HOME » NEWS » State » FITNESS PROBLEM TO YOUTHS OF KODAGU DUE TO CORONA AND LOCK DOWN LG

ಕೊಡಗಿನಲ್ಲಿ ಕ್ರೀಡಾಂಗಣಗಳೇ ಬಂದ್; ಆಟಗಾರರಿಗೆ ಫಿಟ್​​ನೆಸ್ ಸಮಸ್ಯೆ

ಮಾರ್ಚ್ ತಿಂಗಳಿನಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್  ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಲಾಕ್​ಡೌನ್​​ ಜಾರಿಗೆ ತಂದ ಪರಿಣಾಮ ಪ್ರತೀ ಕ್ರೀಡಾಂಗಣಗಳು ಸಂಪೂರ್ಣ ಬಂದ್ ಆಗಿದ್ದವು. ಹೀಗಾಗಿ ಪ್ರತಿನಿತ್ಯ ಸ್ಟೇಡಿಯಂಗಳಲ್ಲಿ ದೈಹಿಕ ಕಸರತ್ತು ನಡೆಸಿ ಬೆವರಳಿಸುತ್ತಿದ್ದವರು ಮನೆಯಲ್ಲೇ ತಿಂದುಂಡು ಉಳಿದುಕೊಳ್ಳಬೇಕಾದ ಸ್ಥಿತಿ ಬಂದಿದ್ದು ಸುಳ್ಳಲ್ಲ.

news18-kannada
Updated:December 27, 2020, 10:29 AM IST
ಕೊಡಗಿನಲ್ಲಿ ಕ್ರೀಡಾಂಗಣಗಳೇ ಬಂದ್; ಆಟಗಾರರಿಗೆ ಫಿಟ್​​ನೆಸ್ ಸಮಸ್ಯೆ
ಯುವಜನತೆ
  • Share this:
ಕೊಡಗು(ಡಿ.27): ಕೊಡಗು ಜಿಲ್ಲೆಯ ಹೆಸರು ಕೇಳಿದ ಕೂಡಲೇ ನೆನಪಾಗೋದೆ ಆ ಜಿಲ್ಲೆ ದೇಶ ಸೇನೆಗೆ ನೀಡಿ ಅಮೋಘ ಕೊಡುಗೆ. ಅಷ್ಟೆ ಅಲ್ಲ ಅದರ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಪಡೆಯುವಂತಹ ಕ್ರೀಡಾಪಟುಗಳನ್ನು ಕೊಟ್ಟು ಸೇನೆ ಮೂಲಕ ತ್ಯಾಗಕ್ಕೂ ಸೈ, ಆಟಕ್ಕೂ ಜೈ ಎನ್ನೋ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಹೌದು, ಪ್ರಾಕೃತಿಕ ಸೌಂದರ್ಯದ ಖನಿಯಾಗಿರುವ ಕೊಡಗು ಜಿಲ್ಲೆ ಕ್ರೀಡೆಗೂ ಅಷ್ಟೇ ಹೆಸರುವಾಸಿಯಾಗಿದೆ. ಸ್ಥಳೀಯ ಹಂತದಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದವರೆಗೆ ಕ್ರೀಡಾಪಟುಗಳನ್ನು ಕಾಣಿಕೆ ನೀಡಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದೆ. ಕ್ರೀಡೆ ಹಾಗೂ ವೈಯಕ್ತಿಕ ಆರೋಗ್ಯವನ್ನು ಜೀವನ ವಿಧಾನವನ್ನಾಗಿ ಮೈಗೂಡಿಸಿಕೊಂಡಿದ್ದರು ಕೊಡವರು. ಆದರೆ ಕೊರೋನಾ ದೇಶಕ್ಕೆ ಎಂಟ್ರಿಕೊಟ್ಟ ನಂತರ ಲಾಕ್​ಡೌನ್​​ ಘೋಷಿಸಿದರ ಪರಿಣಾಮ ಹಲವಾರು ತಿಂಗಳು ಹೊರಾಂಗಣ ಕ್ರೀಡಾಂಗಣ ಜೊತೆಗೆ ಒಳಾಂಗಣ ಕ್ರೀಡಾಂಗಣಗಳು ಬಂದ್ ಆಗಿದ್ದವು. ಹೀಗಾಗಿ ಫಿಟ್ನೆಸ್ ಪಾಕಾಡಿಕೊಳ್ಳಲು ಕ್ರೀಡಾಪಟುಗಳು ಪರಿತಪ್ಪಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.    

ಕೊಡಗಿನಲ್ಲಿ ಕ್ರೀಡೆಗೆ ತನ್ನದೇಯಾದ ಪ್ರಾಮುಖ್ಯತೆ ಇದೆ. ರಾಷ್ಟ್ರೀಯ ಕ್ರೀಡೆಯಾಗಿರುವ ಹಾಕಿ ಕ್ರೀಡೆಗೆ ಮುಂಜಾನೆಯೇ ಯುವಪಡೆ ಹಾಕಿ ಫೀಲ್ಡಿಗೆ ಇಳಿದಿರುತಿತ್ತು. ಕ್ರಿಕೆಟ್ ಹಾಗೂ ಟೆನ್ನಿಸ್ ಬ್ಯಾಟ್​​ಗಳನ್ನು ಹಿಡಿದು ಕ್ರೀಡಾಂಗಣದಲ್ಲಿ ಕ್ರೀಡಾ ಅಭ್ಯಾಸಲ್ಲಿ ಮಗ್ನರಾಗಿರುತ್ತಿದ್ದರು. ಇನ್ನು ಹಿರಿಯರು ನಾಗರಿಕರು ಕೂಡ ಸ್ಟೇಡಿಯಂ ಸುತ್ತ ವಾಕಿಂಗ್ ಮಾಡುತ್ತಾ ವಯೋಮಾನಕ್ಕೆ ಅನುಗುಣವಾಗಿ ವರ್ಕೌಟ್ ಮಾಡಿಕೊಂಡು ಮನೆ ಸೇರುತ್ತಿದ್ದರು. ಯುವಕರು ಈಜುಕೊಳ, ಜಿಮ್, ಯೋಗಾಭ್ಯಾಸ, ಟೇಬಲ್ ಟೆನ್ನಿಸ್, ಧ್ಯಾನ ಸೇರಿದಂತೆ ಹತ್ತು ಹಲವು ಕ್ರೀಡೆಗಳನ್ನು ಭಾಗವಹಿಸಿ ದೇಹವನ್ನು ಸದೃಢಗೊಳಿಸಿಕೊಳ್ಳುತ್ತಿದ್ದರು. ಹಾಗೆಯೇ ಮಾನಸಿಕವಾಗಿ ನೆಮ್ಮದಿ ಕಂಡುಕೊಳ್ಳಲು ಒಂದಿಲ್ಲೊಂದು ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತಿದ್ದರು.

ರಾತ್ರಿ ತಂದೆ-ತಾಯಿ ಜೊತೆ ಮಲಗಿದ್ದ ಮಗು ಕಳುವು; ಕಣ್ಣೀರು ಹಾಕುತ್ತಿರುವ ಹೆತ್ತವರು

ಆದರೆ ಹಲವು ತಿಂಗಳು ಲಾಕ್​ಡೌನ್​​ ಆಗಿದ್ದರಿಂದ ಜಿಲ್ಲೆಯಲ್ಲಿ ನೂರಾರು ಕ್ರೀಡಾಪಟುಗಳು ತಮ್ಮ ಫಿಟ್‍ನೆಸ್ ಕಾಪಾಡಿಕೊಳ್ಳಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಾರ್ಚ್ ತಿಂಗಳಿನಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್  ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಲಾಕ್​ಡೌನ್​​ ಜಾರಿಗೆ ತಂದ ಪರಿಣಾಮ ಪ್ರತೀ ಕ್ರೀಡಾಂಗಣಗಳು ಸಂಪೂರ್ಣ ಬಂದ್ ಆಗಿದ್ದವು. ಹೀಗಾಗಿ ಪ್ರತಿನಿತ್ಯ ಸ್ಟೇಡಿಯಂಗಳಲ್ಲಿ ದೈಹಿಕ ಕಸರತ್ತು ನಡೆಸಿ ಬೆವರಳಿಸುತ್ತಿದ್ದವರು ಮನೆಯಲ್ಲೇ ತಿಂದುಂಡು ಉಳಿದುಕೊಳ್ಳಬೇಕಾದ ಸ್ಥಿತಿ ಬಂದಿದ್ದು ಸುಳ್ಳಲ್ಲ. ಹೀಗಾಗಿ ಕಸರತ್ತು ಮರೆತ ಕ್ರೀಡಾಪಟುಗಳು ಫಿಟ್ನೆಸ್ ಕಾಪಾಡಿಕೊಳ್ಳಲು ಪರಿತಪ್ಪಿಸಬೇಕಾಯಿತು.

ವಿಪರ್ಯಾಸವೆಂದರೆ ಲಾಕ್‍ಡೌನ್ ತೆರವಾಗಿ ಕೆಲವು ತಿಂಗಳು ಕಳೆದಿದ್ದರೂ ಸಾಕಷ್ಟು ಕ್ರೀಡಾಪಟುಗಳು ಜಿಮ್, ಸ್ವಿಮ್ ಸೇರಿದಂತೆ ಯಾವುದೇ ಕಸರತ್ತಿಗೂ ಬರುವವರ ಸಂಖ್ಯೆ ಕೂಡ ತೀರಾ ಕಡಿಮೆ ಆಗಿದೆ ಎನ್ನುವುದು ಫಿಟ್ನೆಸ್ ತರಬೇತುದಾರರಾದ ಚೇತನ್ ಅವರ ಅಭಿಪ್ರಾಯ.  ಆದರೆ ಇದೀಗ ಕೊರೋನಾ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲವಾದರೂ ಎಲ್ಲವೂ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.

ಇತ್ತೀಚೆಗಷ್ಟೇ ಜನರು ಮೈದಾನಗಳಿಗೆ ಬರುವ ಮನಸ್ಸು ಮಾಡುತ್ತಿದ್ದಾರೆ. ಆದರೆ ಕೊರೋನಾ ಭಯದಿಂದ ಜನತೆ ಇನ್ನೂ ಹೊರಬಂದಿಲ್ಲ. ಒಳಾಂಗಣ ಕ್ರೀಡಾಂಗಣಗಳಾದ ಈಜುಕೊಳ, ಟೇಬಲ್ ಟೆನ್ನಿಸ್, ಟೆನ್ನಿಸ್ ಹಾಗೂ ಜಿಮ್​ಗಳಿಗೆ  ಬೆರಣಿಕೆಯಷ್ಟು ಜನರು ಬರುತ್ತಿದ್ದಾರೆ ಎನ್ನುತ್ತಾರೆ ಯುವಜನ ಮತ್ತು ಕ್ರೀಡಾ ಇಲಾಖೆಯ ತರಬೇತುದಾರ ಚೇತನ್.
Published by: Latha CG
First published: December 27, 2020, 10:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories