್ದು, ಎಲ್ಲರ ಬಂಧನಕ್ಕಾಗಿ ಪೊಲೀಸರು (Police) ವಿಶೇಷ ತಂಡ ರಚನೆ ಮಾಡಿ ಬಲೆ ಬೀಸಿದ್ದಾರೆ.


ಬಂಧಿತರು ಯಾರು?


ಬ್ಯಾಂಕ್​ ಮಾಜಿ ಅಧ್ಯಕ್ಷಬಿ.ಎಲ್.ಶ್ರೀನಿವಾಸ್ (64), ಉಪಾಧ್ಯಕ್ಷ ಬಿ.ಈಶ್ವರಪ್ಪ (71), ಬಿ.ಟಿ.ಮೋಹನ್ (75), ಉದ್ಯಮಿ ಪಿ. ಚಂದ್ರಶೇಖರ್ (55), ದಯಾನಂದ ಹೆಗ್ಡೆ (55). ಇವರಲ್ಲಿ ಬಿ.ಟಿ.ಮೋಹನ್ ಎಂಬಾತ ಸುರಭಿ ಚಿಟ್ ಫಂಡ್ ಕಂಪನಿಯ ಅಧ್ಯಕ್ಷನಾಗಿದ್ದು, ಇಲ್ಲಿ ಸಾಲ ಪಡೆದು ವಾಪಸ್​ ನೀಡದೇ ವಂಚಿಸಿದ್ದಾನೆ.


ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬ್ಯಾಂಕ್​ನ ಮಾಜಿ ಅಧ್ಯಕ್ಷ ಬಿ.ಎಲ್.ಶ್ರೀನಿವಾಸ್ ನೇತೃತ್ವದ ತಂಡ 10 ವರ್ಷಗಳ ಕಾಲ ಅಧಿಕಾರ ನಡೆಸಿದೆ. ಈ ಸಮಯದಲ್ಲಿ ಕೇವ ಝೆರಾಕ್ಸ್ ಪ್ರತಿಗಳನ್ನಿರಿಸಿಕೊಂಡು ಸಾಲ ನೀಡಿದೆ. ಇದರ ಜೊತೆ ಒಂದೇ ಆಸ್ತಿಯ ದಾಖಲೆ ಮೇರೆಗೆ ಹಲವು ಬಾರಿ ಸಾಲ ನೀಡಲಾಗಿದೆ.


ಸುರಭಿ ಚಿಟ್​​ಫಂಡ್ ಜೊತೆ ಒಳಒಪ್ಪಂದ


ಸುರಭಿ ಚಿಟ್​​ಫಂಡ್ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದ ಶ್ರೀನಿವಾಸ್ ಸಂಬಂಧಿಕರು ಮತ್ತು ಪರಿಚಯಸ್ಥರಿಗೆ ಕೋಟ್ಯಂತರ ರೂಪಾಯಿ ಸಾಲ ನೀಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಕುರುಹಿನ ಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ದಿವಾಳಿ ಆಗಿತ್ತು.


Five arrested 100 crore scam in Kuruhinasetty Souharda Credit Co-operative LTD mrq
ಕುರುಹಿನ ಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್


ಉದ್ದೇಶಪೂರ್ವಕವಾಗಿಯೇ ಒಳಸಂಚು ಮಾಡಿದ್ದ ಆರೋಪಿಗಳು ಠೇವಣಿದಾರರ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಆರೋಪಿಗಳು ಬ್ಯಾಂಕ್​ನಲ್ಲಿ ಹಣ ಬಳಸಿಕೊಂದು ಶ್ರೀಮಂತ ಉದ್ಯಮಿಗಳಾಗಿದ್ದಾರೆ. ಬ್ಯಾಂಕ್​ನಲ್ಲಿರುವ  ಹಣ ಬಳಸಿಕೊಂಡು ಚರಾಸ್ತಿ ಮತ್ತು ಸ್ಥಿರಾಸ್ತಿ ಖರೀದಿ ಮಾಡಿರೋದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ಸಾಲ ಪಡೆದು 10 ಶಾಖೆ ಆರಂಭಿಸಿದ್ದ ಬಿಟಿ ಮೋಹನ್


ಇನ್ನು ಕುರುಹಿನ ಶೆಟ್ಟಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್​ನಿಂದ ಸುರಭಿ ಚಿಟ್​ಫಂಡ್​ ಅಧ್ಯಕ್ಷ ಬಿ.ಟಿ.ಮೋಹನ್ ಅತಿ ಹೆಚ್ಚು ಸಾಲ ಪಡೆದುಕೊಂಡಿದ್ದನು. ಇಲ್ಲಿ ಕಡಿಮೆ ಮೌಲ್ಯದ ಅಸ್ತಿಗಳ ದಾಖಲೆಗಳನ್ನು ಇರಿಸಿ ಬಿ.ಟಿ.ಮೊಹನ್  ಕೋಟಿ ಕೋಟಿ ಸಾಲ ಪಡೆದಿದ್ದನು. ಇದೇ ಹಣದಿಂದ ಬೆಂಗಳೂರಿನಲ್ಲಿ ಸುರಭಿ ಚಿಟ್​​​ಫಂಡ್​​ನ 10 ಶಾಖೆಗಳನ್ನು ಬೆಂಗಳೂರಿನಲ್ಲಿ ತೆರೆದಿದ್ದನು.


ಇದನ್ನೂ ಓದಿ:  Sheep Farming: ಕುರಿ ಸಾಕಾಣಿಕೆದಾರರಿಗೆ ಶುಭಸುದ್ದಿ, ವಿಮೆ, ಡಿಜಿಟಲ್ ಮಾರ್ಕೆಟಿಂಗ್ ಸೌಲಭ್ಯ ಘೋಷಣೆ


ಆದ್ರೆ ಪಡೆದುಕೊಂಡ ಸಾಲವನ್ನು ಬಿ.ಟಿ.ಮೋಹನ್ ಹಿಂದಿರುಗಿಸಿರಲಿಲ್ಲ. ಬ್ಯಾಕ್​ನ ಆಡಳಿತ ಮಂಡಳಿ, ಸಿಇಓಗಳು ಬಿ.ಟಿ.ಮೋಹನ್​ಗೆ ಸಾಥ್ ನೀಡಿದ್ದರು.


ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?


ಬ್ಯಾಂಕ್​ ಠೇವಣಿದಾರರು ತಮ್ಮ ಹಣ ಹಿಂಪಡೆಯಲು ಅರ್ಜಿ ಸಲ್ಲಿಸಿದಾಗ ಅದು ಅಪ್ರೂವ್​ ಆಗುತ್ತಿರಲಿಲ್ಲ. ಪದೇ ಪದೇ ಇವರ ಮನವಿ ಅರ್ಜಿ ತಿರಸ್ಕೃತವಾಗುತ್ತಿತ್ತು. ಈ ಘಟನೆ ಪುನಾರ್ವತಿತವಾದಾಗ ಠೇವಣಿದಾರರಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಬ್ಯಾಂಕ್ ದಿವಾಳಿ ಆಗಿರೋದು ಬೆಳಕಿಗೆ ಬಂದಿದೆ.


ಸಾವಿರಾರು ಜನರು ಬ್ಯಾಂಕ್​ನಲ್ಲಿರಿಸುವ ಹಣ ದುರ್ಬಳಕೆ ಆಗಿರೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಈ ಸಂಬಂಧ ಹಣ ಕಳೆದುಕೊಂಡ ಠೇವಣಿದಾರರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.


ಇದನ್ನೂ ಓದಿ:  Murugha Swamy: ಹೆಣ್ಮಕ್ಕಳು ಸ್ವಾಮಿಗಳ ಬಳಿ ಹೋಗದ ಪರಿಸ್ಥಿತಿ ನಿರ್ಮಾಣ: ಶಾಸಕ ಶಾಮನೂರು ಶಿವಶಂಕರಪ್ಪ


ಎರಡು ಪ್ರತ್ಯೇಕ ಪ್ರಕರಣ ದಾಖಲು


ಇದೀಗ ಠೇವಣಿದಾರರ ದೂರು ಆಧರಿಸಿ 2011 ರಿಂದ 2022ರವರೆಗೆ ಬ್ಯಾಂಕ್ ಆಡಳಿತ ಮಂಡಳಿಯಲ್ಲಿದ್ದ  ಎಲ್ಲರ ವಿರುದ್ಧ ಒಳಸಂಚು, ವಂಚನೆ, ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಕಾಯ್ದೆ ಅನ್ವಯ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Published by:Mahmadrafik K
First published: